Karnataka Assembly Election Result 2023: ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ 2, ಬಿಜೆಪಿಗೆ 2 ಸ್ಥಾನ

 Gadag Assembly Election Result 2023: ಗದಗ ಜಿಲ್ಲೆಯು 24-08-1997 ರಂದು ಹೊಸ ಜಿಲ್ಲೆಯಾಗಿ ಹೊರಹೊಮ್ಮಿತು. ಪ್ರಾಚೀನ ಕಾಲದಿಂದಲೂ, ಈ ಪ್ರದೇಶವು ಕಲೆ-ಸಾಹಿತ್ಯ-ಸಂಸ್ಕೃತಿ-ಆಧ್ಯಾತ್ಮಿಕತೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಮುದ್ರಣಾಲಯಗಳಿಗೆ ಹಾಗೂ ಪ್ರಕಾಶನ ಸಂಸ್ಥೆಗಳಿಗೆ ರಾಜ್ಯದೆಲ್ಲೆಡೆ ಗದಗ ಹೆಸರು ವಾಸಿಯಾಗಿದೆ.

Written by - Zee Kannada News Desk | Last Updated : May 13, 2023, 03:32 PM IST
  • ಇದು ಪ್ರಾಚೀನ ಕಾಲದಿಂದಲೂ, ಈ ಪ್ರದೇಶವು ಕಲೆ-ಸಾಹಿತ್ಯ-ಸಂಸ್ಕೃತಿ-ಆಧ್ಯಾತ್ಮಿಕತೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.
  • ಮುದ್ರಣಾಲಯಗಳಿಗೆ ಹಾಗೂ ಪ್ರಕಾಶನ ಸಂಸ್ಥೆಗಳಿಗೆ ರಾಜ್ಯದೆಲ್ಲೆಡೆ ಗದಗ ಹೆಸರು ವಾಸಿಯಾಗಿದೆ.
  • ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ ಅವುಗಳಲ್ಲಿ ಗದಗ, ರೋಣ,ನರಗುಂದ,ಶಿರಹಟ್ಟಿ ಕ್ಷೇತ್ರಗಳು ಸೇರಿವೆ.
Karnataka Assembly Election Result 2023: ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ 2, ಬಿಜೆಪಿಗೆ  2 ಸ್ಥಾನ  title=

ಭಾರಿ ಕೂತುಹಲ ಕೆರಳಿಸಿದ್ದ ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಎರಡೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿ ಗೆಲುವು ಸಾಧಿಸಿದೆ. ಗದಗ ಜಿಲ್ಲೆಯಲ್ಲಿ ರೋಣ ಮತ್ತು ಗದಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾಲಾದರೆ, ಶಿರಹಟ್ಟಿ ಮತ್ತು ನರಗುಂದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಕೆ ಪಾಟೀಲ್ ಗೆಲುವು ಸಾಧಿಸಿದರೆ, ನರಗುಂದದಲ್ಲಿ ಬಿಜೆಪಿ ಅಭ್ಯರ್ಥಿ ಸಿಸಿ ಪಾಟೀಲ್ 1700 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಇನ್ನೊಂದೆಡೆಗೆ ಶಿರಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ ಗೆಲುವು ಸಾಧಿಸಿದ್ದಾರೆ.

Gadag Assembly Election Result 2023: ಗದಗ ಜಿಲ್ಲೆಯು 24-08-1997 ರಂದು ಹೊಸ ಜಿಲ್ಲೆಯಾಗಿ ಹೊರಹೊಮ್ಮಿತು. ಇದು ಪ್ರಾಚೀನ ಕಾಲದಿಂದಲೂ, ಈ ಪ್ರದೇಶವು ಕಲೆ-ಸಾಹಿತ್ಯ-ಸಂಸ್ಕೃತಿ-ಆಧ್ಯಾತ್ಮಿಕತೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಮುದ್ರಣಾಲಯಗಳಿಗೆ ಹಾಗೂ ಪ್ರಕಾಶನ ಸಂಸ್ಥೆಗಳಿಗೆ ರಾಜ್ಯದೆಲ್ಲೆಡೆ ಗದಗ ಹೆಸರು ವಾಸಿಯಾಗಿದೆ. ಅಷ್ಟೇ ಅಲ್ಲದೆ ಈ ಜಿಲ್ಲೆಯು ದೇವಾಲಯಗಳು, ಬಸದಿಗಳು, ಆಕರ್ಷಕ ವಾಸ್ತುಶಿಲ್ಪದ ಪ್ರಾಚೀನ ಸ್ಮಾರಕಗಳು, ಪ್ರಸಿದ್ಧ ಕವಿಗಳು, ಬರಹಗಾರರು, ನಟ-ನಿರ್ದೇಶಕರು, ಆಧ್ಯಾತ್ಮಿಕ ಜಿಜ್ಞಾಸುಗಳು, ಸಮಾಜ ಸುಧಾರಕರು, ದಾರ್ಶನಿಕರಿಂದಾಗಿ ಸಮೃದ್ದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ.ಗದಗ ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ ಅವುಗಳಲ್ಲಿ ಗದಗ, ರೋಣ,ನರಗುಂದ,ಶಿರಹಟ್ಟಿ ಕ್ಷೇತ್ರಗಳು ಸೇರಿವೆ.

ಗದಗ ವಿಧಾನಸಭಾ ಕ್ಷೇತ್ರ 

ಗದಗ ವಿಧಾನಸಭಾ ಕ್ಷೇತ್ರವು ಗದಗ-ಹಾವೇರಿ ಲೋಕಸಭೆ ಕ್ಷೇತ್ರದ ಭಾಗವಾಗಿದೆ. 

ಗದಗದ ಜನಸಂಖ್ಯಾ ವಿವರ:

ಈ ಸಾಮಾನ್ಯ ಅಸೆಂಬ್ಲಿ ಕ್ಷೇತ್ರವು ಅಂದಾಜು 12.54% ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿದೆ ಮತ್ತು ಅಂದಾಜು 3.72% ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿದೆ, 2008 ರ ಡಿಲಿಮಿಟೇಶನ್ ಆಯೋಗದ ವರದಿಯ ಪ್ರಕಾರ. ಈ ಕ್ಷೇತ್ರವು ಬರುವ ಜಿಲ್ಲೆಯ ಅಂದಾಜು ಸಾಕ್ಷರತೆಯ ಮಟ್ಟವು 75.12% ಆಗಿದೆ. , 

2018 ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 219575 ಅರ್ಹ ಮತದಾರರಿದ್ದು, ಅವರಲ್ಲಿ 109936 ಪುರುಷರು, 109616 ಮಹಿಳೆಯರು ಮತ್ತು 23 ತೃತೀಯಲಿಂಗಿಗಳಿದ್ದಾರೆ.

2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 383250 ಅರ್ಹ ಮತದಾರರಿದ್ದು, ಅವರಲ್ಲಿ 97006 ಪುರುಷರು, 94100 ಮಹಿಳೆಯರು ಮತ್ತು 9 ತೃತೀಯಲಿಂಗಿಗಳಿದ್ದರು.

2018ರಲ್ಲಿ ಗದಗದಲ್ಲಿ ಸೇವಾ ಮತದಾರರ ಸಂಖ್ಯೆ 149. 2013ರಲ್ಲಿ ಕ್ಷೇತ್ರದಲ್ಲಿ 63 ಸೇವಾ ಮತದಾರರು ನೋಂದಣಿಯಾಗಿದ್ದರು.

2018 ರಲ್ಲಿ ಆಯ್ಕೆಯಾದ ಸದಸ್ಯರು 

ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಎಚ್.ಕೆ ಪಾಟೀಲ್ ಅವರು 77,699 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು, ಇವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಅನಿಲ್ ಮೆಣಸಿನಕಾಯಿ 75,831 ಸಾವಿರ ಮತಗಳನ್ನು ಪಡೆದಿದ್ದರು

2023 ರಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು 

ಅನಿಲ್ ಮೆಣಸಿನಕಾಯಿ(ಬಿಜೆಪಿ)
ಎಚ್.ಕೆ ಪಾಟೀಲ್ (ಕಾಂಗ್ರೆಸ್)
ಗೋವಿಂದಗೌಡರ ವೆಂಕನಗೌಡರ ರಂಗನಗೌಡ (ಜೆಡಿಎಸ್)

ಫಲಿತಾಂಶ: ಕಾಂಗ್ರೆಸ್ ಅಭ್ಯರ್ಥಿ: ಹೆಚ್.ಕೆ.ಪಾಟೀಲ :89,958
ಬಿಜೆಪಿ‌ ಅಭ್ಯರ್ಥಿ ಅನಿಲ‌ ಮೆಣಸಿನಕಾಯಿ : 74,828
15,130 ಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ.ಪಾಟೀಲ ಗೆಲುವು

ಕ್ಷೇತ್ರವಾರು ಜಾತಿ ಸಂಖ್ಯೆ 

ಲಿಂಗಾಯತರು- 85,000, 
ಕುರುಬ -25,000
ಮುಸ್ಲಿಂ -25,000
ಪರಿಶಿಷ್ಟ ಜಾತಿ -40,000, 
ಪರಿಶಿಷ್ಟ ಪಂಗಡ-16,000
ಇತರೆ- 26,833 

ನರಗುಂದ ವಿಧಾನಸಭಾ ಕ್ಷೇತ್ರ 

ನರಗುಂದ ವಿಧಾನಸಭಾ ಕ್ಷೇತ್ರವು ಬಾಗಲಕೋಟೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ನರಗುಂದದ ಜನಸಂಖ್ಯಾ ವಿವರ:

ಈ ಸಾಮಾನ್ಯ ಅಸೆಂಬ್ಲಿ ಕ್ಷೇತ್ರವು ಅಂದಾಜು 10.23% ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿದೆ ಮತ್ತು ಅಂದಾಜು 5.44% ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿದೆ, 2008 ರ ಡಿಲಿಮಿಟೇಶನ್ ಆಯೋಗದ ವರದಿಯ ಪ್ರಕಾರ. ಈ ಕ್ಷೇತ್ರವು ಬರುವ ಜಿಲ್ಲೆಯ ಅಂದಾಜು ಸಾಕ್ಷರತೆಯ ಮಟ್ಟವು 75.12% ಆಗಿದೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 187655 ಅರ್ಹ ಮತದಾರರಿದ್ದು, ಅವರಲ್ಲಿ 95667 ಪುರುಷರು, 91983 ಮಹಿಳೆಯರು ಮತ್ತು 5 ತೃತೀಯಲಿಂಗಿಗಳಿದ್ದಾರೆ.

2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 333852 ಅರ್ಹ ಮತದಾರರಿದ್ದು, ಅದರಲ್ಲಿ 87851 ಪುರುಷರು, 83851 ಮಹಿಳೆಯರು ಮತ್ತು 4 ತೃತೀಯಲಿಂಗಿಗಳಿದ್ದರು.

ನರಗುಂದದಲ್ಲಿ 2018ರಲ್ಲಿ ಇದ್ದ ಸೇವಾ ಮತದಾರರ ಸಂಖ್ಯೆ 473. 2013ರಲ್ಲಿ ಕ್ಷೇತ್ರದಲ್ಲಿ 524 ಸೇವಾ ಮತದಾರರು ನೋಂದಣಿಯಾಗಿದ್ದರು.

2018 ರಲ್ಲಿ ಆಯ್ಕೆಯಾದ ಸದಸ್ಯರು 

ಈ ಕ್ಷೇತ್ರದಿಂದ ಬಿಜೆಪಿಯ ಸಿ.ಸಿ ಪಾಟೀಲ್ ಅವರು 73,045 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಇವರ ಹತ್ತಿರದ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಬಿ.ಆರ್.ಯಾವಗಲ್ 65,066 ಮತಗಳನ್ನು ಪಡೆದಿದ್ದರು.

2023 ರಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು 

ಸಿ.ಸಿ ಪಾಟೀಲ್ (ಬಿಜೆಪಿ )
ಬಿ.ಆರ್.ಯಾವಗಲ್ (ಕಾಂಗ್ರೆಸ್)
ಆರ್.ಎನ್.ಪಾಟೀಲ್(ಜೆಡಿಎಸ್) 

ಫಲಿತಾಂಶ: ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ 72,835
ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಯಾವಗಲ್ : 71,044
1791 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಗೆಲುವು

ಕ್ಷೇತ್ರವಾರು ಜಾತಿ ಸಂಖ್ಯೆ 

ಲಿಂಗಾಯತರು- 80 ಸಾವಿರ, 
ಕುರುಬರು -27 ಸಾವಿರ
ಮುಸ್ಲಿಮ್- 25 ಸಾವಿರ, 
ಎಸ್ಸಿ- 23 ಸಾವಿರ
ಎಸ್ಟಿ- 10 ಸಾವಿರ
ಮರಾಠ- 10 ಸಾವಿರ
ಬ್ರಾಹ್ಮಣ -5 ಸಾವಿರ

ರೋಣ ವಿಧಾನಸಭಾ ಕ್ಷೇತ್ರ 

ರೋಣ ವಿಧಾನಸಭಾ ಕ್ಷೇತ್ರವು ಹಾವೇರಿ ಲೋಕಸಭೆ ಕ್ಷೇತ್ರದ ಭಾಗವಾಗಿದೆ. 

ರೋಣದ ಜನಸಂಖ್ಯಾ ವಿವರ:

ಈ ಅಸೆಂಬ್ಲಿ ಕ್ಷೇತ್ರವು ಅಂದಾಜು 15.97% ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿದೆ ಮತ್ತು ಅಂದಾಜು 6.09% ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿದೆ, 2008 ರ ಡಿಲಿಮಿಟೇಶನ್ ಆಯೋಗದ ವರದಿಯ ಪ್ರಕಾರ. ಈ ಕ್ಷೇತ್ರವು ಅಂದಾಜು ಸಾಕ್ಷರತೆಯ ಮಟ್ಟವು 75.12% ಆಗಿದೆ. 

2018 ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 224989 ಅರ್ಹ ಮತದಾರರಿದ್ದು, ಅವರಲ್ಲಿ 113418 ಪುರುಷರು, 111557 ಮಹಿಳೆಯರು ಮತ್ತು 14 ತೃತೀಯಲಿಂಗಿಗಳಿದ್ದಾರೆ.

2013 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಒಟ್ಟು 403020 ಅರ್ಹ ಮತದಾರರಿದ್ದು, ಅದರಲ್ಲಿ 99938 ಪುರುಷರು, 95799 ಮಹಿಳೆಯರು ಮತ್ತು 0 ತೃತೀಯಲಿಂಗಿಗಳಿದ್ದರು.

2018ರಲ್ಲಿ ರೋಣದಲ್ಲಿ ಸೇವಾ ಮತದಾರರ ಸಂಖ್ಯೆ 357. 2013ರಲ್ಲಿ ಕ್ಷೇತ್ರದಲ್ಲಿ 401 ಸೇವಾ ಮತದಾರರು ನೋಂದಣಿಯಾಗಿದ್ದರು.

2018 ರಲ್ಲಿ ಆಯ್ಕೆಯಾದ ಸದಸ್ಯರು 

ಈ ಕ್ಷೇತ್ರದಿಂದ ಬಿಜೆಪಿಯ ಕಳಕಪ್ಪ ಬಂಡಿ 83,735 ಸಾವಿರ ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದ್ದರು.ಇವರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಜಿ.ಎಸ್.ಪಾಟೀಲ್ 76,401 ಮತಗಳನ್ನು ಪಡೆದುಕೊಂಡಿದ್ದರು.

2023 ರಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು 

ಕಳಕಪ್ಪ ಬಂಡಿ (ಬಿಜೆಪಿ)
ಜಿ.ಎಸ್.ಪಾಟೀಲ್ (ಕಾಂಗ್ರೆಸ್)
ಆನೇಕಲ್ ದೊಡ್ಡಯ್ಯ (ಆಮ್ ಆದ್ಮಿ ಪಕ್ಷ)

ಫಲಿತಾಂಶ: ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ 94,865
ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ:  70,175
24,690 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಗೆಲುವು

ಕ್ಷೇತ್ರವಾರು ಜಾತಿ ಸಂಖ್ಯೆ 

ಲಿಂಗಾಯತರು- 70 ಸಾವಿರ 
ಕುರುಬ -45,000 
ಮುಸ್ಲಿಂ -35,000
ಪರಿಶಿಷ್ಟ ಜಾತಿ-30,000 
ಪರಿಶಿಷ್ಟ ಪಂಗಡ-15,000  
ಬ್ರಾಹ್ಮಣ-2,000

ಶಿರಹಟ್ಟಿ ವಿಧಾನಸಭಾ ಕ್ಷೇತ್ರ 

ಶಿರಹಟ್ಟಿ ವಿಧಾನಸಭಾ ಕ್ಷೇತ್ರವು ಹಾವೇರಿ ಲೋಕಸಭೆ ಕ್ಷೇತ್ರದ ಭಾಗವಾಗಿದೆ.

ಶಿರಹಟ್ಟಿಯ ಜನಸಂಖ್ಯಾ ವಿವರ:

ಈ ಪರಿಶಿಷ್ಟ ಜಾತಿ ಅಸೆಂಬ್ಲಿ ಕ್ಷೇತ್ರವು ಅಂದಾಜು 17.4% ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿದೆ ಮತ್ತು ಅಂದಾಜು 7.16% ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿದೆ, 2008 ರ ಡಿಲಿಮಿಟೇಶನ್ ಆಯೋಗದ ವರದಿಯ ಪ್ರಕಾರ. ಈ ಕ್ಷೇತ್ರವು ಬರುವ ಜಿಲ್ಲೆಯ ಅಂದಾಜು ಸಾಕ್ಷರತೆ ಮಟ್ಟವು 75.12 ಆಗಿದೆ. 

2018 ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 212260 ಅರ್ಹ ಮತದಾರರಿದ್ದು, ಅದರಲ್ಲಿ 107612 ಪುರುಷರು, 104640 ಮಹಿಳೆಯರು ಮತ್ತು 8 ತೃತೀಯಲಿಂಗಿಗಳಿದ್ದಾರೆ.

2013 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 372650 ಅರ್ಹ ಮತದಾರರಿದ್ದು, ಅದರಲ್ಲಿ 94631 ಪುರುಷರು, 88132 ಮಹಿಳೆಯರು ಮತ್ತು 5 ತೃತೀಯಲಿಂಗಿಗಳಿದ್ದರು.

2018ರಲ್ಲಿ ಶಿರಹಟ್ಟಿಯಲ್ಲಿ ಸೇವಾ ಮತದಾರರ ಸಂಖ್ಯೆ 130. 2013ರಲ್ಲಿ ಕ್ಷೇತ್ರದಲ್ಲಿ 51 ಸೇವಾ ಮತದಾರರು ನೋಂದಣಿಯಾಗಿದ್ದರು.

2018 ರಲ್ಲಿ ಆಯ್ಕೆಯಾದ ಸದಸ್ಯರು 

ಈ ಕ್ಷೇತ್ರದಿಂದ ಬಿಜೆಪಿಯ ರಾಮಣ್ಣ ಲಮಾಣಿ 91,967 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದ್ದರು.ಇವರ ಸಮೀಪದ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ರಾಮಕೃಷ್ಣ ದೊಡ್ಡಮನಿ 61,974 ಸಾವಿರ ಮತಗಳನ್ನು ಪಡೆದಿದ್ದರು.

2023 ರಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು 

ಚಂದ್ರು ಲಮಾಣಿ (ಬಿಜೆಪಿ)
ಸುಜಾತಾ ದೊಡ್ಡಮನಿ (ಕಾಂಗ್ರೆಸ್)
ರಾಮಕೃಷ್ಣ ದೊಡ್ಡಮನಿ ( ಸ್ವತಂತ್ರ)

ಫಲಿತಾಂಶ: ಬಿಜೆಪಿ‌ ಅಭ್ಯರ್ಥಿ ಚಂದ್ರು ಲಮಾಣಿ:  73,600. 
ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ‌ ದೊಡ್ಡಮನಿ: 45,637
ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ: 34,550
27,963 ಮತಗಳ ಅಂತರದಲ್ಲಿ ಚಂದ್ರು ಲಮಾಣಿ ಬಿಜೆಪಿ ಅಭ್ಯರ್ಥಿ ಗೆಲುವು

ಕ್ಷೇತ್ರವಾರು ಜಾತಿ ಸಂಖ್ಯೆ 

ಲಿಂಗಾಯತರು -65 ಸಾವಿರ
ಎಸ್ಸಿ-ಎಸ್ಟಿ- 38 ಸಾವಿರ
ಕುರುಬರು- 30 ಸಾವಿರ
ಮುಸ್ಲಿಮ್- 25 ಸಾವಿರ
ಬ್ರಾಹ್ಮಣರು -4 ಸಾವಿರ 
ಇತರೆ- 35 ಸಾವಿರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

  

Trending News