Karnataka Election Result 2023 Live: ರಾಜ್ಯಪಾಲರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಬಸವರಾಜ್ ಬೊಮ್ಮಾಯಿ

Karnataka Assembly Elections 2023 Result Live Updates: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ.10 ರಂದು ಮತದಾನ ನಡೆದಿತ್ತು. ಇಂದು (ಮೇ 13) ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಈ ಕುರಿತಾದ ಕ್ಷಣ ಕ್ಷಣದ ಅಪ್‌ಡೇಟ್ಸ್‌ ನಿಮ್ಮ ಜೀ ಕನ್ನಡ ನ್ಯೂಸ್‌ನಲ್ಲಿ..   

Written by - Chetana Devarmani | Last Updated : May 14, 2023, 12:11 AM IST
Karnataka Election Result 2023 Live: ರಾಜ್ಯಪಾಲರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಬಸವರಾಜ್ ಬೊಮ್ಮಾಯಿ
Live Blog

Karnataka Assembly Elections 2023 Result Live Updates: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಹಿನ್ನೆಲೆಯಲ್ಲಿ ಇಂದು ಅಂದರೆ 13.05.2023 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಲಿದೆ. ಮಧ್ಯಾಹ್ನದ ಹೊತ್ತಿಗೆ ಬಹುತೇಕ ಚಿತ್ರಣ  ಹೊರಬೀಳುವ ಸಾಧ್ಯತೆಯಿದೆ. ಸಂಜೆ ವೇಳೆಗೆ ಪೂರ್ಣ ಫಲಿತಾಂಶ ಲಭ್ಯವಾಗಲಿದೆ. ಈ ಕುರಿತಾದ ಕ್ಷಣ ಕ್ಷಣದ ಅಪ್‌ಡೇಟ್ಸ್‌ ನಿಮ್ಮ ಜೀ ಕನ್ನಡ ನ್ಯೂಸ್‌ನಲ್ಲಿ.. 

 

14 May, 2023

  • 00:11 AM

    ಸೋತ ನೋವಿನಲ್ಲಿ ಕಣ್ಣೀರು ಹಾಕಿದ ಜಯನಗರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ 

  • 00:01 AM

    ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಘೋಷಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

     

  • 23:59 PM

    16 ಮತಗಳ ಅಂತರದಿಂದ ಜಯನಗರದಲ್ಲಿ ಬಿಜೆಪಿ ಗೆಲುವು
     

  • 22:29 PM

    ರಾಜ್ಯಪಾಲರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಬಸವರಾಜ್ ಬೊಮ್ಮಾಯಿ

    ಕಾಂಗ್ರೆಸ್ ಪಕ್ಷವು ಐತಿಹಾಸಿಕ ಬಹುಮತವನ್ನು ಪಡೆದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್ ಇಂದು ರಾಜಭವನಕ್ಕೆ ಆಗಮಿಸಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಬೊಮ್ಮಾಯಿ ಜೊತೆ ಬೈರತಿ ಬಸವರಾಜ್ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು

  • 18:33 PM

    Pralhad Joshi press meet : ಹಿರಿಯರನ್ನ ಕಡೆಗಣಿಸಿದ್ದೇವೆ ಎನ್ನುವ ಪ್ರಶ್ನೆಯೇ ಇಲ್ಲ

    ಹಿರಿಯರನ್ನ ಕಡೆಗಣಿಸಿದ್ದೇವೆ ಎನ್ನುವ ಪ್ರಶ್ನೆಯೇ ಇಲ್ಲ. ಈ ಚುನಾವಣೆ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. 2019 ರ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನದಲ್ಲಿ ನಾವು ಜಯಗಳಿಸಿದ್ದೇವೆ. ಲಿಂಗಾಯತ ನಾಯಕರಿಗೆ ನಾವು ಟಿಕೆಟ್ ಕೊಟ್ಟಷ್ಟು ಯಾರೂ ಕೊಟ್ಟಿಲ್ಲ. ಯಡಿಯೂರಪ್ಪನವರು ಸಂಪೂರ್ಣ ಜವಾಬ್ದಾರಿಯನ್ನ ಹೊತ್ತು ಚುನಾವಣೆ ಮಾಡಿದ್ದಾರೆ. ಲಿಂಗಾಯತರನ್ನ‌ ಕಡೆಗಣನೆ ಮಾಡಿರುವ ಪ್ರಶ್ನೆಯೇ ಇಲ್ಲ. ಶೆಟ್ಟರ್ ಸೋಲು ಅನ್ನೋದಕ್ಕಿಂತ ಬಿಜೆಪಿ ಗೆಲುವು ಸಾಧಿಸಿದೆ. ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವುಬಸಾಧಿಸಿರುವುದು ಸಂತಸ ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. 

  • 18:30 PM

    Pralhad Joshi press meet : ರಾಜ್ಯದ ಜನ ಕೊಟ್ಟ ತೀರ್ಪನ್ನ ನಾವು ವಿನಮ್ರವಾಗಿ ಸ್ವೀಕರಿಸುತ್ತೇವೆ

    ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾಗಿದೆ. ರಾಜ್ಯದ ಜನ ಕೊಟ್ಟ ತೀರ್ಪನ್ನ ನಾವು ವಿನಮ್ರವಾಗಿ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಕಾಂಗ್ರೆಸ್ ತನ್ನ ಭರವಸೆಗಳನ್ನ ಈಡೇರಿಸುತ್ತದೆ ಎಂದು ಭಾವಿಸುತ್ತೇನೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಸಹಕಾರ ಇದ್ದೇ ಇರುತ್ತದೆ. ಬಿಜೆಪಿಯ ಈ ಸೋಲಿನ ಪರಾಮರ್ಶೆ ಮಾಡುತ್ತೇವೆ. ಎಲ್ಲಿ ನಮ್ಮ ತಂತ್ರಗಾರಿಕೆ ತಪ್ಪಿಗೆ ಎನ್ನುವುದನ್ನ ಗಂಭೀರವಾಗಿ ಅವಲೋಕನ ಮಾಡುತ್ತೇವೆ. 2013 ರಲ್ಲಿಯೂ ನಾವು ಹೀನಾಯ ಸೋಲು ಅನುಭವಿಸುದ್ದೆವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. 

  • 18:30 PM

    Pralhad Joshi press meet : ಗುಜರಾತ್ ಮಾದರಿ ಎಂದು ಎಲ್ಲಿಯೂ ಹೇಳಿಲ್ಲ

    2013 ರ ನಂತರ ನಾವು ಚುನಾವಣೆಯಲ್ಲಿ ಉತ್ತಮ‌ ಸ್ಪರ್ಧೆ ಮಾಡಿದ್ದೆವು. ಈ ಸೋಲನ್ನ ನಾವು ತುಂಬ ಸವಾಲಾಗಿ ಸ್ವೀಕರಿಸುತ್ತೇವೆ. ಸೋಲಿನ‌ಪರಾಮರ್ಶೆ ಮಾಡುವ ಮೂಲಕ ಕಾರಣವನ್ನ ಕಂಡುಕೊಳ್ಳಲಿದ್ದೇವೆ. ಪಕ್ಷವನ್ನ ಇನ್ನೂ ಹೆಚ್ಚು ಗಟ್ಟಿಗೊಳಿಸುವುದಕ್ಕೆ ನಾವು ಪ್ರಯತ್ನ‌ ಮಾಡುತ್ತೇವೆ. ಮೇಲ್ನೋಟಕ್ಕೆ ನಮ್ಮ ವಿರೋಧಿ ಅಲೆಯೇ ನಮಗೆ ಕಾರಣವಾಗಲಿದೆ. ಸೋಲಿನ ಹೊಣೆಯನ್ನ ನಾವೆಲ್ಲರೂ ಹೊರಲು ಸಿದ್ಧರಿದ್ದೇವೆ. ಗುಜರಾತ್ ಮಾದರಿಯಲ್ಲಿ ನಾವು ಚುನಾವಣೆ ನಡೆಸಲಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. 

  • 18:12 PM

    Chikkamagaluru Result: ಸಿಟಿ ರವಿಗೆ ಹೀನಾಯ ಸೋಲು 

    ಕಾಫಿ ನಾಡಿನಲ್ಲಿ ಮೊದಲ ಬಾರಿಗೆ ಇತಿಹಾಸ ಸೃಷ್ಠಿಯಾಗಿದೆ. ಕಾರಣ ಈ ಭಾಗದಲ್ಲಿ ಪ್ರತಿ ಚುನಾವಣೆಯಲ್ಲಿ ಸಿಟಿ ರವಿ ಗೆಲುವು ಸಾಧಿಸುತ್ತಿದ್ದರು ಮೊದಲ ಬಾರಿಗೆ ಬಿಜೆಪಿ ನಾಯಕನ ವಿರುದ್ಧ ಮಲೆನಾಡಿನಲ್ಲಿ ಸೋಲು ದೊರಕಿದೆ. ಇವರ ವಿರುದ್ದ ಸ್ಪರ್ದಿಸಿದ್ದ  ಎಚ್ ಡಿ ತಮ್ಮಯ್ಯ ಗೆಲುವು ಪಡೆದುಕೊಂಡಿದ್ದಾರೆ. 

  • 17:55 PM

    Jayanagar Reslut: ಜಯನಗರ ಫಲಿತಾಂಶ 

    ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ 150 ಮತಗಳ ಅಂತರದಿಂದ ಜಯ
    ಮರುಮತ ಎಣಿಕೆಯಲ್ಲೂ ಸಹ ಜಯ ಸಾಧಿಸಿದ ಸೌಮ್ಯರೆಡ್ಡಿ
     

  • 17:49 PM

    Narendra Modi Tweet on Karnataka Result : ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು ಎಂದ ಪಿಎಂ 

    ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಅವರಿಗೆ ನನ್ನ ಶುಭಾಶಯಗಳು. ಕರ್ನಾಟಕ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಬಿಜೆಪಿ ಕಾರ್ಯಕರ್ತರ ಶ್ರಮವನ್ನು ನಾನು ಪ್ರಶಂಸಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುರುಪಿನಿಂದ ಕರ್ನಾಟಕಕ್ಕೆ ಸೇವೆ ಸಲ್ಲಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

     

     

     

     

  • 17:44 PM

    Dharwad Result : ಆನಂದ ಬಾಷ್ಷ ಸುರಿಸಿದ ವಿನಯ ಕುಲಕರ್ಣಿ

    ಗೆಲುವಿನ ಬಳಿಕ ಆನಂದ ಬಾಷ್ಷ ಸುರಿಸಿದ ವಿನಯ ಕುಲಕರ್ಣಿ. ಕಿತ್ತೂರಿನಲ್ಲಿ ಅಭಿಮಾನಿಗಳ ನಡುವೆ ವಿನಯ ಕುಲಕರ್ಣಿ ಕಣ್ಣೀರು. ಕ್ಷೇತ್ರದಿಂದ ದೂರ ಇದ್ದು ಐತಿಹಾಸಿಕ‌ ಗೆಲುವು ಸಾಧಿಸಿದ ವಿನಯ ಕುಲಕರ್ಣಿ. ಕ್ಷೇತ್ರದ ಜನರ ಋಣವನ್ನು ಎಷ್ಟು ತೀರಿಸಿದ್ರೂ ಕಡಿಮೆ. ಕೊನೆ ಉಸಿರು ಇರುವರೆಗೂ ಚಿರ ಋಣಿಯಾಗಿರುವೆ ಎಂದು ವಿನಯ ಕುಲಕರ್ಣಿ ಕಿತ್ತೂರಿನಲ್ಲಿ ಭಾವುಕ ಮಾತುಗಳನ್ನಾಡಿದ್ದಾರೆ.  

  • 17:32 PM

    Davanagere Result : ಹೊನ್ನಾಳಿಯಲ್ಲಿ ಶಾಂತನಗೌಡ ಗೆಲುವು 

    ಹೊನ್ನಾಳಿಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಶಾಂತನಗೌಡ. ಕ್ಷೇತ್ರದಲ್ಕಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಬೇಸತ್ತಿದ್ದರು. ಅದಕ್ಕಾಗಿ ದೊಡ್ಡ ಅಂತರದಲ್ಲಿ ಗೆಲ್ಲಿಸಿದ್ದಾರೆ. ಹೊನ್ನಾಳಿ ಕ್ಷೇತ್ರ ದೇಶದ ಗಮನ ಸೆಳೆದಿತ್ತು. ಕ್ಷೇತ್ರದಲ್ಲಿ ಭ್ರಷ್ಟಾಚಾರದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಮತದಾರನಿಗೆ ಧನ್ಯವಾದ ಹೇಳಿದ ಶಾಂತನಗೌಡ. ರೇಣುಕಾಚಾರ್ಯ ವಿರುದ್ಧ ಗೆದ್ದಿರುವ ಶಾಂತನಗೌಡ. ಗೆಲುವಿನ ಬಳಿಕ ರೇಣುಕಾಚಾರ್ಯ ವಿರುದ್ಧ ಕಿಡಿ.

  • 17:29 PM

    Karnataka Election Result Live: ಕಾಂಗ್ರೆಸ್ ನಾಯಕ ಸುರ್ಜೇವಾಲಾ ಅಭಿನಂದನೆ

    ಐತಿಹಾಸಿಕ ಜನಾದೇಶಕ್ಕಾಗಿ ಟ್ವೀಟ್‌ ಮೂಲಕ ಕಾಂಗ್ರೆಸ್ ನಾಯಕ ಸುರ್ಜೇವಾಲಾ ಅಭಿನಂದನೆ ಸಲ್ಲಿಸಿದ್ದಾರೆ. 

  • 17:19 PM

    Haveri News: ರಾಣೆಬೆನ್ನೂರ ನಗರದಲ್ಲಿ ವಿಜಯೋತ್ಸವ 

    ರಾಣೆಬೆನ್ನೂರ ನಗರದಲ್ಲಿ ವಿಜಯೋತ್ಸವ. ಮಾಜಿ ಸ್ಪಿಕರ್ ಕೆಬಿ ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡ ಗೆಲುವು ಹಿನ್ನೆಲೆ ಕಾರ್ಯಕರ್ತರು ಅಭಿಮಾನಿಗಳಿಂದ ಮೆರವಣಿಗೆ. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ. ಕೈ ಬಾವುಟ ಹಿಡಿದು ಕುಣಿದು ಕುಪ್ಪಳಿಸಿದ ಯುವಕರು. 

  • 17:17 PM

    Chitradurga Result : ಚಿತ್ರದುರ್ಗದ ಆರು ಕ್ಷೇತ್ರಗಳ ಅಂತಿಮ ಫಲಿತಾಂಶದ ವಿವರ

    1. ಚಿತ್ರದುರ್ಗ ಕೈ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿ ಜಯಭೇರಿ
    53412ಮತಗಳ ಅಂತರದಿಂದ ವಿರೇಂದ್ರ ಪಪ್ಪಿ ಗೆಲುವು
    ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿಗೆ ಹೀನಾಯ ಸೋಲು
    ಕೈ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿ  ಪಡೆದ ಮತಗಳು 120849
    ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಪಡೆದ ಮತಗಳು 67437
    ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಪಡೆದ ಮತ 5021
    ಚಿತ್ರದುರ್ಗ ಕ್ಷೇತ್ರದಲ್ಲಿ ನೋಟಾಗೆ  ಚಲಾವಣೆಯಾದ ಮತಗಳು 685

    2. ಹಿರಿಯೂರು ವಿಧಾನಸಭಾ ಕ್ಷೇತ್ರ ಮತ‌ ಎಣಿಕೆ ಮುಕ್ತಾಯ
    ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಜಯಭೇರಿ
    30322 ಮತಗಳ ಅಂತರದಿಂದ ಕೈ ಅಭ್ಯರ್ಥಿ ಡಿ.ಸುಧಾಕರ್ ಜಯ
    ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಪಡೆದ ಮತಗಳು 92050
    ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಪಡೆದ ಮತಗಳು 61728
    ಜೆಡಿಎಸ್ ಅಬ್ಯರ್ಥಿ ರವೀಂದ್ರಪ್ಪ ಪಡೆದ ಮತಗಳು 38686
    ಹಿರಿಯೂರು ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 691

    3. ಮೊಳಕಾಲ್ಮೂರು ಕ್ಷೇತ್ರದ ಮತ ಎಣಿಕೆ ಮುಕ್ತಾಯ
    ಕೈ ಅಭ್ಯರ್ಥಿ ಎನ್.ವೈ ಗೋಪಾಲಕೃಷ್ಣ ಜಯಭೇರಿ
    22149 ಮತಗಳ ಅಂತರದಲ್ಲಿ ಕೈ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಜಯ
    ಕೈ ಅಭ್ಯರ್ಥಿ ಗೋಪಾಲಕೃಷ್ಣ ಪಡೆದ ಮತಗಳು 109459
    ಬಿಜೆಪಿ‌ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಪಡೆದ ಮತಗಳು 87316
    ಜೆಡಿಎಸ್ ಅಭ್ಯರ್ಥಿ ವೀರಭದ್ರ ಪಡೆದ ಮತಗಳು 1594
    ಮೊಳಕಾಲ್ಮೂರು ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 1561

    4. ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮತ‌ ಎಣಿಕೆ ಮುಕ್ತಾಯ
    ಕೈ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪ ಜಯಭೇರಿ
    32816 ಮತಗಳ ಅಂತರದಿಂದ ಕೈ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪ ಜಯ
    ಕೈ ಅಭ್ಯರ್ಥಿ ಬಿಜಿ ಗೋವಿಂದಪ್ಪ ಪಡೆದ ಮತ 81050
    ಬಿಜೆಪಿ ಅಭ್ಯರ್ಥಿ ಎಸ್. ಲಿಂಗಮೂರ್ತಿ ಪಡೆದ ಮತ 48234
    ಜೆಡಿಎಸ್ ಅಭ್ಯರ್ಥಿ ಎಂ. ತಿಪ್ಪೇಸ್ವಾಮಿ ಪಡೆದ ಮತಗಳು 1914
    ಪಕ್ಷೇತರ ಅಬ್ಯರ್ಥಿ ಗೂಳಿಹಟ್ಟಿ ಶೇಖರ್ ಪಡೆದ ಮತಗಳು 10449
    ಪಕ್ಷೇತರ ಅಭ್ಯರ್ಥಿ ಟಿ.ಮಂಜುನಾಥ್ ಪಡೆದ ಮತಗಳು 20812
    ಹೊಸದುರ್ಗ ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 1030

    5. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಮತ‌ ಎಣಿಕೆ ಮುಕ್ತಾಯ
    ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಜಯಭೇರಿ
    5682 ಮತಗಳ ಅಂತರದಲ್ಲಿ‌ ಎಂ.ಚಂದ್ರಪ್ಪಗೆ ಜಯ
    ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಗಳಿಸಿದ ಮತಗಳು 88732
    ಕೈ ಅಭ್ಯರ್ಥಿ ಹೆಚ್. ಆಂಜನೇಯ ಗಳಿಸಿದ‌ ಮತಗಳು  83050
    ಜೆಡಿಎಸ್ ಅಭ್ಯರ್ಥಿ ಇಂದ್ರಜಿತ್ ನಾಯ್ಕ್ ಪಡೆದ ಮತಗಳು 1576
    ಪಕ್ಷೇತರ ಅಭ್ಯರ್ಥಿ ಡಾ.ಜಯಸಿಂಹ ಪಡೆದ ಮತಗಳು 19685
    ಹೊಳಲ್ಕೆರೆ ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 1159

    6. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮತ‌ ಎಣಿಕೆ ಮುಕ್ತಾಯ
    ಕೈ ಅಭ್ಯರ್ಥಿ ಟಿ.ರಘುಮೂರ್ತಿ ಜಯಭೇರಿ
    16450 ಮತಗಳ ಅಂತರದಿಂದ ಕೈ ಅಭ್ಯರ್ಥಿ ಟಿ.ರಘುಮೂರ್ತಿ ಜಯ
    ಕಾಂಗ್ರೆಸ್ ನ ಟಿ.ರಘುಮೂರ್ತಿ ಪಡೆದ ಮತಗಳು 67952
    ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಪಡೆದ ಮತಗಳು 51502
    ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಪಡೆದ ಮತಗಳು 22894
    ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಪಡೆದ ಮತಗಳು 29148
    ಚಳ್ಳಕೆರೆ ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 1625

  • 17:11 PM

    Koppal Result : ಕೊಪ್ಪಳ‌ದಲ್ಲಿ ಹಿಟ್ನಾಳ ಜಯಭೇರಿ 

    ಅಂತಿಮ ಸುತ್ತಿನ ಬಳಿಕ ಮತ ಎಣಿಕೆ ವಿವರ 
    ಕೊಪ್ಪಳ‌ ವಿಧಾನಸಭಾ ಕ್ಷೇತ್ರ
    ಕೆ.ರಾಘವೇಂದ್ರ ಹಿಟ್ನಾಳ: 90,430
    ಕರಡಿ ಮಂಜುಳಾ-54,170
    ಸಿ.ವಿ.ಚಂದ್ರಶೇಖರ-45,369
    ಕಾಂಗ್ರೆಸ್ ಅಭ್ಯರ್ಥಿ ಗೆಲುವು
    ಗೆಲುವಿನ ಅಂತರ : 36260 ಮತಗಳು

  • 17:03 PM

    Bagalakote Updates: ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

    ಬಾಗಲಕೋಟೆಯಲ್ಲಿ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಕಲ್ಲು‌ ತೂರಾಟ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಾಗಲಕೋಟೆಯ ಸೀಮಿಕೇರಿ ಬೈಪಾಸ್ ಬಳಿ ಘಟನೆ ನಡೆದಿದೆ. ಬ್ಲಾಕ್ ಯೂತ್‌ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಕುಂಬಾರ ಅಂಗಡಿಗೆ ಕಲ್ಲು ಎಸೆಯಲಾಗಿದೆ. ರಸ್ತೆ ಬದಿಯಲ್ಲಿ ನಿಂತ ವಾಹನಗಳ ಮೇಲೆ ಕಲ್ಲು ಎತ್ತಿ ಬಿಸಾಕಿದ ಕಿಡಿಗೇಡಿಗಳು. ರಸ್ತೆಬದಿಯಲ್ಲಿ ಚೆಲ್ಲಾಪಿಲ್ಲಿಯಾದ ಬೈಕ್ ಗಳು. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಜಯಭೇರಿ ಹಿನ್ನೆಲೆ ವಿಜಯೋತ್ಸವ ಆಚರಣೆ ವೇಳೆ ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ. 

  • 16:55 PM

    Maluru Result: ಅಭ್ಯರ್ಥಿಗಳ ಸಮ್ಮುಖದಲ್ಲಿ ವಿವಿಪ್ಯಾಟ್ ಎಣಿಕೆ

    ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಗೊಂದಲ ವಿಚಾರ.
    ಅಭ್ಯರ್ಥಿಗಳ ಸಮ್ಮುಖದಲ್ಲಿ ವಿವಿಪ್ಯಾಟ್ ಎಣಿಕೆ.
    ಅಭ್ಯರ್ಥಿಗಳು ಸೂಚಿಸಿದ ಐದು ಮತಗಟ್ಟೆಯ ಎಣಿಕೆ.
    ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಹಿನ್ನೆಲೆ.
    ಎಣಿಕೆ ವೇಳೆ ಗೊಂದಲ ವಾಗಿದೆ ಎಂದು ಆರೋಪಿಸಿದ್ದ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ.
    ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಉಪಸ್ಥಿತಿಯಲ್ಲಿ ಐದು ಬೂತ್ ಗಳ ವಿವಿಪ್ಯಾಟ್ ಎಣಿಕೆ ಮಾಡುತ್ತಿರುವ ಅಧಿಕಾರಿಗಳು.

  • 16:53 PM

    Bommanahalli Result: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಂತಿಮ ಫಲಿತಾಂಶ 

    ಒಟ್ಟು ಮತದಾರರು ಸಂಖ್ಯೆ- 452621
    ಮತ ಚಲಾಯಿಸಿದವರ ಸಂಖ್ಯೆ - 214382
    ಒಟ್ಟು  ಮತ ಎಣಿಕೆಯಾದ ಸುತ್ತುಗಳು- 21ನೇ ಸುತ್ತು ಮುಕ್ತಾಯ
    ಗೆಲುವು - ಸತೀಶ್ ರೆಡ್ಡಿ‌
    ಅಂತರ - 14225
    ಬಿಜೆಪಿ ಅಭ್ಯರ್ಥಿ ಪಡೆದ ಮತಗಳು- 79340
    ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತಗಳು- 65115

  • 16:50 PM

    Tumkuru Result :  ತುಮಕೂರಿನಲ್ಲೂ ಕಾಂಗ್ರೆಸ್ ಮೇಲುಗೈ 

    ತುಮಕೂರು ನಗರ
    ಬಿಜೆಪಿ –ಜ್ಯೋತಿ ಗಣೇಶ್ - ಗೆಲುವು – 59,165 ಪಡೆದ ಮತಗಳು
    ಗೆಲುವಿನ ಅಂತರ – 3,198 -
    ಗೋವಿಂದ ರಾಜು – ಜೆಡಿಎಸ್ - 55,967
    ಇಕ್ಬಾಲ್ ಅಹಮದ್ – ಕಾಂಗ್ರೆಸ್ – 46,900 

    ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ
    ಬಿಜೆಪಿ- ಸುರೇಶ್ ಗೌಡ ಗೆಲುವು - 89,191 ಪಡೆದ ಮತಗಳು
    ಗೆಲುವಿನ ಅಂತರ – 4,594
    ಷಣ್ಮುಖಪ್ಪ- ಕಾಂಗ್ರೆಸ್ – 4,066
    ಡಿ.ಸಿ ಗೌರಿಶಂಕರ್ -  ಜೆಡಿಎಸ್ -8,4597

    ಕುಣಿಗಲ್ ವಿಧಾನಸಭಾ ಕ್ಷೇತ್ರ
    ಕಾಂಗ್ರೆಸ್ - ಡಾ.ರಂಗನಾಥ್ ಗೆಲುವು 
    74,724 - ಪಡೆದ ಮತಗಳು
    ಗೆಲುವಿನ ಅಂತರ – 26,573 
    ನಾಗರಾಜು – ಬಿಜೆಪಿ – 48,151
    ವೀರಭದ್ರಯ್ಯ -ಜೆಡಿಎಸ್ – 46,974

    ಗುಬ್ಬಿ ವಿಧಾನಸಭಾ ಕ್ಷೇತ್ರ
    ಕಾಂಗ್ರೆಸ್ - ಎಸ್.ಆರ್ ಶ್ರೀನಿವಾಸ್  ಗೆಲುವು
    60520- ಪಡೆದ ಮತಗಳು
    ಗೆಲುವಿನ ಅಂತರ – 8,541
    ದಿಲೀಪ್ ಕುಮಾರ್  -ಬಿಜೆಪಿ – 51,979
    ನಾಗರಾಜು - ಜೆಡಿಎಸ್ – 43,046

    ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ
    ಜೆಡಿಎಸ್ - ಸುರೇಶ್ ಬಾಬು ಗೆಲುವು
    70,329- ಪಡೆದ ಮತಗಳು
    ಗೆಲುವಿನ ಅಂತರ – 10,025
    ಜೆ.ಸಿ ಮಾಧುಸ್ವಾಮಿ –ಬಿಜೆಪಿ – 60,304
    ಕಿರಣ್ ಕುಮಾರ್ – ಕಾಂಗ್ರೆಸ್ – 50,629

    ತುರುವೇಕೆರೆ ವಿಧಾನಸಭಾ ಕ್ಷೇತ್ರ
    ಜೆಡಿಎಸ್ - ಎಂ.ಟಿ.ಕೃಷ್ಣಪ್ಪ ಗೆಲುವು.
    68,163- ಪಡೆದ ಮತಗಳು
    ಗೆಲುವಿನ ಅಂತರ – 9,923
    ಮಸಾಲೆ ಜಯರಾಮ್ –ಬಿಜೆಪಿ –  58,240
    ಬೆಮೆಲ್ ಕಾಂತರಾಜು – ಕಾಂಗ್ರೆಸ್ – 30,536

    ಪಾವಗಡ ವಿಧಾನಸಭಾ ಕ್ಷೇತ್ರ
    ಕಾಂಗ್ರೆಸ್- ವೆಂಕಟೇಶ್ ಗೆಲುವು
    83,062- ಪಡೆದ ಮತಗಳು
    ಗೆಲುವಿನ ಅಂತರ – 10,881
    ತಿಮ್ಮರಾಯಪ್ಪ – ಜೆಡಿಎಸ್ -72,181
    ಕೃಷ್ಣ ನಾಯಕ್ – ಬಿಜೆಪಿ – 70,206

    ಮಧುಗಿರಿ ವಿಧಾನಸಭಾ ಕ್ಷೇತ್ರ
    ಕಾಂಗ್ರೆಸ್- ಕೆ.ಎನ್ ರಾಜಣ್ಣ ಗೆಲುವು
    91,166- ಪಡೆದ ಮತಗಳು
    ಗೆಲುವಿನ ಅಂತರ – 35,523
    ವೀರಭದ್ರಯ್ಯ – ಜೆಡಿಎಸ್  - 55,643
    ನಾಗರಾಜು – ಬಿಜೆಪಿ  – 15,612

    ತಿಪಟೂರು ವಿಧಾನಸಭಾ ಕ್ಷೇತ್ರ
    ಕಾಂಗ್ರೆಸ್- ಷಡಕ್ಷರಿ ಗೆಲುವು
    71,999- ಪಡೆದ ಮತಗಳು
    ಗೆಲುವಿನ ಅಂತರ – 17,652
    ಬಿ.ಸಿ ನಾಗೇಶ್ – ಬಿಜೆಪಿ – 54,347
    ಕೆ.ಟಿ ಶಾಂತಕುಮಾರ್ -  ಜೆಡಿಎಸ್ – 26,014

     ಶಿರಾ ವಿಧಾನಸಭಾ ಕ್ಷೇತ್ರ
    ಕಾಂಗ್ರೆಸ್- ಟಿ.ಬಿ ಜಯಚಂದ್ರ ಗೆಲುವು
    86,084- ಪಡೆದ ಮತಗಳು
    ಗೆಲುವಿನ ಅಂತರ – 29,250
    ಆರ್. ಉಗ್ರೇಶ್ – ಜೆಡಿಎಸ್ – 56,834
    ರಾಜೇಶ್ ಗೌಡ – ಬಿಜೆಪಿ –  42,329

    ಕೊರಟಗೆರೆ ವಿಧಾನಸಭಾ ಕ್ಷೇತ್ರ
    ಕಾಂಗ್ರೆಸ್- ಜಿ.ಪರಮೇಶ್ವರ್ ಗೆಲುವು
    79,999- ಪಡೆದ ಮತಗಳು
    ಗೆಲುವಿನ ಅಂತರ – 14,347
    ಸುಧಾಕರ್ ಲಾಲ್ – ಜೆಡಿಎಸ್ – 64,752
    ಅನಿಲ್ ಕುಮಾರ್ – ಬಿಜೆಪಿ –24,091

  • 16:41 PM

    KJ George: ನಾಡಿನ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ಒಲವು ತೋರಿದ್ದಾರೆ

    ನಾಡಿನ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ಒಲವು ತೋರಿದ್ದಾರೆ.‌ ಹೀಗಾಗಿ ನಮ್ಮ ಪಕ್ಷ ಬಹುಮತ ಪಡೆದಿದೆ.‌ ಅಲ್ಲದೇ ನಮ್ಮ ಕ್ಷೇತ್ರದ ಜನ ನನಗೆ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ನಾನು ಕೂಡ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡ್ತೇನೆ ಎಂದು ಕೆಜೆ ಜಾರ್ಜ್‌ ಹೇಳಿದ್ದಾರೆ. 

  • 16:29 PM

    Teradal Result : ಸಿದ್ದು ಸವದಿಗೆ ಭರ್ಜರಿ ಗೆಲುವು

    ತೇರದಾಳ ಕ್ಷೇತ್ರ
    ಬಿಜೆಪಿಯ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿಗೆ ಭರ್ಜರಿ ಗೆಲುವು.
    10,745 ಮತಗಳ ಅಂತರದಿಂದ ಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ.
    ಬಿಜೆಪಿ, ಸಿದ್ದು ಸವದಿ - 77265
    ಕಾಂಗ್ರೆಸ್, ಸಿದ್ದು ಕೊಣ್ಣೂರ್ - 66,520

  • 16:25 PM

    Karnataka Election Result Live: ಒಮ್ಮೆ ಆತ್ಮವಲೋಕನದ ಅವಶ್ಯಕತೆ ಇದೆ 

    ಒಮ್ಮೆ ಆತ್ಮವಲೋಕನೆ ಮಾಡಿಕೊಳ್ಳೋ ಅವಶ್ಯಕತೆ ಇದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಆಡಳಿತ ಕೊಟ್ಟರೂ ಹಿನ್ನೆಡೆ ಆಗಿದೆ. ಯಾರು ಆಡಳಿತ ಮಾಡ್ತಿದ್ರು, ಯಾರು ಪಕ್ಷ ಸಂಘಟನೆ ಮಾಡ್ತಿದ್ರು ಅವ್ರು ಆತ್ಮವಲೋಕನೆ ಮಾಡಿಕೊಳ್ಬೇಕು. ಎಲ್ಲದಕ್ಕೂ ಕಾರಣ ಇದೆ. ಹಿರಿಯರನ್ನ ಬದಿಗೊತ್ತಿರೋದು, ಸಂಘಟನೆಯಲ್ಲಿ ಸೇರಿಸಿಕೊಳ್ಳದೆ ಇರೋದು. ಒಟ್ಟಾಗಿ ಸೇರಿಕೊಂಡು ಎದುರಿಸೋ ಅವಕಾಶ ಮಾಡಿಕೊಡದೆ ಇರೋದೇ ಕಾರಣ ಅನ್ನೋದು ನನ್ನ ಭಾವನೆ. ಪ್ರಧಾನಿ, ವರಿಷ್ಠರು ರಾಜ್ಯಕ್ಕೆ ಬಂದು ಪ್ರಚಾರ ಮಾಡಿದ್ರು. ಅದಕ್ಕೆ ಇಷ್ಟಾದ್ರು ಗೆದ್ದಿದ್ದೇವೆ. ಮುಂದಿನ ಬಾರಿ ತಾವು ಮಾಡಿದ ಕೆಲಸದಿಂದ ಗೆಲ್ಲಬೇಕು ಅಂತಾ ಸಂಬಂಧಪಟ್ಟವರಿಗೆ ಹೇಳ್ತೀನಿ. ಟಿಕೆಟ್ ವಿತರಣೆ, ಸರ್ಕಾರದ ನೇತೃತ್ವ, ಹಿರಿಯರನ್ನ ನೆಗ್ಲೆಕ್ಟ್ ಮಾಡಿರೋದು, ಸಂಘಟನೆಗೆ ಬದ್ಧವಾಗಿರೋರನ್ನೂ ನೆಗ್ಲೆಕ್ಟ್ ಮಾಡಲಾಗಿದೆ. ಇದೆಲ್ಲವೂ ಕಾರಣ ಎಂದು ಅರವಿಂದ್ ಲಿಂಬಾವಳಿ ಹೇಳಿದರು.

  • 16:22 PM

    Karnataka Election Result Live: ಮಹಾಲಕ್ಷ್ಮಿ ಲೇಔಟ್‌ ಜನತೆಗೆ ಧನ್ಯವಾದ ಎಂದ ಗೋಪಾಯ್ಯ 

    ಮಹಾಲಕ್ಷ್ಮಿ ಬಡಾವಣೆಯ ಮತದಾರರು ಮತ್ತೊಮ್ಮೆ ನನಗೆ ವರ ನೀಡಿದ್ದಾರೆ. ಜನ ಕೊಟ್ಟ ಅವಕಾಶವನ್ನ ನಾನು ಸದುಪಯೋಗಪಡಿಸಿಕೊಳ್ಳುತ್ತೇನೆ. ನಾನು ಸೇವೆಯನ್ನ ಮಾಡುತ್ತೇನೆ ಎಂದು ಗೋಪಾಯ್ಯ ತಿಳಿಸಿದ್ದಾರೆ.‌  

  • 16:20 PM

    ಶಿವಾಜಿನಗರ ಚುನಾವಣಾ ಫಲಿತಾಂಶ : ರಿಜ್ವಾನ್ ಅರ್ಷದ್ ಜಯಭೇರಿ 

    ಕಾಂಗ್ರೆಸ್ - 64913 
    ಬಿಜೆಪಿ - 41719 
    ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ - 23194 ಮತಗಳ ಅಂತರದ ಗೆಲುವು

  • 16:19 PM

    RR Nagar Result :  ಶಾಂತಿನಗರ ಎನ್ ಎ ಹ್ಯಾರಿಸ್ ಗೆ ಗೆಲುವು

    ಕಾಂಗ್ರೆಸ್ - 61030 
    ಬಿಜೆಪಿ - 53905 
    ಎನ್ ಎ ಹ್ಯಾರಿಸ್ ಗೆ 7125 ಮತಗಳ ಅಂತರದ ಗೆಲುವು

  • 16:16 PM

    Karnataka Election Result Live: ಜನರ ತೀರ್ಪಿಗೆ ನಾವು ತಲೆ ಬಾಗ್ತೇವೆ - ಅಶ್ವತ್ಥ ನಾರಾಯಣ

    ನಮ್ಮ ಸರ್ಕಾರದ ಆಡಳಿತದಲ್ಲಿ ಒಳ್ಳೆಯ ಕೆಲಸಗಳನ್ನೆ ಮಾಡಿದ್ದೇವೆ. ಆದ್ರೆ ನಮ್ಮ ಪಕ್ಷದ ಸೋಲಿಗೆ ಏನು ಕಾರಣ ಎಂಬುದು ಗೊತ್ತಾಗ್ತಿಲ್ಲ. ಎಲ್ಲರನ್ನ ಒಟ್ಟಿಗೆ ಸೇರಿಸಿ ಸಭೆ ಮಾಡ್ತೇವೆ.‌ ಜನರ ತೀರ್ಪಿಗೆ ನಾವು ತಲೆ ಬಾಗ್ತೇವೆ. ನನ್ನ ಮತ್ತೊಮ್ಮೆ ಗೆಲ್ಲಿಸಿದ ಮಲ್ಲೇಶ್ವರ ಕ್ಷೇತ್ರದ ಜನರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಅಶ್ವತ್ಥ ನಾರಾಯಣ ಹೇಳಿದರು. 

  • 16:10 PM

    RR Nagar Result : ಮುನಿರತ್ನಗೆ ಗೆಲುವು

    ಆರ್ ಆರ್ ನಗರ ಫೈನಲ್
    ಬಿಜೆಪಿ - 125716
    ಕಾಂಗ್ರೆಸ್ - 115152
    ಬಿಜೆಪಿಯ ಮುನಿರತ್ನಗೆ 10564 ಮತಗಳ ಅಂತರದ ಗೆಲುವು

  • 16:09 PM

    Karnataka Election Result Live : ಆರ್‌.ಅಶೋಕ್‌ ಗೆಲುವು

    ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಅಂತಿಮ‌ ಫಲಿತಾಂಶ 
    ಒಟ್ಟು ಮತದಾರರು ಸಂಖ್ಯೆ- 278943
    ಮತ ಚಲಾಯಿಸಿದವರ ಸಂಖ್ಯೆ - 159189
    ಒಟ್ಟೂ ಸುತ್ತುಗಳು - 21ನೇ ಸುತ್ತು ಮುಕ್ತಾಯ.
    ಗೆಲುವು - ಬಿಜೆಪಿ ಆರ್ ಅಶೋಕ್ 
    ಅಂತರ - 54734
    ಬಿಜೆಪಿ -ಆರ್. ಅಶೋಕ್-  98174
    ಕಾಂಗ್ರೆಸ್ - ವಿ. ರಘುನಾಥ್ ನಾಯ್ಡು- 43440

  • 16:05 PM

    Karnataka Election Result Live :ಕರ್ನಾಟಕ ರಿಸಲ್ಟ್‌ ಬಗ್ಗೆ ಮಮತಾ ಬ್ಯಾನರ್ಜಿ ಟ್ವೀಟ್‌ 

    ಬದಲಾವಣೆಯ ಪರವಾಗಿ ತಮ್ಮ ನಿರ್ಣಾಯಕ ಜನಾದೇಶಕ್ಕಾಗಿ ಕರ್ನಾಟಕದ ಜನತೆಗೆ ನನ್ನ  ಕೃತಜ್ಞತೆಗಳು. ವಿವೇಚನಾರಹಿತ ನಿರಂಕುಶ ಮತ್ತು ಬಹುಸಂಖ್ಯಾತ ರಾಜಕೀಯ ನಾಶವಾಯಿತು. ಜನರು ಬಹುತ್ವ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಗೆಲ್ಲಲು ಬಯಸಿದಾಗ, ಪ್ರಾಬಲ್ಯ ಸಾಧಿಸಲು ಯಾವುದೇ ಕೇಂದ್ರ ವಿನ್ಯಾಸವು ಅವರ ಸ್ವಾಭಾವಿಕತೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ.  ನಾಳೆಗೆ ಪಾಠ ಎಂದು ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ. 

     

     

  • 15:59 PM

    Hassan Election Result Live : ನಯನ ಮೋಟಮ್ಮ ಗೆಲುವು

    ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡ ಮಡಿಲು ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ನಯನ ಮೋಟಮ್ಮ ಗೆಲುವು  ಪಡೆದುಕೊಂಡಿದ್ದಾರೆ. ಈ ಭಾಗವು ಮೀಸಲಾತಿ ಕ್ಷೇತ್ರವಾಗಿದೆ. ದಲಿತವಾದಿಯಾಗಿರುವ ಮೊಟ್ಟಮ್ಮನ ಪುತ್ರಿ ಮೊದಲ ಬಾರಿಗೆ ಮೂಡಿಗೆರೆ ಕ್ಷೇತ್ರದಿಂದ  ಕಾಂಗ್ರೆಸ್‌ ನಿಂದ ಸ್ಪರ್ದಿಸಿ  2783 ವೋಟುಗಳಿಂದ ಗೆಲುವು ಸಾಧಿಸಿದ್ದಾರೆ.  
     

  • 15:58 PM

    Hassan Election Result Live : ಹಾಸನ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರದ ಅಂತಿಮ ಫಲಿತಾಂಶದ ವಿವರ 

    1.ಹಾಸನ ವಿಧಾನಸಭಾ ಕ್ಷೇತ್ರ ಫಲಿತಾಂಶ
    ಸ್ವರೂಪ್ ಪ್ರಕಾಶ್ - ಜೆಡಿಎಸ್ - 85176
    ಪ್ರೀತಂಗೌಡ - ಬಿಜೆಪಿ - 77322
    ಗೆಲುವಿನ ಅಂತರ - 7854
    ಕಾಂಗ್ರೆಸ್ - ಬನವಾಸೆ ರಂಗಸ್ವಾಮಿ 4305
    ಆಪ್ - ಅಗಿಲೆ ಯೋಗೇಶ್ 1301

    2.ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ 
    ಜೆಡಿಎಸ್ - ಹೆಚ್.ಡಿ.ರೇವಣ್ಣ - 86401
    ಕಾಂಗ್ರೆಸ್ - ಶ್ರೇಯಸ್ ಪಟೇಲ್ - 83747 
    ಗೆಲುವಿನ ಅಂತರ - 2654
    ಬಿಜೆಪಿ - ದೇವರಾಜೇಗೌಡ - 4666

    3. ಬೇಲೂರು ವಿಧಾನಸಭಾ ಕ್ಷೇತ್ರ 
    ಬಿಜೆಪಿ - ಹೆಚ್.ಕೆ.ಸುರೇಶ್ - 63571
    ಕಾಂಗ್ರೆಸ್ - ಬಿ.ಶಿವರಾಮ್ - 55835
    ಗೆಲುವಿನ ಅಂತರ - 7736
    ಜೆಡಿಎಸ್ - ಕೆ.ಎಸ್.ಲಿಂಗೇಶ್ - 38,893

    4. ಅರಕಲಗೂಡು ವಿಧಾನಸಭಾ ಕ್ಷೇತ್ರ
    ಜೆಡಿಎಸ್ - ಎ.ಮಂಜು - 67499
    ಪಕ್ಷೇತರ - ಕೃಷ್ಣೇಗೌಡ - 48620
    ಗೆಲುವಿನ ಅಂತರ - 18,879
    ಕಾಂಗ್ರೆಸ್ - ಶ್ರೀಧರ್ ಗೌಡ - 33084
    ಬಿಜೆಪಿ - ಯೋಗಾರಮೇಶ್ - 18477

    5. ಸಕಲೇಶಪುರ ವಿಧಾನಸಭಾ ಕ್ಷೇತ್ರ 
    ಬಿಜೆಪಿ - ಸಿಮೆಂಟ್ ಮಂಜು - 58604
    ಜೆಡಿಎಸ್ - ಹೆಚ್.ಕೆ.ಕುಮಾರಸ್ವಾಮಿ - 56548
    ಗೆಲಿವಿನ ಅಂತರ - 2056
    ಕಾಂಗ್ರೆಸ್ - ಮುರುಳಿಮೋಹನ್ - 42811

    6. ಅರಸೀಕೆರೆ ವಿಧಾನಸಭಾ ಕ್ಷೇತ್ರ
    ಕಾಂಗ್ರೆಸ್ - ಕೆ.ಎಂ.ಶಿವಲಿಂಗೌಡ - 97099
    ಜೆಡಿಎಸ್ - ಎನ್.ಆರ್.ಸಂತೋಷ್ - 77006
    ಗೆಲುವಿನ ಅಂತರ - 20093
    ಬಿಜೆಪಿ - ಜಿವಿಟಿ ಬಸವರಾಜ್ - 6456

    7. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ 
    ಜೆಡಿಎಸ್ - ಸಿ.ಎನ್.ಬಾಲಕೃಷ್ಣ - 85668
    ಕಾಂಗ್ರೆಸ್ - ಎಂ.ಎ.ಗೋಪಾಲಸ್ವಾಮಿ - 79023
    ಗೆಲುವಿನ ಅಂತರ - 6645
    ಬಿಜೆಪಿ - ಚಿದಾನಂದ್ - 5648

  • 15:53 PM

    Vijayapura Election Result:  ಬಸವನಗೌಡ ಪಾಟೀಲ್ ಯತ್ನಾಳ್ ಜಯಭೇರಿ 

    ವಿಜಯಪುರ ನಗರ
    ಬಿಜೆಪಿ ಗೆಲವು
    7874  ಅಂತರದ ಗೆಲುವು
    ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್ -‌ 93,316
    ಕಾಂಗ್ರೆಸ್ ನ ಅಬ್ದುಲ್ ಹಮೀದ ಮುಶ್ರೀಫ್ ಗೆ - 85,442

    ನಾಗಠಾಣ
    30814 ಅಂತರದ ಕಾಂಗ್ರೆಸ್ ಗೆಲವು
    ವಿಠ್ಠಲ ಕಟಕಧೋಂಡ 78,985 ಕಾಂಗ್ರೆಸ್ 
    ಸಂಜೀವ ಐಹೊಳೆ 48,171 ಬಿಜೆಪಿ
    ಜೆಡಿಎಸ್ ದೇವಾನಂದ ಚವ್ಹಾಣ ಮೂರನೇ ಸ್ಥಾನಕ್ಕೆ 

    ಬಸವನಬಾಗೇವಾಡಿ
    24,863 ಅಂತರದಿಂದ ಕಾಂಗ್ರೆಸ್ ಗೆಲವು
    ಶಿವಾನಂದ ಪಾಟೀಲ ಕಾಂಗ್ರೆಸ್ 68,126
    ಎಸ್ ಕೆ ಬೆಳ್ಳುಬ್ಬಿ ಬಿಜೆಪಿ 43,263
    ಜೆಡಿಎಸ್ ಅಪ್ಪುಗೌಡಾ ಪಾಟೀಲ ಮೂರನೆ ಸ್ಥಾನ

    ಬಬಲೇಶ್ವರ
    14,943 ಅಂತರದಿಂದ ಕಾಂಗ್ರೆಸ್ ಗೆಲವು
     ಎಂ ಬಿ ಪಾಟೀಲ ಕಾಂಗ್ರೆಸ್ 93,008
    ವಿಜಯಕುಮಾರ ಪಾಟೀಲ 78,065 ಬಿಜೆಪಿ
    ಜೆಡಿಎಸ್ ಬಸವರಾಜ ಹೊನವಾಡ ಮೂರನೇ ಸ್ಥಾನ 

    ದೇವರಹಿಪ್ಪರಗಿ
    20,175 ಗೆಲುವಿನ ಜೆಡಿಎಸ್ ಅಂತರ
    ರಾಜುಗೌಡಾ ಪಾಟೀಲ 65,952 ಜೆಡಿಎಸ್
    ಸೋಮನಗೌಡ ಪಾಟೀಲ 45,777 ಬಿಜೆಪಿ
    ಶರಣಪ್ಪಾ ಸುಣಗಾರ ಕಾಂಗ್ರೆಸ್ ಮೂರನೆ ಸ್ಥಾನ

    ಇಂಡಿ  
    ಕಾಂಗ್ರೆಸ್ ಗೆಲುವು
    10109  ಅಂತರದ ಗೆಲುವು
    ಕಾಂಗ್ರೆಸ್ ನ ಯಶವಂತರಾಯಗೌಡ ಪಾಟೀಲ್  ಗೆ 70766 ಮತಗಳು
    ಜೆಡಿಎಸ್ ನ ಬಿ ಡಿ ಪಾಟೀಲ್ ಗೆ 60658
    ಬಿಜೆಪಿ ಅಭ್ಯರ್ಥಿ ಕಾಸುಗೌಡ ಪಾಟೀಲ್ ಮೂರನೇ ಸ್ಥಾನಕ್ಕೆ ತೃಪ್ತಿ

    ಮುದ್ದೇಬಿಹಾಳ 
    ಕಾಂಗ್ರೆಸ್ ಗೆಲುವು
    7844 ಅಂತರದ ಗೆಲುವು
    ಕಾಂಗ್ರೆಸ್ ನ ಸಿ ಎಸ್ ನಾಡಗೌಡ 78598 
    ಬಿಜೆಪಿಯ ಎ ಎಸ್ ಪಾಟೀಲ್ ನಡಹಳ್ಳಿ 70754  

    ಸಿಂದಗಿ  ಕಾಂಗ್ರೆಸ್ ಗೆಲುವು
    8080  ಅಂತರದ ಗೆಲುವು
    ಕಾಂಗ್ರೆಸ್ ನ  ಅಶೋಕ ಮನಗೂಳಿಗೆ 86771  ಮತಗಳು
    ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರಗೆ 78691
    ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ್ ಸೋಮಜಾಳ ಮೂರನೇ ಸ್ಥಾನ
     

  • 15:45 PM

    Chamarajanagar Election Result: 1 ಮತದಿಂದ ಸೋತ‌ ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯ 

    ಚಾಮರಾಜನಗರ: 1 ಮತದ ಅಂತರದಿಂದ ಸೋತ ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯ ಎಂದು ಕೊಳ್ಳೇಗಾಲದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಹೇಳಿದರು. 1 ಮತದ ಅಂತರದಿಂದ ಸೋತಿದ್ದೆ ಆದರೀಗ 50 ಸಾವಿರಕ್ಕೂ ಅಧಿಕ ಮತಗಳ‌ ಅಂತರದಿಂದ ಗೆದ್ದಿದ್ದೇನೆ, ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯ ಎಂದು ಹೇಳಿದರು. ಸಿದ್ದರಾಮಯ್ಯ ಸರ್ಕಾರದ ಸಾಧನೆ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳು, ನನ್ನ ಮೇಲಿದ್ದ ಜನರ ವಿಶ್ವಾಸ, ಪಕ್ಷದ ಸಂಘಟನೆಯಿಂದ ಈ ಬಾರಿ ಗೆದ್ದಿದ್ದೇನೆ , ನನ್ನ ಗೆಲುವು ಜನರ ಗೆಲುವಾಗಿದೆ , ತಂದೆ ರಾಚಯ್ಯ ಅವರ ಸಮಾಧಿಗೆ ತೆರಳಿ ನಮಿಸಿ ಬಳಿಕ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲಕ್ಕೆ ಭೇಟಿ ಕೊಟ್ಟು ಬೆಂಗಳೂರಿಗೆ ತೆರಳುತ್ತೇನೆ ಎಂದು ತಿಳಿಸಿದರು.

  • 15:41 PM

    Karnataka Election Result: ವಿಜಯನಗರ ಕ್ಷೇತ್ರದ ಅಂತಿಮ ಫಲಿತಾಂಶ 

    ಒಟ್ಟು ಮತದಾರರು ಸಂಖ್ಯೆ- 305835

    ಮತ ಚಲಾಯಿಸಿದವರ ಸಂಖ್ಯೆ - 158170

    ಒಟ್ಟು ಸುತ್ತುಗಳು - 21 ನೇ  ಸುತ್ತು ಮುಕ್ತಾಯ

    ಗೆಲುವು - ಎಂ. ಕೃಷ್ಣಪ್ಪ

    ಅಂತರ -7324

    ಬಿಜೆಪಿ -  ಹೆಚ್. ರವೀಂದ್ರ- 72833

    ಕಾಂಗ್ರೆಸ್ - ಎಂ.ಕೃಷ್ಣಪ್ಪ - 80157

  • 15:40 PM

    Karnataka Election Result: ಬಿಜೆಪಿಗೆ ಶಾಪವಾದ ರಾಷ್ಟ್ರೀಯ ನಾಯಕರ ಪ್ರಚಾರ

    ಬಿಜೆಪಿಗೆ ಶಾಪವಾದ ರಾಷ್ಟ್ರೀಯ ನಾಯಕರ ಪ್ರಚಾರ

    ಬಿಜೆಪಿ ಹಿರಿಯ ನಾಯಕರನ್ನ ಕಡೆಗಣಿಸಿ ಚುನಾವಣೆ ನಡೆಸಿದ್ದ ರಾಷ್ಟ್ರೀಯ ನಾಯಕರು

    ಅಭ್ಯರ್ಥಿ ಆಯ್ಕೆ ಇಂದ ಹಿಡಿದು ಪ್ರಚಾರದ ತಂತ್ರಗಾರಿಕೆವರೆಗೂ ಹೈಕಮಾಂಡ್ ಇಂಟರ್ ಫಿಯರ್

    ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರನ್ನ ನೆಗ್ಲಕ್ಟ್ ಮಾಡಿದ್ದು 

    ಗುಜರಾತ್ ಮಾಡೆಲ್ ಅನುಸರಿಸಿ ಹೊಸ ಮುಖಗಳಿಗೆ ಮಣೆ ಹಾಕಿದ್ದು 

    ವಯಸ್ಸಿನ ಕಾರಣ ಹೇಳಿ ಹಿರಿಯರಿಗೆ ಟಿಕೆಟ್ ತಪ್ಪಿಸಿದ್ದು 

    ಈಶ್ವರಪ್ಪ, ಜಗದೀಶ್ ಶೆಟ್ಟರ್, ಸವದಿ ಅಂತವರಿಗೆ ಟಿಕೆಟ್ ತಪ್ಪಿಸಿ ಸಮುದಾಯದ ವಿರೋಧ ಕಟ್ಟಿಕೊಂಡಿದ್ದು

  • 15:37 PM

    Bidar Election Result: ಕಣ್ಣೀರಿಟ್ಟ ಪ್ರಭು ಚೌಹಾಣ್‌

    ಕಾಂಗ್ರೆಸ್ ಗೆ ಫಂಡಿಂಗ್ ಮಾಡಿ ಸೋಲಿಸಲು ಪ್ರಯತ್ನ ಮಾಡಿದ ಕೇಂದ್ರ ಮಂತ್ರಿ. ಪ್ರಭು ಚೌಹಾಣ್‌ ಸೋಲಿಸಲು ಕೇಂದ್ರ ಮಂತ್ರಿ ಪ್ರಯತ್ನ ಮಾಡಿದ್ದಾರೆ ಎಂದು ಗಂಭೀರ ಆರೋಪ. ಕೇಂದ್ರ ಮಂತ್ರಿ ಭಗವಂತ ಖೂಬಾ ಬಿಜೆಪಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಪ್ರಭುಚೌಹಾಣ್‌ ಸೋಲಿಸಲು ಏನು ಬೇಕು ಎಲ್ಲವನ್ನು ಕೇಂದ್ರ ಮಂತ್ರಿ ಮಾಡಿದ್ದಾರೆ. ಗಳ ಗಳನೆ  ಕಣ್ಣೀರು ಹಾಕಿದ ನೂತನ ಶಾಸಕ ಪ್ರಭು ಚೌಹಾಣ್‌. ಪ್ರಭು ಚೌಹಾಣ್‌ಗೆ ಆದ  ಅನ್ಯಾಯ ಯಾರಿಗೂ ಆಗಬಾರದು. ಪ್ರಭು ಚೌಹಾಣ್‌ ಸೋಲಿಸಲು ಕೇಂದ್ರ ಮಂತ್ರಿ ಬಿ ಟೀಮ್ ಮಾಡಿ ಫಂಡಿಂಗ್ ಮಾಡಿದ್ರು. ಚೌಹಾಣ್‌ ಸೋಲಿಸಲು ಕೇಂದ್ರ ಮಂತ್ರಿ  ಒಳಗೊಳಗೆ ರಣತಂತ್ರ ಮಾಡಿದ್ದು ನೋವು ತಂದಿದೆ. ಕೇಂದ್ರ ಮಂತ್ರಿ ಭಗವಂತ ಖೂಬಾ ಅವರಿಂದ ಅನ್ಯಾಯ ವಾಗಿದೆ. ಭಾರತೀಯ ಜನತಾ ಪಕ್ಷ ತಾಯಿ ಇದ್ದಂಗೆ ಆ ತಾಯಿಗೆ ಕೇಂದ್ರ ಮಂತ್ರಿಯಿಂದ ಅನ್ಯಾಯ ಮಾಡಿದ್ದಾರೆ. ಕೇಂದ್ರ ಮಂತ್ರಿ ವಿರುದ್ದ ಆರೋಪಿಸಿ ಕಣ್ಣೀರು ಹಾಕಿದ ಪ್ರಭು ಚೌಹಾಣ್‌. 
     

  • 15:31 PM

    Karnataka Election Result: ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ

    ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ. ವಿಜಯೋತ್ಸವ ಆಚರಣೆ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದ. ಜನರನ್ನ ಚದುರಿಸಿದ ಪೋಲಿಸರು. ಇತ್ತ ಬಿಜೆಪಿ ಕಾರ್ಯಕರ್ತರಿಂದ ಅಭ್ಯರ್ಥಿ ಗೆಲುವಿನ ವಿಜಯೋತ್ಸವ‌‌. ಅತ್ತ ಕಾಂಗ್ರೆಸ್ ಕಾರ್ಯಕರ್ತರಿಂದ ರಾಜ್ಯದಲ್ಲಿ ಬಹುಮತ ಹಿನ್ನೆಲೆ ವಿಜಯೋತ್ಸವ. ಎರಡು ಗುಂಪಿನ ಕಾರ್ಯಕರ್ತರು ಬೈಪಾಸ್ ರಸ್ತೆಯಲ್ಲಿ ಬರುತ್ತಿದ್ದಂತೆ ಇಬ್ಬರ ಮಧ್ಯೆ ವಾಗ್ವಾದ. ಮಾತಿಗೆ ಮಾತು ಬೆಳೆದು ಗಲಾಟೆ. ಸ್ಥಳಕ್ಕೆ ಭೇಟಿ ನೀಡಿ ಜನರನ್ನ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ ಜಮಖಂಡಿ ಪೋಲಿಸರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಘಟನೆ. 

  • 15:26 PM

    Karnataka Election Result: ಗೋವಿಂದರಾಜನಗರ 

    ಗೋವಿಂದರಾಜನಗರ ಮತ ಎಣಿಕೆ ಮುಕ್ತಾಯ 
    ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಗೆಲುವು
    ಕಾಂಗ್ರೆಸ್ ನ ಪ್ರಿಯಾಕೃಷ್ಣ-82134
    ಬಿಜೆಪಿಯ ಉಮೇಶ್ ಶೆಟ್ಟಿ -69618
    ಜೆಡಿಎಸ್ ನ ಆರ್.ಪ್ರಕಾಶ್-4583
    ಕಾಂಗ್ರೆಸ್‌ 12516 ಮತಗಳ ಅಂತರದ ಗೆಲುವು

  • 15:25 PM

    Karnataka Election Result: ಗೆಲುವಿನ ನಂತರ ಸವದಿ - ಜೊಲ್ಲೆ ಮುಖಾಮುಖಿ 

    ಗೆಲುವಿನ ನಂತರ ಸವದಿ ಜೊಲ್ಲೆ ಭೇಟಿ. ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ. ನಿಪ್ಪಾಣಿ ಕ್ಷೇತ್ರದ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಮುಖಾಮುಖಿ. ಆರ್ ಪಿ ಡಿ ಕಾಲೇಜಿನಲ್ಲಿ ಭೇಟಿ ಮಾತುಕತೆ. ನಮ್ಮ ಕಡೆ ನೋಡಿ ಅಣ್ಣ ಎಂದು ಸವದಿನ ಕರೆದ ಜೊಲ್ಲೆ.
    ಸವದಿ ಗೆಲುವಿನ ಹುರುಪಿನಲ್ಲಿ ಶಶಿಕಲಾ ಜೊಲ್ಲೆ ಜೊತೆ ಕೆಲವು ಕಾಲ ಮಾತುಕತೆ. 

  • 15:22 PM

    Karnataka Election Result: ಬಿಟಿಎಂ ಲೇಔಟ್‌ನಲ್ಲಿ ರಾಮಲಿಂಗಾರೆಡ್ಡಿ ಗೆಲುವು 

    ಬಿಟಿಎಂ ಲೇಔಟ್ ಮತ ಎಣಿಕೆ ಮುಕ್ತಾಯ
    ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ 68557
    ಬಿಜೆಪಿ ಶ್ರೀಧರರೆಡ್ಡಿ 59335
    ಜೆಡಿಎಸ್ ನ ವೆಂಕಟೇಶ್ 1841
    ಕಾಂಗ್ರೆಸ್ ಗೆ 9222 ಮತಗಳ ಅಂತರದ ಗೆಲುವು

  • 15:07 PM

    Karnataka Election Result: ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ ಮತ್ತೆ ಪುನರಾಗಮಿಸುತ್ತೇವೆ: ಸಿಎಂ ಬೊಮ್ಮಾಯಿ‌

    ಇಂದು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾವು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇವೆ. ಆದರೂ ನಮಗೆ ಬಹುಮತ ದೊರೆತಿಲ್ಲ. ನಮ್ಮ ಕಾರ್ಯಕರ್ತರು, ಎಲ್ಲ ನಾಯಕರು, ಪ್ರಧಾನಮಂತ್ರಿಗಳನ್ನು ಸೇರಿದಂತೆ ಶ್ರಮವಹಿಸಿ ಕೆಲಸ ಮಾಡಿದ್ದೆವು. ಕಾಂಗ್ರೆಸ್ ಗೆ ಬಹುಮತ ದೊರೆತಿದೆ.‌ ನಮ್ಮ ತಪ್ಪುಗಳನ್ನು ವಿಶ್ಲೇಷಣೆ ಮಾಡಿ, ಅದರ ಬಗ್ಗೆ ಕುಳಿತು ಸಮಾಲೋಚನೆ ಮಾಡುತ್ತೇವೆ. ಒಂದು ರಾಷ್ಟ್ರೀಯ ಪಕ್ಷವಾಗಿ ನಮ್ಮ ಕುಂದು ಕೊರತೆಯನ್ನು ಸರಿದೂಗಿಸಿಕೊಂಡು ಸಂಸತ್ ಚುನಾವಣೆಗೆ ಮರು ಸಿದ್ಧತೆ ಮಾಡಿಕೊಳ್ಳುತ್ತೇವೆ. ಪಕ್ಷವನ್ನು ಪುನಃ ಸಂಘಟಿಸಿ ನಾವು ಮತ್ತೆ ಪುನರಗಾಮಿಸುತ್ತೇವೆ ಎಂದರು.

  • 15:02 PM

    Karnataka Election Result: ಮತದಾರರಿಗೆ ಧನ್ಯವಾದ ಸಲ್ಲಿಸಿದ ಶಶಿಕಲಾ ಜೊಲ್ಲೆ 

    ಹ್ಯಾಟ್ರಿಕ್ ಗೆಲುವಿನ ನಂತರ ಶಶಿಕಲಾ ಜೊಲ್ಲೆ ಜೀ ಕನ್ನಡ ನ್ಯೂಸ್ ಜೊತೆ ಮಾತು. ಮತದಾರರಿಗೆ ಧನ್ಯವಾದ ಸಲ್ಲಿಸಿದ ಶಶಿಕಲಾ ಜೊಲ್ಲೆ. ನಾನು ಮೂರನೇ ಬಾರಿ ಗೆಲುವಿಗೆ ಕಾರಣವಾ ಮತದಾರರಿಗೆ ಮತ್ತೊಮ್ಮೆ ಧನ್ಯವಾದ. ಬಿಜೆಪಿ ಈ ರೀತಿ ಸೋಲಿಗೆ ಕಾರಣ ಏನು ಎಂಬುದು ವಿಮರ್ಶೆ ಮಾಡುತ್ತೇವೆ.

  • 15:01 PM

    Karnataka Election Result: ರೀ ಕೌಂಟ್ ಗೆ ಕೇಳಿದ ಬಿಜೆಪಿ 

    ರೀ ಕೌಂಟ್ ಗೆ ಕೇಳಿದ ಬಿಜೆಪಿ. 160 ಮತಗಳ ಅಂತರದಲ್ಲಿ ಸೌಮ್ಯ ರೆಡ್ಡಿ ಜಯ. ಹೀಗಾಗಿ ರೀ ಕೌಂಟ್ ಗೆ ಅವಕಾಶ ಕೋರಿರುವ ಬಿಜೆಪಿ ಪಾಳಯ. ಸಿ.ಕೆ ರಾಮಮೂರ್ತಿ ಬಿಜೆಪಿ ಅಭ್ಯರ್ಥಿಯಿಂದ ರೀ ಕೌಂಟ್. 

  • 15:00 PM

    Karnataka Election Result: ಕೆಆರ್‌ ಪುರಂ ಬಿಜೆಪಿ ಬೈರತಿ ಬಸವರಾಜ್ ಗೆಲುವಿತ್ತ

    ಕೆಆರ್‌ ಪುರಂ ಬಿಜೆಪಿ ಬೈರತಿ ಬಸವರಾಜ್ ಗೆಲುವಿತ್ತ. ಮಲ್ಲೇಶ್ವರಂ ಬಿಜೆಪಿ ಡಾ.ಅಶ್ವತ್ಥ ನಾರಾಯಣ ಗೆಲುವು. ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಕೆ.ಗೋಪಾಲಯ್ಯ ಗೆಲುವು. ಸಿ.ವಿ ರಾಮನ್ ನಗರ ಬಿಜೆಪಿ ಎಸ್ ರಘು ಗೆಲುವು. ಪುಲಕೇಶಿ ನಗರ ಕಾಂಗ್ರೆಸ್ ಎಸಿ ಶ್ರೀನಿವಾಸ್ ಗೆಲುವು. ಹೆಬ್ಬಾಳ  ಕಾಂಗ್ರೆಸ್ ಬೈರತಿ ಸುರೇಶ್ ಗೆಲುವು. ಸರ್ವಜ್ಞ ನಗರ ಕಾಂಗ್ರೆಸ್ ಕೆ.ಜೆ ಜಾರ್ಜ್ ಗೆಲುವು.

  • 14:58 PM

    Karnataka Election Result: ನಾನು ದಲಿತ ಸಿಎಂ ರೇಸ್ ನಲ್ಲಿ ಇಲ್ಲ

    ದೇವನಹಳ್ಳಿಯಲ್ಲಿ ಜಯಭೇರಿ ಬಾರಿಸಿದ ಕೆ.ಹೆಚ್ ಮುನಿಯಪ್ಪ, ನಾನು ದಲಿತ ಸಿಎಂ ರೇಸ್ ನಲ್ಲಿ ಇಲ್ಲ. ಶಾಸಕರು ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿದ್ದೇವೆ. 10 ವರ್ಷಗಳಿಂದ ದೇವನಹಳ್ಳಿಯಲ್ಲಿ ಕಾಂಗ್ರೆಸ್ ಗೆದ್ದಿರಲಿಲ್ಲ. ಈ ಬಾರಿ ಜನರು ಆಶೀರ್ವಾದ ಮಾಡಿದ್ದಾರೆ. ಅವರಿಗೆ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ. ಜನರಿಗೆ ನಾವು ಗ್ಯಾರಂಟಿ ಕಾರ್ಡ್‌ಗಳ ಮಾತನ್ನ ಕೊಟ್ಟಿದ್ವಿ. ಅದನ್ನ ನುಡಿದಂತೆ ನಡೆಯುತ್ತೇವೆ ಮೊದಲ ಹಂತದಲ್ಲೆ ಮಾಡ್ತೇವೆ ಎಂದು ಹೇಳಿದರು. 

  • 14:10 PM

    Belagavi Election Result: ಕಲಬುರಗಿ 

    ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನೀಜ್ ಫಾತೀಮಾ ಗೆಲುವು 

    ಚಿಂಚೋಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾದವ ಗೆಲುವು 

  • 14:09 PM

    Belagavi Election Result: ಬಿಜೆಪಿ ಶಶಿಕಲಾ ಜೊಲ್ಲೆ ಮುನ್ನೆಡೆ ಗೆಲುವು

    ನಿಪ್ಪಾಣಿ - ಬಿಜೆಪಿ ಶಶಿಕಲಾ ಜೊಲ್ಲೆ ಮುನ್ನಡೆ ಗೆಲುವು ಘೋಷಣೆ ಬಾಕಿ

    ಚಿಕ್ಕೋಡಿ - ಕಾಂಗ್ರೆಸ್ ಗಣೇಶ ಹುಕ್ಕೇರಿ ಗೆಲುವು

    ರಾಯಬಾಗ - ಬಿಜೆಪಿ ದುರ್ಯೋಧನ ಐಹೊಳೆ ಗೆಲುವು

    ಕುಡಚಿ - ಕಾಂಗ್ರೆಸ್ ಮಹೇಂದ್ರ ತಮ್ಮಣ್ಣವರ ಗೆಲುವು 

    ಅಥಣಿ - ಕಾಂಗ್ರೆಸ್ ಲಕ್ಷ್ಮಣ ಸವದಿ ಗೆಲುವು

    ಕಾಗವಾಡ - ಕಾಂಗ್ರೆಸ್ ರಾಜು ಕಾಗೆ ಗೆಲುವು

    ಹುಕ್ಕೇರಿ - ಬಿಜೆಪಿ ನಿಖಿಲ ಕತ್ತಿ ಗೆಲುವು

    ಯಮಕನಮರಡಿ - ಕಾಂಗ್ರೆಸ್ ಸತೀಶ ಜಾರಕಿಹೊಳಿ ಗೆಲುವು

  • 14:05 PM

    Karnataka Election Result: ಬೆಂಗಳೂರು ಗ್ರಾಮಾಂತರ

    ದೇವನಹಳ್ಳಿ- ಕಾಂಗ್ರೆಸ್ ಗೆಲುವು- ಕೆ.ಹೆಚ್ ಮುನಿಯಪ್ಪ

    ಹೊಸಕೋಟೆ- ಕಾಂಗ್ರೆಸ್ ಗೆಲುವು- ಶರತ್ ಬಚ್ಚೇಗೌಡ

    ನೆಲಮಂಗಲ- ಕಾಂಗ್ರೆಸ್ ಗೆಲುವು- ಶ್ರೀನಿವಾಸ್ ಎನ್

    ದೊಡ್ಡಬಳ್ಳಾಪುರ- ಬಿಜೆಪಿ ಗೆಲುವು- ಧೀರಜ್ ಮುನಿರಾಜು

  • 14:04 PM

    Karnataka Election Result: ಬಾಗಲಕೋಟೆ 

    ಬಾಗಲಕೋಟೆ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಲ್ಲಿ ಗೆಲುವು ಕಂಡ ಅಭ್ಯರ್ಥಿಗಳ ವಿವರ

    ಬಾಗಲಕೋಟೆ ಮತಕ್ಷೇತ್ರ 

    ಕಾಂಗ್ರೆಸ್ ಗೆಲುವು- ಎಚ್.ವೈ.ಮೇಟಿ. (ಪಡೆದ ಮತ...78,494).
    ಬಿಜೆಪಿ ಸೋಲು - ವೀರಣ್ಣ ಚರಂತಿಮಠ. (ಪಡೆದ ಮತ 72,157)
    ಅಂತರದ ಗೆಲುವು...6,337

    ಬಾದಾಮಿ ಮತಕ್ಷೇತ್ರ

    ಕಾಂಗ್ರೆಸ್ ಗೆಲುವು - ಭೀಮಸೇನ ಚಿಮ್ಮನಕಟ್ಟಿ (ಪಡೆದ ಮತ 65,203)
    ಬಿಜೆಪಿ ಸೋಲು - ಅಭ್ಯರ್ಥಿ ಶಾಂತಗೌಡ ಪಾಟೀಲ. (ಪಡೆದ ಮತ 55,196)
    ಅಂತರದ ಗೆಲುವು...10,007

    ಬೀಳಗಿ ಮತಕ್ಷೇತ್ರ

    ಕಾಂಗ್ರೆಸ್ ಗೆಲುವು - ಜೆ.ಟಿ.ಪಾಟೀಲ (ಪಡೆದ ಮತ 94,832)
    ಬಿಜೆಪಿ ಸೋಲು - ಮುರುಗೇಶ ನಿರಾಣಿ. (ಪಡೆದ ಮತ 83,513)
    ಅಂತರದ ಗೆಲುವು...11,319

    ಹುನಗುಂದ ಮತಕ್ಷೇತ್ರ

    ಕಾಂಗ್ರೆಸ್ ಗೆಲುವು - ವಿಜಯಾನಂದ ಕಾಶಪ್ಪನವರ (ಪಡೆದ ಮತ.. 77,383)
    ಬಿಜೆಪಿ ಸೋಲು - ದೊಡ್ಡನಗೌಡ ಪಾಟೀಲ. (ಪಡೆದ ಮತ. 47,683)
    ಅಂತರದ ಗೆಲುವು...29,700

    ಮುಧೋಳ ಮತಕ್ಷೇತ್ರ 

    ಕಾಂಗ್ರೆಸ್ ಗೆಲುವು - ಆರ್.ಬಿ.ತಿಮ್ಮಾಪೂರ. (ಪಡೆದ ಮತ 76,817)  
    ಬಿಜೆಪಿ ಸೋಲು - ಗೋವಿಂದ ಕಾರಜೋಳ‌. (ಪಡೆದ ಮತ. 59,401)
    ಅಂತರದ ಗೆಲುವು...17,416.

    ತೇರದಾಳ ಮತಕ್ಷೇತ್ರ

    ಬಿಜೆಪಿ ಗೆಲುವು - ಸಿದ್ದು ಸವದಿ (ಪಡೆದ ಮತ 69,098)
    ಕಾಂಗ್ರೆಸ್ ಸೋಲು - ಸಿದ್ದು ಕೊಣ್ಣೂರ (ಪಡೆದ ಮತ 58,007)
    ಅಂತರದ ಗೆಲುವು...11,091

    ಜಮಖಂಡಿ ಮತಕ್ಷೇತ್ರ 

    ಬಿಜೆಪಿ ಗೆಲುವು - ಜಗದೀಶ ಗುಡಗುಂಟಿ (ಪಡೆದ ಮತ. 81,063) 
    ಕಾಂಗ್ರೆಸ್ ಸೋಲು - ಆನಂದ ನ್ಯಾಮಗೌಡ (ಪಡೆದ ಮತ..76,466)
    ಅಂತರದ ಗೆಲುವು...4,590

Trending News