ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದರು. ದಾಖಲೆಯ 14ನೇ ಬಾರಿ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯನವರು, ಗ್ಯಾರಂಟಿ ಯೋಜನೆಗಳ ಜೊತೆಗೆ ಹತ್ತು-ಹಲವಾರು ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ಇದನ್ನೂ ಓದಿ: ಪಕ್ಷ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಿದೆ-ಎದೆ ಎತ್ತಿ ಉತ್ತರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯ ಕಾಂಗ್ರೆಸ್ ಸರ್ಕಾರದ 2023-24ರ ಗ್ಯಾರಂಟಿ ಬಜೆಟ್
• ಸಿಎಂ ಸಿದ್ದರಾಮಯ್ಯನವರು ಶುಕ್ರವಾರ (ಜುಲೈ 7) ಮಂಡಿಸಿದ ಬಜೆಟ್‍ನ ಒಟ್ಟು ಗಾತ್ರ 3 ಲಕ್ಷದ 27 ಸಾವಿರ ಕೋಟಿ
• ಸಾಲ (Public Debt) 85,818 ಸಾವಿರ ಕೋಟಿ
• ಸಾಲ ಮತ್ತು ಮುಂಗಡಗಳು (Loans and Advances) 227.50 ಕೋಟಿ
• ರಾಜಸ್ವ ವೆಚ್ಚ (Revenue Expenditure) 2,50,932.50 ಕೋಟಿ
• ರಾಜಸ್ವ ಕೊರತೆ (Revenue Deficit) 12,522.69 ಕೋಟಿ
• ವಿತ್ತೀಯ ಕೊರತೆ (Fiscal Deficit) 66,646.22 ಕೋಟಿ
• ರಾಜ್ಯ ತೆರಿಗೆ ( State Tax Revenue) 1,75,652.60 ಕೋಟಿ
• ತೆರಿಗೆ ರಹಿತ ರಾಜಸ್ವ (Non- Tax Revenue) 12,500 ಕೋಟಿ
• ಕೇಂದ್ರ ತೆರಿಗೆ ಪಾಲು (Centeral Taxes) 37,252.21 ಕೋಟಿ
• ಸಹಾಯಾನುದಾನ (Grants in Aid) 13,005 ಕೋಟಿ
• ಬಡ್ಡಿ ಸಂದಾಯ (Interest Payment) 34,027.08 ಕೋಟಿ
• ವಾಣಿಜ್ಯ ತೆರಿಗೆ (Commercial Tax)- 15771.97 ಕೋಟಿ (31-03-2022)
• ಅಬಕಾರಿ (Excise)- 613.83 ಕೋಟಿ
• ಮೋಟಾರು ವಾಹನ (Motor Vehicles Tax) - 122.70 ಕೋಟಿ
• ಮುದ್ರಾಂಕ ಮತ್ತು ನೋಂದಣಿ Stamps & Registration - 170.49 ಕೋಟಿ
• ಒಟ್ಟು - 16678.99 ಕೋಟಿ
• ಹಿಂದಿನ ಸರ್ಕಾರ ಕಾಮಗಾರಿ ಬಾಕಿ ಮೊತ್ತ - 2,55, 136 ಕೋಟಿ
• ರಾಜ್ಯಕ್ಕೆ ಬರುತ್ತಿರುವ ತೆರಿಗೆ ಹಣ ಕೇವಲ - 10,858 ಕೋಟಿ
• ಕಳೆದ 3 ವರ್ಷಗಳಲ್ಲಿ 26,146 ಕೋಟಿ ತೆರಿಗೆ ನಷ್ಟ
• ತೆರಿಗೆ ಮೇಲಿನ ಸೆಸ್ ಮತ್ತು ಸರ್‍ಚಾರ್ಜ್ ಹೆಚ್ಚಳದಿಂದ 7,780 ಕೋಟಿ ನಷ್ಟ
• ಕಾಮಗಾರಿಗಳಲ್ಲಿ ಕೇಂದ್ರ ಪಾಲು ಕಡಿಮೆ ಮಾಡಲಾಗಿದ್ದು, ರಾಜ್ಯಗಳ ಮೇಲೆ ಹೊರೆ ಹೆಚ್ಚಾಗುತ್ತಿದೆ.
• ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತೆಗಳಿಗೆ 443 ಕೋಟಿ, 8,636 ಕೋಟಿ ಮಾತ್ರ.
• ಬದ್ಧ ವೆಚ್ಚ ಕಳೆದ 5 ವರ್ಷಗಳಲ್ಲಿ ಶೇ.80 ರಷ್ಟು ಹೆಚ್ಚಳ.
• 5 ಗ್ಯಾರಂಟಿ ಯೋಜನೆ 52 ಸಾವಿರ ಕೋಟಿ
• ಗೃಹಲಕ್ಷ್ಮೀ ಯೋಜನೆಗೆ 30 ಸಾವಿರ ಕೋಟಿ
• ಗೃಹಜ್ಯೋತಿ ಯೋಜನೆಗೆ 13,910 ಕೋಟಿ
• ಬೆಂಗಳೂರಿಗೆ 45 ಸಾವಿರ ಕೋಟಿ, ವೈಟ್ ಟಾಪಿಂಗ್ ಯೋಜನೆಗೆ 800 ಕೋಟಿ, ನಮ್ಮ ಮೆಟ್ರೋಗೆ 45 ಸಾವಿರ ಕೋಟಿ, ಇಂದಿರಾ ಕ್ಯಾಂಟೀನ್‍ಗೆ 100 ಕೋಟಿ
• ಸಮಾಜ ಕಲ್ಯಾಣ ಇಲಾಖೆಗೆ 11,173 ಕೋಟಿ
• ಆಹಾರ ಇಲಾಖೆಗೆ 10,460 ಕೋಟಿ
ರೈತರಿಗೆ ಕೊಡುಗೆ
• ಕೃಷಿ ಭಾಗ್ಯ ಯೋಜನೆಗೆ ನರೇಗಾ 100 ಕೋಟಿ
• ಹಸು, ಎಮ್ಮೆ ಸತ್ತರೆ 10 ಸಾವಿರ, ಕುರಿ- ಮೇಕೆ ಸತ್ತರೆ 5 ಸಾವಿರ
• ರೈತ ಉತ್ಪನ್ನಗಳ ಬ್ರಾಡಿಂಗ್ ವ್ಯವಸ್ಥೆಗೆ 10 ಕೋಟಿ
• ರಾಮನಗರ, ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ
• ನಂದಿನಿಗೆ ಬ್ರಾಂಡ್ ಮೌಲ್ಯ ಹೆಚ್ಚಳಕ್ಕೆ 10 ಕೋಟಿ
• ರೈತ ಉತ್ಪಾದಕಾ ಸಂಸ್ಥೆಗಳಿಗೆ 5 ಕೋಟಿ
• ಕೃಷಿ ಯಂತ್ರದಾರೆ ಯೋಜನೆಗೆ ಹೈಟೆಕ್ ಸ್ಪರ್ಶ, 100 ಹಬ್ ಸ್ಥಾಪಿಸಲು 100 ಕೋಟಿ ವೆಚ್ಚ.
• ತೋಟಗಾರಿಕೆ ಉತ್ಪನ್ನಗಳಿಗೆ 8 ಶೀಥಲಿಕರಣ ಘಟಕಗಳು.
• ರೈತರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಕೃಷಿ ಸಾಲ
ನೀರಾವರಿ
ಸುಮಾರು 899 ಕೆರೆ ತುಂಬಿಸುವ ಯೋಜನೆಗೆ 779 ಕೋಟಿ ವೆಚ್ಚ
ಬಿಯರ್ ಮೇಲೆ ಅಬಕಾರಿ ಸುಂಕ ಶೇ.10ರಷ್ಟು ಹೆಚ್ಚಳ. ಒಟ್ಟು ಅಬಕಾರಿ ಸುಂಕ ಶೇ.20 ರಷ್ಟು ಹೆಚ್ಚಳ.
3 ಲಕ್ಷಕ್ಕೆ ಸಾಲ ಮಿತಿ ಹೆಚ್ಚಳ
ರಿಯಾಯಿತಿ ಡೀಸೆಲ್ ಹೆಚ್ಚಳ
200 ಕೋಟಿ ವೆಚ್ಚದಲ್ಲಿ ಎಲ್ಲಾ ಶಾಲಾ- ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ.
1 - 10ನೇ ತರಗತಿವರೆಗೆ ಎಲ್ಲಾ ಮಕ್ಕಳಿಗೆ ಮೊಟ್ಟೆ ವಿತರಣೆ
ಇದನ್ನೂ ಓದಿ: Karnataka Budget 2023-24: ಸಿಎಂ ಸಿದ್ದರಾಮಯ್ಯನವರ ದಾಖಲೆಯ 14 ನೇ ಬಜೆಟ್ ಮಂಡನೆ ವೇಳೆ ನೀಡಿದ ಭರವಸೆಗಳೇನು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.