ಉತ್ತರ ಪ್ರದೇಶದಲ್ಲಿ ಯೋಗವನ್ನು ಕಡ್ಡಾಯಗೊಳಿಸಿದ ಯೋಗಿ ಸರ್ಕಾರ

    

Last Updated : Jul 13, 2018, 05:29 PM IST
ಉತ್ತರ ಪ್ರದೇಶದಲ್ಲಿ ಯೋಗವನ್ನು ಕಡ್ಡಾಯಗೊಳಿಸಿದ ಯೋಗಿ ಸರ್ಕಾರ  title=

ನವದೆಹಲಿ: ಯೋಗಿ ಆದಿತ್ಯನಾಥ್ ಸರ್ಕಾರವು  ಉತ್ತರ ಪ್ರದೇಶ ಎಲ್ಲಾ  ಸರ್ಕಾರಿ ಶಾಲೆಗಳಲ್ಲಿ ಇನ್ನು ಮುಂದೆ ಯೋಗವನ್ನು   ಇದು ದೈಹಿಕ ಶಿಕ್ಷಣದ ಭಾಗವಾಗಿ ಕಡ್ಡಾಯಗೊಳಿಸಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಡಾ. ದಿನೇಶ್ ಶರ್ಮಾ, "ಯೋಗವನ್ನು ದೈಹಿಕ ಶಿಕ್ಷಣದ ಭಾಗವಾಗಿ ಮಾಡಲಾಗಿದೆ ಮತ್ತು ಈ ಅಧಿವೇಶನದಿಂದ ಅದನ್ನು ಕಾರ್ಯಗತಗೊಳಿಸಲಾಗುವುದು. ಯೋಗ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ದಿಸಲು ಸಹಾಯ ಮಾಡುತ್ತದೆ" ಎಂದು ತಿಳಿಸಿದರು.

"ಯೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಲಾಗುವುದು. ವಿದ್ಯಾರ್ಥಿಗಳಿಗೆ ಅನೂಕೂಲವಾಗುವುದರಿಂದ ರಾಜಕೀಯ ನಡೆಯಾಗಿ ಗ್ರಹಿಸಬಾರದು ಎಂದು ತಿಳಿಸಿದರು. ಭೌತಿಕ ಶಕ್ತಿಯನ್ನು ಬೆಳೆಸಲು ನಾವು ವಿದ್ಯಾರ್ಥಿಗಳಿಗೆ ಜೂಡೋ ಮತ್ತು ಟೇಕ್ವಾಂಡೋಗಳನ್ನೂ ಸಹ ಬೋಧಿಸುತ್ತೇವೆ. ಯೋಗವು ಯಾವುದೇ ಧರ್ಮಕ್ಕೆ ಸಂಬಂಧಿಸಬಾರದು "ಎಂದು ಶರ್ಮಾ ಹೇಳಿದ್ದಾರೆ.

ಇದೇ ವೇಳೆ ಸರ್ಕಾರದ ನಿರ್ಧಾರದ ಕುರಿತಾಗಿ ಮಾತನಾಡಿದ ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಸುನಿಲ್ ಸಾಜನ್ "ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸಮಾಜದ ಎಲ್ಲ ವಿಭಾಗಗಳು ಜನರು ಸರ್ಕಾರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಪ್ರತಿದಿನ ರಾಜ್ಯದಲ್ಲಿ ಅರಾಜಕತೆ ಹೆಚ್ಚುತ್ತಿದೆ" ಎಂದು ತಿಳಿಸಿದರು.

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಖಲೀದ್ ರಶೀದ್ ಫಿರಂಗಿ ಮೆಹ್ಲಿ ಮಾತನಾಡಿ, "ವಿದ್ಯಾರ್ಥಿಗಳು ದೈಹಿಕ ವ್ಯಾಯಾಮಕ್ಕಾಗಿ ಯೋಗವನ್ನು ಕಲಿಯುವುದಾದರೆ ನಮಗೆ ಯಾವುದೇ ಸಮಸ್ಯೆಗಳಿಲ್ಲ, ಆದರೆ ಸರ್ಕಾರವು ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬಾರದು ಎನ್ನುವುದನ್ನು ಖಚಿತಪಡಿಸಬೇಕು" ಎಂದು ಅವರು ತಿಳಿಸಿದರು.

Trending News