Chikkamagalore Vidhan Sabha Chunav: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೈ ಕಲಿಗಳದ್ದೇ ಮೇಲು ಗೈ!

Chikkamagalore Vidhan Sabha Chunav Result 2023:  ಪ್ರತಿ ವರ್ಷ ಈ ಭಾಗದ ಐದು ಕ್ಷೇತ್ರಗಳಲ್ಲಿಯಾವುದಾದರೂ ಒಂದು ಕ್ಷೇತ್ರದಲ್ಲಿ ಕಾಂಗ್ರೇಸ್‌ ಅಥವಾ ಜೆಡಿಎಸ್‌ ಬಹುಮಾತ ಸಾಧಿಸುತ್ತಿತ್ತು . ಆದರೆ ಈ ಬಾರಿ ಎಲ್ಲಾ ಕೇತ್ರದಲ್ಲಿಕಾಂಗ್ರೆಸ್‌ ಮುನ್ನಡೆ ಸಾಧಿಸಿ ಇತಿಹಾಸ ಬರೆಯುತ್ತಿದೆ.

Written by - Zee Kannada News Desk | Last Updated : May 13, 2023, 10:30 AM IST
  • ಕಾಫಿನಾಡಿನಲ್ಲಿ ಮುನ್ನಡೆ ಪಡೆದುಕೊಳ್ಳುತ್ತಿರುವ ಕೈ ಕಲಿಗಳು
  • ಶೃಂಗೇರಿ ಕ್ಷೇತ್ರದಲ್ಲಿ ಟಿ.ಡಿ ರಾಜೇಗೌಡಗೆ ಮುನ್ನಡೆ
  • ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಹಿನ್ನಡೆ
Chikkamagalore Vidhan Sabha Chunav: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೈ ಕಲಿಗಳದ್ದೇ ಮೇಲು ಗೈ! title=

Chikkamagalore Vidhan Sabha Chunav Result 2023 : ಚಿಕ್ಕಮಗಳೂರು ಎನ್ನುತ್ತಿದ್ದಂತೆ ಕಾಫಿ ಗಮಲು, ಪ್ರವಾಸತಾಣಕ್ಕೆ  ಹೆಸರುವಾಸಿಯಾಗಿದೆ. ಈ ಕಾಫಿ ನಾಡಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಯಾರಿಗೆ ಹೆಚ್ಚು  ಜನ ಬೆಂಬಲ, ಈ  ಭಾಗದಲ್ಲಿ ಜಾತಿವಾರು ಮತ ಹಂಚಿಕೆ, ಹಾಗೆಯೇ ಕೋಮುವಾದ ಪ್ರಕರಣದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವನಾಡಗಿದೆ. 

ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಈ ಭಾಗದಲ್ಲಿ ಹೆಚ್ಚಾಗಿ ಜಾತಿವಾರು ಮತದಾನ ಹಂಚಿಕೆಯಾಗುತ್ತದೆ. ಚಿಕ್ಕಮಗಳೂರು ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ  4 ಬಿಜೆಪಿ ಶಾಸಕರಿದ್ದು, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕರಾಗಿದ್ದಾರೆ. ಈ ಜಿಲ್ಲೆಯಲ್ಲಿ ಸತತವಾಗಿ ಬಿಜೆಪಿ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಯಿ ಹಿಡಿಯುತ್ತಿದ್ದಾರೆ.

ಆದರೆ ಈ ಬಾರಿ ಕಾಫಿ ಮೂಡಿಗೆರೆಯಲ್ಲಿ ಬಿಜೆಪಿಯಲ್ಲಿ ಸಿಗದ ಕಾರಣ ಎಂ.ಪಿ.ಕುಮಾರ ಸ್ವಾಮಿ JDS ಸೇರ್ಪಡೆಯಾಗಿದ್ದರು. ಇವೆಲ್ಲವನ್ನು ಆಧರಿಸಿ ನೋಡಿದರೇ ಚಿಕ್ಕಮಗಳೂರು ಜಿಲ್ಲಾದ್ಯಾಂತ ಹೆಚ್ಚು ಬಹುಮತ ಯಾರಿಗೆ ನೋಡೊಣ.. 

ಚಿಕ್ಕಮಗಳೂರು ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳು 

  • ಚಿಕ್ಕಮಗಳೂರು
  • ಮೂಡಿಗೆರೆ
  • ಕಡೂರು
  • ಶೃಂಗೇರಿ
  • ತರಿಕೇರೆ

ಚಿಕ್ಕಮಗಳೂರು  ವಿಧಾನಸಭಾ ಕ್ಷೇತ್ರ (Chikmagalur Assembly Constituency): 

ಚಿಕ್ಕಮಗಳೂರು ಮತ ಕ್ಷೇತ್ರದಲ್ಲಿ ಒಟ್ಟು 21,6230 ಮತದಾರರಿದ್ದು, ಅದರಲ್ಲಿ ಪುರುಷ ಮತದಾರರ ಸಂಖ್ಯೆ 107,942  ಮಹಿಳಾ ಮತದಾರರ ಸಂಖ್ಯೆ 108,264 ಹಾಗೂ ಇತರೆ  24 ಮತದಾರರಿದ್ದರು. ಈ ಕ್ಷೇತ್ರದಲ್ಲಿ 2018ರಲ್ಲಿ  73.72% ಮತದಾನವಾಗಿತ್ತು.ಬಿಜೆಪಿಯಿಂದ ಸಿ.ಟಿ.ರವಿ , ಕಾಂಗ್ರೇಸ್ನಿಂದ  ಶಂಕರ್ ಬಿ ಎಲ್, ಹಾಗೂ ಜೆಡಿ ಎಸ್ ಹರೀಶ ಬಿ ಎಚ್  ಪಕ್ಷದಿಂದ ಸ್ಪರ್ದಿಸಿದ್ದರು. 

2018 ಸ್ವರ್ದಿಸಿದ್ದ ಅಭ್ಯರ್ಥಿಗಳ ವಿವರ ಹೀಗಿದೆ...
ಚಿಕ್ಕಮಗಳೂರು ಕೇತ್ರ 2018 ಸ್ವರ್ದಿಸಿದ್ದ ಅಭ್ಯರ್ಥಿಗಳು 
1 ಬಿಜೆಪಿ : ಸಿ.ಟಿ.ರವಿ  70,863  
2 ಕಾಂಗ್ರೇಸ್:‌  ಶಂಕರ್ ಬಿ ಎಲ್ 44,549 
3ಜೆಡಿ(ಎಸ್) ಹರೀಶ ಬಿ ಎಚ್ :38,317 
ಈ ಭಾಗದಲ್ಲಿ ಹೆಚ್ಚು ಹಿಂದುತ್ವ ಮತ ಹೆಚ್ಚು ಇರುವುದರಿಂದ ಸಿ.ಟಿ.ರವಿ  70,863 ಗಳಿಸಿ ಶಂಕರ್ ಬಿ ಎಲ್ ಗಿಂತ 26314 ಸಾವಿರ ಓಟುಗಳಿಂದ ಸಿ.ಟಿ.ರವಿ ಜಯಸಾಧಿದ್ದರು. 

ಇನ್ನು ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸಿ.ಟಿ.ರವಿ, ಕಾಂಗ್ರೆಸ್ ಎಚ್.ಡಿ.ತಮ್ಮಯ್ಯ,  ಜೆಡಿಎಸ್‌ ಬಿ.ಎಂ.ತಿಮ್ಮಶೆಟ್ಟಿ, ಸ್ವರ್ಧಿಸಿದ್ದರು. ಲೆಕ್ಕಚಾರದ ಪ್ರಕಾರ  ಧರ್ಮ, ಜಾತಿವಾರು ಹೆಚ್ಚು ಮತದಾನ ನೀರಿಕ್ಷೆಯಲ್ಲಿ ಇರುವುದರಿಂದ ಈ ಬಾರಿಯು ಚಿಕ್ಕಮಗಳೂರು ಕ್ಷೇತ್ರದಲ್ಲಿ ಶಾಸಕ ಪಟ್ಟಕ್ಕೆ ಏರಲಿದ್ದಾರೆ ಇಲ್ಲಿದೆ ಕ್ಷಣ ಕ್ಷಣದ ಅಪ್ಡೇಟ್ 

ಚಿಕ್ಕಮಗಳೂರು  ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Chikmagalur Assembly Election Result 2023)

ಈ ಭಾರಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು
ಬಿಜೆಪಿ- ಸಿ.ಟಿ.ರವಿ 
ಕಾಂಗ್ರೆಸ್ - ಎಚ್.ಡಿ.ತಮ್ಮಯ್ಯ 
ಜೆಡಿಎಸ್‌ -ಬಿ.ಎಂ.ತಿಮ್ಮಶೆಟ್ಟಿ 

2 ಮೂಡಿಗೆರೆ ವಿಧಾನ ಸಭಾ ಕ್ಷೇತ್ರ: (Mudigere Vidhan Sabha Constituency)

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಈ ಭಾಗದಲ್ಲೂ ಹೆಚ್ಚಾಗಿ ಹಿಂದುತ್ವ ಆಧಾರಿತ ಕ್ಷೇತ್ರವಾಗಿದೆ. ಈ ನಿಟ್ಟಿನಲ್ಲಿ ಕಳೆದ 2018ರ ಚುನಾವಣೆ ವಿವರ ಹೀಗಿದೆ..
ವಿಧಾನ ಸಭೆ ಚುನಾವಣೆಗೆ ಸ್ವರ್ದಿಸಿದ್ದ ಮೂಡಿಗೆರೆ ಕ್ಷೇತ್ರದಿಂದ ಬಿಜೆಪಿ ಎಂ.ಪಿ.ಕುಮಾರಸ್ವಾಮಿ,ಕಾಂಗ್ರೇಸ್ ನಿಂದ ಮೋಟಮ್ಮ, ಜೆಡಿಎಸ್ ನಿಂದ ಬಿ.ಬಿ.ನಿಂಗಯ್ಯ ಕಣಕಿಳಿದಿದ್ದರು. ಹಿಂದುತ್ವ ಪ್ರತಿಪಾದಕರು ಹೆಚ್ಚು ಇರುವುದರಿಂದ  ಈ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಎಂ.ಪಿ.ಕುಮಾರಸ್ವಾಮಿ,  58,783 ಗಳಿಸಿ ಮೋಟಮ್ಮ ವಿರುದ್ಧ12,512 ಓಟುಗಳಿಂದ ಮುನ್ನಡೆ ಪಡೆದಿದ್ದರು.

2018 ಚುನಾವಣಾ ಫಲಿತಾಂಶ
ಬಿಜೆಪಿ -ಎಂ.ಪಿ.ಕುಮಾರಸ್ವಾಮಿ ಗಳಿಸಿದ ಮತ  58,783 
ಕಾಂಗ್ರೇಸ್- ಮೋಟಮ್ಮ ಗಳಿಸಿದ ಮತ 46,271 
ಜೆಡಿ(ಎಸ್)- ಬಿ.ಬಿ.ನಿಂಗಯ್ಯ 22,063 

ಮೂಡಿಗೆರೆ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Mudigere Assembly Election Result 2023)

2023ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ದಿಸಿದ್ದವರವರು
ಬಿಜೆಪಿ - ದೀಪಕ್ ದೊಡ್ಡಯ್ಯ
ಕಾಂಗ್ರೆಸ್-  ನಯನ ಮೋಟಮ್ಮ
ಜೆಡಿಎಸ್-  ಎಂ.ಪಿ.ಕುಮಾರಸ್ವಾಮಿ

ಈ ಬಾರಿ ಚುನಾವಣೆಗೂ ಮುನ್ನ ಎಂ.ಪಿ ಕುಮಾರ ಸ್ವಾಮಿ ಟಿಕೇಟ್‌ ಹಂಚಿಕೆ ಸಿಗದೇ  ವಂಚಿತರಾಗಿದ್ದರಿಂದ ತಮ್ಮ ಕ್ಷೇತ್ರದಲ್ಲಿ ಜೆಡಿಎಸ್‌ ನಿಂದ ಕಣಕ್ಕಿಳಿದ್ದಿದ್ದರು, ಈ ಭಾಗದಲ್ಲಿ ಜಾತಿವಾರು ಮತ ಹಂಚಿಕೆಯಾಗಿರುವುದರಿಂದ ಮತ್ತೊಮ್ಮೆ ಎಂ.ಪಿ ಕುಮಾರ ಸ್ವಾಮಿ ಶಾಸಕ ಪಟ್ಟ ಮುಡಿಗೇರಿಸಿಕೊಂಡರೇ.... ಇಲ್ಲಿದೆ ಈ ಕ್ಷಣದ ಅಪ್ಡೆಟ್ಸ್‌ 

3 . ಶೃಂಗೇರಿ ವಿಧಾನ ಸಭಾ ಕ್ಷೇತ್ರ: (Sringeri Vidhan Sabha Constituency)

ಚಿಕ್ಕಮಗಳೂರು ತುದಿ ಭಾಗದಲ್ಲಿರುವ ಶೃಂಗೇರಿ ವಿಧಾನ ಸಭಾ ಕ್ಷೇತ್ರ ವಾಗಿದೆ. ಇದೊಂದೆ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. 

2018ರ  ಶೃಂಗೇರಿ ವಿಧಾನ ಸಭಾ ಕ್ಷೇತ್ರದಲ್ಲಿ 1,66,026 ಒಟ್ಟು ಮತದಾರರಿದ್ದು, ಇದರಲ್ಲಿ 82,003 ಪುರುಷ ಮತದಾರರು, ಹಾಗೂ 84, 019 ಮಹಿಳಾ ಮತದಾರಿದ್ದು, 4 ಇತರೆ ಮತದಾರಿದ್ದಾರೆ. ಈ ಭಾಗದಲ್ಲಿ   82.02% ಮತದಾನವಾಗಿತ್ತು. 
2018ರಲ್ಲಿ ಶೃಂಗೇರಿ ಕೇತ್ರದಲ್ಲಿ ವಿಧಾನ ಸಭೆ ಚುನಾವಣೆಗೆ  ಸ್ವರ್ದಿಸಿದ್ದ ಅಭ್ಯರ್ಥಿ ವಿವರ ಹೀಗಿದೆ, ಕಾಂಗ್ರೆಸ್‌ ಅಭ್ಯರ್ಥಿಯಾದ  ಟಿ ಡಿ ರಾಜೇಗೌಡ,ಬಿಜೆಪಿ ಡಿ.ಎನ್.ಜೀವರಾಜ್ , ಜೆಡಿಎಸ್‌ ನಿಂದ  ವೆಂಕಟೇಶ್ ಎಂಬುವವರು ಸ್ವರ್ದಿಸಿದ್ದರು. 

2018 ಶೃಂಗೇರಿ ವಿಧಾನ ಸಭಾ ಕ್ಷೇತ್ರ ಚುನಾವಣಾ ಫಲಿತಾಂಶ

ಕಾಂಗ್ರೆಸ್‌  -ಟಿ ಡಿ ರಾಜೇಗೌಡ ಗಳಿಸಿದ  62,780
ಬಿಜೆಪಿ -ಡಿ.ಎನ್.ಜೀವರಾಜ್ ಗಳಿಸಿದ ಮತ 60,791
ಜೆಡಿಎಸ್-‌ ವೆಂಕಟೇಶ್ ಗಳಿಸಿದ ಮತ  9,799 

ಆದರೆ ಈ ಭಾಗದಲ್ಲಿ ಯಾವುದೇ ಜಾತಿ ಧರ್ಮದ ಹಂಗೂ ಇಲ್ಲ, ಈ ನಿಟ್ಟಿನಲ್ಲಿ ಬಿಜೆಪಿ ಡಿ.ಎನ್.ಜೀವರಾಜ್ ಅಭ್ಯರ್ಥಿ ವಿರುದ್ಧ    ಟಿ ಡಿ ರಾಜೇಗೌಡ 62,780  ಮತಗಳಿಸಿ 1,989 ಓಟ್‌ ಗಳಿಂದ ಜಯಗಳಿಸಿದ್ದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Sringeri Assembly Election Result 2023)

2023ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ದಿಸಿದ್ದವರವರು

ಬಿಜೆಪಿ -ಡಿ.ಎನ್.ಜೀವರಾಜ್ 
ಕಾಂಗ್ರೆಸ್ -ಟಿ.ಡಿ.ರಾಜೇಗೌಡ 
ಜೆಡಿಎಸ್ -ಸುಧಾಕರ್ ಎಸ್.ಶೆಟ್ಟಿ

4. ತರೀಕೆರೆ ವಿಧಾನ ಸಭಾ ಕೇತ್ರ : ( Tarikere Vidhan Sabha Constituency )

ಚಿಕ್ಕಮಗಳೂರು ಮತ್ತೊಂದು ಕ್ಷೇತ್ರವಾಗಿರುವ, ತರೀಕೆರೆ ವಿಧಾನ ಸಭಾ ಕೇತ್ರ.. ಕಳೆದ 2018ರ ಚುನಾವಣೆಯ ಫಲಿತಾಂಶ ಹೇಗಿತ್ತು ಒಂದಿಷ್ಟು ವಿವರಗಳು..ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ  ಕೂಡ ಒಂದು ರೀತಿಯ ಜಾತಿ ಧರ್ಮ ಆಧರಿತ ಪ್ರದೇಶವಾಗಿದೆ. ಈ ಭಾಗದಲ್ಲೂ ಹೆಚ್ಚಾಗಿ ಕೋಮು ಗಲಭೆ ಪ್ರಕರಣಗಳು ನಡೆದಿವೆ.  ಈ ನಿಟ್ಟಿನಲ್ಲಿ ನೋಡೋದಾರೆ ಇಲ್ಲಿ ಹೆಚ್ಚು ತರೀಕೆರೆದಲ್ಲಿ 2018ರಲ್ಲಿ  ಒಟ್ಟು ಮತದಾರರಿದ್ದು, ಇದರಲ್ಲಿ 92,129 ಪುರುಷ ಮತದಾರರು, ಮಹಿಳಾ ಮತದಾರರು 90,716 ಹಾಗೂ ಇತರೆ 8 ಮತದಾರಿದ್ದಾರೆ. 

2018 ತರೀಕೆರೆ ವಿಧಾನ ಸಭಾ ಕ್ಷೇತ್ರ ಚುನಾವಣಾ ಫಲಿತಾಂಶ
ಬಿಜೆಪಿ -ಡಿ.ಎಸ್. ಸುರೇಶ್ ಗಳಿಸಿದ ಮತ 44,940
ಪಕ್ಷೇತರ- ಶ್ರೀನಿವಾಸ ಗಳಿಸಿದ ಮತ 33,253
ಪಕ್ಷೇತರ- ಹೆಚ್ ಎಂ ಗೋಪಿಯವರು ಗಳಿಸಿದ ಮತ 29,663
ಈ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಪಕ್ಷೇತರವಾಗಿ ಸ್ವರ್ಧಿಸಿದ್ದರು.  ಈ ಭಾಗದಲ್ಲಿ ಜಾತಿ ಆಧಾರದಲ್ಲಿ ಇರುವುದರಿಂದ ಬಿಜೆಪಿಯಿಂದ ಸ್ವರ್ದಿಸಿದ್ದ ಡಿ.ಎಸ್. ಸುರೇಶ್ ಗಳಿಸಿದ ಮತ 44,940 ಗಳಿಸಿ ಶ್ರೀನಿವಾಸ ಎಂಬುವರು ವಿರುದ್ದ ಜಯ ಸಾಧಿಸಿದ್ದಾರೆ.

 ತರೀಕೆರೆ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Tarikere Assembly Election Result 2023)

2023ರ  ಚುನಾವಣೆಯಲ್ಲಿ  ಅಖಾಡಕ್ಕೆ ಇಳಿದವರು 
ಬಿಜೆಪಿ -ಡಿ.ಎಸ್.ಸುರೇಶ್ 
ಕಾಂಗ್ರೆಸ್ -ಜಿ.ಎಚ್.ಶ್ರೀನಿವಾಸ್ 
ಪಕ್ಷೇತರ -    ಎಚ್.ಎಂ.ಗೋಪಿಕೃಷ್ಣ 

ಈ ಭಾಗದಲ್ಲಿ  ಈ ಬಾರಿ ಜಾತಿ ಧರ್ಮ ಹೊರತು ಪಡಿಸಿ , ಸಾಮಾಜಿಕ ಕಾರ್ಯಗಳನ್ನು ಗುರುತಿಸಿರುವುದು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ನೋಡೋದಾದರೆ  ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಸಮಾಜ ಸೇವೆ ನಿರ್ಣಾಯಕ, ಗುರುತಿಸಿಕೊಂಡಿದ್ದಾರೆ.

5 . ಕಡೂರು ವಿಧಾನಸಭಾ ವಿಧಾನ ಸಭಾ ಕ್ಷೇತ್ರ ( Kadur Vidhan Sabha Constituency): 

ಚಿಕ್ಕಮಗಳೂರು ಜಿಲ್ಲೆಯ ಮಗದೊಂದು ಮತ ಕ್ಷೇತ್ರವಾಗಿರುವ  ಕಡೂರು ಈ  ಭಾಗದಲ್ಲೂ  ಹೆಚ್ಚು ಬಿಜೆಪಿ ಪರ ಬಹುಮತ ಪಡೆದಿತ್ತು.  ಈ ಕ್ಷೇತ್ರದಲ್ಲಿ ಒಟ್ಟು  2,01,840 ಮತದಾರಿದ್ದು, 101,762 ಪುರುಷ ಮತದಾರರು ಹಾಗೂ, 10,0067  ಮತದಾರಿದ್ದಾರೆ. 

2018 ತರೀಕೆರೆ ವಿಧಾನ ಸಭಾ ಕ್ಷೇತ್ರ ಚುನಾವಣಾ ಫಲಿತಾಂಶ
ಬಿಜೆಪಿ- ಕೆ ಎಸ್ ಪ್ರಕಾಶ್ ಗಳಿಸಿದ ಮತ 62,232    
ಜೆಡಿ ಎಸ್-ವೈಎಸ್ ವಿ ದತ್ತ ಗಳಿಸಿದ ಮತ 46,860    
ಕಾಂಗ್ರೆಸ್‌ -    ಕೆ ಎಸ್ ಆನಂದ್ ಗಳಿಸಿದ ಮತ 46,142

ಬಿಜೆಪಿಯಿಂದ ಬೆಳ್ಳಿ ಪ್ರಕಾಶ್,  ಕಾಂಗ್ರೆಸ್ ನಿಂದ ಕೆ.ಎಸ್.ಆನಂದ್ , ಜೆಡಿಎಸ್  ವೈಎಸ್‌ವಿ ದತ್ತ ಕಣಕಿಳಿದಿದ್ದರು, ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ  ಅಭ್ಯರ್ಥಿ ಕೆ ಎಸ್ ಪ್ರಕಾಶ್ 62,232 ಓಟ್‌ ಗಳಿಸಿ, ಎಸ್‌ ವಿ ದತ್ತ ವಿರುದ್ಧ ಜಯ ಸಾಧಿಸಿದ್ದರು.

ಕಡೂರು ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Kadur Assembly Election Result 2023)
2023ರ ವಿಧಾನ ಸಭೆ  ಚುನಾವಣೆಯಲ್ಲಿ ಸ್ಪರ್ದಿಸಿದವರು

ಬಿಜೆಪಿ- ಬೆಳ್ಳಿ ಪ್ರಕಾಶ್ 
ಕಾಂಗ್ರೆಸ್ -    ಕೆ.ಎಸ್.ಆನಂದ್ 
ಜೆಡಿಎಸ್   -ವೈಎಸ್‌ವಿ ದತ್ತ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News