ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಕರ್ನಾಟಕ ಬಜೆಟ್ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. #KiviMeleHoova ಹ್ಯಾಶ್ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಇದು ಯಾರಿಗೂ ಉಪಯೋಗವಿಲ್ಲದ ಬಜೆಟ್ ಎಂದು ಹೇಳಿದೆ.
‘ರೈತರ ಸಾಲ ಮನ್ನಾ ಮಾಡುತ್ತೇವೆಂದು ರೈತರ ಕಿವಿ ಮೇಲೆ ಹೂವಿಟ್ಟ ಸರ್ಕಾರ ಒಂದೇ ಒಂದು ರೈತಪರ ಯೋಜನೆ ಜಾರಿಗೊಳಿಸಲಿಲ್ಲ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಈ ಸ್ಥಾನಕ್ಕೆ ಏರಿದ್ದು ಡಬಲ್ ಇಂಜಿನ್ ಸರ್ಕಾರಗಳ ಕೊಡುಗೆಯಿಂದಲೇ. ಬೆಂಬಲ ಬೆಲೆ ಇಲ್ಲ, ಸಾಲ ಮನ್ನವೂ ಇಲ್ಲ, ರೈತರೆಡೆಗೆ ಆಸಕ್ತಿಯೂ ಇಲ್ಲ’ವೆಂದು ಟೀಕಿಸಿದೆ.
ಹಿಂದಿನ ಬಜೆಟ್ನ ಪ್ರಗತಿ 50% ಕೂಡ ದಾಟಿಲ್ಲ.
ಇಂದಿನ ಬಜೆಟ್ ಟೀಕಾಫ್ ಆಗುವುದೇ ಇಲ್ಲ.ಚುನಾವಣೆಗಾಗಿ ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನದಲ್ಲಿದ್ದಾರೆ ಅಷ್ಟೇ.
ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ, ಹಣವಿಲ್ಲ ಎನ್ನುವವರ ಬಜೆಟ್ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ.#KiviMeleHoova
— Karnataka Congress (@INCKarnataka) February 17, 2023
ಇದನ್ನೂ ಓದಿ: ಬೆಂಗಳೂರು : ರಾಜ್ಯ ಸರ್ಕಾರ ಇಂದು ಬಜೆಟ್ ಮಂಡನೆ, 9 ಹೊಸ ರೈಲು ಯೋಜನೆ ಅನುಷ್ಠಾನ
◆50% ರಷ್ಟೂ ಸಹ ಹಿಂದಿನ ಬಜೆಟ್ನ ಘೋಷಣೆಗಳು ಪ್ರಗತಿಯಾಗಿಲ್ಲ
◆90%ರಷ್ಟು ಬಿಜೆಪಿಯ ಪ್ರಣಾಳಿಕೆಯ ಭರವಸೆಗಳು ಈಡೇರಿಲ್ಲ
◆40% ಕಮಿಷನ್ ಲೂಟಿಗೆ ಯಾವುದೇ ಅಡೆತಡೆ ಇಲ್ಲ
ಹೀಗಿರುವಾಗ @BSBommai ಅವರು ಓದುತ್ತಿರುವ ಬಜೆಟ್ನಲ್ಲಿ ಬದ್ಧತೆ ಇಲ್ಲ.
ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನವಷ್ಟೇ.#KiviMeleHoova— Karnataka Congress (@INCKarnataka) February 17, 2023
‘ಲ್ಯಾಪ್ಟಾಪ್ ಹಂಚಿಕೆಯಿಂದ ಹಿಡಿದು ವಿದ್ಯಾರ್ಥಿವೇತನದವರೆಗೂ ವಿದ್ಯಾರ್ಥಿಗಳಿಗೆ ಬಿಜೆಪಿ ಸರ್ಕಾರ ಎಲ್ಲಾ ತರದಲ್ಲೂ ದ್ರೋಹವೆಸಗಿದೆ. ಈಗಾಗಲೇ SC-ST ವಿದ್ಯಾರ್ಥಿವೇತನದ 4500 ಸಾವಿರ ಕೋಟಿ ರೂ. ಬಾಕಿ ಇದೆ. ಅದನ್ನೇ ಕೊಡದವರು ಬಜೆಟ್ ಘೋಷಣೆಗಳನ್ನು ಈಡೇರಿಸುವರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಶೇ50ರಷ್ಟೂ ಸಹ ಹಿಂದಿನ ಬಜೆಟ್ನ ಘೋಷಣೆಗಳು ಪ್ರಗತಿಯಾಗಿಲ್ಲ. ಶೇ.90ರಷ್ಟು ಬಿಜೆಪಿಯ ಪ್ರಣಾಳಿಕೆಯ ಭರವಸೆಗಳು ಈಡೇರಿಲ್ಲ ಮತ್ತು ಶೇ.40ರಷ್ಟು ಕಮಿಷನ್ ಲೂಟಿಗೆ ಯಾವುದೇ ಅಡೆತಡೆ ಇಲ್ಲ. ಹೀಗಿರುವಾಗ ಸಿಎಂ ಬೊಮ್ಮಾಯಿಯವರು ಓದುತ್ತಿರುವ ಬಜೆಟ್ನಲ್ಲಿ ಬದ್ಧತೆ ಇಲ್ಲ. ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನವಷ್ಟೇ’ ಎಂದು ಕಾಂಗ್ರೆಸ್ ಕುಟುಕಿದೆ.
ಲ್ಯಾಪ್ಟಾಪ್ ಹಂಚಿಕೆಯಿಂದ ಹಿಡಿದು ವಿದ್ಯಾರ್ಥಿವೇತನದವರೆಗೂ ವಿದ್ಯಾರ್ಥಿಗಳಿಗೆ ಬಿಜೆಪಿ ಸರ್ಕಾರ ಎಲ್ಲಾ ತರದಲ್ಲೂ ದ್ರೋಹವೆಸಗಿದೆ.
ಈಗಾಗಲೇ SC,ST ವಿದ್ಯಾರ್ಥಿವೇತನದ 4500 ಸಾವಿರ ಕೋಟಿ ಬಾಕಿ ಇದೆ.
ಅದನ್ನೇ ಕೊಡದವರು ಬಜೆಟ್ ಘೋಷಣೆಗಳನ್ನು ಈಡೇರಿಸುವರೇ?#KiviMeleHoova pic.twitter.com/jloDgKd3EE— Karnataka Congress (@INCKarnataka) February 17, 2023
ಇದನ್ನೂ ಓದಿ: ಬೊಮ್ಮಾಯಿ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?
ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ರೈತರ ಕಿವಿ ಮೇಲೆ ಹೂವಿಟ್ಟ ಸರ್ಕಾರ ಒಂದೇ ಒಂದು ರೈತಪರ ಯೋಜನೆ ಜಾರಿಗೊಳಿಸಲಿಲ್ಲ.
ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.
ಈ ಸ್ಥಾನಕ್ಕೆ ಏರಿದ್ದು ಡಬಲ್ ಇಂಜಿನ್ ಸರ್ಕಾರಗಳ ಕೊಡುಗೆಯಿಂದಲೇ.ಬೆಂಬಲ ಬೆಲೆ ಇಲ್ಲ, ಸಾಲ ಮನ್ನವೂ ಇಲ್ಲ, ರೈತರೆಡೆಗೆ ಆಸಕ್ತಿಯೂ ಇಲ್ಲ.#KiviMeleHoova pic.twitter.com/1wsVT6JyLJ
— Karnataka Congress (@INCKarnataka) February 17, 2023
‘ಹಿಂದಿನ ಬಜೆಟ್ನ ಪ್ರಗತಿ ಶೇ.50ರಷ್ಟು ಕೂಡ ದಾಟಿಲ್ಲ. ಇಂದಿನ ಬಜೆಟ್ ಟೇಕಾಫ್ ಆಗುವುದೇ ಇಲ್ಲ. ಚುನಾವಣೆಗಾಗಿ ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನದಲ್ಲಿದ್ದಾರೆ ಅಷ್ಟೇ. ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ, ಹಣವಿಲ್ಲ ಎನ್ನುವವರ ಬಜೆಟ್ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ’ವೆಂದು ಕಾಂಗ್ರೆಸ್ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.