ಕೊಚ್ಚಿ: ಭೀಕರ ಪ್ರವಾಹದಿಂದಾಗಿ ತತ್ತರಿಸಿದ್ದ ಕೇರಳದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ರಾಜ್ಯದ ಹಲವೆಡೆ ಎಲ್ಲೋ ಅಲರ್ಟ್(Yellow Alert) ಘೋಷಣೆ ಮಾಡಲಾಗಿದೆ.
ಕೇರಳದ ಪಾಲಕ್ಕಾಡ್, ಇಡುಕ್ಕಿ, ತ್ರಿಶೂರ್ ಮತ್ತು ವೈನಾಡ್ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 25ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಕೇರಳ ಸಿಎಂಒ ತಿಳಿಸಿದೆ. ಈ ಸ್ಥಳಗಳಲ್ಲಿ ಅತಿಹೆಚ್ಚು ಮಳೆ(64.4mm ನಿಂದ 124.4mm)ಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದೇ ವೇಳೆ, ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿಯು ಎಲ್ಲಾ ಜಿಲ್ಲಾಡಳಿತಕ್ಕೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಕಳೆದ ತಿಂಗಳಷ್ಟೇ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ತತ್ತರಿಸಿದ್ದ ಕೇರಳದಲ್ಲಿ ನೂರಾರು 400 ಮಂದಿ ಮೃತಪಟ್ಟಿದ್ದರಲ್ಲದೆ, 20 ಸಾವಿರ ಕೋಟಿಗಳಷ್ಟು ನಷ್ಟವಾಗಿತ್ತು.