Karnataka Election 2023: ʻಕಮಲʼ ತೊರೆದು ʻಕೈʼ ಹಿಡಿದ ಲಕ್ಷ್ಮಣ ಸವದಿ.. ಕಾಂಗ್ರೆಸ್‌ಗೆ ಆನೆಬಲ!

Laxman Savadi joined Congress: ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ರಾಜಕೀಯ ಚಟುವಟಿಕೆಗಳು ಕೂಡ ಗರಿಗದರಿವೆ. ಚುನಾವಣಾ ರಣರಂಗದ ಕಾವು ಹೆಚ್ಚಾಗಿದೆ. ಶತಾಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಪಣತೊಟ್ಟ ಕಾಂಗ್ರೆಸ್‌ಗೆ ಈಗ ಮತ್ತೊಬ್ಬ ಪ್ರಭಾವಿ ನಾಯಕ ಬಿಜೆಪಿ ತೊರೆದು ʻಕೈʼ ಹಿಡಿದಿದ್ದಾರೆ.   

Written by - Chetana Devarmani | Last Updated : Apr 14, 2023, 06:04 PM IST
  • ಕರ್ನಾಟಕ ವಿಧಾನಸಭೆ ಚುನಾವಣೆ 2023
  • ʻಕಮಲʼ ತೊರೆದು ʻಕೈʼ ಹಿಡಿದ ಲಕ್ಷ್ಮಣ ಸವದಿ
  • ಡಿಕೆ ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆ
Karnataka Election 2023: ʻಕಮಲʼ ತೊರೆದು ʻಕೈʼ ಹಿಡಿದ ಲಕ್ಷ್ಮಣ ಸವದಿ.. ಕಾಂಗ್ರೆಸ್‌ಗೆ ಆನೆಬಲ! title=
Laxman Savadi

ಬೆಳಗಾವಿ : ಲಕ್ಷ್ಮಣ ಸವದಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಲಕ್ಷ್ಮಣ ಸವದಿ ಅವರ ರಾಜೀನಾಮೆ ಪತ್ರವನ್ನ ಅವರ ಆಪ್ತ ಸಹಾಯಕರು ಪಕ್ಷದ ಕಚೇರಿಗೆ ತಲುಪಿಸಿದರು. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಲಾಗಿದೆ. ಬಿಜೆಪಿ ಉಪಾಧ್ಯಕ್ಷ ಸ್ಥಾನ, ಪಕ್ಷದ ಕೋರ್​ ಕಮಿಟಿ ಸದಸ್ಯ ಸ್ಥಾನಗಳಿಗೂ ರಾಜೀನಾಮೆ ಘೋಷಿಸಿದ್ದಾರೆ. ಬಸವರಾಜ್ ಹೊರಟ್ಟಿ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿ, ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಬಸವರಾಜ್ ಹೊರಟ್ಟಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆ ಪತ್ರಕ್ಕೆ ಸಭಾಪತಿ ಬಸವರಾಜ್ ಹೊರಟ್ಟಿ ಅಂಗಿಕರಿಸಿದ್ದಾರೆ. ಆ ಬಳಿಕ ಕೆಪಿಸಿಸಿ ಕಚೇರಿಗೆ ಲಕ್ಷ್ಮಣ ಸವದಿ ಆಗಮಿಸಿದರು. 

ಚುನಾವಣೆ ಘೋಷಣೆಯಾದ ದಿನದಿಂದಲೂ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ವಿಚಾರ ಹೈವೋಲ್ಟೇಜ್‌ ಪಡೆದಿತ್ತು. ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇದೀಗ ಕಾಂಗ್ರೆಸ್​ ಸೇರ್ಪಡೆ ಆಗಿದ್ದಾರೆ. ಕಾಂಗ್ರೆಸ್‌ಗೆ ಸೇರ್ಪಡೆಯಾದ ಲಕ್ಷ್ಮಣ ಸವದಿ ಕೈ ನಾಯಕರ ಮುಂದಿಟ್ಟಿದ್ದು ಎರಡು ಬೇಡಿಕೆಗಳನ್ನು ಎಂಬುದು ತಿಳಿದುಬಂದಿದೆ. ಮೊದಲ ಬೇಡಿಕೆ ಅಥಣಿ ಕ್ಷೇತ್ರದಿಂದ ಟಿಕೆಟ್‌, ಎರಡನೇಯದ್ದು ಸರ್ಕಾರ ಅಧಿಕಾರಕ್ಕೆ ಬಂದರೆ ಆ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಕುರಿತು ಕಂಡಿಷನ್‌ ಹಾಕಿದ್ದಾರಂತೆ ಎನ್ನಲಾಗಿದೆ. 

ಇದನ್ನೂ ಓದಿ : ಇಂದು ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಸಾಧ್ಯತೆ..! ಶೆಟ್ಟರ್‌ಗೆ ಸಿಗುತ್ತಾ ಟಿಕೆಟ್‌..?

ಇದಕ್ಕೂ ಮುನ್ನ ಮಾತನಾಡಿದ ಲಕ್ಷ್ಮಣ ಸವದಿ ಅವರು, ನನಗೆ ಪುತ್ರ ವ್ಯಾಮೋಹವಿಲ್ಲ,  ನಾನು ಮಗನಿಗೆ ಟಿಕೆಟ್‌ ಕೊಡಿ ಎಂದು ಕೇಳಿಲ್ಲ. ನಾನು ಅಥಣಿಯಿಂದ ನನಗೆ ಟಿಕೆಟ್ ಕೇಳಿದ್ದು. ಅದಕ್ಕೆ ಒಪ್ಪಿಗೆಯಾಗಿದೆ, ಯಡಿಯೂರಪ್ಪರಿಂದ ಯಾವುದೇ ಕರೆ ನನಗೆ ಬಂದಿಲ್ಲ ಮತ್ತು ಯಾರು ಸಹ ನನ್ನ ಬಳಿ ಮಾತನಾಡಿಲ್ಲ. ನನಗೆ ಎಂಎಲ್‌ಸಿ ಮಾಡಿ, ಡಿಸಿಎಂ ಮಾಡಿ ಎಂದು ಹೇಳಿದ್ದು ಯಾರು? ಡಿಸಿಎಂ ಸ್ಥಾನದಿಂದ ತೆಗಿ ಎಂದಿದ್ದು ಯಾರು? ಕೊಟ್ಟ ಮಾತನ್ನು ಅವರು ತಪ್ಪಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಕೊಡುತ್ತೇವೆ ಅಂತ ಮಾತು ಕೊಟ್ಟಿದ್ದರು, ಅದನ್ನು ತಪ್ಪಿದ್ದಾರೆ ಎಂದು ಹೇಳಿದರು. 

ಒಟ್ಟಾರೆ ಉತ್ತರ ಕರ್ನಾಟಕದ ಪ್ರಭಾವಿ ರಾಜಕೀಯ ಮುಖಂಡ ಮತ್ತು ಲಿಂಗಾಯತ ನಾಯಕರಾಗಿರುವ ಲಕ್ಷ್ಮಣ ಸವದಿಯವರ ಕಾಂಗ್ರೆಸ್‌ ಸೇರ್ಪಡೆ ಬಿಜೆಪಿಗೆ ಒಂದು ರೀತಿಯ ಹೊಡೆತ ನೀಡಿದೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಆನೆಬಲ ಬಂದಂತಾಗಿದೆ ಎಂದರೆ ತಪ್ಪಾಗಲ್ಲ. 

ಇದನ್ನೂ ಓದಿ : ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಬೇಸರ ತರಿಸಿದೆ - ಸಿಎಂ ಬೊಮ್ಮಾಯಿ‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News