ಬೆಂಗಳೂರಿನ ಗಣರಾಜ್ಯೋತ್ಸವಕ್ಕೆ ಪೊಲೀಸರ ಭದ್ರತಾ ವೈಫಲ್ಯ.. ಕಳರಿಪಯಟ್ಟು ಕಲೆ ಪ್ರದರ್ಶನದ ವೇಳೆ ಏಕಾಏಕಿ ನುಗ್ಗಿದ ಅಪರಚಿತ ವ್ಯಕ್ತಿ!

75th Republic Day celebrations: ರಾಜಧಾನಿ ಬೆಂಗಳೂರಿನಲ್ಲಿ ಇಂದು 75ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಲಾ ತಂಡಗಳು ಜನರನ್ನ ರಂಜಿಸಿವೆ. ಅದ್ರೂ ಕೆಲ ಸಾಹಸ ಮಯ ಕಾರ್ಯಕ್ರಮ ನೆರೆದಿದ್ದ ಜನರ ಮೈ ನವಿರೇಳಿಸುವಂತೆ ಮಾಡಿತ್ತು.

Written by - Savita M B | Last Updated : Jan 26, 2024, 04:12 PM IST
  • ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು.
  • ಮಧುವಣಗಿತ್ತಿಯಂತೆ ಸಿಂಗಾರಗೊಂಡ ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ
  • ಇನ್ನು ಕಳರಿಪಯಟ್ಟು ಕಲೆ ಪ್ರದರ್ಶನದ ವೇಳೆ ಏಕಾಏಕಿಯಾಗಿ ಅಪರಚಿತ ವ್ಯಕ್ತಿಯೊಬ್ಬರು ನುಗ್ಗಿದ್ದಾರೆ
ಬೆಂಗಳೂರಿನ ಗಣರಾಜ್ಯೋತ್ಸವಕ್ಕೆ ಪೊಲೀಸರ ಭದ್ರತಾ ವೈಫಲ್ಯ.. ಕಳರಿಪಯಟ್ಟು ಕಲೆ ಪ್ರದರ್ಶನದ ವೇಳೆ ಏಕಾಏಕಿ ನುಗ್ಗಿದ ಅಪರಚಿತ ವ್ಯಕ್ತಿ!   title=

ಬೆಂಗಳೂರು: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ಮಧುವಣಗಿತ್ತಿಯಂತೆ ಸಿಂಗಾರಗೊಂಡ ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸೋ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದ್ರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವರು ಸಾಥ್ ನೀಡಿದ್ರು. ಈ ಸಂದರ್ಭದಲ್ಲಿ ಸರ್ಕಾರದ ಗ್ಯಾರಂಟಿಗಳನ್ನ ಹೊಗಳಿದ ರಾಜ್ಯಪಾಲರು, ಜನರಿಗೆ ಗಣರಾಜ್ಯೋತ್ಸವ ದಿನದ ಶುಭಕೋರಿದರು. 

ತೆರೆದ ಜೀಪ್ ನಲ್ಲಿ ರಾಜ್ಯಪಾಲರು ಗೌರವ ರಕ್ಷೆ ಸ್ವೀಕರಿಸುತ್ತಿದ್ದಂತೆ, ಶಿಸ್ತಿನ ಸಿಪಾಯಿಗಳಂತೆ ಮೈದಾನಕ್ಕೆ ಎಂಟ್ರಿಕೊಟ್ಟ 38 ತಂಡಗಳು ಪಥಸಂಚಲನದ ಮೂಲಕ ಎಲ್ಲರ ಗಮನ ಸೆಳೆಯಿತು. ಪೊಲೀಸ್ ಬ್ಯಾಂಡ್, ಸೇನಾಪಡೆ, ಶ್ವಾನದಳ, ಕೇರಳ ಪೊಲೀಸ್ ತಂಡದ ಜೊತೆಗೆ ರಮಣಮಹರ್ಷಿ ಹಾಗೂ ಸಮರ್ಥನ ದಿವ್ಯಾಂಗ ಚೇತನ ಮಕ್ಕಳ ಪಥಸಂಚಲನ ಗಣತಂತ್ರ ದಿನಕ್ಕೆ ಮತ್ತಷ್ಟು ಮೆರಗು ನೀಡಿತು.

ಇದನ್ನೂ ಓದಿ-ಜಗದೀಶ್ ಶೆಟ್ಟರ್ ಏನೇನು ಬೇಡಿಕೆ ಇಟ್ಟಿದ್ದಾರೋ ಗೊತ್ತಿಲ್ಲ: ಶಾಸಕ ಮಹೇಶ್ ಟೆಂಗಿನಕಾಯಿ

ಇನ್ನು ಕಳರಿಪಯಟ್ಟು ಕಲೆ ಪ್ರದರ್ಶನದ ವೇಳೆ ಏಕಾಏಕಿಯಾಗಿ ಅಪರಚಿತ ವ್ಯಕ್ತಿಯೊಬ್ಬರು ನುಗ್ಗಿ ಸಿಎಂ ಸಿದ್ಧರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಂದೆ ಕರಪತ್ರ ತೋರಿಸಿದರು. ಇದು ಗಣರಾಜ್ಯೋತ್ಸವಕ್ಕೆ ಪೊಲೀಸರ ಭದ್ರತೆ ವೈಫಲ್ಯ ಸಂಭವಿಸಿದ್ದು, ತಕ್ಷಣವೇ ವ್ಯಕ್ತಿಯನ್ನು ವಶಕ್ಕೆ ಪಡೆದು ಬಂಧಿಸಿದರು. ಬಳಿಕ ನಡೆದ ವಿಚಾರಣೆಯಲ್ಲಿ ಕೆಪಿಎಸ್ ಸಿ ನೇಮಕಾತಿ ವಿಳಂಬದ ಬಗ್ಗೆ ನೋವನ್ನ ತೋಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.  ಅವರ ಅಳಿಯ ಕೆಪಿಎಸ್ಸಿ ಯಲ್ಲಿ ಆಯ್ಕೆ ಆಗಿದ್ದು, ನೇಮಕಾತಿ ಮಾಡುವಲ್ಲಿ ಅಧಿಕಾರಿಗಳು ಹಿಂದೆ ಮುಂದೆ ತುಳಿಯುತ್ತಿದ್ದಾರೆ ಎಂಬ ನೋವನ್ನ ತೋಡಿಕೊಂಡಿದ್ದಾರೆ.

ಇನ್ನು ಪಥಸಂಚಲನದ ಬಳಿಕ ಬಿಬಿಎಂಪಿ ಶಾಲಾ-ಕಾಲೇಜಿನ ಸುಮಾರು 1500 ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ದೇಶಭಕ್ತಿ, ಸಾವಿತ್ರಿ ಬಾಯಿಫುಲೆಯವರ ಜೀವನ ಕುರಿತ ನೃತ್ಯ ರೂಪಕ ಮೊದಲ ಬಹುಮಾನ ಪಡೆಯೋ ಮೂಲಕ ಸಂಭ್ರಮಿಸಿದ್ರು. ಸೇನಾಪಡೆ ನಡೆಸಿಕೊಟ್ಟ ಕೇರಳದ ಸಮರಕಲೆ ಕಳರಿಪಯಟ್ಟ್ ನೋಡುಗರು ಹುಬ್ಬೇರಿಸುವಂತೆ ಮಾಡಿದ್ರೆ, ಬೈಕ್ ಸ್ಟಂಟ್, ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ನೆರೆದಿದ್ದವರಿಗೆ ರೋಮಾಂಚನ ಸೃಷ್ಟಿಸಿತ್ತು

ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಗಣತಂತ್ರ ದಿನದ ಸಂಭ್ರಮ ಮುಗಿಲುಮುಟ್ಟಿತ್ತು. ಮಾಣಿಕ್ ಷಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆರೆದಿದ್ದವರ ಮನದಲ್ಲಿ ದೇಶಭಕ್ತಿ ಮೂಡಿಸಿತ್ತು.

ಇದನ್ನೂ ಓದಿ-ಶೆಟ್ಟರ್ ಮೈಯಲ್ಲಿ ಹರಿಯುತ್ತಿರುವುದು ಹಿಂದುತ್ವದ ರಕ್ತ ಎಂದ ಈಶ್ವರಪ್ಪ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News