ಆಧಾರ್ ಸಿಂಧುತ್ವದ ಬಗ್ಗೆ ಇಂದು ಸುಪ್ರೀಂ ತೀರ್ಪು, ಇದರ ಪರಿಣಾಮವೇನು?

ವಾಸ್ತವವಾಗಿ, ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಸೇರಿದಂತೆ ಅನೇಕರು, ಆಧಾರ್ ಶಾಸನದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

Last Updated : Sep 26, 2018, 10:58 AM IST
ಆಧಾರ್ ಸಿಂಧುತ್ವದ ಬಗ್ಗೆ ಇಂದು ಸುಪ್ರೀಂ ತೀರ್ಪು, ಇದರ ಪರಿಣಾಮವೇನು? title=

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆ ಆಧಾರ್ ಗೆ ಸಂಬಂಧಿಸಿದಂತೆ 2016 ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಕೆಲವು ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿರುವ ಸಿಜೆಐ ದೀಪಕ್ ಮಿಶ್ರ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನದ ಪೀಠವು ಇಂದು ತನ್ನ ತೀರ್ಪನ್ನು ಪ್ರಕಟಿಸಲಿದೆ. 

ವಾಸ್ತವವಾಗಿ, ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಸೇರಿದಂತೆ ಅನೇಕರು, ಆಧಾರ್ ಶಾಸನದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆಧಾರ್ ಮೇಲೆ ನಿರ್ಧಾರದ ಪರಿಣಾಮ ಏನಾಗಿರುತ್ತದೆ ಎಂದು ತಿಳಿಯಿರಿ...

ಮೊದಲನೆಯದಾಗಿ,  ಇದು ಗೌಪ್ಯತೆಯ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಲ್ಪಟ್ಟರೆ, ಆಗ ಆಧಾರ್ ರೂಪಿಸುವ ಪ್ರಕ್ರಿಯೆಯು ನಿಲ್ಲುತ್ತದೆ.

ಎರಡನೆಯದಾಗಿ, ಯೋಜನೆಗಳಿಗೆ ಕಡ್ಡಾಯವಾಗಿ ಕೊನೆಗೊಂಡರೆ ಸರ್ಕಾರದ ನಿಧಿಗಳ ಕಳ್ಳತನವನ್ನು ತಡೆಯುವುದು ಕಷ್ಟಕರವಾಗಿರುತ್ತದೆ.

ಮೂರನೆಯದಾಗಿ, ಅಗತ್ಯವಿರುವವರಿಗೆ ಯೋಜನೆಗಳ ಪ್ರಯೋಜನ ತಲುಪುವುದು ಕಷ್ಟಕರವಾಗಿರುತ್ತದೆ.

ನಾಲ್ಕನೆಯದು - ಬ್ಯಾಂಕ್ ಖಾತೆಗೆ ಮೊಬೈಲ್ ಸಂಪರ್ಕ ಅನಿವಾರ್ಯ ಎಂಬುದು ಸ್ಥಗಿತವಾದರೆ ಇದು ಅಪರಾಧವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ.
 

Trending News