Karnataka Election Results 2023: ವೈಯಕ್ತಿಕ ವರ್ಚಸ್ಸಿಗೆ ಸಾಕ್ಷಿಯಾದ ಬೆಳಗಾವಿ ಜಿಲ್ಲೆಯ ಫೈನಲ್ ರಿಸಲ್ಟ್ ಇಲ್ಲಿದೆ

Belgaum District Assembly Election Results 2023: ರಾಜ್ಯ ವಿಧಾನಸಭೆ ಚುನಾವಣೆ 2023 ಬಹುತೇಕ ಮುಕ್ತಾಯಗೋಂಡಂತಾಗಿದೆ. ರಾಜ್ಯ ವಿಧಾನಸಭೆಯ ಒಟ್ಟು 224 ಸ್ಥಾನಗಳಿಗೆ ಮೇ 10 ರಂದು ನಡೆದ ಮತದಾನದ ಫಲಿತಾಂಶ ಇಂದು ಪ್ರಕಟಗೊಂಡಿದೆ. ಇವುಗಳಲ್ಲಿ ಕಾಂಗ್ರೆಸ್ 136 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನೂ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಕೇವಲ 65 ಸ್ಥಾನಗಳು ಲಭಿಸಿದ್ದು, ಜೆಡಿಎಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ, 4 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.  ಈ ಬಾರಿಯ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಸ್ಥಾನಗಳ ಸ್ಥಿತಿಗತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,   

Written by - Nitin Tabib | Last Updated : May 13, 2023, 10:13 PM IST
  • ಬೆಳಗಾವಿ ಜಿಲ್ಲೆಯ ಒಟ್ಟು 18 ವಿಧಾನಸಭೆ ಕ್ಷೇತ್ರಗಳ ಕುರಿತು ಹೇಳುವುದಾದರೆ, 10 ಕ್ಷೇತ್ರಗಳಲ್ಲಿ ಬಿಜೆಪಿ ಜಯ ದಾಖಲಿಸಿದ್ದರೆ,
  • ಕಾಂಗ್ರೆಸ್ ಪಕ್ಷ ಒಟ್ಟು 8 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಏಕೆಂದರೆ ಆಪರೇಷನ್ ಕಮಲದ ಪರಿಣಾಮವಶಾತ್
  • 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೋಕಾಕ್, ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು.
Karnataka Election Results 2023: ವೈಯಕ್ತಿಕ ವರ್ಚಸ್ಸಿಗೆ ಸಾಕ್ಷಿಯಾದ ಬೆಳಗಾವಿ ಜಿಲ್ಲೆಯ ಫೈನಲ್ ರಿಸಲ್ಟ್ ಇಲ್ಲಿದೆ title=
ಬೆಳಗಾವಿ ಜಿಲ್ಲೆ ವಿಧಾನಸಭೆ ಚುನಾವಣೆ 2023 ಫಲಿತಾಂಶ

Karnataka Assembly Election Results: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿವೆ, ಇವುಗಳಲ್ಲಿ 8 ವಿಧಾನಸಭೆ ಕ್ಷೇತ್ರಗಳು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಬಂದರೆ, ಉಳಿದ 10 ವಿಧಾನಸಭೆ ಕ್ಷೇತ್ರಗಳು ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬೀಳುತ್ತವೆ. ಕಳೆದ ಬಾರಿಯ ಅಂದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 10 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಐದು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಪ್ರಾಬಲ್ಯವನ್ನು ಮೆರೆದಿದ್ದವು. ಮತ್ತೊಂದೆಡೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿಷಯಕ್ಕೆ ಬಂದರೆ ಕಳೆದ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಲಾ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. 

ಅಂದರೆ ಒಟ್ಟಾರೆಯಾಗಿ ಬೆಳಗಾವಿ ಜಿಲ್ಲೆಯ ಒಟ್ಟು 18 ವಿಧಾನಸಭೆ ಕ್ಷೇತ್ರಗಳ ಕುರಿತು ಹೇಳುವುದಾದರೆ, 10 ಕ್ಷೇತ್ರಗಳಲ್ಲಿ ಬಿಜೆಪಿ ಜಯ ದಾಖಲಿಸಿದ್ದರೆ, ಕಾಂಗ್ರೆಸ್ ಪಕ್ಷ ಒಟ್ಟು 8 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಏಕೆಂದರೆ ಆಪರೇಷನ್ ಕಮಲದ ಪರಿಣಾಮವಶಾತ್ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೋಕಾಕ್, ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. 

2023ರ ವಿಧಾನಸಭೆ ಚುನಾವಣೆಗಳ ಕುರಿತು ಹೇಳುವುದಾದರೆ ಈ ಬಾರಿ ಬೆಳಗಾವಿ ಜಿಲ್ಲೆಯ ಒಟ್ಟು 18 ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ 7 ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಯಹಸ್ವಿಯಾದರೆ,  ಪ್ರತಿಪಕ್ಷದಲ್ಲಿರುವ ಕಾಂಗ್ರೆಸ್ 09 ಹಾಗೂ ಎರಡು ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬನ್ನಿ ಬೆಳಗಾವಿ ಜಿಲ್ಲೆಯ ಮತದಾರ ಪ್ರಭುಗಳು ಈ ಬಾರಿ ಯಾವ ಕ್ಷೇತ್ರದಲ್ಲಿ ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನೂ ತಿಳಿದುಕೊಳ್ಳೋನ, 

ಬೆಳಗಾವಿ ಜಿಲ್ಲೆಯ ಕುರುಕ್ಷೇತ್ರ
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು -185
ಒಟ್ಟು ಮತದಾರರ ಸಂಖ್ಯೆ - 19,07,485
ಒಟ್ಟು ಪುರುಷ ಮತದಾರರು- 19, 71,642
ಒಟ್ಟು ಮಹಿಳಾ ಮತದಾರರು- 19, 35, 701,
ಲೈಂಗಿಕ ಅಲ್ಪಸಂಕ್ಯಾತರು- 142

ಜಿಲ್ಲೆಯಲ್ಲಿ ಬರುವ ವಿವಿಧ ಕ್ಷೇತ್ರಗಳ ವಿಸ್ತ್ರತ ಮಾಹಿತಿ  
1.ನಿಪ್ಪಾಣಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,09,099
ಪುರುಷ ಮತದಾರರ ಸಂಖ್ಯೆ-1,06,749
ಮಹಿಳಾ ಮತದಾರರ ಸಂಖ್ಯೆ-1,02,346

ನಿಪ್ಪಾಣಿ ಕ್ಷೇತ್ರದ ಕುರಿತು ಹೇಳುವುದಾದರೆ, ಈ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷದ ಅಭ್ಯರ್ಥಿಯಾಗಿರುವ ಶಶಿಕಲಾ ಜೊಲ್ಲೆ ಅವರು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಯಿರುವ ಉತ್ತಮ್ ರಾವಸಾಹೇಬ್ ಪಾಟೀಲ್ ಅವರನ್ನು 7292 ಮತಗಳ ಅಂತರದಿಂದ ಸೋಲಿಸಿದ್ದಾರೆ, ಈ ಬಾರಿಯ ಚುನಾವಣೆಯಲ್ಲಿ ಶಶಿಕಲಾ ಜೊಲ್ಲೆ ಅವರಿಗೆ ಒಟ್ಟು 73348     (39.14%) ಮತಗಳು ಲಭಿಸಿದರೆ, ಉತ್ತಮ್ ಪಾಟೀಲ್ 66056 (35.25%) ಅವರಿಗೆ ಮತಗಳು ಲಭಿಸಿವೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
BJP- ಶಶಿಕಲಾ ಜೊಲ್ಲೆ ಅಣ್ಣಾಸಾಹೇಬ್ - 87,006 ಮತಗಳು - ಅಂತರ: 8506(ಮತದಾನದ %-50.51)
INC- ಕೆ ಪಾಂಡುರಂಗ ಪಾಟೀಲ್- 78,500 ಮತಗಳು (ಮತದಾನದ %-45.57)
BSP- ರಮೇಶ್ ಈಶ್ವರ್ ಕಾಮತ್- 2,476(1.44%)    

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಕಾಂಗ್ರೆಸ್- ಕಾಕಾಸಾಹೇಬ್ ಪಾಟೀಲ್
ಜೆಡಿಎಸ್-ರಾಜಾರಾಂ ಅಲಿಯಾಸ್ ರಾಜು ಪವಾರ್
ಬಿ‌ಜೆ‌ಪಿ-ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್, 
ಆಪ್-ರಾಜೇಶ್ ಬಸವಣ್ಣ
ಎನ್ಸಿಪಿ-ಉತ್ತಮ್ ರಾವೋಸಾಹೇಬ್ ಪಾಟೀಲ್, 

2. ಚಿಕ್ಕೋಡಿ ಸದಲಗಾ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,06,262
ಪುರುಷ ಮತದಾರರ ಸಂಖ್ಯೆ-1,04,951
ಮಹಿಳಾ ಮತದಾರರ ಸಂಖ್ಯೆ-1,01,299

ಚಿಕ್ಕೋಡಿ ಸದಲಗಾ ವಿಧಾನಸಭೆ ಕ್ಷೇತ್ರದ ಕುರಿತು ಹೇಳುವುದಾದರೆ, ಇಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಯಿರುವ ಗಣೇಶ್ ಪ್ರಕಾಶ್ ಹುಕ್ಕೇರಿ ಅವರು ತಮ್ಮ ಹತ್ತಿರದ ಎದುರಾಳಿ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಕತ್ತಿ ರಮೇಶ್ ವಿಶ್ವನಾಥ್ ಅವರನ್ನು 78509 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಹುಕ್ಕೇರಿ ಅವರಿಗೆ 128349 (69.82%) ಮತಗಳು ದೊರೆತರ, ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ಅವರಿಗೆ 49840 (27.11%) ಮತಗಳು ಲಭಿಸಿವೆ.

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
INC- ಗಣೇಶ್ ಪ್ರಕಾಶ್ ಹುಕ್ಕೇರಿ- 91,467- ಅಂತರ: 10569(51.04%)
BJP- ಅಣ್ಣಾಸಾಹೇಬ್ ಶಂಕರ್ ಜೊಲ್ಲೆ- 80,898    (45.14%)
BSP- ಸದಾಶಿವಪ್ಪ ಮಾರುತಿ ವಾಲ್ಕೆ- 2,935    (1.64%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಕತ್ತಿ ರಮೇಶ್ ವಿಶ್ವನಾಥ್, 
ಕಾಂಗ್ರೆಸ್- ಗಣೇಶ್ ಪ್ರಕಾಶ್ ಹುಕ್ಕೇರಿ
ಜೆಡಿಎಸ್-ಸುಹಾಸ್ ಸದಾಶಿವಪ್ಪ ವಲ್ಕೆ
ಬಿಎಸ್ಪಿ- ಅರ್ಜುನ್ ಬಂಡು ಮಾನೆ
ಆಪ್- ಶ್ರೀಕಾಂತ್ ಮೂದಗೌಡ್ ಪಾಟೀಲ್, 

3. ಅಥಣಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,10,031
ಪುರುಷ ಮತದಾರರ ಸಂಖ್ಯೆ-1,08,709
ಮಹಿಳಾ ಮತದಾರರ ಸಂಖ್ಯೆ-1,01,312

ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಲಕ್ಷ್ಮಣ್ ಸಂಗಪ್ಪ ಸವದಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾಪಕ್ಷದ ಮಹೇಶ್ ಈರನಗೌಡಾ ಕುಮಠಳ್ಳಿ ವಿರುದ್ಧ  76122 ಮತಗಳ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಟಿಕೆಟ್ ಸಿಗದ ಕಾರಣ ತೀವ್ರ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಲಕ್ಷ್ಮಣ್ ಸವದಿ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಒಟ್ಟು 131404 (68.34%) ಮತಗಳು ಲಭಿಸಿವೆ, ಅವರ ಎದುರಾಳಿ ಬಿಜೆಪಿಯ ಮಹೇಶ್ ಕುಮಠಳ್ಳಿ ಅವರಿಗೆ 55282 (28.75%) ಮತಗಳು ಮಾತ್ರ ದೊರೆತಿವೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
INC- ಮಹೇಶ್ ಈರನಗೌಡ ಕುಮಟಳ್ಳಿ - 82,094 - ಅಂತರ: 2331(48.13%)
BJP-ಲಕ್ಷ್ಮಣ ಸಂಗಪ್ಪ ಸವದಿ- 79,763    
JD(S)- ಗಿರೀಶ್ ಕೇದಾರಪ್ಪ ಬೂಟಾಳಿ-3,381 (1.98%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಮಹೇಶ್ ಈರನಗೌಡಾ ಕುಮಠಳ್ಳಿ, 
ಕಾಂಗ್ರೆಸ್- ಲಕ್ಷ್ಮಣ ಸಂಗಪ್ಪ ಸೌದಿ
ಜೆಡಿಎಸ್-ಶಶಿಕಾಂತ್ ಪಡಸಲಗಿ
ಆಪ್- ಸಂಪತ್ ಕುಮಾರ್ ಶೆಟ್ಟಿ, 

4.ಕಾಗವಾಡ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,78,735
ಪುರುಷ ಮತದಾರರ ಸಂಖ್ಯೆ-92,902
ಮಹಿಳಾ ಮತದಾರರ ಸಂಖ್ಯೆ-85,820

ಕಾಗವಾಡ ವಿಧಾನಸಭಾ ಕ್ಷೇತ್ರದ ಕುರಿತು ಹೇಳುದಾದರೆ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭರಮಗೌಡಾ ಅಳಗೌಡಾ ಕಾಗೆ ಅವರು ತಮ್ಮ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್ ಅವರನ್ನು 8827 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತದಲ್ಲಿ ರಾಜು ಕಾಗೆ ಅವರಿಗೆ ಒಟ್ಟು 83387 (51.45%) ಮತಗಳು ಬಿದ್ದಿದ್ದರೆ. ಶ್ರೀಮಂತ್ ಪಾಟೀಲ್ ಅವರಿಗೆ 74560 (46%) ಮತಗಳು ಲಭಿಸಿವೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
INC- ಶ್ರೀಮಂತ ಬಾಳಾಸಾಹೇಬ್ ಪಾಟೀಲ್ - 83,060- ಅಂತರ: 32942(56.99%)
BJP- ಭರಮಗೌಡ ಅಲಗೌಡ ಕಾಗೆ- 50,118 (34.39%)    
JD(S)- ಮಲ್ಲಪ್ಪ ಪ್ಯಾರಿಸ್ ಮಗೆನ್ನವರ- 7,337

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಶ್ರೀಮಂತ್ ಬಾಲಾಸಾಹೇಬ್ ಪಾಟೀಲ್
ಕಾಂಗ್ರೆಸ್- ಭರಮಗೊಂಡ ಅಲಗೊಂಡ ಕಾಗೆ 
ಜೆಡಿಎಸ್-ಮಲ್ಲಿಕಾರ್ಜುನ್ ಶ್ರೀಶೈಲ್ ಗುಂಜಿಗಾವಿ
ಆಪ್- ರಜಾಕ್ ದಸ್ತಗೀರ್ ಮುಲ್ಲಾ, 

5. ಕುಡಚಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,76,708
ಪುರುಷ ಮತದಾರರ ಸಂಖ್ಯೆ-91,118
ಮಹಿಳಾ ಮತದಾರರ ಸಂಖ್ಯೆ-85,568

ಕುಡಚಿ ವಿಧಾನಸಭೆ ಕ್ಷೇತ್ರದ ಕುರಿತು ಹೇಳುವದಾದರೆ, ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ್ ಅವರು ತಮ್ಮ ಎದುರಾಳಿ ಬಿಜೆಪಿ ಪಕ್ಷದ ಪಿ ರಾಜೀವ ಅವರನ್ನು ಒಟ್ಟು 25243 ಮತಗಳ ಅಂತರದಿಂದ ಸೋಲಿಸುವ ಮೂಲಕ ಭರ್ಜರಿ ಜಯ ದಾಖಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮಹೇಂದ್ರ ತಮ್ಮಣ್ಣವರ್ ಅವರಿಗೆ 85321     (56.87%) ಮತಗಳು ಬಿದ್ದರೆ, ಪಿ ರಾಜೀವ್ 60078 (40.04%) ಮತಗಳನ್ನು ಪಡೆದುಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
BJP- ಪಿ. ರಾಜೀವ್- 67,781    - ಅಂತರ: 15008(49.60%)
INC- ಅಮಿತ್ ಶಾಮಾ ಘಾಟಗೆ- 52,773(38.62    %)
IND- ಸುರೇಶ್ ಗುರಪ್ಪ ತಳವಾರ್- 6,731(4.93    %)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಪಿ. ರಾಜೀವ್
ಕಾಂಗ್ರೆಸ್- ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ್
ಜೆಡಿಎಸ್-ಆನಂದ್ ವಿ ಮಾಳಗಿ
ಬಿಎಸ್ಪಿ - ಕಡರೊಳ್ಳಿ ಚಂದ್ರಕಾಂತ, 

6. ರಾಯಬಾಗ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,91,690
ಪುರುಷ ಮತದಾರರ ಸಂಖ್ಯೆ-99,687
ಮಹಿಳಾ ಮತದಾರರ ಸಂಖ್ಯೆ-91,988

ರಾಯಬಾಗ್ ವಿಧಾನಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಐಹೊಳೆ ದುರ್ಯೋಧನ್ ಮಹಾಲಿಂಗಪ್ಪ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳ್ಳಿಕರ್ ಅವರ ಮೇಲೆ 2570 ಮತಗಳಿಂದ ಸೋಲಿಸುವ ಮೂಲಕ ಗೆಲುವು ಸಾಧಿಸಿದ್ದಾರೆ. ದುರ್ಯೋಧನ್ ಐಹೊಳೆ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ 57500 (34.79%) ಮತಗಳು ಬಂದರೆ, ಶಂಭು ಕಲ್ಲೋಳ್ಳಿಕರ್ ಅವರು 54930 (33.23%) ಮತಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
BJP-ಐಹೊಳೆ ದುರ್ಯೋಧನ ಮಹಾಲಿಂಗಪ್ಪ-67,502 ಅಂತರ: 16548(44.88%) 
INC- ಪ್ರದೀಪ್‌ಕುಮಾರ್ ರಾಮು ಮಳಗೆ- 50,954(33.88    %)
IND- ಮಹಾವೀರ್ ಮೋಹಿತೆ-24,627    (16.37%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಐಹೊಳೆ ದುರ್ಯೋಧನ್ ಮಹಾಲಿಂಗಪ್ಪ
ಕಾಂಗ್ರೆಸ್- ಮಹಾವೀರ್ ಲಕ್ಷ್ಮಣ ಮೋಹಿತೆ
ಜೆಡಿಎಸ್-ಪ್ರದೀಪ್ ಕುಮಾರ್ ಆರ್. ಮಾಳಗಿ
ಆಪ್  - ಶಂಕರ್ ಸುಬ್ರಾವ್ ಖಾತೆದಾರ್

7. ಹುಕ್ಕೇರಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,92,032
ಪುರುಷ ಮತದಾರರ ಸಂಖ್ಯೆ-97,035
ಮಹಿಳಾ ಮತದಾರರ ಸಂಖ್ಯೆ-94,988

ಹುಕ್ಕೇರಿ ವಿಧಾನಸಭೆ ಕ್ಷೇತ್ರದ ಕುರಿತು ಹೇಳುವುದಾದರೆ ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಉಮೇಶ್ ಕತ್ತಿ ಅವರ ಪುತ್ರ ನಿಖಿಲ್ ಕತ್ತಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ಬಿ ಪಾಟೀಲ್ ವಿರುದ್ಧ 42551 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ನಿಖಿಲ್ ಕತ್ತಿ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ 103574 (61.69%) ಮತಗಳು ದೊರೆತರೆ, ಎ ಬಿ ಪಾಟೀಲ್ ಅವರಿಗೆ 61023 (36.34%) ಮತಗಳು ಲಭಿಸಿವೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
BJP- ಉಮೇಶ್ ವಿಶ್ವನಾಥ್ ಕತ್ತಿ- 83,588- ಅಂತರ: 15385(52.94%)
INC-ಅಪ್ಪಯ್ಯಗೌಡ ಬಸಗೌಡ ಪಾಟೀಲ್-68,203    (43.20%)    
JD(S)- ಮಲ್ಲಿಕಾರ್ಜುನ್ ಬಾಬುಗೌಡ ಪಾಟೀಲ್ -  1,426    (0.90%)    

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಕತ್ತಿ ನಿಖಿಲ್ ಉಮೇಶ್
ಕಾಂಗ್ರೆಸ್- ಎ. ಬಿ ಪಾಟೀಲ್ 
ಜೆಡಿಎಸ್- ಬಸವರಾಜ್ ಮಾಲಗೋಂಡಾ ಪಾಟೀಲ್
ಬಿ ಎಸ್ಪಿ  - ಕಾಂಬಳೆ ಬಾವರಾಜ್ ಕಡಪ್ಪ
ಆಪ್- ಮಂಜುನಾಥ್ ಬಿ ಗಡೆನ್ನವರ್

8. ಆರಭಾವಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,28,322
ಪುರುಷ ಮತದಾರರ ಸಂಖ್ಯೆ-1,14,245
ಮಹಿಳಾ ಮತದಾರರ ಸಂಖ್ಯೆ-1,14,061

ಬೆಳಗಾವಿ ಜಿಲ್ಲೆಯ ಆರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷದ ಭಾಲಚಂದ್ರ ಜಾರಕಿಹೊಳಿ ಅವರು ತಮ್ಮ ಹತ್ತಿರದ ಎದುರಾಳಿ ಮತ್ತು ಪಕ್ಷೇತರ ಅಭ್ಯರ್ಥಿ ಭೀಮಪ್ಪ ಗುಂಡಪ್ಪ ಗಡಾಡ್ ಅವರ ವಿರುದ್ಧ 71540 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಭಾಲಚಂದ್ರ ಜಾರಕಿಹೊಳಿ ಅವರಿಗೆ ಒಟ್ಟು 115402 (60.7%) ಮತಗಳು ಬಂದಿದ್ದರೇ, ಭೀಮಪ್ಪ ಗಡಾಡ್ ಅವರಿಗೆ 43862 (23.07 %)ಮತಗಳು ಲಭಿಸಿವೆ.   

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
BJP- ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ- 96,144    - ಅಂತರ: 47328(54.34%)
JD(S)- 48,816(27.59%)
INC- ಅರವಿಂದ ಮಹಾದೇವರಾವ್ ದಳ್ವಾಯಿ -23,253 (13.14%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಭಾಲಚಂದ್ರ ಲಕ್ಷಮಣರಾವ್ ಜಾರಕಿಹೊಳಿ
ಕಾಂಗ್ರೆಸ್- ಅರವಿಂದ್ ಮಹಾದೇವ್ ರಾವ್ ದಳವಾಯಿ
ಜೆಡಿಎಸ್- ಪ್ರಕಾಶ್ ರಾಮಪ್ಪ ಕಳಶೆಟ್ಟಿ
ಬಿ ಎಸ್ಪಿ  - ಬಸವಂತ್ ಈರಪ್ಪ ವಡೆರ್
ಆಪ್- ಈಜಾಜ್ ಅಹ್ಮದ್ ಐ ಕೊಟ್ಟಲಗಿ

9.ಗೋಕಾಕ್
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,38,221
ಪುರುಷ ಮತದಾರರ ಸಂಖ್ಯೆ-1,18,115
ಮಹಿಳಾ ಮತದಾರರ ಸಂಖ್ಯೆ-1,20,091

ಗೋಕಾಕ್ ವಿಧಾನಸಭೆ ಕ್ಷೇತ್ರದ ಫಲಿತಾಂಶದ ಕುರಿತು ಹೇಳುವುದಾದರೆ, ಮತ ಎಣಿಕೆಯ ವೇಳೆ ಆರಂಭಿಕವಾಗಿ ಹಿನ್ನೆಡೆ ಅನುಭವಿಸಿದ ಭಾರತೀಯ ಜನತಾ ಪಕ್ಷದ ರಮೇಶ್ ಲಕ್ಷ್ಮಣ್ ಜಾರಕಿಹೊಳಿ ನಂತರದ ಸುತ್ತುಗಳಲ್ಲಿ ಭಾರಿ ಮುನ್ನಡೆಯನ್ನು ಸಾಧಿಸುತ್ತಾ ತಮ್ಮ ಹತ್ತಿರದ ಪ್ರತಿಸ್ಪರ್ಧಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕದಡಿ ಮಹಾಂತೆಶ್ ಕಲ್ಲಪ್ಪ ಅವರನ್ನು ಒಟ್ಟು 25412 ಮತಗಳ ಅಂತರದಿಂದ ಸೋಲಿಸಿದ್ದಾರೆ, ಈ ಬಾರಿಯ  ಚುನಾವಣೆಯಲ್ಲಿ  ರಮೇಶ್ ಜಾರಕಿಹೊಳಿ ಅವರಿಗೆ ಒಟ್ಟು 105313 (55.31%) ಮತಗಳು ಲಭಿಸಿದರೆ, ಮಹಾಂತೇಶ್ ಕದಡಿ ಅವರಿಗೆ ಒಟ್ಟು 79901 (41.97%) ಮತಗಳು ಬಂದಿವೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
INC- ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್- 90,249-ಅಂತರ: 14280(51.87%)
BJP- ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ-75,969(43.67%)
JD(S)- ಕರೆಪ್ಪ ಲಕ್ಕಪ್ಪ ತಳವಾರ್- 1,553(0.89%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ರಮೇಶ್ ಲಕ್ಷಮಣರಾವ್ ಜಾರಕಿಹೊಳಿ
ಕಾಂಗ್ರೆಸ್- ಕದಡಿ ಮಹಾಂತೆಶ್ ಕಲ್ಲಪ್ಪ
ಬಿ ಎಸ್ಪಿ  - ಬಿ ಲೋಹಿತ್
ಆಪ್- ಜೆಎಂ ಕರೆಪ್ಪಗೊಳ್

10. ಯಮಕನಮರಡಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,85,780
ಪುರುಷ ಮತದಾರರ ಸಂಖ್ಯೆ-93,531
ಮಹಿಳಾ ಮತದಾರರ ಸಂಖ್ಯೆ-92,239

ಯಮಕನಮರಡಿ ಕ್ಷೇತ್ರದಲ್ಲಿ ಈ ಬಾರಿಯೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ ಅವರು ತಮ್ಮ ಪ್ರತಿಸ್ಪರ್ತಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಸವರಾಜ್ ಹುಂಡ್ರಿ ಅವರನ್ನು 57211 ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ 100290 (60.25%) ಲಭಿಸಿದರೆ, ಬಸವರಾಜ್ ಹುಂಡ್ರಿ ಅವರಿಗೆ 43079 (25.88%) ಮತಗಳು ಬಂದಿವೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
INC- ಸತೀಶ್ ಎಲ್. ಜಾರಕಿಹೊಳಿ- 73,512 - ಅಂತರ: 2850(49.1%)
BJP- ಅಸ್ಟಗಿ ಮಾರುತಿ ಮಲ್ಲಪ್ಪ- 70,662(47.26    %)
JD(S)- ಶಂಕರ್ ಭರಮ ಗಸ್ತಿ- 1,837    (1.23%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಬಸವರಾಜ್ ಹುಂದ್ರಿ
ಕಾಂಗ್ರೆಸ್- ಸತೀಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ
ಬಿ ಎಸ್ಪಿ  - ಬಿ ಲೋಹಿತ್
ಆಪ್- ಜೆಎಂ ಕರೆಪ್ಪಗೊಳ್

11 ಬೆಳಗಾವಿ ಉತ್ತರ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,29,511
ಪುರುಷ ಮತದಾರರ ಸಂಖ್ಯೆ-1,14,437
ಮಹಿಳಾ ಮತದಾರರ ಸಂಖ್ಯೆ-1,15,049

ಬೆಳಗಾವಿ ಉತ್ತರ ವಿಧಾಸಭೆ ಕ್ಷೇತ್ರದ ಕುರಿತು ಹೇಳುವುದಾದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಸಿಫ್ ಉರ್ಫ್ ರಾಜು ಸೇಠ್ ಅವರು ತಮ್ಮ ಎದುರಾಳಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ. ರವಿ ಪಾಟೀಲ್ ಅವರನ್ನು 4231 ಮತಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜು ಸೇಠ್ ಗೆ 69184 (46.28%) ಮತಗಳು ಬಂದರೆ, ಡಾ. ರವಿ ಪಾಟೀಲ್ ಗೆ 64953 (43.45%) ಮತಗಳು ಲಭಿಸಿವೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
BJP- ಅನಿಲ್ ಎಸ್. ಬೆನಕೆ- 79,060- ಅಂತರ: 17267(53.63%)
INC- ಫೈರೋಜ್ ನುರುದ್ದೀನ್ ಸೇಠ್- 61,793 (41.91%)
IND- ಬಾಳಾಸಾಹೇಬ್ ಶಿವಾಜಿರಾವ್ ಕಾಕತ್ಕರ್- 1,869    (1.27%)    
JD(S)- ಅಶ್ಫಾಕ್ ಅಹ್ಮದ್ ಮಡಕಿ- 1,143 (0.78%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಡಾ.ರವಿ ಬಿ ಪಾಟೀಲ್
ಕಾಂಗ್ರೆಸ್- ಆಸಿಫ್ ಉರ್ಫ್ ರಾಜು ಸೇಠ್
ಜೆಡಿಎಸ್- ಶಿವಾನಂದ್ ಮೂಗಳಿಹಾಳ್
ಆಪ್- ರಾಜಕುಮಾರ್ ಟೋಪನ್ನವರ್

12 ಬೆಳಗಾವಿ ದಕ್ಷಿಣ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,30,803
ಪುರುಷ ಮತದಾರರ ಸಂಖ್ಯೆ-1,16,736
ಮಹಿಳಾ ಮತದಾರರ ಸಂಖ್ಯೆ-1,14,004

ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಭಯ್ ಪಾಟೀಲ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿರುವ ರಮಾಕಾಂತ ಕೊಂಡುಸ್ಕರ್ ಅವರನ್ನು 12308 ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅಭಯ್ ಪಾಟೀಲ್ ಅವರಿಗೆ 77094 (48.45%) ಮತಗಳು ದೊರೆತರೆ, ರಮಾಕಾಂತ್ ಕೊಂಡುಸ್ಕರ್ ಅವರಿಗೆ 64786 (40.72%) ಮತಗಳು ಲಭಿಸಿವೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
BJP- ಅಭಯ್ ಪಾಟೀಲ್- 84,498- ಅಂತರ: 58692 (57.59%)
INC- ಎಂ.ಡಿ. ಲಕ್ಷ್ಮೀನಾರಾಯಣ್ (ಅಣ್ಣಯ್ಯ) - 25,806 (17.59%)    
IND- ಪ್ರಕಾಶ್ ಅಪ್ಪಾಜಿ ಮರಗಲೆ- 21,537 (14.68%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಅಭಯ ಪಾಟೀಲ್
ಕಾಂಗ್ರೆಸ್- ಪ್ರಭಾವತಿ ಬಿ ಮಾಸ್ತಮರಡಿ 
ಜೆಡಿಎಸ್- ಶ್ರೀನಿವಾಸ್ ಯಲ್ಲಪ್ಪಾ ತಾಳುಕ್ದಾರ್
ಆಪ್- ನೂರಹಮ್ಮದ್ ಕುತುಬುದ್ದೀನ್ ಮುಲ್ಲಾ

13. ಬೆಳಗಾವಿ ಗ್ರಾಮಾಂತರ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,34,076
ಪುರುಷ ಮತದಾರರ ಸಂಖ್ಯೆ-1,19,656
ಮಹಿಳಾ ಮತದಾರರ ಸಂಖ್ಯೆ-1,14,401

ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕುರಿತು ಹೇಳುವುದಾದರೆ, ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನಾಗೇಶ್ ಅನ್ನಪ್ಪ ಮನೋಲ್ಕರ್ ಅವರನ್ನು 56016 ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಟ್ಟು 107619 (52.61%) ಮತಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ನಾಗೇಶ್ ಮನೋಲ್ಕರ್ 51603 (25.23%) ಮತಗಳನ್ನು ಪಡೆದುಕೊಂಡಿದ್ದಾರೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
INC- ಲಕ್ಷ್ಮೀ ಆರ್. ಹೆಬ್ಬಾಳ್ಕರ್ -1,02,040- ಅಂತರ: 51724(54.74%)
BJP- ಸಂಜಯ್ ಬಿ. ಪಾಟೀಲ್- 50,316 (26.99%)
IND- ಕಿಣೇಕರ್ ಮನೋಹರ್ ಕಾಳಪ್ಪ - 23,776    (12.75%)
JD(S)- ಪಾಟೀಲ್ ಶಿವನಗೌಡ ಎಸ್ - 3,794(2.04%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ನಾಗೇಶ್ ಅನ್ನಪ್ಪ ಮನೋಲ್ಕರ್
ಕಾಂಗ್ರೆಸ್- ಲಕ್ಷ್ಮಿ ಆರ್. ಹೆಬ್ಬಾಳ್ಕರ್
ಜೆಡಿಎಸ್- ಶಂಕರ್ ಗೌಡಾ ಪಾಟೀಲ್
ಆಪ್- ಟಿ ಮಾಲತಿ

14. ಖಾನಾಪೂರ್
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,04,694
ಪುರುಷ ಮತದಾರರ ಸಂಖ್ಯೆ-1,06,465
ಮಹಿಳಾ ಮತದಾರರ ಸಂಖ್ಯೆ-98,219

ಖಾನಾಪೂರ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೇಯ್ ಜನತಾ ಪಕ್ಷದ ಅಭ್ಯರ್ಥಿ ವಿಠ್ಠಲ ಸೋಮಣ್ಣ ಹಲಗೆಕಾರ್ ಅವರು ತಮ್ಮ ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ ಅಂಜಲಿ ನಿಂಬಾಲ್ಕರ್ ವಿರುದ್ಧ 54629 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಿಠ್ಠಲ ಹಲಗೆಕರ್ ಅವರಿಗೆ 91834 (57.04%) ಮತಗಳು ಲಭಿಸಿದರೆ, ಅಂಜಲಿ ನಿಂಬಾಳ್ಕರ್ ಅವರಿಗೆ ಮತಗಳು 37205 (23.11%) ದೊರೆತಿವೆ. 
  
ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
INC- ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್- 36,649-ಅಂತರ: 5133(23.76)%
BJP- ವಿಠ್ಠಲ್ ಹಲಗೇಕರ್- 31,516(20.44%)
JD(S)- ಭಗ್ವಾನ್ ನಾಸೀರ್ ಪಪುಲ್‌ಸಾಬ್- 27,272 (17.68%)    

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಇತಲ್ ಸೋಮಣ್ಣ ಹಲಗೆಕರ್
ಕಾಂಗ್ರೆಸ್- ಡಾ. ಅಂಜಲಿ ನಿಂಬಾಳ್ಕರ್
ಜೆಡಿಎಸ್- ಬಾಗ್ವಾನ್ ನಾಸಿರ್ ಪಪ್ಪುಲ್ಸಾಬ್

15. ಕಿತ್ತೂರು
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ- 1,86,195
ಪುರುಷ ಮತದಾರರ ಸಂಖ್ಯೆ-94,884
ಮಹಿಳಾ ಮತದಾರರ ಸಂಖ್ಯೆ-91,304

ಕಿತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಬಸಾಹೇಬ್ ಪಾಟೀಲ್ ಅವರು ತಮ್ಮ ಎದುರಾಳಿ ಭಾರತೀಯ ಜನತಾಪಕ್ಷದ ಅಭ್ಯರ್ಥಿ ದೊಡ್ಡಗೌಡರ್ ಮಹಾಂತೇಶ್ ಬಸವಂತರಾಯ್ ಅವರನ್ನು 2993 ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಾಬಾಸಾಹೇಬ್ ಪಾಟೀಲ್ ಅವರಿಗೆ ಒಟ್ಟು 77536 (49.49%) ಮತಗಳು ಬಂದರೆ, ಮಹಾಂತೇಶ್ ದೊಡ್ಡಗೌಡರ್ ಅವರಿಗೆ 74543 (47.58%) ಲಭಿಸಿವೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
BJP- ದೊಡ್ಡಗೌಡರ ಮಹಾಂತೇಶ ಬಸವಂತರಾಯ -73,155- ಅಂತರ: 32862(49.26)%
INC- ಇನಾಮದಾರ ದಾನಪ್ಪಗೌಡ ಬಸನಗೌಡ- 40,293    (27.13%)    
IND- ಬಾಬಾಸಾಹೇಬ ದೇವನಗೌಡ ಪಾಟೀಲ - 25,366    (17.08%)    
JD(S)- ಸುರೇಶ ಶಿವರುದ್ರಪ್ಪ ಮಾರಿಹಾಳ್- 3,755 (2.53    %)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ದೊಡ್ಡಗೌಡರ್ ಮಹಾಂತೇಷ್ ಬಸವಂತರಾಯ್
ಕಾಂಗ್ರೆಸ್- ಬಾಬಸಾಹೇಬ್ ಪಾಟೀಲ್
ಜೆಡಿಎಸ್- ಅಶ್ವಿನಿ ಸಿಂಗಯ್ಯಾ ಪೂಜೇರ್
ಆಪ್- ಆನಂದ್ ಹಂಪ್ಪನ್ನವರ್

16. ಬೈಲಹೊಂಗಲ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,82,491
ಪುರುಷ ಮತದಾರರ ಸಂಖ್ಯೆ-92,484
ಮಹಿಳಾ ಮತದಾರರ ಸಂಖ್ಯೆ-90,004

ಬೈಲಹೊಂಗಲ್ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಶಿವಾನಂದ್ ಕೌಜಲಾಗಿ ಅವರು ತಮ್ಮ ಎದುರಾಳಿ ಬಿಜೆಪಿಯ ಜಗದೀಶ್ ಚನ್ನಪ್ಪ ಮೆಟಗುಡ್ಡ ಅವರನ್ನು 2778 ಮತಗಳ ಅಂತರದಲ್ಲಿ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಮಹಾಂತೇಶ್ ಕೌಜಲಗಿ ಅವರಿಗೆ 58408 (38.28%) ಮತಗಳು ಲಭಿಸಿದರೆ, ಜಗದೀಶ್ ಮೆಟಗುಡ್ಡ ಅವರು 55630 (36.46%) ಮತಗಳನ್ನು ಪಡೆದುಕೊಂಡಿದ್ದಾರೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
INC- ಕೌಜಲಗಿ ಮಹಾಂತೇಶ ಶಿವಾನಂದ್-47,040- ಅಂತರ: 5122(32.49%)
IND- ಜಗದೀಶ್ ಚನ್ನಪ್ಪ ಮೆಟಗುಡ್- 41,918(28.95%)    
BJP- ವಿಶ್ವನಾಥ ಈರನಗೌಡ ಪಾಟೀಲ- 37,498 (25.90%)
JD(S)- ಶಂಕರ್ ಭರಮಪ್ಪ ಮಾಡಲಗಿ- 13,548    (9.36%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಜಗದೀಶ್ ಚೆನ್ನಪ್ಪ ಮೆಟಗುಡ್
ಕಾಂಗ್ರೆಸ್- ಕೌಜಲಾಗಿ ಮಹಾಂಟೇಶ್ ಶಿವಾನಂದ್
ಜೆಡಿಎಸ್- ಶಂಕರ್ ಭರ್ಮಪ್ಪ ಮದಲಗಿ
ಆಪ್- ಬಸವನಗೌಡ ಎಂ ಚಿಕ್ಕಣಗೌಡರ್ 

ಇದನ್ನೂ ಓದಿ-Karnataka Election Results 2023: 5 ಸ್ಥಾನಗಳಲ್ಲಿ ಕಾಂಗ್ರೆಸ್, 2 ಸ್ಥಾನಗಳಲ್ಲಿ ಬಿಜೆಪಿ, ಇಲ್ಲಿದೆ ಬಾಗಲಕೋಟೆ ಫೈನಲ್ ರಿಸಲ್ಟ್

17. ಸವದತ್ತಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,89,556
ಪುರುಷ ಮತದಾರರ ಸಂಖ್ಯೆ-95,907
ಮಹಿಳಾ ಮತದಾರರ ಸಂಖ್ಯೆ-93,648

ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಶ್ವಾಸ್ ಯಶವಂತ್ ವೈದ್ಯ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಮಾಮನಿ ರತ್ನಾ ವಿಶ್ವನಾಥ್ ಅವರನ್ನು 14695 ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಿಶ್ವಾಸ್ ವೈದ್ಯ ಅವರಿಗೆ 71224 (43.61) ಮತಗಳು ಲಭಿಸಿದರೆ, ರತ್ನಾ ಮಾಮನಿ ಅವರಿಗೆ 56529 (34.61%) ಮತಗಳು ಬಂದಿವೆ.  

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
BJP- ಆನಂದ ಅಲಿಯಾಸ್ ವಿಶ್ವನಾಥ್ ಚಂದ್ರಶೇಖರ್ ಮಾಮನಿ-62,480- ಅಂತರ: 6291(40.65%)
IND- ಆನಂದ್ ಚೋಪ್ರಾ- 56,189 (36.56%)
INC- ವಿಶ್ವಾಸ್ ವಸಂತ್ ವೈದ್ಯ- 30,018 (19.53    %)
JD(S)- ದೊಡ್ಡಗೌಡ ಫಕೀರಗೌಡ ಪಾಟೀಲ- 758    (0.49%)    

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಮಾಮನಿ ರತ್ನಾ ಆನಂದ್ ಅಲಿಯಾಸ್ ವಿಶ್ವನಾಥ್ 
ಕಾಂಗ್ರೆಸ್- ವಿಶ್ವಾಸ್ ವಸಂತ್ ವೈದ್ಯ
ಜೆಡಿಎಸ್- ಚೋಪ್ರಾ ಸೌರವ್ ಆನಂದ್
ಆಪ್- ಬಾಪೂಗೋಂಡಾ ಸಿದಗೋಂಡಾ ಪಾಟೀಲ್\

ಇದನ್ನೂ ಓದಿ-Karnataka Election Results 2023: ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಜಯ, ಇಲ್ಲಿದೆ ಬೀದರ್ ಜಿಲ್ಲೆಯ ಫೈನಲ್ ರಿಸಲ್ಟ್

18. ರಾಮದುರ್ಗ್
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,97,637
ಪುರುಷ ಮತದಾರರ ಸಂಖ್ಯೆ-1,01,020
ಮಹಿಳಾ ಮತದಾರರ ಸಂಖ್ಯೆ-96,605

ರಾಮದುರ್ಗ ವಿಧಾನಸಭೆ ಕ್ಷೇತ್ರದ ಕುರಿತು ಹೇಳುವುದಾದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಮಹಾದೇವಪ್ಪ ಪಟ್ಟನ್ ಅವರು ತಮ್ಮ ಎದುರಾಳಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಚಿಕ್ಕ ರೇವಣ್ಣ ಅವರನ್ನು 11730 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅಶೋಕ್ ಪಟ್ಟನ್ ಅವರಿಗೆ 80294 (52.13%) ಮತಗಳು ಬಂದರೆ, ಚಿಕ್ಕರೇವಣ್ಣ ಅವರಿಗೆ 68564 (44.51%) ಮತಗಳು ಲಭಿಸಿವೆ. 

ವಿಧಾನಸಭೆ ಚುನಾವಣೆ 2018ರ ಫಲಿತಾಂಶ 
BJP - ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ - 68,349-ಅಂತರ: 2875(45.17%)
INC- ಅಶೋಕ್ ಮಹದೇವಪ್ಪ ಪಟ್ಟಣ- 65,474    (43.27%)
IND- ಪಂಚಕಟ್ಟಿಮಠ ರಮೇಶ್ ಚಂದ್ರಯ್ಯ-  8,427( 5.57%)    
JD(S)- ಜಾವೀದಸಾಬ್. ಎಂ- 2,266(1.50%)

2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ-ಚಿಕ್ಕ ರೇವಣ್ಣ
ಕಾಂಗ್ರೆಸ್- ಅಶೋಕ್ ಪಟ್ಟನ್
ಜೆಡಿಎಸ್- ಪ್ರಕಾಶ್ ಮುಧೋಲ್
ಆಪ್- ಮಲಿಕ್ ಜಾನ್ ನವಾಬ್

ಇದನ್ನೂ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News