ದೆಹಲಿಯ ವಿಮಾನ ನಿಲ್ದಾಣದಲ್ಲಿ 13 ಕೆಜಿ ಡ್ರಗ್ಸ್ ಸಾಗಿಸುತ್ತಿದ್ದ ಮಹಿಳೆ ಸೆರೆ

ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಗುರುವಾರ ಬೆಳಗ್ಗೆ ಸುಮಾರು 13 ಕಿಲೋಗ್ರಾಂಗಳಷ್ಟು ಡ್ರಗ್ಸ್ ಸಾಗಿಸುತ್ತಿದ್ದ ಮಹಿಳಾ ಪ್ರಯಾಣಿಕಳನ್ನು ಸೆರೆಹಿಡಿಯಲಾಗಿದೆ.

Last Updated : Oct 25, 2018, 07:44 PM IST
ದೆಹಲಿಯ ವಿಮಾನ ನಿಲ್ದಾಣದಲ್ಲಿ 13 ಕೆಜಿ ಡ್ರಗ್ಸ್ ಸಾಗಿಸುತ್ತಿದ್ದ ಮಹಿಳೆ ಸೆರೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಗುರುವಾರ ಬೆಳಗ್ಗೆ ಸುಮಾರು 13 ಕಿಲೋಗ್ರಾಂಗಳಷ್ಟು ಡ್ರಗ್ಸ್ ಸಾಗಿಸುತ್ತಿದ್ದ ಮಹಿಳಾ ಪ್ರಯಾಣಿಕಳನ್ನು ಸೆರೆಹಿಡಿಯಲಾಗಿದೆ.

 ಮಲಾವಿ ನಿವಾಸಿಯಾಗಿರುವ 24 ವರ್ಷದ ಮಹಿಳೆಯು ಇಥಿಯೋಪಿಯಾದ ಅಡ್ಡಿಸ್ ಅಬಾಬಾಗೆ ಪ್ರಯಾಣಿಸುತ್ತಿದ್ದಳು ಎಂದು ಹೇಳಲಾಗಿದೆ. 

ಆ ಮಹಿಳೆಯು 13 ಮರದ ಚೆಸ್/ ಲುಡೋ ಬೋರ್ಡ್ಗಳಲ್ಲಿ ಡ್ರಗ್ಸ್ ಗಳನ್ನು ಮರೆಮಾಡಿದ್ದರು, ಪ್ರತಿ ಬೋರ್ಡ್ನ ಮಡಿಕೆಗಳ ನಡುವೆ ಒಂದೊಂದು ಕಿಲೋಗ್ರಾಮ್ ಸೂಡೊಫೆಡೆಡ್ರೈನ್ ಡ್ರಗ್ಸ್ ನ್ನು ಸೇರಿಸಿದ್ದರು ಎಂದು ತಿಳಿದುಬಂದಿದೆ.

ಈಗ ಪೋಲಿಸರು ಡ್ರಗ್ಸ್ ನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಆ ಡ್ರಗ್ಸ್ ಗಳನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್ಸಿಬಿ) ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ .

Trending News