ಜೇಡಿಮಣ್ಣಿನಿಂದ ಮಾಡಿದ ಆಭರಣಗಳನ್ನು ನೋಡಿ ನಿಮಗೆ ಆಶ್ಚರ್ಯವಾಗಬಹುದು!

ರಾಜಸ್ಥಾನದ ಮರುಭೂಮಿಯ ಮಣ್ಣಿನಿಂದ ಮಹಿಳೆಯರು ಧರಿಸಲು ಹದಿನಾರು ಸಿಂಗಾರ್ ಆಭರಣಗಳನ್ನು ಸಹ ತಯಾರಿಸಲಾಗುತ್ತದೆ. ಇದನ್ನು ಕೇಳಲು ನಿಮಗೆ ವಿಚಿತ್ರವೆನಿಸಬಹುದು. ಆದರೆ ಇದು ವಾಸ್ತವ.

Last Updated : Sep 9, 2019, 08:22 AM IST
ಜೇಡಿಮಣ್ಣಿನಿಂದ ಮಾಡಿದ ಆಭರಣಗಳನ್ನು ನೋಡಿ ನಿಮಗೆ ಆಶ್ಚರ್ಯವಾಗಬಹುದು! title=

ಬಾರ್ಮರ್: ಆಭರಣ ಎಂದರೆ ಯಾವ ಮಹಿಳೆಗೆ ತಾನೇ ಇಷ್ಟವಾಗುವುದಿಲ್ಲ! ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ಧರಿಸಿರುವ ಮಹಿಳೆಯರನ್ನು ನೀವು ನೋಡಿರಬಹುದು. ಆದರೆ ರಾಜಸ್ಥಾನದ ಬಾರ್ಮರ್‌ನಲ್ಲಿ ಜೇಡಿಮಣ್ಣಿನಿಂದ ಹದಿನಾರು ಬಗೆಯ್ ಮೇಕಪ್ ಆಭರಣಗಳನ್ನು ತಯಾರಿಸಲಾಗುತ್ತದೆ. ಇದನ್ನು ಇಲ್ಲಿನ ಸ್ಥಳೀಯ ಮಹಿಳೆಯರು ಧರಿಸುತ್ತಾರೆ. ಆದರೆ ರಾಜಸ್ಥಾನದ ಹೊರಗೆ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ.

ಬಾರ್ಮರ್ ಜಿಲ್ಲಾ ಕೇಂದ್ರ ಕಚೇರಿಯಿಂದ 20 ಕಿ.ಮೀ ದೂರದಲ್ಲಿರುವ ವಿಶಾಲ ಗ್ರಾಮದಲ್ಲಿ ಜಮಿನ್ ಅವರ ಕುಟುಂಬ ಕಳೆದ 40 ವರ್ಷಗಳಿಂದ ಮಣ್ಣಿನ ಆಭರಣಗಳನ್ನು ತಯಾರಿಸುತ್ತಿದೆ.

ರಾಜಸ್ಥಾನದ ಮರುಭೂಮಿಯ ಮಣ್ಣಿನಿಂದ ಮಹಿಳೆಯರು ಧರಿಸಲು ಹದಿನಾರು ಸಿಂಗಾರ್ ಆಭರಣಗಳನ್ನು ಸಹ ತಯಾರಿಸಲಾಗುತ್ತದೆ. ಇದನ್ನು ಕೇಳಲು ನಿಮಗೆ ವಿಚಿತ್ರವೆನಿಸಬಹುದು. ಆದರೆ ಇದು ವಾಸ್ತವ.

ಜೇಡಿಮಣ್ಣಿನಿಂದ ಆಭರಣಗಳ ತಯಾರಿಕೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಭರಣ ತಯಾರಕರಾದ ಜಮಿನ್, ಅವರ ಕುಟುಂಬವು ಈ ಕಲೆಯನ್ನು ತನ್ನ ಪೂರ್ವಜರಿಂದ ಕಲಿತಿದೆ ಎಂದು ಹೇಳಿದರು. ಈ ಕಲೆ ರಾಜಸ್ಥಾನದ ಹೊರಗೆ ತುಂಬಾ ಇಷ್ಟವಾಗಿದೆ. ವಿದೇಶಿ ಪ್ರವಾಸಿಗರು ಕೂಡ ಈ ಆಭರಣಗಳನ್ನು ಇಷ್ಟಪಡುತ್ತಾರೆ ಎಂದು ಅವರು ತಿಳಿಸಿದರು.

ಆಭರಣ ತಯಾರಿಸುವ ವಿಧಾನವೂ ವಿಶೇಷ:
ಆಭರಣಗಳನ್ನು ತಯಾರಿಸುವ ವಿಧಾನವೂ ಬಹಳ ವಿಶೇಷವಾಗಿದೆ. ಈ ಆಭರಣ ತಯಾರಿಸಲು 1 ಗಂಟೆಯಿಂದ ಪೂರ್ಣ ದಿನದವರೆಗೆ ತೆಗೆದುಕೊಳ್ಳುತ್ತದೆ. ತೂಕದಲ್ಲಿ ತುಂಬಾ ಹಗುರವಾದ ಆಭರಣಗಳ ಬೆಲೆ 10 ರೂ.ನಿಂದ ಪ್ರಾರಂಭವಾಗುತ್ತದೆ. ಗರಿಷ್ಠ ಮೊತ್ತ 500 ರೂಪಾಯಿಗಳವರೆಗೆ ಇರುತ್ತದೆ ಎಂದು ಜಮಿನ್ ಮಾಹಿತಿ ನೀಡಿದರು.

Trending News