ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಯೋಗಿ ಸರ್ಕಾರವು ಒಂದು ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನಲ್ಲಿಗಳ ಸಂಪರ್ಕವನ್ನು ನೀಡಿ ಶುದ್ಧ ಕುಡಿಯುವ ನೀರನ್ನು ಉಡುಗೊರೆಯಾಗಿ ನೀಡಿದೆ.
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ನಾಡಗೀತೆ ಮೊಳಗುವಂತೆ ಮಾಡಿ : ಸಿಎಂ ಗೆ ನಟ ಝೈದ್ ಖಾನ್ ಮನವಿ
ಈ ದಿನ 107774 ಬಡ ಕುಟುಂಬಗಳಿಗೆ ನಲ್ಲಿ ಸಂಪರ್ಕ ನೀಡುವ ಮೂಲಕ ಯು ಪಿ ದೇಶದಲ್ಲಿ ದಾಖಲೆ ಸೃಷ್ಟಿಸಿದೆ. 20 ದಿನಗಳಲ್ಲಿ ಯುಪಿ ಈ ಸಾಧನೆ ಮಾಡಿರುವುದು ಇದು ಎರಡನೇ ಬಾರಿ. ಈ ಹಿಂದೆ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ನಮಾಮಿ ಗಂಗೆ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆಯು ಯುಪಿಯಲ್ಲಿ 1 ಲಕ್ಷದ 20 ಸಾವಿರದ 821 ನಲ್ಲಿ ಸಂಪರ್ಕಗಳನ್ನು ನೀಡುವ ಮೂಲಕ ದೇಶದಲ್ಲಿ ದಾಖಲೆ ನಿರ್ಮಿಸಿತ್ತು.
ಇದನ್ನೂ ಓದಿ: Crime News : ಕರ್ನಾಟಕ ಅಗ್ನಿಶಾಮಕ, ತುರ್ತು ಸೇವಾ ಇಲಾಖೆಯ ಟ್ವಿಟರ್ ಖಾತೆ ಹ್ಯಾಕ್.!
ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸರಬರಾಜು ಪರಿಕಲ್ಪನೆಯನ್ನು ದೇಶದಲ್ಲಿ ಮೊದಲಿಗೆ ಮಾಡಿ ಮುಗಿಸುವ ಗುರಿಯನ್ನು ಯೋಗಿ ಆದಿತ್ಯನಾಥ ಸರ್ಕಾರ ಹಾಕಿಕೊಂಡಿದೆ.
ಸದ್ಯ ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನದಂತಹ ಹಲವು ರಾಜ್ಯಗಳು ಅಕ್ಟೋಬರ್ 2 ರಂದು 10 ಸಾವಿರ ಗಡಿ ದಾಟಲು ಸಾಧ್ಯವಾಗಿಲ್ಲ. ಆದರೆ ಗಾಂಧಿ ಜಯಂತಿಯ ದಿನದಂದು ದೇಶದಲ್ಲಿ ಒಟ್ಟು 134968 ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಇದರಲ್ಲಿ ಉತ್ತರ ಪ್ರದೇಶದ್ದು ಸಿಂಹಪಾಲು, ಯುಪಿಯ ಬುಲಂದ್‌ಶಹರ್, ಶಹಜಹಾನ್‌ಪುರ, ಮಿರ್ಜಾಪುರ, ವಾರಣಾಸಿ, ಗೋರಖ್‌ಪುರ್‌ನಂತಹ ಜಿಲ್ಲೆಗಳು ಗರಿಷ್ಠ ಮನೆಗಳಿಗೆ ನಲ್ಲಿ ಸಂಪರ್ಕಗಳನ್ನು ಒದಗಿಸುವ ಮೂಲಕ ಉತ್ತರ ಪ್ರದೇಶವನ್ನು ನಂಬರ್ ಒನ್ ಮಾಡುವಲ್ಲಿ ಕೊಡುಗೆ ನೀಡಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.