ನವದೆಹಲಿ: ಪ್ರಧಾನಿ ಮೋದಿಯವರ 'ಮೈ ಬಿ ಚೌಕಿದಾರ್' ಸೋಶಿಯಲ್ ಮೀಡಿಯಾ ಅಭಿಯಾನದ ಭಾಗವಾಗಿ ಬಿಜೆಪಿಯ ಎಲ್ಲ ಸಚಿವರು ಕಾರ್ಯಕರ್ತರು ಟ್ವಿಟ್ಟರ್ ನಲ್ಲಿ ತಮ್ಮ ಹೆಸರಿನ ಮುಂದೆ ಚೌಕಿದಾರ್ ಎನ್ನುವ ಹೆಸರನ್ನು ಸೇರಿಸಿಕೊಂಡಿದ್ದರು.
Because I am doing Chowkidari of Indian interests and Indian nationals abroad. https://t.co/dCgiBPsagz
— Chowkidar Sushma Swaraj (@SushmaSwaraj) March 30, 2019
ಆದರೆ ಈಗ ಸುಷ್ಮಾ ಸ್ವರಾಜ್ ಅವರು ಆಗ ತಮ್ಮ ಹೆಸರಿನ ಮುಂದೆ ಚೌಕಿದಾರ್ ಎನ್ನುವ ಪದವನ್ನು ಸೇರಿಸದ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಅವರಿಗೆ ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿದ್ದರು.ಈಗ ಕೊನೆಗೂ ತಮ್ಮ ಹೆಸರಿನ ಮುಂದೆ ಅವರು ಚೌಕಿದಾರ್ ಪದವನ್ನು ಸೇರಿಸಿಕೊಂಡಿದ್ದಾರೆ.ಆದರೆ ಈಗ ಅವರು ಈ ಚೌಕಿದಾರ್ ನ್ನು ತಮ್ಮ ಹೆಸರಿನ ಮುಂದೆ ಸೇರಿಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
"ಮೇಡಂ ನೀವು ನಮ್ಮ ವಿದೇಶಾಂಗ ಮಂತ್ರಿ ಎಂದು ತಿಳಿದಿದ್ದೆವು ಅಲ್ಲದೆ, ಬಿಜೆಪಿಯಲ್ಲಿರುವ ಅತ್ಯಂತ ಪ್ರಜ್ಞಾವಂತ ವ್ಯಕ್ತಿ ಎಂದು ತಿಳಿದಿದ್ದೆವು.ಆದರೆ ನೀವೇಕೆ ನಿಮ್ಮನ್ನು ಚೌಕಿದಾರ್ ಎಂದು ಕರೆದುಕೊಳ್ಳುತ್ತಿರಿ?" ಎಂದು ವ್ಯಕ್ತಿಯೊಬ್ಬನು ಪ್ರಶ್ನಿಸಿದ್ದಾನೆ.ಇದಕ್ಕೆ ಉತ್ತರಿಸಿರುವ ಸುಷ್ಮಾ ಸ್ವರಾಜ್ " ಏಕೆಂದರೆ ನಾನು ಭಾರತದ ಹಿತಾಸಕ್ತಿ ಹಾಗೂ ವಿದೇಶದಲ್ಲಿರುವವರ ಭಾರತೀಯರ ಚೌಕಿದಾರಿಯನ್ನು ಮಾಡುತ್ತಿದ್ದೇನೆ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.