ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರಾಜ್ಯಕ್ಕೆ 642 ಕೋಟಿ ರೂ.ಮಂಜೂರು

ಸಂಕ್ರಾಂತಿ ರೈತರ ಹಬ್ಬ ಹಿನ್ನಲೆಯಲ್ಲಿ ರೈತರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 642 ಕೋಟಿ ರಾಜ್ಯಕ್ಕೆ ಮಂಜೂರಾಗಿದೆ ಎಂದು ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದ್ದಾರೆ.

Written by - Zee Kannada News Desk | Last Updated : Jan 13, 2022, 03:26 PM IST
  • ಸಂಕ್ರಾಂತಿ ರೈತರ ಹಬ್ಬ ಹಿನ್ನಲೆಯಲ್ಲಿ ರೈತರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 642 ಕೋಟಿ ರಾಜ್ಯಕ್ಕೆ ಮಂಜೂರಾಗಿದೆ ಎಂದು ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರಾಜ್ಯಕ್ಕೆ 642 ಕೋಟಿ ರೂ.ಮಂಜೂರು  title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಂಕ್ರಾಂತಿ ರೈತರ ಹಬ್ಬ ಹಿನ್ನಲೆಯಲ್ಲಿ ರೈತರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 642 ಕೋಟಿ ರಾಜ್ಯಕ್ಕೆ ಮಂಜೂರಾಗಿದೆ ಎಂದು ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದ್ದಾರೆ.

ಇದೆ ಸಂದರ್ಭದಲ್ಲಿ ಮಾತನಾಡಿದ ಇವರು 5 ವರ್ಷಗಳಲ್ಲಿ 57 ತಾಲೂಕುಗಳಲ್ಲಿ 57 ಜಲಾನಯನ ಉಪಚರಿಸಲು ಅನುಮೋದನೆ ನೀಡಲಾಗಿದೆ.ಈ ಯೋಜನೆ ಕೇಂದ್ರ ಮತ್ತು ರಾಜ್ಯದ 60:40 ಯೋಜನೆಯಾಗಿದೆ.ಪ್ರತಿ ಹೆಕ್ಟೇರ್ ಜಲಾನಯನ ಉಪಚಾರಕ್ಕೆ 22 ಸಾವಿರ ಮತ್ತು ಗುಡ್ಡಗಾಡು ಪ್ರದೇಶದಲ್ಲಿ 28 ಸಾವಿರ ನೀಡಲಾಗುವುದು. ರಾಜ್ಯದ 2.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅನುಮೋದನೆ ಸಿಕ್ಕಿದೆ.ಅನೇಕ ಕಡೆ ಸದಸ್ಯತ್ವ ನೀಡಿ ಉತ್ತೇಜನ ನೀಡಲಾಗುವುದು ಎಂದು ವಿವರಿಸಿದರು.

ಇದನ್ನೂ ಓದಿ: JOBS: ಆಡಳಿತ ಸಹಾಯಕ ಹುದ್ದೆ ಭರ್ತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ವಿಶ್ವಬ್ಯಾಂಕ್ ನೆರವಿನಿಂದ REWARD ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ, ಕರ್ನಾಟಕವನ್ನು ಬೇರೆ ರಾಜ್ಯಗಳಿಗೆ ತಾಂತ್ರಿಕ ಸಹಯೋಗ ನೀಡಲು ವಿಶ್ವ ಬ್ಯಾಂಕ್ ಗುರುತಿಸಿದೆ.ಕರ್ನಾಟಕವನ್ನು ಲೈಟ್ ಹೌಸ್ ಎಂದು ಗುರುತಿಸಿರುವುದು ಹೆಗ್ಗಳಿಕೆ ಕೂಡ ದೊರಕಿದೆ. ಹಾಗೂ ವಿಶ್ವಬ್ಯಾಂಕ್ ನೆರವಿನೊಂದಿಗೆ ರಾಜ್ಯದ ಕೃಷಿ ಸುಸ್ಥಿರತೆಗಾಗಿ ನವೀನ ಅಭಿವೃದ್ಧಿ ಮೂಲಕ ಜಲಾನಯನ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದ ಹೊಸ ರಿವಾಡ್೯ ಯೋಜನೆಗೆ 600 ಕೋಟಿ ಬಿಡುಗಡೆ ಮಾಡಲಾಗಿದ್ದು, ಮುಂದಿನ 5 ವರ್ಷದಲ್ಲಿ 21 ಜಿಲ್ಲೆಗಳಲ್ಲಿ ಯೋಜನೆ ಜಾರಿ ಆಗಲಿದೆ.ಯೋಜನೆ ಶೇ:30 ರಾಜ್ಯ ಸರ್ಕಾರ, ಶೇ:70 ರಷ್ಟು ವಿಶ್ವ ಬ್ಯಾಂಕ್ ಭರಿಸಲಿದೆ ಎಂದು ವಿವರಿಸಿದರು.ಅಮೃತ ಉತ್ಪಾದಕರ ಸಂಸ್ಥೆಗಳ ರಚಿಸಿ ಉತ್ತೇಜನ‌ ನೀಡುವ ಕಾರ್ಯಕ್ರಮ ನಡೆಯುತ್ತಿದೆ,750 ಅಮೃತ ಉತ್ಪಾದಕರ ಸಂಸ್ಥೆ ರಚಿಸಲು ಸಿಎಂ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಹೇಳಿದ್ದರು.ಪ್ರತಿ ಅಮೃತ ಉತ್ಪಾದಕರ ಸಂಸ್ಥೆಗೆ 30 ಲಕ್ಷದಂತೆ 225 ಕೋಟಿ ವೆಚ್ಚವನ್ನು ಸರ್ಕಾರ ಭರಿಸುತ್ತೆ ಎಂದರು.

ಇದನ್ನೂ ಓದಿ: ಗಂಡಸ್ತನ ತೋರಿಸುವುದಕ್ಕೆ ಹೋಗಿ ಮೇಕೆದಾಟನ್ನು ಮಸಣ ಮಾಡುವುದು ಬೇಡ- ಎಚ್.ಡಿ.ಕುಮಾರಸ್ವಾಮಿ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: 

ಇನ್ನು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಇವರು, ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೊ ಮಾತು ಕಾಂಗ್ರೆಸ್‌ ನದ್ದು.ಕಾಂಗ್ರೆಸ್ ಮೇಲೆ ಜನರ ಆಕ್ರೋಶ ಹೊರ ಹಾಕಿದ್ದಾರೆ.ಜನರ ಜೀವನದ ಮೆಲೆ ಕಾಂಗ್ರೆಸ್ ಆಟ ಆಡುತ್ತಿದೆ.ನೀರಾವರಿಗಿಂತ ಕೊರೋನಾ ಬರಲಿ ಅಂತ ಅವ್ರು ಪಾದಾಯಾತ್ರೆ ನಡೆಸಿದ್ದರು.ಹೈಕಮಾಂಡ್ ಹೇಳ್ತು ಅಂತ ಪಾದಾಯಾತ್ರೆ ಮಾಡಿದ್ದರು, ಕೊರೋನನಾ ಹೈಕಮಾಂಡ್ ತಡೆಯುತ್ತಾ? ಇದೆಲ್ಲ ಕಾಂಗ್ರೆಸ್ ಡ್ರಾಮಾ ಎಂದರು.

ಮಾಜಿ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಅವರಿಗೂ ಜನರ ಬಗ್ಗೆ ಕಾಳಜಿ ಇದೆ ಅನ್ನೋ ಕಾರಣಕ್ಕೆ ಸುಮ್ಮನಿದ್ವಿ.ಎಲ್ಲಾದಕ್ಕೂ ಒಂದು ವಿಧಿ ಇರುತ್ತೆ.ಸಾಮ, ಭೇದ, ದಂಡ ಅಂತ, ಅವರೆ ಅರ್ಥ ಮಾಡಿಕೊಂಡು ಕೈಬಿಡಬೇಕಿತ್ತು.ಈಗ ಹೈಕಮಾಂಡ್ ಹೇಳಿತು ಅನ್ನೋ ಕಾರಣ ಕೊಟ್ಟು ಪಾದಾಯಾತ್ರೆ ಕೈ ಬಿಟ್ಟಿದ್ದಾರೆ ಎಂದು ಬಿ ಸಿ ಪಾಟೀಲ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ರಾಜಕೀಯ ಗುರುವಿನಿಂದ ಪಾದಯಾತ್ರೆ ಕೈಬಿಡಲು ಸಲಹೆ

ಕಾಂಗ್ರೆಸ್‌ನವರು ಕಳಸಾಬಂಡೂರಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಸೋನಿಯಾ ಗಾಂಧಿ ಒಂದು ಹನಿ ನೀರು ಕೊಡಲ್ಲ ಅಂತ ಗೋವಾದಲ್ಲಿ ಹೇಳಿದ್ದರು, ಡಿಕೆಶಿ ಈಗ ಎಚ್ಚೆತ್ತುಕೊಂಡಿದ್ದಾರೆ.ರಾಜಕೀಯಕ್ಕಾಗಿ ಸಿದ್ದರಾಮಯ್ಯ ಮುಂದೆ ಡಿಕೆಶಿ ಬಲ ತೋರಿಸಲು ಪಾದಾಯಾತ್ರೆ ಮಾಡಿದ್ದರು.

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News