ಭ್ರಷ್ಟಾಚಾರದ ವಿರುದ್ಧ ಯೋಗಿ ಸರ್ಕಾರದ ಕ್ರಮ, 7 PPS ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

ಏಳು ಅಧಿಕಾರಿಗಳಲ್ಲದೆ, ಯೋಗಿ ಸರ್ಕಾರವೂ ಇತರ ಅಧಿಕಾರಿಗಳ ಮೇಲೂ ಕಣ್ಣಿಟ್ಟಿದೆ. ಎರಡು ಡಜನ್‌ಗೂ ಹೆಚ್ಚು ಅಧಿಕಾರಿಗಳ ಫೈಲ್ ಸಿಎಂ ಯೋಗಿ ಆದಿತ್ಯನಾಥ್‌ಗೆ ತಲುಪಿದೆ ಎಂದು ಹೇಳಲಾಗುತ್ತಿದೆ.  

Last Updated : Nov 7, 2019, 01:19 PM IST
ಭ್ರಷ್ಟಾಚಾರದ ವಿರುದ್ಧ ಯೋಗಿ ಸರ್ಕಾರದ ಕ್ರಮ, 7 PPS ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ title=
File image

ಲಕ್ನೋ: ಯೋಗಿ ಸರ್ಕಾರ(Yogi government) ಭ್ರಷ್ಟಾಚಾರ (Corruption)ದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಭ್ರಷ್ಟಾಚಾರ ಮತ್ತು ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಪ್ರಾಂತೀಯ ಪೊಲೀಸ್ ಸೇವೆ (PPS) ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿರುವ ಯೋಗಿ ಸರ್ಕಾರ 7 ಪಿಪಿಎಸ್ ಅಧಿಕಾರಿಗಳನ್ನು ಬಲವಂತವಾಗಿ ನಿವೃತ್ತಿ(Forced Retirement) ಹೊಂದುವಂತೆ ಮಾಡಿದೆ.

ಈ ಅಧಿಕಾರಿಗಳ ವಿರುದ್ಧ ಕ್ರಮ:
1- ಅರುಣ್ ಕುಮಾರ್, ಸಹಾಯಕ ಕಮಾಂಡೆಂಟ್, 15 ನೇ ಬೆಟಾಲಿಯನ್, ಪಿಎಸಿ ಆಗ್ರಾ
2- ವಿನೋದ್ ಕುಮಾರ್ ರಾಣಾ, ಫೈಜಾಬಾದ್ ಉಪ ಪೊಲೀಸ್ ವರಿಷ್ಠಾಧಿಕಾರಿ
3- ನರೇಂದ್ರ ಸಿಂಗ್ ರಾಣಾ, ಉಪ ಪೊಲೀಸ್ ವರಿಷ್ಠಾಧಿಕಾರಿ ಆಗ್ರಾ
4- ರತನ್ ಕುಮಾರ್ ಯಾದವ್, ಸಹಾಯಕ ಕಮಾಂಡೆಂಟ್ 33 ನೇ ಕಾರ್ಪ್ಸ್ ಪಿಎಸ್ಸಿ ಝಾನ್ಸಿ
5- ತೇಜ್ವೀರ್ ಸಿಂಗ್ ಯಾದವ್ ಸಹಾಯಕ ಕಮಾಂಡೆಂಟ್ 27 ನೇ ಕಾರ್ಪ್ಸ್ ಪಿಎಸಿ ಝಾನ್ಸಿ
6- ಸಂತೋಷ್ ಸಿಂಗ್ ಡಿಎಂ, ಮೊರಾದಾಬಾದ್
7- ತನ್ವೀರ್ ಅಹ್ಮದ್ ಖಾನ್ ಸಹಾಯಕ ಕಮಾಂಡೆಂಟ್, 30 ನೇ ಕಾರ್ಪ್ಸ್ ಗೊಂಡಾ

ಮಾಹಿತಿಯ ಪ್ರಕಾರ, ಏಳು ಅಧಿಕಾರಿಗಳನ್ನು ಹೊರತುಪಡಿಸಿ, ಯೋಗಿ ಸರ್ಕಾರವು ಇತರ ಅಧಿಕಾರಿಗಳ ಮೇಲೆ ಕಣ್ಣಿಟ್ಟಿದೆ. ಎರಡು ಡಜನ್‌ಗೂ ಹೆಚ್ಚು ಅಧಿಕಾರಿಗಳ ಫೈಲ್ ಸಿಎಂ ಯೋಗಿ ಆದಿತ್ಯನಾಥ್‌ಗೆ ತಲುಪಿದೆ ಎಂದು ಹೇಳಲಾಗುತ್ತಿದೆ. ನಿರ್ಲಕ್ಷ್ಯ ಮತ್ತು ಅನುಚಿತವಾಗಿ ವರ್ತಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ.

ಜುಲೈನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವ ನೌಕರರು ಮತ್ತು ಅಧಿಕಾರಿಗಳನ್ನು ಕೇಂದ್ರದ ಮೋದಿ ಸರ್ಕಾರದ ಮಾರ್ಗದಲ್ಲೇ ನಿವೃತ್ತಿ ಮಾಡುವುದಾಗಿ ಘೋಷಿಸಿದರು.

Trending News