ಮುಂದಿನ 2-3 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಡಿಕೆಶಿ

ದೇವರು ಕಷ್ಟನೂ ಕೊಡೋದಿಲ್ಲ, ಸುಖವನ್ನು ಕೊಡೊದಿಲ್ಲ, ಆದರೆ ಅವಕಾಶ ಕೊಡ್ತಾನೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ, 4 ಗ್ಯಾರಂಟಿಗಳನ್ನು ನಾವು ರಾಜ್ಯದ ಜನತೆಗೆ ಕೊಟ್ಟಿದ್ದೇವೆ ಎಂದು ಡಿಶಿಕೆ ಹೇಳಿದರು.

Written by - Zee Kannada News Desk | Last Updated : Mar 22, 2023, 01:43 PM IST
  • ಮುಂದಿನ 2-3 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
  • ಕಾಂಗ್ರೆಸ್ ಗ್ಯಾರಂಟಿಗಳಿಗೆ ನಾವು ಜವಾಬ್ದಾರಿ, ಬಿಜೆಪಿ ಪ್ರಣಾಳಿಕೆ ಬರಲಿದೆ, ಏನ್ ಮಾಡ್ತಾರೋ ನೋಡೋಣ
  • ಬಿಜೆಪಿ ನುಡಿದಂತೆ ನಡೆದಿಲ್ಲ. ನಾವು ನುಡಿದಂತೆ ನಡೆಯುತ್ತೇವೆಂದ ಡಿ.ಕೆ.ಶಿವಕುಮಾರ್
ಮುಂದಿನ 2-3 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಡಿಕೆಶಿ title=
ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮುಂದಿನ 2-3 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬುಧವಾರ ಕಾಂಗ್ರೆಸ್‍ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆಂದು ಡಿಕೆಶಿ ಹೇಳಿದ್ದರು. ಆದರೆ ಕಾರಣಾಂತರಗಳಿಂದ ಇಂದು ಬಿಡುಗಡೆ ಮಾಡುತ್ತಿಲ್ಲ, ಮುಂದಿನ 2-3 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆಗೆ ಮಾತನಾಡಿರುವ ಡಿಕೆಶಿ, ಕರ್ನಾಟಕದ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ‘ಇವತ್ತು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಬೇಕೆಂದು ಆಲೋಚನೆ ಮಾಡಿದ್ದೇವು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರು ಮತ್ತು ಜನರಲ್ ಸೆಕ್ರೆಟರಿ ಯುಗಾದಿ ಹಬ್ಬಕ್ಕೆ ಇಲ್ಲೇ ಬಂದಿದ್ದಾರೆ. ಮುಂದಿನ 1-2 ದಿನದಲ್ಲಿ ಪಟ್ಟಿ ರಿಲೀಸ್ ಮಾಡ್ತೀವಿ’ ಎಂದು ಹೇಳಿದರು.

ಇದನ್ನೂ ಓದಿ: ಉತ್ತರ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಬದ್ಧತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

‘ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ನಾವು ಜವಾಬ್ದಾರಿ. ಬಿಜೆಪಿಯವರ ಪ್ರಣಾಳಿಕೆ ಬರಲಿದೆ, ಏನ್ ಮಾಡ್ತಾರೋ ನೋಡೋಣ. 10 ಲಕ್ಷ ರೂ. ಪ್ರತಿಯೊಬ್ಬರ ಅಕೌಂಟ್‍ಗೆ ಹಾಕ್ತಿವಿ ಅಂದ್ರು, ಹಾಕಿದ್ರಾ?’ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಡಿಶಿಕೆ ಪ್ರಶ್ನಿಸಿದರು.

ಕಳೆದ ಮೂರೂವರೆ ವರ್ಷದಿಂದ ಬಹಳ ಕಷ್ಟ ಅನುಭವಿಸ್ತಿದ್ದೇವೆ. ಕೊರೋನಾ, ರಾಜ್ಯದ ಕೆಟ್ಟ ಆಡಳಿತದಿಂದ ಜನರು ತತ್ತರಿಸಿದ್ದಾರೆ. ದೇವರು ಕಷ್ಟನೂ ಕೊಡೋದಿಲ್ಲ, ಸುಖವನ್ನು ಕೊಡೊದಿಲ್ಲ, ಆದರೆ ಅವಕಾಶ ಕೊಡ್ತಾನೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ, 4 ಗ್ಯಾರಂಟಿಗಳನ್ನು ನಾವು ರಾಜ್ಯದ ಜನತೆಗೆ ಕೊಟ್ಟಿದ್ದೇವೆ’ ಎಂದು ಹೇಳಿದರು.

ಇದನ್ನೂ ಓದಿ: ರೈತರಲ್ಲಿ ಹೊನ್ನೇರು ಸಂಭ್ರಮ... ಯುಗಾದಿ ದಿನದಂದು ಕೃಷಿ ಚಟುವಟಿಕೆ ಆರಂಭ

ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಿಜೆಪಿ, ಜೆಡಿಎಸ್ ವ್ಯಂಗ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ‘ಬಿಜೆಪಿಯವರು15 ಲಕ್ಷ ರೂ. ಅಕೌಂಟ್‍ಗೆ ಹಾಕ್ತೀನಿ ಅಂದ್ರಲ್ಲ ಏನಾಯ್ತು? ಆದರೆ ನಾವು ಆತರ ಅಲ್ಲ. ಆದಾಯ ಡಬಲ್ ಮಾಡ್ತೀವಿ ಅಂದ್ರಲ್ಲ ಯಾರಿಗೆ ಮಾಡಿದ್ರು? 10 ಗಂಟೆ ಕರೆಂಟ್ ಕೊಡ್ತೀನಿ ಅಂದ್ರಲ್ಲಾ ಏನಾಯ್ತು? ಬಿಜೆಪಿ ನುಡಿದಂತೆ ನಡೆದಿಲ್ಲ. ನಾವು ನುಡಿದಂತೆ ನಡೆಯುತ್ತೇವೆ, ಎಲ್ಲಾ ಆರ್ಥಿಕ ತಜ್ಞರು ಮತ್ತು ನಮ್ಮ ನಾಯಕರು ಎಲ್ಲರೂ ಕೂತು ಹಣ ತರುವ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಮಾತು ಉಳಿಸಿಕೊಳ್ಳಲಿಲ್ಲ ಅಂದ್ರೆ ಮುಂದೆ ಓಟು ಕೇಳೋಕೆ ಬರಲ್ಲ’ವೆಂದು ಡಿಕೆಶಿ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News