ಬೆಂಗಳೂರು: ‘IMA ಹಗರಣ ಹೊರಬಂದಾಗ ಬಿಜೆಪಿ ನಾಯಕರು ಬೀದಿಯಲ್ಲಿ ಉರುಳಾಡಿ, ಹೊರಳಾಡಿ ಬಾಯಿ ಬಡಿದುಕೊಂಡಿದ್ದರು. ಈಗ ಅದೇ ಹಗರಣದ ರೋಷನ್ ಬೇಗ್ರನ್ನು ಪಕ್ಷಕ್ಕೆ ಸೇರಿಸಿಕೊಂಡು, ಅದೇ ಅಕ್ರಮದಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಅಧಿಕಾರಿ ಎಲ್.ಸಿ.ನಾಗರಾಜ್ಗೆ ಟಿಕೆಟ್ ನೀಡಿದೆ. ಭ್ರಷ್ಟರೆಂದರೆ ಬಿಜೆಪಿಗೆ ಇಷ್ಟೊಂದು ಪ್ರೀತಿ ಏಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
IMA ಹಗರಣ ಹೊರಬಂದಾಗ @BJP4Karnataka ನಾಯಕರು ಬೀದಿಯಲ್ಲಿ ಉರುಳಾಡಿ, ಹೊರಳಾಡಿ ಬಾಯಿ ಬಡಿದುಕೊಂಡಿದ್ದರು.
ಈಗ ಅದೇ ಹಗರಣದ ರೋಷನ್ ಬೇಗ್ರನ್ನು ಪಕ್ಷಕ್ಕೆ ಸೇರಿಸಿಕೊಂಡು, ಅದೇ ಅಕ್ರಮದಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಅಧಿಕಾರಿ ಎಲ್.ಸಿ ನಾಗರಾಜ್ಗೆ ಟಿಕೆಟ್ ನೀಡಿದೆ.
ಭ್ರಷ್ಟರೆಂದರೆ ಬಿಜೆಪಿಗೆ ಇಷ್ಟೊಂದು ಪ್ರೀತಿ ಏಕೆ?
— Karnataka Congress (@INCKarnataka) April 14, 2023
‘ಬಿಜೆಪಿ ಸೇರಿದ್ದೇ ತಡ ಪೊಲೀಸರಾಗಿದ್ದವರೂ ಮಾಫಿಯಾ ಗ್ಯಾಂಗ್ಸ್ಟರ್ಗಳಂತೆ ಆಗುತ್ತಾರೆ! "ರೌಡಿಗಳು ರೌಡಿಗಳಲ್ಲವಂತೆ, ಅಮಾಯಕರಂತೆ" ಇದು ಬಿಜೆಪಿ ಅಭ್ಯರ್ಥಿಯ ಸರ್ಟಿಫಿಕೇಟ್. ಹಲವು ಪ್ರಕರಣಗಳಿರುವ ಸೈಲೆಂಟ್ ಸುನೀಲನ ರೌಡಿ ಶೀಟನ್ನು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ನೋಡೇ ಇಲ್ಲವಂತೆ. ಹಾಗಾದ್ರೆ ಕಮಿಷನರ್ ಆಗಿದ್ದಾಗ ಇವರು ಮಾಡಿದ ಕೆಲಸವಾದರೂ ಏನು?!’ ಎಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದತಿ: ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತ-ಸಿದ್ದು
'@BJP4Karnataka ಯ ಸಾಮಾಜಿಕ ನ್ಯಾಯ ವಿಭಿನ್ನವಾದುದು.
ಭ್ರಷ್ಟಾಚಾರದ ಕೋಟಾ,
ರೌಡಿ ಕೋಟಾ,
ಭ್ರಷ್ಟ ಅಧಿಕಾರಿಗಳ ಕೋಟಾ,
ಸಿಡಿ ಕೋಟಾ,
ಫ್ಯಾಮಿಲಿ ಕೋಟಾ,ಹೀಗೆ ಹಲವು ಕೋಟಾದಡಿಯಲ್ಲಿ ಟಿಕೆಟ್ ಹಂಚಲಾಗಿದೆ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ!— Karnataka Congress (@INCKarnataka) April 14, 2023
‘ಬಿಜೆಪಿಯ ಸಾಮಾಜಿಕ ನ್ಯಾಯ ವಿಭಿನ್ನವಾದುದು. ಭ್ರಷ್ಟಾಚಾರದ ಕೋಟಾ, ರೌಡಿ ಕೋಟಾ, ಭ್ರಷ್ಟ ಅಧಿಕಾರಿಗಳ ಕೋಟಾ, ಸಿಡಿ ಕೋಟಾ, ಫ್ಯಾಮಿಲಿ ಕೋಟಾ ಹೀಗೆ ಹಲವು ಕೋಟಾದಡಿಯಲ್ಲಿ ಟಿಕೆಟ್ ಹಂಚಲಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ!’ ಎಂದು ಕಾಂಗ್ರೆಸ್ ಕುಟುಕಿದೆ.
‘ಕಾಂಗ್ರೆಸ್ ಪಕ್ಷವು ಜನಪರ ಯೋಜನೆಗಳನ್ನು ಚರ್ಚಿಸಿದರೆ, ಬಿಜೆಪಿ ಭ್ರಷ್ಟಾಚಾರದಲ್ಲಿ ಬಿದ್ದಿದೆ. ಸಿಎಂ ವಿರುದ್ಧ ಬಿಜೆಪಿಯಲ್ಲೇ ಶಾಸಕರಾಗಿದ್ದ ನೆಹರೂ ಒಲೆಕಾರ್ ಮಾಡಿದ 1,500 ಕೋಟಿ ರೂ. ಅಕ್ರಮದ ಬಗ್ಗೆ ತನಿಖೆಗೆ ವಹಿಸಿ ಪ್ರಾಮಾಣಿಕತೆ ನಿರೂಪಿಸಬೇಕಾದ್ದು ಬಸವರಾಜ್ ಬೊಮ್ಮಾಯಿಯವರ ಕರ್ತವ್ಯ. ಯಾವುದೇ ತನಿಖೆಗೆ ಮುಂದಾಗದಿರುವುದೇಕೆ ಸಿಎಂ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷವು ಜನಪರ ಯೋಜನೆಗಳನ್ನು ಚರ್ಚಿಸಿದರೆ, ಬಿಜೆಪಿ ಭ್ರಷ್ಟಾಚಾರದಲ್ಲಿ ಬಿದ್ದಿದೆ.
ಸಿಎಂ ವಿರುದ್ಧ ಬಿಜೆಪಿಯಲ್ಲೇ ಶಾಸಕರಾಗಿದ್ದ ನೆಹರೂ ಒಲೆಕಾರ್ ಮಾಡಿದ 1,500 ಕೋಟಿ ಅಕ್ರಮದ ಬಗ್ಗೆ ತನಿಖೆಗೆ ವಹಿಸಿ ಪ್ರಾಮಾಣಿಕತೆ ನಿರೂಪಿಸಬೇಕಾದ್ದು @BSBommai ಅವರ ಕರ್ತವ್ಯ.
ಯಾವುದೇ ತನಿಖೆಗೆ ಮುಂದಾಗದಿರುವುದೇಕೆ ಸಿಎಂ?
— Karnataka Congress (@INCKarnataka) April 14, 2023
ಇದನ್ನೂ ಓದಿ: Karnataka Election 2023: ʻಕಮಲʼ ತೊರೆದು ʻಕೈʼ ಹಿಡಿದ ಲಕ್ಷ್ಮಣ ಸವದಿ.. ಕಾಂಗ್ರೆಸ್ಗೆ ಆನೆಬಲ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.