OMG: ಅಧಿವೇಶನಕ್ಕೂ ಮೊದಲು ಗೋಮೂತ್ರ ಸಿಂಪಡಿಸಿ ವಿಧಾನಸೌಧ ಶುದ್ಧೀಕರಿಸಿದ ಕಾಂಗ್ರೆಸ್ ಕಾರ್ಯಕರ್ತರು!

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವು ಇನ್ನೂ ಸುದ್ದಿಯಲ್ಲಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿಯನ್ನು ಭ್ರಷ್ಟವೆಂದು ಬಣ್ಣಿಸಿರುವ ಕಾಂಗ್ರೆಸ್ ಸೋಮವಾರ ವಿಧಾನಸೌಧವನ್ನು ಗೋಮೂತ್ರದಿಂದ ಶುದ್ಧೀಕರಿಸಿದೆ.

Written by - Puttaraj K Alur | Last Updated : May 22, 2023, 04:16 PM IST
  • ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ
  • ಬಿಜೆಪಿಯನ್ನು ಭ್ರಷ್ಟವೆಂದು ಬಣ್ಣಿಸಿದ ಕಾಂಗ್ರೆಸ್ ವಿಧಾನಸೌಧವನ್ನು ಗೋಮೂತ್ರದಿಂದ ಶುದ್ಧೀಕರಿಸಿದೆ
  • ಅಧಿವೇಶನಕ್ಕೂ ಮೊದಲು ಗೋಮೂತ್ರ ಸಿಂಪಡಿಸಿ ವಿಧಾನಸೌಧ ಶುದ್ಧೀಕರಿಸಿದ ಕಾಂಗ್ರೆಸ್ ಕಾರ್ಯಕರ್ತರು!
OMG: ಅಧಿವೇಶನಕ್ಕೂ ಮೊದಲು ಗೋಮೂತ್ರ ಸಿಂಪಡಿಸಿ ವಿಧಾನಸೌಧ ಶುದ್ಧೀಕರಿಸಿದ ಕಾಂಗ್ರೆಸ್ ಕಾರ್ಯಕರ್ತರು! title=
ಗೋಮೂತ್ರದಿಂದ ವಿಧಾನಸೌಧ ಶುದ್ಧೀಕರಣ!

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿಯನ್ನು ಭ್ರಷ್ಟವೆಂದು ಬಣ್ಣಿಸಿದ ಕಾಂಗ್ರೆಸ್ ಸೋಮವಾರ ವಿಧಾನಸೌಧವನ್ನು ಗೋಮೂತ್ರದಿಂದ ಶುದ್ಧೀಕರಿಸಿದೆ. ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು “ಭ್ರಷ್ಟ ಬಿಜೆಪಿ ಆಡಳಿತವನ್ನು ಕೊನೆಗೊಳಿಸಿದ ನಂತರ ವಿಧಾನಸಭಾ ಆವರಣವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿ ಶುದ್ಧೀಕರಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜನವರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದಾಗ, ‘ವಿಧಾನಸೌಧವನ್ನು ಗೋಮೂತ್ರದಿಂದ "ಶುದ್ಧೀಕರಿಸುವ" ಸಮಯ ಬಂದಿದೆ ಎಂದು ಹೇಳಿದ್ದರು. ವಿಧಾನಸೌಧ ಸ್ವಚ್ಛಗೊಳಿಸಲು ಒಂದಿಷ್ಟು ವಿವರ ನೀಡುತ್ತೇವೆಂದು ಹೇಳಿದ್ದ ಡಿಕೆಶಿ, ‘ಶುದ್ಧೀಕರಣಕ್ಕಾಗಿ ನನ್ನ ಬಳಿ ಸ್ವಲ್ಪ ಗೋಮೂತ್ರ ಕೂಡ ಇದೆ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರದಿಂದ ವಿಧಾನಸಭೆ ಕಲುಷಿತಗೊಂಡಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: Darshan Puttannaiah: ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರದ ಮೇಲುಕೋಟೆಯಲ್ಲಿ ಹೆಚ್ಚಾಯ್ತು ದ್ವೇಷದ ರಾಜಕೀಯ.!

ಚುನಾವಣೆಗೆ ಕೆಲವು ದಿನಗಳ ಮೊದಲು ಅಂದರೆ ಮೇ 5ರಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿಯ ದ್ವಿಭಾಷಾ ‘ಭ್ರಷ್ಟಾಚಾರದ ರೇಟ್ ಕಾರ್ಡ್’ ಬಿಡುಗಡೆ ಮಾಡಿತ್ತು. ಅಂದಿನ ಆಡಳಿತಾರೂಢ ಬಿಜೆಪಿ ಸರ್ಕಾರದ ವಿವಿಧ 'ವಂಚನೆ'ಗಳನ್ನು ಎತ್ತಿ ತೋರಿಸಿತ್ತು. 'ಭ್ರಷ್ಟಾಚಾರ ದರ ಕಾರ್ಡ್'ನ್ನು ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ 1,50,000 ಕೋಟಿ ರೂ.ಗಳನ್ನು ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ., ಸಚಿವ ಸ್ಥಾನಕ್ಕೆ 500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್ 'ಭ್ರಷ್ಟಾಚಾರದ ಕಾರ್ಡ್'ನಲ್ಲಿ ಹೇಳಿತ್ತು. ಅಷ್ಟೇ ಅಲ್ಲ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವನ್ನು ಕಾಂಗ್ರೆಸ್ 'ಟ್ರಬಲ್ ಇಂಜಿನ್ ಸರ್ಕಾರ' ಎಂದು ಬಣ್ಣಿಸಿತ್ತು. ಇದರೊಂದಿಗೆ ದರ ಚೀಟಿಯಲ್ಲಿ ಕಮಿಷನ್ ಎಂದು ನಮೂದಿಸಲಾಗಿತ್ತು. ಅದರಲ್ಲಿ ಸರ್ಕಾರ ಪ್ರತ್ಯೇಕ ಒಪ್ಪಂದಕ್ಕೆ ಆಗ್ರಹಿಸುತ್ತದೆ ಎಂದು ಬರೆಯಲಾಗಿತ್ತು. ಇದು ಅನುದಾನಕ್ಕೆ ಶೇ.30ರಷ್ಟು ಕಮಿಷನ್‌, ರಸ್ತೆ ಒಪ್ಪಂದಗಳಿಗೆ ಶೇ.40ರಷ್ಟು ಮತ್ತು ಕೋವಿಡ್-19 ಸರಬರಾಜುಗಳಿಗೆ ಶೇ.75ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿತ್ತು.

ಇದನ್ನೂ ಓದಿ: Basavaraja Bommai: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವತಿ ಸಾವು: ಬಸವರಾಜ ಬೊಮ್ಮಾಯಿ 

ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದು ಸಿದ್ದರಾಮಯ್ಯನವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಲ್ಲದೆ, ಕನಿಷ್ಠ 8 ಕಾಂಗ್ರೆಸ್ ನಾಯಕರು ಶನಿವಾರ ಕರ್ನಾಟಕದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪಕ್ಷವು ಇನ್ನೂ 24 ಸಚಿವರನ್ನು ಆಯ್ಕೆ ಮಾಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News