ಬಾಸ್ ಕೆಟ್ಟದ್ದು ಮಾಡಿರಬಹುದು.. ಆದರೆ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ.. ಜೈಲಿನ ಬಳಿ ಕಣ್ಣೀರಿಟ್ಟ ದರ್ಶನ್‌ ಅಭಿಮಾನಿಗಳು!!

Darshan in Parappana Agrahar Jail: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ ಸದ್ಯ ಬಂಧಿಯಾಗಿದ್ದಾರೆ.. ಇದೇ ವೇಳೆ ದರ್ಶನ್‌ ಅಭಿಮಾನಿಗಳು ಅವರ ಭೇಟಿಗೆ ಆಗಮಿಸಿ, ಜೈಲಿನ ಬಳಿ ಕಣ್ಣೀರಿಡುತ್ತಿದ್ದಾರೆ.. 

1 /5

ನಟ ದರ್ಶನ್‌ ಹಾಗೂ ಗ್ಯಾಂಗ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ.. ಒಂದಷ್ಟು ಜನ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಿದ್ದರೆ.. ಮತ್ತೊಂದಷ್ಟು ಜನ ಅವರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ಅವರು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ..  

2 /5

ನಟ ದರ್ಶನ್‌ ಅವರನ್ನು ಸದ್ಯ ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿದೆ.. ಈ ವೇಳೆ ದರ್ಶನ್ ಭೇಟಿಗಾಗಿ ರಾಯಚೂರಿನ ಲಿಂಗಸಗೂರಿನಿಂದ ಅಭಿಮಾನಿಗಳು ಆಗಮಿಸಿದ್ದಾರೆ.. ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ನಟ ದರ್ಶನ್‌ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ..   

3 /5

ನಮ್ಮ ಬಾಸ್‌ ಕೆಟ್ಟದ್ದು ಮಾಡಿರಬಹುದು ಆದರೆ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ.. ನಟ ದರ್ಶನ್‌ನಂತೆ ಅವರ ಅಭಿಮಾನಿಗಳು ಸಹ ಕೆಟ್ಟವರು ಎನ್ನುತ್ತಿದ್ದಾರೆ.. ನಾವು ರಾಯಚೂರಿನಿಂದ ಬಾಸ್ ನೋಡಲು ಆಗಮಿಸಿದ್ದೆವೆ.. ಹಾಗಾದ್ರೆ ನಾವು ಕೆಟ್ಟವರಾ? ಎಂದು ಪ್ರಶ್ನೆ ಮಾದ್ಯಮಗಳ ಮುಂದೆ ಪ್ರಶ್ನೆ ಮಾಡುತ್ತಿದ್ದಾರೆ.,   

4 /5

ಅಲ್ಲದೇ ಇಂದು ರಜೆ ಹಿನ್ನೆಲೆ ಬಾಸ್ ಭೇಟಿಗೆ ಅವಕಾಶ ನೀಡುತ್ತಿಲ್ಲ.. ನಾವು ನಾಳೆ ಬಾಸ್ ಭೇಟಿ ಮಾಡಿಯೇ ವಾಪಸ್ ಹೊರಡೊದು.. ಎಂದು ದರ್ಶನ್‌ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನ ಬಳಿ ಪಟ್ಟು ಹಿಡಿದು ಕುಳಿತಿದಿದ್ದಾರೆ..   

5 /5

ನಟ ದರ್ಶನ್‌ ಹಾಗೂ ಗ್ಯಾಂಗ್‌ ಸದ್ಯ ಜೈಲು ಪಾಲಾಗಿದ್ದು, ಈ ವೇಳೆ ದರ್ಶನ್‌ ನಿದ್ದೆ, ಊಟ ಯಾವುದನ್ನು ಸರಿಯಾಗಿ ಮಾಡುತ್ತಿಲ್ಲ.. ಬಿಟ್ಟು ಬಿಡದ ವಿಚಾರಣೆಯಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ದರ್ಶನ್‌ ದಣಿದಿದ್ದಾರೆ ಎಂದು ಮೂಲಗಳು ತಿಳಿಸಿವೆ..