ಟೀಚರ್ ನೇಮಕಾತಿ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಶಾಕ್...!

Last Updated : Nov 25, 2022, 07:12 PM IST
  • ಆದಾಯ ಪ್ರಮಾಣ ಪತ್ರದ ಸಲ್ಲಿಸುವ ಬಗ್ಗೆ ನಿಖರವಾದ ಮಾಹಿತಿ ನೀಡಿಲ್ಲ ಅಂತಾ ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ.
  • ಹೀಗಾಗಿ ಈ ವಿವಾಹಿತ ಮಹಿಳಾ ಅಭ್ಯರ್ಥಿಗಳು ತಂದೆಯ ಆದಾಯ ಪ್ರಮಾಣ ಪತ್ರವನ್ನ ಸಲ್ಲಿಸಿದ್ದಾರೆ.
ಟೀಚರ್ ನೇಮಕಾತಿ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಶಾಕ್...! title=
screengrab

ಅವರೆಲ್ಲ ಸರ್ಕಾರಿ ಟೀಚರ್ ನೌಕರಿ ಆಕಾಂಕ್ಷಿಗಳು.. ನೇಮಕಾತಿ ತಾತ್ಕಾಲಿಕ ಪಟ್ಟಿಯಲ್ಲಿಯೂ ಆಯ್ಕೆಯಾಗಿದ್ದರು. ಇನ್ನೇನೂ ಸರ್ಕಾರಿ ನೌಕರಿ ಸಿಕ್ತು ಅಂತಾ ಖುಷಿ, ಖುಷಿಯಲ್ಲಿದ್ರು. ಆದ್ರೆ ಆದಾಯ ಪ್ರಮಾಣ ಪ್ರತ ಕಾರಣ ನೀಡಿ ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನ ಫೈನಲ್ ಪಟ್ಟಿಯಿಂದ ಕೈಬಿಟ್ಟಿದ್ದು ಆಘಾತ ಉಂಟು ಮಾಡಿದೆ. ಶಿಕ್ಷಣ ಇಲಾಖೆ ವಿರುದ್ಧ ಗರಂ ಆಗಿರೋ ಅಭ್ಯರ್ಥಿಗಳು ಕಾನೂನು ಸಮರಕ್ಕೆ ಸಜ್ಜಾಗ್ತಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ರುಂಡವನ್ನು ಅಫ್ತಾಬ್ ದಿನವೂ ನೋಡುತ್ತಿದ್ದ : ಹೇಗಿತ್ತು ಆ ಕರಾಳರಾತ್ರಿ...!

ಕೈಯಲ್ಲಿ ದಾಖಲೆ ಹಿಡಿದು ಕೊಂಡು ಆತಂಕ ವ್ಯಕ್ತಪಡಿಸ್ತಿರೋ ಅಭ್ಯರ್ಥಿಗಳು. ಇನ್ನೊಂದೆಡೆ ಶಿಕ್ಷಣ ಇಲಾಖೆ ನಡೆ ವಿರುದ್ದ ಆಕ್ರೋಶ ಹೊರ ಹಾಕ್ತಿರುವ  ನೋಂದ ಅಭ್ಯರ್ಥಿಗಳು.  ಸರ್ಕಾರಿ  ಟೀಚರ್ ನೌಕರಿಯ ಖುಷಿಯಲ್ಲಿದ್ದ ಈ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆ ಆದಾಯ ಪ್ರಮಾಣ ಪತ್ರದ ಶಾಕ್ ನೀಡಿ ಆತಂಕಕ್ಕೆ ದೂಡಿದೆ. ಎಸ್.... ಹೈಯರ್ ಪ್ರೈಮರಿ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿರೋ ಈ ಅಭ್ಯರ್ಥಿಗಳ ಹೆಸರನ್ನ ಫೈನಲ್ ಲಿಸ್ಟ್ ನಲ್ಲಿ ಕೈಬಿಡಲಾಗಿದೆ. ಅಂದಹಾಗೆ ಮೀಸಲಾತಿಯಲ್ಲಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುವಾಗ ಈ ವಿವಾಹಿತ ಅಭ್ಯರ್ಥಿಗಳು ಕಾಸ್ಟ್ ಹಾಗೂ ಆದಾಯ ಪ್ರಮಾಣ ಪತ್ರವನ್ನ ತಮ್ಮ ತಮ್ಮ ತಂದೆಯವರದ್ದು ಹಚ್ಚಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆ ಮದುವೆಯಾದ ಮೇಲೆ ಗಂಡನ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು ಅಂತಾ ಕಾರಣ ನೀಡಿ ಮೀಸಲಾತಿಯಲ್ಲಿ ಈ ಅಭ್ಯರ್ಥಿಗಳ ಹೆಸರನ್ನ ಕೈಬಿಡಲಾಗಿದೆಯಂತೆ. ಅಲ್ಲದೆ ಜನರಲ್ ಮೇರಿಟ್ ಗೆ ಪರಿಗಣಿಸಿದ್ರು ಮೇರಿಟ್ ನಲ್ಲಿ ಬಾರದೆ ಈ ಅಭ್ಯರ್ಥಿಗಳು ನೌಕರಿಯಿಂದ ವಂಚಿತರಾಗಿದ್ದಾರೆ‌. ಇದರಿಂದ ನೊಂದಿರೋ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಇಂದು ಕಲಬುರಗಿ ಡಿಡಿಪಿಐ ಕಚೇರಿಗೆ ದಾಖಲೆ ಸಮೇತ ಆಗಮಿಸಿ ಶಿಕ್ಷಣ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: Shradha Murder Case: ಈ ವೆಬ್ ಸಿರೀಸ್‌ನಿಂದ ಸಿಕ್ಕಿತ್ತಂತೆ ಕೊಲೆ ಐಡಿಯಾ! ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ಯಾಕೆ? ಇಲ್ಲಿದೆ ಬೆಚ್ಚಿ ಬೀಳಿಸುವ ಸತ್ಯ

ಇನ್ನು ಹೈಯರ್ ಪ್ರೈಮರಿ 15,000 ಶಿಕ್ಷಕರ ನೇಮಕಾತಿ ನೋಟಿಫಿಕೇಷನ್ ನಲ್ಲಿ ಆದಾಯ ಪ್ರಮಾಣ ಪತ್ರದ ಸಲ್ಲಿಸುವ ಬಗ್ಗೆ  ನಿಖರವಾದ ಮಾಹಿತಿ ನೀಡಿಲ್ಲ ಅಂತಾ ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ.. ಹೀಗಾಗಿ ಈ ವಿವಾಹಿತ ಮಹಿಳಾ ಅಭ್ಯರ್ಥಿಗಳು ತಂದೆಯ ಆದಾಯ ಪ್ರಮಾಣ ಪತ್ರವನ್ನ ಸಲ್ಲಿಸಿದ್ದಾರೆ. ಆದಾಯ ಪ್ರಮಾಣ ಪತ್ರದ ರೀಸನ್ ನಿಂದ ಸದ್ಯ ಮೀಸಲಾತಿ ಆಯ್ಕೆ ಪಟ್ಟಿಯಿಂದ ಈ ಅಭ್ಯರ್ಥಿಗಳ ಹೆಸರು ಕೈಬಿಟ್ಟಿರೋದು ಆಘಾತ ತಂದಿದೆ. ಆಯ್ಕೆ ಪಟ್ಟಿಯಿಂದ ಕೈ ಬಿಡುವ ಮುನ್ನ ಶಿಕ್ಷಣ ಇಲಾಖೆ ನಮಗೆ ಕ್ಲಾರಿಫೈ ಕೇಳಬೇಕಿತ್ತು. ಅಲ್ಲದೆ ಗಂಡನ ಆದಾಯ ಪ್ರಮಾಣ ಪತ್ರ ಕೇಳಿ ಸಲ್ಲಿಸಲು ಕಾಲಾವಕಾಶ ನೀಡಬೇಕಿತ್ತು. ಆದ್ರೆ ಏಕಾಏಕಿ ನಮ್ಮನ್ನ ಕೈಬಿಟ್ಟಿರೋದು ಸರಿಯಲ್ಲ ಅಂತಾ ಅಭ್ಯರ್ಥಿಗಳು ಕಿಡಿಕಾರುತ್ತಿದ್ದಾರೆ. ಇನ್ನು ಗಂಡನ ಆದಾಯ ಪ್ರಮಾಣ ಪತ್ರ ಸಲ್ಲಿಸಲು ಕಾಲಾವಕಾಶ ನೀಡಬೇಕು. ನಮಗೆ ಅನ್ಯಾಯ ಆಗಿದ್ದು ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಲು ಅಭ್ಯರ್ಥಿಗಳು ಮುಂದಾಗ್ತಿದ್ದಾರೆ.

ಇನ್ನು ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನ ಆದಾಯ ಪ್ರಮಾಣ ಪತ್ರ ಕಾರಣ ನೀಡಿ ರಾಜ್ಯದಲ್ಲಿ ಸುಮಾರು 2000 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನ ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿದೆ ಯಂತೆ. ಅದರಂಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 189 ಅಭ್ಯರ್ಥಿಗಳನ್ನ ಫೈನಲ್ ಲಿಸ್ಟ್ ನಿಂದ ಕೈಬಿಡಲಾಗಿದೆ. ಸರ್ಕಾರಿ ನೌಕರಿಗಾಗಿ ಕಷ್ಟ ಪಟ್ಟು ಓದಿ ಆಯ್ಕೆಯಾಗಿರೋ ಈ ಅಭ್ಯರ್ಥಿಗಳಿಗೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ‌. ಶಿಕ್ಷಣ ಇಲಾಖೆ ವಿರುದ್ದ ಆಕ್ರೋಶ ಹೊರಹಾಕ್ತಿದ್ದಾರೋ ನೊಂದ ಅಭ್ಯರ್ಥಿಗಳು ನೌಕರಿಗಾಗಿ ಕಾನೂನು ಸಮರಕ್ಕೆ ಸಜ್ಜಾಗ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News