ಐದು ತಿಂಗಳ ನಂತರ ನಡೆದಿದೆ ಪ್ರತ್ಯೇಕ ನಾಡಧ್ವಜ ಸಮಿತಿ ಸಭೆ

          

Last Updated : Nov 9, 2017, 05:43 PM IST
ಐದು ತಿಂಗಳ ನಂತರ ನಡೆದಿದೆ ಪ್ರತ್ಯೇಕ ನಾಡಧ್ವಜ ಸಮಿತಿ ಸಭೆ title=

ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆಗೊಂಡ ಐದು ತಿಂಗಳ ನಂತರ ಸಮಿತಿ ತಜ್ಞರು ಸಭೆ ನಡೆಸುತ್ತಿದ್ದಾರೆ. 

ಪ್ರತ್ಯೇಕ ಧ್ವಜದ ವಿಚಾರವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಗೆ ಕಾನೂನಾತ್ಮಕ ರೂಪವನ್ನು ಕೊಡಲು ನಿರ್ಧರಿಸಿರುವ ಸರ್ಕಾರ ಜೂನ್ 6 ರಂದು ಒಂಭತ್ತು ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚನೆಮಾಡಿತ್ತು. ಸಮಿತಿ ರಚನೆಗೊಂಡ ಐದು ತಿಂಗಳ ನಂತರ ಮೊದಲ ಬಾರಿಗೆ ಈ ಸಭೆ ಇಂದು ವಿಕಾಸ ಸೌಧದಲ್ಲಿ ನಡೆಯುತ್ತಿದೆ.

ಧ್ವಜದ ವಿನ್ಯಾಸ ಮತ್ತು ಕಾನೂನು ಪರಿಮಿತಿಯನ್ನು ಕುರಿತು ಸಭೆಯು ಸರ್ಕಾರಕ್ಕೆ ವರದಿ ನೀಡಬೇಕಿದೆ. ಬೆಳಗಾವಿ ಅಧಿವೇಶನದ ಒಳಗೆ ವರದಿ ಸಿದ್ಧಪಡಿಸಿ ಕೊಡಬೇಕೆಂಬುದು ಕೆಲವು ಸದಸ್ಯರ ಅಭಿಪ್ರಾಯವಾಗಿದೆ. ಅಲ್ಲದೆ ಈ ವಿಷಯವು ಬೆಳಗಾವಿ ಅಧಿವೇಶನದಲ್ಲಿ ಬಾರಿ ಚರ್ಚೆಗೆ ಒಳಗಾಗುವ ವಿಷಯವೂ ಹೌದು.

 ಅ.31ರಂದು ಸಮಿತಿಯ ಸದಸ್ಯರಾದ ಚಂಪಾ ಮತ್ತು ಎಸ್.ಜಿ. ಸಿದ್ದರಾಮಯ್ಯ ತಮ್ಮ ಬೇಸರ ವ್ಯಕ್ತಪಡಿಸಿದ್ದರು.

 

Trending News