Karnataka election 2023: 15 ದಿನದಲ್ಲಿ 150 ಕೋಟಿ ರೂ. ಮುಟ್ಟಿದ ಚುನಾವಣಾ ಅಕ್ರಮ!

Karnataka Assembly election 2023: ಶುಕ್ರವಾರ 3.65 ಕೋಟಿ ರೂ. ನಗದು, 9.97 ಲಕ್ಷ ರೂ. ಮೌಲ್ಯದ ಗಿಫ್ಟ್ ಗಳು, 1.40 ಕೋಟಿ ರೂ. ಮೌಲ್ಯದ ಮದ್ಯ, 7.63 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಮತ್ತು 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ತೆಗೆದುಕೊಳ್ಳಲಾಗಿದೆ.

Written by - Puttaraj K Alur | Last Updated : Apr 15, 2023, 01:47 PM IST
  • ಕಳೆದ 15 ದಿನದಲ್ಲಿ ಚುನಾವಣಾ ಆಕ್ರಮವು 150 ಕೋಟಿ ರೂ. ಮುಟ್ಟಿದೆ
  • ಶುಕ್ರವಾರ ಒಂದೇ ದಿನ ನಗದು ಸೇರಿ 5.24 ಕೋಟಿ ರೂ. ಮೌಲ್ಯದ ವಸ್ತುಗಳು ಸೀಜ್
  • ಚುನಾವಣಾ ಅಕ್ರಮ ಸಂಬಂಧ ಇದುವರೆಗೆ 1,262 FIRಗಳು ದಾಖಲಾಗಿವೆ
Karnataka election 2023: 15 ದಿನದಲ್ಲಿ 150 ಕೋಟಿ ರೂ. ಮುಟ್ಟಿದ ಚುನಾವಣಾ ಅಕ್ರಮ! title=
ಚುನಾವಣಾ ಅಕ್ರಮ!

ಬೆಂಗಳೂರು: ಕಳೆದ 15 ದಿನದಲ್ಲಿ ಚುನಾವಣಾ ಆಕ್ರಮವು ಬರೋಬ್ಬರಿ 150 ಕೋಟಿ ರೂ. ಮುಟ್ಟಿದೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಶುಕ್ರವಾರ ಒಂದೇ ದಿನ ರಾಜ್ಯದಲ್ಲಿ ನಗದು ಸೇರಿ 5.24 ಕೋಟಿ ರೂ. ಮೌಲ್ಯದ  ವಸ್ತುಗಳನ್ನು ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ವರುಣಾ ಬಳಿಕ ಚಾಮರಾಜನಗರದಲ್ಲಿ ತಂತ್ರ ರೂಪಿಸಲು ಮುಂದಾದ ಸೋಮಣ್ಣ 

ಶುಕ್ರವಾರ 3.65 ಕೋಟಿ ರೂ. ನಗದು, 9.97 ಲಕ್ಷ ರೂ. ಮೌಲ್ಯದ ಗಿಫ್ಟ್ ಗಳು, 1.40 ಕೋಟಿ ರೂ. ಮೌಲ್ಯದ ಮದ್ಯ, 7.63 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಮತ್ತು 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಕುತೂಹಲ ಮೂಡಿಸಿದ ಬಿ ವೈ ವಿಜಯೇಂದ್ರ, ಜಿ.ಪರಮೇಶ್ವರ ಭೇಟಿ..!

ಚುನಾವಣಾ ಅಕ್ರಮ ಸಂಬಂಧ ಇದುವರೆಗೆ 1,262 FIRಗಳು ದಾಖಲಾಗಿವೆ. ಕಳೆದ 15 ದಿನಗಳಲ್ಲಿ ವಶಪಡಿಸಿಕೊಂಡಿರುವ 149.58 ಕೋಟಿ ರೂ. ಪೈಕಿ 61 ಕೋಟಿ ರೂ. ನಗದು, 33 ಕೋಟಿ ರೂ. ಮೌಲ್ಯದ ಮದ್ಯ, 24 ಕೋಟಿ ರೂ. ಮೌಲ್ಯದ ಅಮೂಲ್ಯ ಲೋಹಗಳು, 18 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳು, 13 ಕೋಟಿ ರೂ. ಮೌಲ್ಯದ ಡ್ರಗ್ಸ್, ನಾರ್ಕೊಟಿಕ್ಸ್ ಸೇರಿದೆ. ಮಾ.9 ರಿಂದ ಮಾ.27ವರೆಗೆ 58 ಕೋಟಿ ರೂ. ಜಪ್ತಿ ಮಾಡಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News