The Final Election Campaign: ಲಿಂಗಾಯತ ವೇದಿಕೆ ಅನ್ನೊದು ಎಲ್ಲಿಯೂ ಇಲ್ಲ, ಅದು ಒಂದು ಕಾಲ್ಪನಿಕ ಸಂಘಟನೆ- ಬಸವರಾಜ ಬೊಮ್ಮಾಯಿ

ಇಂದು ಅಂತಿಮ ಹಂತದ ಚುನಾವಣೆ ಪ್ರಚಾರ  ನಡೆಯಲಿದೆ. ಈ ಬಗ್ಗೆಹುಬ್ಬಳ್ಳಿಯಲ್ಲಿ  ಮಾತಾನಾಡಿರುವ ಸಿಎಮ್ ಬಸವರಾಜ ಬೊಮ್ಮಾಯಿ,ರಾಜ್ಯಾದ್ಯಂತ ಅಂತಿಮ ಹಂತದ ಬಹಿರಂಗ ಪ್ರಚಾರ ನಡೆಯುತ್ತಿದೆ‌.ಎಲ್ಲ ನಾಯಕರು ಬಹಿರಂಗ ಸಭೆ - ರೋಡ್ ಷೋ ಮಾಡುತ್ತಿದ್ದಾರೆ.

Written by - Zee Kannada News Desk | Last Updated : May 8, 2023, 01:10 PM IST
  • ಇಂದು ಅಂತಿಮ ಹಂತದ ಚುನಾವಣೆ ಪ್ರಚಾರ
  • ಈ ಹಿನ್ನಲೆ ಎಲ್ಲಾ ನಾಯಕರು ಬಹಿರಂಗ ಸಭೆ - ರೋಡ್ ಷೋ
The Final Election Campaign: ಲಿಂಗಾಯತ ವೇದಿಕೆ ಅನ್ನೊದು ಎಲ್ಲಿಯೂ ಇಲ್ಲ, ಅದು ಒಂದು ಕಾಲ್ಪನಿಕ ಸಂಘಟನೆ- ಬಸವರಾಜ ಬೊಮ್ಮಾಯಿ title=

ಹುಬ್ಬಳ್ಳಿ: ಇಂದು ಅಂತಿಮ ಹಂತದ ಚುನಾವಣೆ ಪ್ರಚಾರ  ನಡೆಯಲಿದೆ. ಈ ಬಗ್ಗೆಹುಬ್ಬಳ್ಳಿಯಲ್ಲಿ  ಮಾತಾನಾಡಿರುವ ಸಿಎಮ್ ಬಸವರಾಜ ಬೊಮ್ಮಾಯಿ,ರಾಜ್ಯಾದ್ಯಂತ ಅಂತಿಮ ಹಂತದ ಬಹಿರಂಗ ಪ್ರಚಾರ ನಡೆಯುತ್ತಿದೆ‌.ಎಲ್ಲ ನಾಯಕರು ಬಹಿರಂಗ ಸಭೆ - ರೋಡ್ ಷೋ ಮಾಡುತ್ತಿದ್ದಾರೆ.

ಅದರ ಜೊತೆಯಲ್ಲಿ  224 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ದಾಖಲೆ‌ ಕೊಡಿ ಎಂದು ಚುನಾವಣಾ ಆಯೋಗಕ್ಕೆ‌ ಕೇಳಿದ್ದೆ, ಅವರಿಗೆ ಕೊಡಲು ಆಗಿಲ್ಲ.ನಮ್ಮ ವಿರುದ್ಧ ಯಾವುದೇ ಕೇಸ್ ಇಲ್ಲ, ಸಾಕ್ಷಿನೂ ಇಲ್ಲ.ಇಷ್ಟೆಲ್ಲಾ ಮಾತನಾಡುವ ಕಾಂಗ್ರೇಸ್ ನವರ ಮೇಲೆ ಭ್ರಷ್ಟಾಚಾರ ಕೇಸ್ ಗಳಿವೆ ತಮ್ಮ ಮೇಲೆ‌ ಕೇಸ್ ಇದ್ದು ಕೋರ್ಟ್ ಗೆ ಅಲೆದಾಡುತ್ತಿದ್ದಾರೆ.

ಇದನ್ನೂ ಓದಿ: Election Campaign: ಸಿಲಿಕಾನ್‌ ಸಿಟಿ ಜನ ಸಾಮಾನ್ಯರ ಜೊತೆ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಹೇಗಿದ್ರು ನೋಡಿ! ಇಲ್ಲಿವೆ ಪೋಟೊಸ್..

ಯಾವ ನೈತಿಕತೆಯಿಂದ ನಮ್ಮನ್ನು ಪ್ರಶ್ನಿಸುತ್ತಾರೆ.ವೀರಶೈವ ಸಮಾಜ   ದೊಡ್ಡದಿದ್ದು ಯಾವುದೇ ಸಂಸ್ಥೆಯ ಅಡಿಯಲ್ಲಿ ಇಲ್ಲ ಎಂದಿದ್ದಾರೆ. ವೀರಶೈವ ಮಹಾಸಭಾ ಅಧ್ಯಕ್ಷರಿಗೆ ನಾವು ಗೌರವ ಕೊಡುತ್ತೇವೆಚುನಾವಣೆ ಸಂದರ್ಭದಲ್ಲಿ ಯಾವುದೇ ಒಂದು ಪಕ್ಷಕ್ಕೆ ಸಂಸ್ಥೆ ಹೆಸರು ಬಳಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಲಿಂಗಾಯತ ವೇದಿಕೆ ಅನ್ನೊದು ಎಲ್ಲಿಯೂ ಇಲ್ಲ, ಅದು ಒಂದು ಕಾಲ್ಪನಿಕ ಸಂಘಟನೆ ಯಾಗಿದೆ. 

ನಾಲ್ಕು ಜನ ಸೇರಿ ಏನೋ ಹೇಳಿದ್ರೆ ಅದು ಲಿಂಗಾಯತರ ಧ್ವನಿ ಆಗುತ್ತಾ?
ಲಿಂಗಾಯತ ಸಮಾಜ ಅನ್ನೊದು ಸಮುದ್ರ ಇದ್ದಂತೆ,ಲಿಂಗಾಯತ ವೇದಿಕೆ ಚುನಾವಣೆ ಸಂದರ್ಭಗಳಲ್ಲಿ ಹುಟ್ಟಿಕೊಂಡ ಸಂಘಟನೆಯಾಗಿದೆ. 
ಐಟಿಯವರ ಎಲ್ಲ ಜಿಲ್ಲೆಯಲ್ಲಿ ಇದಾರೆ, ಎಲ್ಲಿ ತಪ್ಪು‌ನಡೆಯುತ್ತೋ ಅವರಿಗೆ ಮಾಹಿತಿ ಇರುತ್ತೆ.

ಎಂ‌ಬಿ ಪಾಟೀಲ್ ಹೆಬ್ಬಾಳ್ಕರ್ ಮೊದಲೇ ಹೇಳಿ ಬಿಡೋದು ರೈಡ್ ಅಗುತ್ತೆ ಅಂತ ಇದು ಕಾಂಗ್ರೆಸ್ ನವರ ತಂತ್ರಗಾರಿಕೆಮೊದಲ ತಪ್ಪು ಮಾಡೋದನ್ನ ಕಾಂಗ್ರೆಸ್ ಬಿಡಲಿ ಎಂದು ಕಾಂಗ್ರೆಸ್‌ ವಿರುದ್ದ ಕಿಡಿಕಾರಿದರು. ನಮ್ಮ ರಾಷ್ಟ್ರೀಯ ನಾಯಕರ ಎಲ್ಲ  ಚುನಾವಣೆಯಲ್ಲಿ ರಾಜ್ಯಕ್ಕೆ‌ ಬಂದಿದ್ದಾರೆ. ಇದು ಮೊದಲಲ್ಲ ರಾಷ್ಟ್ರೀಯ ನಾಯಕರದ್ದು ಹಾಗೂ ಕರ್ನಾಟಕದ ಜನರದ್ದು ಭಾವನಾತ್ಮಕ ಸಂಬಂಧವಾಗಿದೆ. ರಾಷ್ಟೀಯ ನಾಯಕರು ಇಲ್ಲಿಗೆ ಬಂದಿರುವುದು ಇದೊಂದು ದೊಡ್ಡ ಮಟ್ಟದಲ್ಲಿ ಬೂಸ್ಟರ್ ಡೋಸ್ ಸಿಗಲಿದೆ‌ ಎಂದರು. 
ಬೊಮ್ಮಾಯಿ ಹೇಳಿಕೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News