ಖ್ಯಾತ ಮೆಸೇಜಿಂಗ್ ಆಪ್ 'WhatsApp' ನಲ್ಲಿ ಸಂಸ್ಥೆ ನಿತ್ಯ ಹೊಸ ಹೊಸ ಬದಲಾವಣೆಗಳನ್ನು ತರುತ್ತಲೇ ಇದೆ. ಸಂಸ್ಥೆ ಜಾರಿಗೊಳಿಸುತ್ತಿರುವ ಈ ನೂತನ ವೈಶಿಷ್ಟ್ಯಗಳು ನಿತ್ಯ ಬಳಕೆದಾರರಿಗೆ ನೂತನ ಅನುಭವವನ್ನೇ ನೀಡುತ್ತಿವೆ. ಇದೀಗ ಶೀಘ್ರದಲ್ಲಿಯೇ WhatsApp ತನ್ನ ಬಳಕೆದಾರರಿಗೆ ಮತ್ತಷ್ಟು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಈ ಆಪ್ ನ 'ಡಾರ್ಕ್ ಮೋಡ್' ವೈಶಿಷ್ಟ್ಯವನ್ನು ಆಪ್ ನ ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. Facebook ಮಾಲೀಕತ್ವದ ಈ ಆಪ್ ನಲ್ಲಿ ಶೀಘ್ರವೇ ಕೆಲ ಹೊಸ ವೈಶಿಷ್ಟ್ಯಗಳು ಜೋಡಣೆಯಾಗಳಿವೆ. ಈ ವೈಶಿಷ್ಟ್ಯಗಳಲ್ಲಿ ಅನಿಮೇಟೆಡ್ ಸ್ಟಿಕರ್, ಡಿಲೀಟ್ ಮೆಸ್ಸೇಜ್ ವೈಶಿಷ್ಟ್ಯಗಳು ಅಳವಡಿಕೆಯಾಗಳು ಸಿದ್ಧಗೊಂಡಿವೆ. ಸದ್ಯ ಈ ಇನ್ಸ್ಟಂಟ್ ಮೆಸೇಜಿಂಗ್ ಆಪ್ ನ ನೂತನ 2.20.14 ಬೀಟಾ ಆವೃತ್ತಿ ಬಿಡುಗಡೆಗೊಂಡಿದೆ. ಈ ನೂತನ ಆವೃತ್ತಿ ಕೇವಲ ಅಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ. ಈ ಹೊಸ ಆವೃತ್ತಿಯಲ್ಲಿ ಅನಿಮೇಟೆಡ್ ಸ್ಟಿಕರ್ ಹಾಗೂ ಡಿಲೀಟ್ ಮೆಸೇಜ್ ವೈಶಿಷ್ಟ್ಯಗಳನ್ನು ಗುರುತಿಸಲಾಗಿದೆ.
ಇತ್ತೀಚೆಗಷ್ಟೇ ವಾಟ್ಸ್ ಆಪ್ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡುವ WABetaInfo ನೀಡಿರುವ ವರದಿ ಪ್ರಕಾರ, ನೂತನ ಆವೃತ್ತಿಯಲ್ಲಿ ವಾಟ್ಸ್ ಆಪ್ ನಲ್ಲಿ ಇದುವರೆಗೂ ಕಾಣಸಿಗದ ಹೊಚ್ಚ ಹೊಸ ವಿಶಿಷ್ಟಗಳನ್ನು ಜೋಡಿಸಲಾಗಿದೆ ಎನ್ನಲಾಗಿದೆ. ಕಳೆದ ವರ್ಷ ಬಿಡುಗಡೆಯಾದ ಮತ್ತು ವಾಟ್ಸ್ ಆಪ್ ಗೆ ಪ್ರತಿಸ್ಪರ್ಧಿ ಎಂದೇ ಬಿಂಬಿಸಲಾಗಿರುವ Telegram ಆಪ್ ನಲ್ಲಿಯೂ ಕೂಡ ಈ ವೈಶಿಷ್ಟ್ಯಗಳನ್ನು ಗುರುತಿಸಲಾಗಿದೆ. ವರದಿಯಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ ಹೊಸ ಆವೃತ್ತಿಯ ಕಾರಣ ಇದುವರೆಗೆ ಈ ವೈಶಿಷ್ಟ್ಯಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ ಎನ್ನಲಾಗಿದೆ. ಈ ಹೊಸ ಅಪ್ಡೇಟ್ ಬಳಿಕ ವಾಟ್ಸ್ ಆಪ್ ನ ಸ್ಟಿಕರ್ ಪ್ಯಾಕ್ ಹಾಗೂ ಅನಿಮೇಷನ್ ಗಳಲ್ಲಿ ನೀವು ಭಾರಿ ಬದಲಾವಣೆ ಕಾಣಬಹುದಾಗಿದೆ. ಅಷ್ಟೇ ಅಲ್ಲ ನೆಮ್ ಪ್ಲೇಟ್ ಸ್ಟಿಕರ್ ಪ್ಯಾಕ್ ಜೊತೆಗೆ ಪ್ಲೇ ಐಕಾನ್ ಕೂಡ ಜೋಡಿಸಲಾಗಿದೆ.
📝 WhatsApp beta for Android 2.20.14: what's new?
Improvements for Animated Stickers, Delete Messages and new feature called Account Transfer under development!https://t.co/IpVqrTHLSq
NOTE: The Animated Stickers and Delete Messages will be enabled in future.
— WABetaInfo (@WABetaInfo) January 23, 2020
ಇದನ್ನು ಹೊರತುಪಡಿಸಿ ಗ್ರುಪ್ ಚಾಟ್ ಬಳಕೆದಾರರಿಗೆ ಡಿಲೀಟ್ ಮೆಸೇಜ್ ವೈಶಿಷ್ಟ್ಯವನ್ನು ಪರಿಚಯಿಸಲಾಗುತ್ತಿದೆ. iOS ಬಳಕೆದಾರರಿಗೂ ಕೂಡ ವಾಟ್ಸ್ ಆಪ್ ಈ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ. ಇವುಗಳ ಜೊತೆಗೆ ವಾಟ್ಸ್ ಆಪ್ ಅಕೌಂಟ್ ಟ್ರಾನ್ಸ್ ಫರ್ ವೈಶಿಷ್ಟ್ಯ ಕೂಡ ಪರಿಚಯಿಸುತ್ತಿದ್ದು, ಇದನ್ನು ಬಳಸಿ ಬಳಕೆದಾರರು ತಮ್ಮ ವಾಟ್ಸ್ ಆಪ್ ದತಾಂಶಗಳನ್ನು ಸುಲಭವಾಗಿ ತಮ್ಮ ಹೊಸ ಮೊಬೈಲ್ ಫೋನ್ ನಲ್ಲಿ ಟ್ರಾನ್ಸ್ ಫರ್ ಮಾಡಬಹುದಾಗಿದೆ. ಆದರೆ, ಇದಕ್ಕಾಗಿ ನೀವು ಮುಂಚಿತವಾಗಿ ರಿಜಿಸ್ಟ್ರೆಶನ್ ಮಾಡಬೇಕಾಗಲಿದೆ.