ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಪ್ರಧಾನಿ ಮೋದಿಯವರಿಗೆ "ನಾನು ನೀಡುವ ಹಣವನ್ನು ಬ್ಯಾಂಕ್ ಗೆ ಸ್ವೀಕರಿಸಿ ಎಂದು ಏಕೆ ನಿರ್ದೇಶಿಸುತ್ತಿಲ್ಲ" ಎಂದು ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ಸರಣಿ ಸ್ವೀಟ್ ಗಳನ್ನು ಮಾಡಿರುವ ವಿಜಯ ಮಲ್ಯ " ಪ್ರಧಾನ ಮಂತ್ರಿಯವರ ಕೊನೆಯ ಸಂಸತ್ ಭಾಷಣ ನನ್ನ ಗಮನಕ್ಕೆ ಬಂತು, ಅವರು ನಿಜಕ್ಕೂ ನಿರರ್ಗಗಳವಾಗಿ ಮಾತನಾಡಬಲ್ಲವರು. ಅವರು ಅನಾಮಧೇಯ ವ್ಯಕ್ತಿಯನ್ನು ಪ್ರಸ್ತಾಪಿಸುತ್ತಾ 9 ಸಾವಿರ ಕೋಟಿ ರೂ ಗಳನ್ನು ತೆಗೆದುಕೊಂಡು ಓಡಿಹೋದ ಎನ್ನುವ ಮಾತನ್ನು ಆಡಿದ್ದಾರೆ.ಇದನ್ನು ನಾನು ಮಾಧ್ಯಮದಲ್ಲಿ ಬಂದಂತಹ ನಿರೂಪಣೆ ಆಧಾರದ ಮೇಲೆ ನನ್ನನ್ನೇ ಉಲ್ಲೇಖಿಸಿ ಈ ಮಾತನ್ನು ಹೇಳಿರುವುದು ಎಂದು ತಿಳಿದುಕೊಳ್ಳುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
The Prime Ministers last speech in Parliament was brought to my attention. He certainly is a very eloquent speaker. I noticed that he referred to an unnamed person who “ran away” with 9000 crores. Given the media narrative I can only infer that reference is to me.
— Vijay Mallya (@TheVijayMallya) February 14, 2019
ಇನ್ನು ಮುಂದುವರೆದು "ಈ ಹಿಂದಿನ ನನ್ನ ಟ್ವೀಟ್ ನ್ನು ಮುಂದುವರೆಸುತ್ತಾ, ಪ್ರಧಾನಿಗಳು ಬ್ಯಾಂಕ್ ಗಳಿಗೆ ನನ್ನ ಹಣವನ್ನು ಸ್ವೀಕರಿಸಿ ಎಂದು ಏಕೆ ನಿರ್ದೇಶನ ನೀಡುತ್ತಿಲ್ಲ. ಆ ಮೂಲಕವಾದರೂ ಸಾರ್ವಜನಿಕ ಹಣದ ಮರುಪಾವತಿ ಶ್ರೇಯವನ್ನು ಪಡೆದುಕೊಳ್ಳಬಹುದು ಎಂದು ಟ್ವೀಟ್ ಮಾಡಿದ್ದಾರೆ.
Following on from my earlier tweet, I respectfully ask why the Prime Minister is not instructing his Banks to take the money I have put on the table so he can at least claim credit for full recovery of public funds lent to Kingfisher.
— Vijay Mallya (@TheVijayMallya) February 14, 2019
ಉದ್ಯಮಿ ವಿಜಯ್ ಮಲ್ಯ ಅವರ ಈ ಹೇಳಿಕೆ ಪ್ರಮುಖವಾಗಿ ಪ್ರಧಾನ ಮಂತ್ರಿ ಸಂಸತ್ತಿನ ತಮ್ಮ ಕೊನೆಯ ಭಾಷಣದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬನು 9 ಸಾವಿರ ಕೋಟಿ ರೂಗಳನ್ನು ತೆಗೆದುಕೊಂಡು ಓಡಿ ಹೋಗಿದ್ದಾನೆ ಎಂದು ಹೇಳಿಕೆ ನೀಡಿದ್ದರು.ಈ ಹಿನ್ನಲೆಯಲ್ಲಿ ಮಲ್ಯ ಈಗ ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.