ಅಗ್ಗದ ದರದಲ್ಲಿ LED TV ಖರೀದಿಸಲು ಸುವರ್ಣಾವಕಾಶ

Flipkart Republic Days Sale: ಕೋಟಕ್ ಮಹೀಂದ್ರಾ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ನೊಂದಿಗೆ ನೀವು ಖರೀದಿ ಮಾಡಿದರೆ, ನಿಮಗೆ 10 ಪ್ರತಿಶತದಷ್ಟು ರಿಯಾಯಿತಿ ಸಿಗುತ್ತದೆ.

Yashaswini V Yashaswini V | Updated: Jan 20, 2020 , 01:54 PM IST
ಅಗ್ಗದ ದರದಲ್ಲಿ LED TV ಖರೀದಿಸಲು ಸುವರ್ಣಾವಕಾಶ

ನವದೆಹಲಿ: ಮುಂದಿನ ದಿನಗಳಲ್ಲಿ ನೀವು ಟಿವಿ (TV) ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅಗ್ಗದ ಬೆಲೆಗೆ ಶಾಪಿಂಗ್ ಮಾಡಲು ನಿಮಗೆ ಉತ್ತಮ ಅವಕಾಶವಿದೆ. ಎಲ್‌ಇಡಿ ಟಿವಿ(LED TV)ಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಟಿವಿ ತಯಾರಕ ಕಂಪನಿ ಥಾಮ್ಸನ್ ಈ ಸೆಲ್‌ನಲ್ಲಿ ಎಲ್‌ಇಡಿ ಟಿವಿಗಳನ್ನು ಆರಂಭಿಕ ಬೆಲೆ 4999 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಎಲ್ಇಡಿ ಟಿವಿ ಮತ್ತು ಆಂಡ್ರಾಯ್ಡ್ ಟಿವಿಯಲ್ಲಿ ಥಾಮ್ಸನ್ ಈ ಸೆಲ್‌ನಲ್ಲಿ ಉತ್ತಮ ರಿಯಾಯಿತಿಯನ್ನು ನೀಡಿದ್ದಾರೆ.

ನೀವು ಯಾವುದೇ ವೆಚ್ಚವಿಲ್ಲದೆ ಟಿವಿ ಖರೀದಿಸಲು ಬಯಸಿದರೆ, ಅದಕ್ಕೂ ವಿಶೇಷ ಕೊಡುಗೆ ಇದೆ. ಇದರೊಂದಿಗೆ, ಅನೇಕ ರೀತಿಯ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿರುತ್ತವೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ನೊಂದಿಗೆ ನೀವು ಖರೀದಿ ಮಾಡಿದರೆ, ನಿಮಗೆ 10 ಪ್ರತಿಶತದಷ್ಟು ರಿಯಾಯಿತಿ ಸಿಗುತ್ತದೆ. ನೀವು ಥಾಮ್ಸನ್ ಎಲ್ಇಡಿ ಟಿವಿ ಮಾಡೆಲ್ ನಂ. 24TM2490 ಅನ್ನು 4,999 ರೂಗಳಿಗೆ ಖರೀದಿಸಬಹುದು. ಈ ಟಿವಿಯ ಡಿಸ್ಪ್ಲೇ 24 ಇಂಚುಗಳು.

ಅಂತೆಯೇ, ಈ ಸೆಲ್‌ನಲ್ಲಿರುವ ಥಾಮ್ಸನ್‌ನ ಟಿವಿ ಮಾಡೆಲ್ 32 ಟಿಎಂ 3290 ಗೆ ನೀವು ಕೇವಲ 6,999 ರೂ. ಗೆ ಖರೀದಿಸಬಹುದು. ನೀವು ದೊಡ್ಡ ಪರದೆಯ ಟಿವಿ ಕೊಳ್ಳುವ ಆಸಕ್ತಿ ಹೊಂದಿದ್ದರೆ ನೀವು ಆಂಡ್ರಾಯ್ಡ್ ಟಿವಿಯನ್ನು 43 ಇಂಚಿನ ಡಿಸ್ಪ್ಲೇನಲ್ಲಿ ಕೇವಲ 20999 ರೂಗಳಿಗೆ ಖರೀದಿಸಬಹುದು. ಇದಲ್ಲದೆ, ನೀವು 50 ಇಂಚಿನ ಸ್ಕ್ರೀನ್ ಗಾತ್ರದ ಟಿವಿಯನ್ನು 25,999 ಕ್ಕೆ ಮತ್ತು 55 ಇಂಚಿನ ಎಲ್ಇಡಿ ಟಿವಿಯನ್ನು 31,999 ಕ್ಕೆ ಮತ್ತು 65 ಇಂಚಿನ ಟಿವಿಯನ್ನು 51,999 ರೂಗಳಿಗೆ ಖರೀದಿಸಬಹುದು.

ನೀವು ಸ್ಮಾರ್ಟ್ ಎಲ್ಇಡಿ ಟಿವಿ ಖರೀದಿಸಲು ಬಯಸಿದರೆ, ನೀವು 50TM5090 2019 ಮಾದರಿಯನ್ನು 19499 ರೂ.ಗಳಿಗೆ ಖರೀದಿಸಬಹುದು. ಮಾಡೆಲ್ ಸಂಖ್ಯೆ 55TH1000 ಗೆ, 28999 ರೂ.ಗಳನ್ನು ಖರ್ಚು ಮಾಡಬೇಕಾಗಿದ್ದರೆ, 65TH1000 ಕ್ಕಿಂತ ಹೆಚ್ಚಿನ ಮಾಡೆಲ್ ಗಳು 50999 ರೂ. ಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ರಿಪಬ್ಲಿಕ್ ಡೇ ಸೇಲ್ ಜನವರಿ 19, 2020  ರಿಂದ 2020ರ ಜನವರಿ 22 ರವರೆಗೆ ನಡೆಯುತ್ತಿದೆ. ಈ ಸಮಯದಲ್ಲಿ, ನಿಮ್ಮ ಬಜೆಟ್ ಮತ್ತು ಆಯ್ಕೆಯ ಪ್ರಕಾರ ನೀವು ಎಲ್ಇಡಿ ಟಿವಿಯನ್ನು ಅಗ್ಗವಾಗಿ ನಿಮ್ಮ ಮನೆಗೆ ತರಬಹುದು.