Success Story: ಆಡುವ ವಯಸ್ಸಿನಲ್ಲಿಯೇ ಬಾಲಕಿಯ ಬೆಟ್ಟದಷ್ಟು ಸಾಧನೆ..!

ಈಗಾಗಲೇ ಪ್ರತಿಕ್ಷಾಗೆ ಇಂಡಿಯನ್ ಚಿಲ್ಡ್ರನ್ಸ್ ಟ್ಯಾಲೆಂಟ್‌ ಅವಾರ್ಡ್, ಇಂಡಿಯಾ ಸ್ಟಾರ್ ಐಕಾನ್ ಕಿಡ್ಸ್ ಅಚಿವರ್ಸ್ ಅವಾರ್ಡ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ಸುವರ್ಣ ಸಾಧನಾ ಶ್ರೀ ಪ್ರಶಸ್ತಿ ಸೇರಿದಂತೆ ಸಾಲು ಸಾಲು ಪ್ರಶಸ್ತಿಗಳು ಹುಡುಕಿ ಬಂದಿವೆ.

Written by - Zee Kannada News Desk | Last Updated : Dec 13, 2021, 09:11 PM IST
  • ಗ್ರಾಮೀಣ ಭಾಗದ ಬಡ ಕುಟುಂಬದಲ್ಲಿ ಜನಿಸಿದ 5 ವರ್ಷದ ಪುಟ್ಟ ಪೋರಿಯಿಂದ ಬೆಟ್ಟದಷ್ಟು ಸಾಧನೆ
  • ‘ಹುಲಾ ಹೂಪ್ ರಿಂಗ್’ನಲ್ಲಿ ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿರುವ ಪ್ರತಿಕ್ಷಾ
  • ಬರೋಬ್ಬರಿ 44 ನಿಮಿಷ 4 ಸೆಕೆಂಡ್ ವರೆಗೂ ನಿಲ್ಲಿಸದೇ ಸೊಂಟದ ಮೂಲಕ ‘ಹುಲಾ ಹೂಪ್ ರಿಂಗ್’ ತಿರುಗಿಸಿದ ಬಾಲಕಿ
Success Story: ಆಡುವ ವಯಸ್ಸಿನಲ್ಲಿಯೇ ಬಾಲಕಿಯ ಬೆಟ್ಟದಷ್ಟು ಸಾಧನೆ..! title=
ಪುಟ್ಟ ಪೋರಿಯ ಬೆಟ್ಟದಷ್ಟು ಸಾಧನೆ

ಬೆಂಗಳೂರು: ಸಾಧನೆ(Achievement)ಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಇಲ್ಲೊಬ್ಬ ಬಾಲಕಿ ತನ್ನ ಸಾಧನೆಯ ಮೂಲಕ ಮತ್ತೊಮ್ಮೆ ಜಗತ್ತಿಗೆ ಸಾರಿ ಹೇಳಿದ್ದಾಳೆ. ಗ್ರಾಮೀಣ ಭಾಗದ, ಬಡ ಕುಟುಂಬದಲ್ಲಿ ಜನಿಸಿದ 5 ವರ್ಷದ ಪುಟಾಣಿ ಪ್ರತಿಕ್ಷಾ ‘ಹುಲಾ ಹೂಪ್ ರಿಂಗ್’ನಲ್ಲಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್(International Book of Record) ಸಾಧನೆ ಮಾಡಿದ್ದಾಳೆ. ಆನೇಕಲ್ ತಾಲೂಕಿನ ಹಳೇಹಳ್ಳಿ ಗ್ರಾಮದ ಶ್ರೀನಿವಾಸ್ ಹಾಗೂ ದೀಪಾ ದಂಪತಿ ಮಗಳಾದ 5 ವರ್ಷದ ಪ್ರತಿಕ್ಷಾ ಈ ಸಾಧನೆ ಮಾಡಿರುವ ಬಾಲಕಿ.

'ಹುಲಾ ಹೂಪ್ ರಿಂಗ್'(Hula Hoop Ring)ನಿಂದ ಬರೋಬ್ಬರಿ 44 ನಿಮಿಷ 4 ಸೆಕೆಂಡುಗಳ ಕಾಲ, ಬ್ರೇಕ್ ಪಡೆಯದೆ ಸೊಂಟದ ಮೂಲಕ ರಿಂಗ್ ತಿರುಗಿಸಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ್ದಾಳೆ. ಇಷ್ಟೇ ಅಲ್ಲ ಮಲ್ಟಿ ಟ್ಯಾಲೆಂಟ್‌ ಕೂಡ ಆಗಿರುವ ಬಾಲಕಿ ಪ್ರತಿಕ್ಷಾ ನಟನೆ, ನೃತ್ಯ, ಡ್ರಾಯಿಂಗ್, ಮಾಡೆಲಿಂಗ್, ಕ್ಲೇ ಮಾಡೆಲಿಂಗ್ ಕೌಶಲ್ಯವನ್ನು ಹೊಂದಿದ್ದಾಳೆ.

ಇದನ್ನೂ ಓದಿ: ಏನಿದು ಕಾಶಿ-ವಿಶ್ವನಾಥ ಕಾರಿಡಾರ್? ಪ್ರಧಾನಿ ಮೋದಿ ಕನಸಿನ ಯೋಜನೆ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ!

ಈಗಾಗಲೇ ಪ್ರತಿಕ್ಷಾ(Prathiksha Success Story)ಗೆ ಇಂಡಿಯನ್ ಚಿಲ್ಡ್ರನ್ಸ್ ಟ್ಯಾಲೆಂಟ್‌ ಅವಾರ್ಡ್, ಇಂಡಿಯಾ ಸ್ಟಾರ್ ಐಕಾನ್ ಕಿಡ್ಸ್ ಅಚಿವರ್ಸ್ ಅವಾರ್ಡ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ಸುವರ್ಣ ಸಾಧನಾ ಶ್ರೀ ಪ್ರಶಸ್ತಿ ಸೇರಿದಂತೆ ಸಾಲು ಸಾಲು ಪ್ರಶಸ್ತಿಗಳು ಹುಡುಕಿ ಬಂದಿವೆ.

ತಂದೆ-ತಾಯಿಯ ಪ್ರೋತ್ಸಾಹದೊಂದಿಗೆ ಪುಟ್ಟ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿರುವ ಪ್ರತಿಕ್ಷಾಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ನಮಗೆ ಇನ್ನೂ ಸ್ವಾತಂತ್ರ್ಯವೇ ಸಿಕ್ಕಿಲ್ಲ. ಏಕೆಂದರೆ ಈ ದೇಶದ ಮಕ್ಕಳಾದ ನಾವು ಕೂಡಲೇ ನಮ್ಮ ನಮ್ಮ ಗುರಿಗಳನ್ನು ಮುಟ್ಟಬೇಕಾಗಿದೆ’ ಎಂದು ಪ್ರತಿಕ್ಷಾ ತನ್ನ ಮುದ್ದು ಮಾತುಗಳನ್ನು ಆಡುವ ಮೂಲಕ ಗಮನ ಸೆಳೆದಿದ್ದಾಳೆ.

ಇದನ್ನೂ ಓದಿ: Viral Video: ಕಾರು ತೊಳೆಯುವ ಚಿಂಪಾಂಜಿಗಳು.. ನೆಟ್ಟಿಗರು ಫಿದಾ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News