Baal Aadhaar Latest Update: ಪ್ರಸ್ತುತ ಭಾರತದಲ್ಲಿ ಆಧಾರ್ ಕಾರ್ಡ್ ಒಂದು ಮಹತ್ವದ ದಾಖಲೆಯಾಗಿದೆ. ಭಾರತೀಯ ನಾಗರೀಕರ ವಿಶಿಷ್ಟ ದಾಖಲೆಯಾಗಿರುವ ಆಧಾರ್ ಕಾರ್ಡ್ ಆನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಒದಗಿಸುತ್ತದೆ. ಮಕ್ಕಳಿಗೆ ಬಾಲ್ ಆಧಾರ್ ಹೆಸರಿನಲ್ಲಿ ಆಧಾರ್ ಕಾರ್ಡ್ ಒದಗಿಸುವ ಯುಐಡಿಎಐ ಇದೀಗ ಬಾಲ್ ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ನೀಡಿದೆ.
ಆಧಾರ್ ಕಾರ್ಡ್ ಅನ್ನು ಇಂದು ಬಹಳ ಮುಖ್ಯವಾದ ದಾಖಲೆಯಾಗಿ ಬಳಸಲಾಗುತ್ತಿದೆ. ಅಗತ್ಯವಿದ್ದರೆ ಇದರಲ್ಲಿ ಆಯ್ದ ತಿದ್ದುಪಡಿಗಳನ್ನು ಅಥವಾ ಬದಲಾವಣೆಗಳನ್ನು ಮಾಡುವ ಆಯ್ಕೆಯನ್ನು ಸರ್ಕಾರ ನೀಡಿದೆ.
ಪ್ರತಿಯೊಬ್ಬರು ಹೊಂದಿರುವಂತೆ ನೀವು ಕೂಡ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ ಸೇರಿದಂತೆ ಹಲವು ಕಾರ್ಡ್ಗಳನ್ನು ಹೊಂದಿರುತ್ತೀರಿ. ಒಬ್ಬ ಭಾರತೀಯನು ತನ್ನ ವಿಭಿನ್ನ ಅಗತ್ಯಗಳಿಗಾಗಿ ಜೇಬಿನಲ್ಲಿ ಅರ್ಧ ಡಜನ್ ಕಾರ್ಡ್ಗಳನ್ನು ಹೊಂದಿರುತ್ತಾರೆ.
ಆಧಾರ್, ಪಾನ್ ಕಾರ್ಡ್, ಪಾಸ್ ಪೋರ್ಟ್, ಡಿಎಲ್ ಎಲ್ಲಾ ಪ್ರಮುಖ ದಾಖಲೆಗಳನ್ನು ಒಳಗೊಂಡ ಬಹು ಉಪಯೋಗಿ ಕಾರ್ಡ್ ಜಾರಿಗೆ ತರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಂತನೆ ನಡೆಸಿದ್ದಾರೆ.
ನಮ್ಮ ಹಲವು ಕೆಲಸಗಳಿಗೆ 'ಆಧಾರ್' ಅಗತ್ಯವಿದೆ. ಈ ಸಂದರ್ಭದಲ್ಲಿ, ಮೂಲ ಡೇಟಾದ ಸುರಕ್ಷತೆಯ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದು, ನಮ್ಮ ಆಧಾರ್ ಗೆ ಒದಗಿಸಲಾಗಿರುವ ನಮ್ಮ ಮೂಲ ಮಾಹಿತಿ ಅಪಾಯದಲ್ಲಿದೆ, ಅದನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ನಿಮಗೆ ವಿದೇಶಕ್ಕೆ ಹೋಗಬೇಕೆನ್ನುವ ಕನಸು ಇದ್ದರೆ ಅದೀಗ ಈಡೇರುವಂತಹ ಸಮಯ ಬಂದಿದೆ. ಓ ಅದೇಗೆ ಅಂತೀರಾ?. ಹೌದು, ಕೇಂದ್ರ ಗೃಹ ಸಚಿವಾಲಯ ತಿಳಿಸಿರುವ ಪ್ರಕಾರ ಆಧಾರ ಕಾರ್ಡ್ ಇದ್ದರೆ ನೀವು ಭೂತಾನ್ ಮತ್ತು ನೇಪಾಳ ದೇಶಗಳಿಗೆ ಯಾವುದೇ ವೀಸಾದ ಅಗತ್ಯವಿಲ್ಲದೆ ಹೋಗಬಹುದು.
ಆಧಾರ್ ಜೊತೆ ಲಿಂಕ್ ಆಗಿರುವ ಯಾವುದೇ ಮಾಹಿತಿ ಬಗ್ಗೆ ಸಂಶಯವಿದ್ದರೆ, ಆಧಾರ್ ಮಾಹಿತಿಯನ್ನು ಆನ್ಲೈನ್'ನಲ್ಲಿ ಲಾಕ್ ಮಾಡಬಹುದು. ಒಂದು ವೇಳೆ ನಿಮ್ಮ ಆಧಾರ್ ಬಳಸಲು ಇಚ್ಚಿಸುವಿರಾದರೆ ನಿಮ್ಮ ಆಧಾರ್ ಅನ್ನು ಅನ್ ಲಾಕ್ ಕೂಡ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.