Karnataka Election Result 2023 : ಉಡುಪಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

Karnatak election result 2023 : ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಉಡುಪಿ ಜಿಲ್ಲೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ಪಡೆಯಿರಿ.

Written by - Ranjitha R K | Last Updated : May 13, 2023, 02:09 PM IST
  • ಬಿಜೆಪಿ ಭದ್ರ ನೆಲೆಯಾಯಿಯು ಕರಾವಳಿ
  • ಉಡುಪಿಯ ಐದೂ ಕ್ಷೇತ್ರದಲ್ಲಿ ಗೆದ್ದು ಬೀಗಿದ ಕಮಲ ಕಲಿಗಳು
  • ಫಲಿತಾಂಶದ ಸ್ಪಷ್ಟ ಮಾಹಿತಿ ಇಲ್ಲಿದೆ
Karnataka Election Result 2023 : ಉಡುಪಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು  title=

Karnatak election result 2023 : ಉಡುಪಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಕಲಿಗಳು ಗೆದ್ದು ಬೀಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುವ ಮೂಲಕ ಈ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಈ ಫಲಿತಾಂಶದ ಮೂಲಕ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಯಾರೇ ಇರಲಿ ಇಲ್ಲಿ ಪಕ್ಷ ಮುಖ್ಯ ಎನ್ನುವುದನ್ನು ಇಲ್ಲಿಯ ಮತದಾರರು ಸಾಬೀತು ಪಡಿಸಿದ್ದಾರೆ. ಅಲ್ಲಿಗೆ ಕರಾವಳಿ ಜಿಲ್ಲೆಯನ್ನು ಬಿಜೆಪಿಯಿಂದ ಜಾರಿ ಹೋಗುವುದಕ್ಕೆ ಇಲ್ಲಿನ ಮತದಾರ ಅವಕಾಶ ಮಾಡಿ ಕೊಟ್ಟಿಲ್ಲ.  

ಉಡುಪಿಯ ಜಿಲ್ಲೆಯ ಫಲಿತಾಂಶ ಚಿತ್ರಣ : 

ಬೈಂದೂರೂ ಮತ ಕ್ಷೇತ್ರ :  

ಕಾಂಗ್ರೆಸ್ ನ ಕೆ. ಗೋಪಾಲ ಪೂಜಾರಿ ಇಲ್ಲಿ ಬಿಜೆಪಿಯ ಗುರುರಾಜ್ ಗಂಟಿಹೊಳೆ ಅವರಿಗೆ ತಕ್ಕ ಮಟ್ಟಿನ ಪೈಪೋಟಿ ನೀಡಿದರಾದರೂ ಗೆಲುವು ಸಾಧಿಸುವುದು ಸಾಧ್ಯವಾಗಿಲ್ಲ.  ಇಲ್ಲಿ ಕೊನೆಗೂ ಬಿಜೆಪಿಯ ಗುರುರಾಜ್ ಗಂಟಿಹೊಳೆ ಗೆಲುವಿನ ನಗೆ ಬೀರಿದ್ದಾರೆ.

2023 ರ ಕಣದಲ್ಲಿರುವವರು : 
ಬಿಜೆಪಿ - ಗುರುರಾಜ್ ಗಂಟಿಹೊಳೆ 
ಕಾಂಗ್ರೆಸ್ - ಕೆ. ಗೋಪಾಲ ಪೂಜಾರಿ 
ಜೆಡಿಎಸ್ - ಮನ್ಸೂರ್ ಇಬ್ರಾಹಿಂ

ಕುಂದಾಪುರ ಕ್ಷೇತ್ರ : 
ಹಾಲಾಡಿ ಅವರ ರಾಜಕೀಯ ನಿವೃತ್ತಿಯಿಂದಾಗಿ ಇಲ್ಲಿ ಹೊಇಸ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು.  ಬಿಜೆಪಿಯಿಂದ ಕಣಕ್ಕಿಳಿದಿದ್ದ ಕಿರಣ್ ಕುಮಾರ್ ಕೊಡ್ಗಿ ಕಾಂಗ್ರೆಸ್ ಅಭ್ಯರ್ಥಿ  ಎಂ.ದಿನೇಶ್ ಹೆಗ್ಡೆ ಅವರನ್ನು ಸೋಲಿಸಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. 

2023 ರ ಕಣದಲ್ಲಿರುವವರು : 
ಬಿಜೆಪಿ - ಕಿರಣ್ ಕುಮಾರ್ ಕೊಡ್ಗಿ 
ಕಾಂಗ್ರೆಸ್ - ಎಂ.ದಿನೇಶ್ ಹೆಗ್ಡೆ
ಜೆ ಡಿ (ಎಸ್) - ರಮೇಶ್ ಕುಂದಾಪುರ

ಉಡುಪಿ ವಿಧಾನಸಭಾ ಕ್ಷೇತ್ರ :

ಇಲ್ಲಿ ಕೂಡಾ ಬಿಜೆಪಿಯನ್ನು ಪ್ರತಿನಿಧಿಸಿದ್ದ ಯಶ್‌ಪಾಲ್‌ ಸುವರ್ಣ  ಗೆದ್ದಿದ್ದಾರೆ. ಕಾಂಗ್ರೆಸ್ ನ ಪ್ರಸಾದ್ ರಾಜ್ ಕಾಂಚನ್ ಅವರನ್ನು ಪರಾಭವಗೊಳಿಸಿ ವಿಜಯ ಲಕ್ಷ್ಮೀಯನ್ನು ಒಲಿಸಿಕೊಂದಿದ್ದಾರೆ.  

2023 ರ ಕಣದಲ್ಲಿರುವವರು :  
ಬಿಜೆಪಿ - ಯಶ್‌ಪಾಲ್‌ ಸುವರ್ಣ 
ಕಾಂಗ್ರೆಸ್ -ಪ್ರಸಾದ್ ರಾಜ್ ಕಾಂಚನ್
ಜೆ ಡಿ (ಎಸ್) - ದಕ್ಷತ್ ಆರ್ ಶೆಟ್ಟಿ
ಎಎಪಿ - ಪ್ರಭಾಕರ್‌ ಪೂಜಾರಿ  

ಕಾಪು ವಿಧಾನಸಭಾ ಕ್ಷೇತ್ರ
ಇಲ್ಲಿ ಕಾಂಗ್ರೆಸ್  ಹಿರಿಯ ನಾಯಕ ವಿನಯ್  ಕುಮಾರ್ ಸೊರಕೆಯನ್ನು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ  ಸೋಲಿಸಿದ್ದಾರೆ.  
2023 ರ ಕಣದಲ್ಲಿರುವವರು :  
ಬಿಜೆಪಿ - ಗುರ್ಮೆ ಸುರೇಶ್ ಶೆಟ್ಟಿ 
ಕಾಂಗ್ರೆಸ್ : ವಿನಯ್ ಕುಮಾರ್ ಸೊರಕೆ
ಜೆ ಡಿ (ಎಸ್) - ಸಬೀನಾ ಸಮದ್

ಕಾರ್ಕಳ ವಿಧಾನಸಭಾ ಕ್ಷೇತ್ರ 
 ಕಾರ್ಕಳ ಕ್ಷೇತ್ರದಲ್ಲಿ ಕೂಡಾ ಬಿಜೆಪಿಯ ಸುನಿಲ್ ಕುಮಾರ್ ಕಾಂಗ್ರೆಸ್ ನ ಉದಯ ಶೆಟ್ಟಿ ಮುನಿಯಾಲು  ಅವರನ್ನು ಸೋಲಿಸಿದ್ದಾರೆ.   

2023 ರ ಕಣದಲ್ಲಿರುವವರು :   
ಬಿಜೆಪಿ - ವಿ. ಸುನಿಲ್ ಕುಮಾರ್
ಕಾಂಗ್ರೆಸ್ - ಉದಯ ಶೆಟ್ಟಿ ಮುನಿಯಾಲು    
AAP     - ಡೇನಿಯಲ್ ರೇಂಜರ್    
ಜೆಡಿಎಸ್ - ಶ್ರೀಕಾಂತ ಪೂಜಾರಿ ಕುಚ್ಚೂರ್    

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News