ಪಾಕ್‍ನಲ್ಲಿ ಲ್ಯಾಡೆನ್ ಹತ್ಯೆ ಅಮೇರಿಕಾಗೆ ಸಾಧ್ಯವಾಗುವುದಾದರೆ, ನಮಗೇಕೆ ಸಾಧ್ಯವಿಲ್ಲ: ಅರುಣ್ ಜೇಟ್ಲಿ

ಒಂದು ವಾರ ಅನ್ನೋದು ಯಾವುದೇ ದೇಶಕ್ಕೆ ಬಹಳ ದೀರ್ಘವಾದದ್ದು- ಅರುಣ್ ಜೇಟ್ಲಿ

Last Updated : Feb 27, 2019, 03:15 PM IST
ಪಾಕ್‍ನಲ್ಲಿ ಲ್ಯಾಡೆನ್ ಹತ್ಯೆ ಅಮೇರಿಕಾಗೆ ಸಾಧ್ಯವಾಗುವುದಾದರೆ, ನಮಗೇಕೆ ಸಾಧ್ಯವಿಲ್ಲ: ಅರುಣ್ ಜೇಟ್ಲಿ title=

ನವದೆಹಲಿ: ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಪಾಕ್ ಗಡಿಯೊಳಗೆ ನುಗ್ಗಿ ಉಗ್ರರ ಅಡಗುತಾಣ ಹಾಗೂ ಜೈಶ್ ಉಗ್ರರನ್ನು ನಾಶಮಾಡಿದ ಬೆನ್ನಲ್ಲೇ ಭಾರತ, ಪಾಕ್ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಏತನ್ಮಧ್ಯೆ ಬುಧವಾರ ಭಾರತದೊಳಕ್ಕೆ ನುಗ್ಗಲು ಯತ್ನಿಸಿದ್ದ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಹಿಮ್ಮೆಟಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭಯೋತ್ಪಾದಕರು ಮತ್ತು ಪಾಕಿಸ್ತಾನದವರಿಗೆ ಮತ್ತೆ ಎಚ್ಚರಿಕೆ ನೀಡಿದ್ದಾರೆ. ಅಮೇರಿಕಾದವರು ಪಾಕಿಸ್ತಾನ ಪ್ರವೇಶಿಸಿ ಒಸಾಮ ಬಿನ್ ಲ್ಯಾಡೆನ್ ಹತ್ಯೆ ಮಾಡಬಹುದಾದರೆ ನಮಗೇಕೆ ಸಾಧ್ಯವಿಲ್ಲ. ಭಾರತವೂ ಅದೇ ರೀತಿ ಮಾಡಬಹುದು ಎಂದು ಜೇಟ್ಲಿ ಹೇಳಿದ್ದಾರೆ. 

ಒಂದು ಸಮಯದಲ್ಲಿ ಯೋಚಿಸಿಯೂ ಇರದಂತಹದನ್ನು ಅಮೇರಿಕಾ ಮಾಡಿದೆ. ಅಮೆರಿಕಾಗೆ ಪಾಕಿಸ್ತಾನದಲ್ಲಿದ್ದ ಒಸಾಮ ಬಿನ್ ಲ್ಯಾಡನ್ ನ್ನು ಪಾಕಿಸ್ತಾನದ ಅಬ್ಬೊಟಾಬಾದ್ಗೆ ನುಗ್ಗಿ ಹತ್ಯೆ ಮಾಡಬಹುದಾದರೆ ಅಂತಹ ಕಾರ್ಯಾಚರಣೆ ಭಾರತಕ್ಕೆ ಏಕೆ ಸಾಧ್ಯವಿಲ್ಲ, ಯಾವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ಎಲ್ಲಾ ವಿಷಯಗಳು ಕೇವಲ ಇಚ್ಛಾಶಕ್ತಿಯನ್ನು ಅವಲಂಬಿಸಿದೆ ಎಂದು ಜೇಟ್ಲಿ ಹೇಳಿದರು.

ಒಂದು ವಾರ ಅನ್ನೋದು ಯಾವುದೇ ದೇಶಕ್ಕೆ ಬಹಳ ದೀರ್ಘವಾದದ್ದು. ನೀವು ಕಳೆದ ಇಪ್ಪತ್ನಾಲ್ಕು ಗಂಟೆಗಳನ್ನು ನೋಡಿ, ಒಂದು ವಾರ ಅನ್ನೋದು ಒಂದು ದಿನದಂತೆ ಆಗಿದೆ ಎಂದು ಅವರು ಹೇಳಿದ್ದಾರೆ. 
 

Trending News