ನಾವೇಕೆ ಕಡ್ಡಾಯವಾಗಿ ಮತದಾನ ಮಾಡಬೇಕು?

Written by - Girish Linganna | Edited by - Manjunath N | Last Updated : Apr 27, 2023, 10:01 AM IST
  • ದೇಶದಲ್ಲಿ ಸಾಕಷ್ಟು ಜನರು ನನ್ನೊಬ್ಬನ ಮತದಿಂದ ಏನಾಗಲಿದೆ ಎಂದು ಆಲೋಚಿಸುತ್ತಾರೆ.
  • ಆ ಕಾರಣದಿಂದ ತಮ್ಮನ್ನು ತಾವು ಮತದಾರರ ಪಟ್ಟಿಯಲ್ಲೂ ದಾಖಲಿಸಿಕೊಂಡಿರುವುದಿಲ್ಲ.
  • ಆದರೆ ನಾವು ಸಾಮಾನ್ಯವಾಗಿ ಕೇವಲ ಒಂದೇ ಒಂದು ಮತದ ಕೊರತೆಯಿಂದ ಒಳ್ಳೆಯ ಸರ್ಕಾರದ ಬದಲು ಕೆಟ್ಟ ಸರ್ಕಾರ ಬಂದುಬಿಡಬಹುದು,
ನಾವೇಕೆ ಕಡ್ಡಾಯವಾಗಿ ಮತದಾನ ಮಾಡಬೇಕು? title=
ಸಾಂದರ್ಭಿಕ ಚಿತ್ರ

ಮತದಾರರ ಜವಾಬ್ದಾರಿಯಾದ ಮತದಾನ ಪ್ರಜಾಪ್ರಭುತ್ವದ ಭದ್ರ ಅಡಿಪಾಯವಾಗಿದೆ. ಆದರೆ ಭಾರತ ಸರ್ಕಾರ ಮತದಾನವನ್ನು ಕಡ್ಡಾಯಗೊಳಿಸಿಲ್ಲದಿರುವುದರಿಂದ, ಅದು ಪ್ರತಿಯೊಬ್ಬ ಭಾರತೀಯ ನಾಗರಿಕನ ನೈತಿಕ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಭಾರತದಲ್ಲಿ ಮತದಾನ ಯಾಕೆ ಅಷ್ಟೊಂದು ಅಮೂಲ್ಯ?

ಬದಲಾವಣೆಯ ಮೂಲ

ಪ್ರತಿಭಟನೆಗಳನ್ನು ನಡೆಸುವುದು ಸಾರ್ವಜನಿಕರಿಗೆ ಸರ್ಕಾರದ ಕುರಿತಾದ ಯಾವುದೇ ಅಸಮಾಧಾನ ಅಥವಾ ಸರ್ಕಾರದ ನೀತಿಗಳ ಕುರಿತ ವಿರೋಧವನ್ನು ಪ್ರದರ್ಶಿಸುವ ಆಯ್ಕೆಯಾಗಿದ್ದರೂ, ಸಾರ್ವಜನಿಕರ ಅಭಿಪ್ರಾಯವನ್ನು ದೃಢಪಡಿಸುವ ಸ್ಪಷ್ಟ ಆಯ್ಕೆ ಎಂದರೆ ಅದು ಮತದಾನ. ಪ್ರಜೆಗಳ ಒಟ್ಟು ಧ್ವನಿ ಅಥವಾ ಮತ ಬದಲಾವಣೆಯ ನೈಜ ಕೂಗಾಗಿರುತ್ತದೆ. ಈಗಾಗಲೇ ಹಲವು ಸಂದರ್ಭಗಳಲ್ಲಿ ಭಾರತೀಯರು ಅಸಮರ್ಥ ಸರ್ಕಾರಕ್ಕೆ ಹೊರನಡೆಯುವ ಹಾದಿ ತೋರಿ, ದೇಶದಲ್ಲಿ ಅಗತ್ಯವಿದ್ದ ಬದಲಾವಣೆಗಳನ್ನು ತಂದ ನಿದರ್ಶನಗಳಿವೆ.

ಪ್ರತಿಯೊಂದು ಮತವೂ ಅಮೂಲ್ಯ!

ದೇಶದಲ್ಲಿ ಸಾಕಷ್ಟು ಜನರು ನನ್ನೊಬ್ಬನ ಮತದಿಂದ ಏನಾಗಲಿದೆ ಎಂದು ಆಲೋಚಿಸುತ್ತಾರೆ. ಆ ಕಾರಣದಿಂದ ತಮ್ಮನ್ನು ತಾವು ಮತದಾರರ ಪಟ್ಟಿಯಲ್ಲೂ ದಾಖಲಿಸಿಕೊಂಡಿರುವುದಿಲ್ಲ. ಆದರೆ ನಾವು ಸಾಮಾನ್ಯವಾಗಿ ಕೇವಲ ಒಂದೇ ಒಂದು ಮತದ ಕೊರತೆಯಿಂದ ಒಳ್ಳೆಯ ಸರ್ಕಾರದ ಬದಲು ಕೆಟ್ಟ ಸರ್ಕಾರ ಬಂದುಬಿಡಬಹುದು, ಸಮರ್ಥ ನಾಯಕನ ಬದಲು ಅಸಮರ್ಥ ವ್ಯಕ್ತಿ ಗೆದ್ದುಬಿಡಬಹುದು ಎನ್ನುವುದನ್ನು ಮರೆತೇ ಬಿಡುತ್ತೇವೆ. ಆದ್ದರಿಂದ ಪದೇ ಪದೇ ಪ್ರತಿಯೊಬ್ಬ ನಾಗರಿಕರೂ ಮರೆಯದೇ ತಮ್ಮ ಮತವನ್ನು ಚಲಾಯಿಸಬೇಕೆಂದು ಮನವಿಗಳನ್ನು ಮಾಡಲಾಗುತ್ತದೆ.

ಕರ್ನಾಟಕ ಚುನಾವಣೆ: ಐದು ಪ್ರಮುಖ ವಿಚಾರಗಳು

ಆಡಳಿತ ವಿರೋಧಿ ಅಲೆ

ಕಳೆದ ಇಪ್ಪತ್ತು ವರ್ಷಗಳಲ್ಲಿ ಯಾವ ಪಕ್ಷವೂ ಸತತ ಎರಡನೇ ಬಾರಿ ಗೆದ್ದಿರದ ಕರ್ನಾಟಕದಲ್ಲಿ ಸಹಜವಾಗಿಯೇ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಬಿಜೆಪಿ ವಿವಿಧ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ. ಇನ್ನು ವಿರೋಧ ಪಕ್ಷ ಕಾಂಗ್ರೆಸ್ ಬಿಜೆಪಿಯ ಮೇಲಿರುವ ಭ್ರಷ್ಟಾಚಾರದ ಆರೋಪಗಳು ಈಗಿರುವ ಆಡಳಿತ ವಿರೋಧಿ ಅಲೆಯೊಡನೆ ಸೇರಿ ಬಿಜೆಪಿ ಸೋಲಿಗೆ ಕಾರಣವಾಗಲಿದೆ ಎಂದು ನಂಬಿಕೊಂಡಿದೆ.

ಮೀಸಲಾತಿ ಬದಲಾವಣೆ

ಬಿಜೆಪಿ ಸರ್ಕಾರ ಎಸ್‌ಸಿ ಹಾಗೂ ಎಸ್‌ಟಿ ಪಂಗಡಗಳಿಗೆ 2 ಹಾಗೂ 4 ಶೇಕಡಾ ಮೀಸಲಾತಿಯನ್ನು ಹೆಚ್ಚಿಸಿದೆ. ಅದರೊಡನೆ ಪ್ರಮುಖ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೂ ತಲಾ 2 ಶೇಕಡಾ ಮೀಸಲಾತಿ ಹೆಚ್ಚಿಸಿದೆ. ಆದರೆ ಕಾಂಗ್ರೆಸ್ ಪಕ್ಷ ಈ ಬದಲಾವಣೆಗಳು ಸಾಕಷ್ಟು ತಡವಾಗಿ ಬಂದಿರುವುದರಿಂದ ಮತದಾರರನ್ನು ಸೆಳೆಯಲು ಸಾಧ್ಯವಿಲ್ಲ ಎಂದಿದೆ.

ಸಾಮಾಜಿಕ ಇಂಜಿನಿಯರಿಂಗ್

ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಪಕ್ಷದ ಅತ್ಯುನ್ನತ ಸ್ಥಾನಗಳಲ್ಲಿರುವುದರಿಂದ ಕಾಂಗ್ರೆಸ್ ಮೂರು ಪ್ರಮುಖ ಸಮುದಾಯಗಳಾದ ಪರಿಶಿಷ್ಟ ಜಾತಿ, ಕುರುಬ ಹಾಗೂ ಒಕ್ಕಲಿಗ ಮತಗಳನ್ನು ಸೆಳೆಯುವ ಆಶಾ ಭಾವನೆ ಹೊಂದಿದೆ. ಅದರೊಡನೆ ರಾಜ್ಯದ 11%-12% ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯವೂ ತನ್ನೊಡನೆ ಇದೆ ಎಂದು ಕಾಂಗ್ರೆಸ್ ನಂಬಿಕೊಂಡಿದೆ.

ಬಿಜೆಪಿ ತನ್ನ ಲಿಂಗಾಯತ ಬೆಂಬಲವನ್ನು ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿದ್ದು, ಅದರೊಡನೆ ಈ ಮೊದಲು ಜೆಡಿಎಸ್ ಹಾಗೂ ಕಾಂಗ್ರೆಸ್ ಜೊತೆ ನಿಂತಿದ್ದ ಒಕ್ಕಲಿಗ ಮತಗಳನ್ನೂ ಸೆಳೆಯಲು ಪ್ರಯತ್ನ ನಡೆಸುತ್ತಿದೆ. ಅದರೊಡನೆ ಕರಾವಳಿ ಕರ್ನಾಟಕದಾಚೆಗಿನ ಹಿಂದಿ ಭಾಷಿಕ ಪ್ರಾಂತ್ಯಗಳಲ್ಲೂ ವಿಸ್ತರಿಸಲು ಪ್ರಯತ್ನ ನಡೆಸುತ್ತಿದೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಜೆಡಿಎಸ್ ಸಹ ಒಕ್ಕಲಿಗರು ತನ್ನ ಹಿಂದೆ ಬಲವಾಗಿ ನಿಂತಿದ್ದಾರೆ ಎಂದು ನಂಬಿಕೊಂಡಿದ್ದು, ತಾವು ಮತ್ತೆ ಸರ್ಕಾರ ರಚಿಸುವ ನಿಟ್ಟಿನಲ್ಲಿ ಕಿಂಗ್ ಮೇಕರ್ ಆಗುವ ಭರವಸೆ ಹೊಂದಿದೆ.

ಕಾಂಗ್ರೆಸ್ ಗ್ಯಾರಂಟಿ

ಹಿಮಾಚಲ ಪ್ರದೇಶದ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ರೈತರಿಗೆ ಮಾಸಾಶನ, ಪದವೀಧರ ನಿರುದ್ಯೋಗಿಗಳಿಗೆ ಭತ್ಯೆ, ಮಹಿಳೆಯರಿಗೆ ಮಾಸಾಶನ, ಉಚಿತ ವಿದ್ಯುತ್ ಮತ್ತು ಅಕ್ಕಿ ಒದಗಿಸುವುದಾಗಿ ಭರವಸೆ ನೀಡಿದೆ. ಬಿಜೆಪಿ ಈ ಭರವಸೆಗಳನ್ನು ಹಣಕಾಸಿನ ಅಜಾಗರೂಕತೆಯ ಭರವಸೆಗಳು ಎಂದು ಆರೋಪಿಸಿದೆ.

ಅಭಿವೃದ್ಧಿ ಕಾರ್ಯಗಳು

ಕಳೆದ ಮೂರು ತಿಂಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸತತವಾಗಿ ಉದ್ಘಾಟನೆಗಳನ್ನು ನಡೆಸುತ್ತಾ ಬಂದಿದ್ದಾರೆ. ಪ್ರಧಾನಿ ಜನವರಿ ತಿಂಗಳ ಬಳಿಕ ಕರ್ನಾಟಕಕ್ಕೆ ಕನಿಷ್ಠ ಎಂಟು ಬಾರಿ ಆಗಮಿಸಿದ್ದು, 50 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. 8,500 ಕೋಟಿ ಮೊತ್ತದ ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಸೇರಿದಂತೆ ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ನೂತನ ಯೋಜನೆಗಳನ್ನು ಉದ್ಘಾಟಿಸಿ, ಬೇರೆ ಬೇರೆ ಜಿಲ್ಲೆಗಳ ಜನರಿಗೆ ಅನುಕೂಲ ಕಲ್ಪಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News