ಬೆಂಗಳೂರಿನ ಐಐಎಸ್‌ಸಿ ಪ್ರಯೋಗಾಲಯದಲ್ಲಿ ಹೈಡ್ರೋಜನ್ ಸಿಲಿಂಡರ್ ಸ್ಫೋಟ; ವಿಜ್ಞಾನಿ ಸಾವು

ಬುಧವಾರ ‘ಹೈಡ್ರೋಸಾನಿಕ್​ ಮತ್ತು ಶಾಕ್​ ವೇವ್​ ಫಾರ್​ ಹೈಪರ್​ಸಾನಿಕ್​ ಲ್ಯಾಬ್​ನಲ್ಲಿ’ ಪ್ರಯೋಗ ನಡೆಯುವಾಗಲೇ ದುರ್ಘಟನೆ ಸಂಭವಿಸಿದೆ. 

Updated: Dec 5, 2018 , 06:13 PM IST
ಬೆಂಗಳೂರಿನ ಐಐಎಸ್‌ಸಿ ಪ್ರಯೋಗಾಲಯದಲ್ಲಿ ಹೈಡ್ರೋಜನ್ ಸಿಲಿಂಡರ್ ಸ್ಫೋಟ; ವಿಜ್ಞಾನಿ ಸಾವು

ಬೆಂಗಳೂರು: ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ ಪ್ರಯೋಗಾಲದಯಲ್ಲಿ ಹೈಡ್ರೋಜನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ವಿಜ್ಞಾನಿಯೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

ಬುಧವಾರ ‘ಹೈಡ್ರೋಸಾನಿಕ್​ ಮತ್ತು ಶಾಕ್​ ವೇವ್​ ಫಾರ್​ ಹೈಪರ್​ಸಾನಿಕ್​ ಲ್ಯಾಬ್​ನಲ್ಲಿ’ ಪ್ರಯೋಗ ನಡೆಯುವಾಗಲೇ ದುರ್ಘಟನೆ ಸಂಭವಿಸಿದೆ. ಹೈಡ್ರೋಜನ್ ಗ್ಯಾಸ್​ ಸಿಲಿಂಡರ್​ ಸ್ಫೋಟದಿಂದಾಗಿ ವಿಜ್ಞಾನಿ ಮನೋಜ್​ ಕುಮಾರ್​ ಮೃತಪಟ್ಟಿದ್ದಾರೆ. ಉಳಿದಂತೆ ಕಾರ್ತಿಕ್, ನರೇಶ್, ಅತುಲ್ಯಾ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದಾಶಿವ ನಗರ ಪೊಲೀಸರು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.