ಸ್ಯಾಂಕಿ ಟ್ಯಾಂಕ್‌ ರಸ್ತೆ ಅಗಲೀಕರಣ, ಮೆಲ್ಸೇತುವೆ ನಿರ್ಮಾಣಕ್ಕೆ ಎಎಪಿ ಕಿಡಿ

ನಗರದ ಯೋಜನೆಯನ್ನು ಮಹಾನಗರ ಯೋಜನಾ ಸಮಿತಿಯು ರೂಪಿಸಬೇಕು ಹಾಗೂ ಮೊಬಿಲಿಟಿ ಯೋಜನೆಗಳನ್ನು ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಪ್ರಾಧಿಕಾರವು ಗುರುತಿಸಿ, ಯೋಜನೆ ರೂಪಿಸಬೇಕು. ಬಿಬಿಎಂಪಿ ಬಳಿ ಇಂತಹ ಮೂಲಸೌಕರ್ಯ ಯೋಜನೆಗಳನ್ನು ಸಿದ್ಧಪಡಿಸಲು ಬೇಕಾದ ಜ್ಞಾನವಾಗಲಿ ಅಥವಾ ಸಾಮರ್ಥ್ಯವಾಗಲಿ ಇಲ್ಲ ಎಂಬುದು ಈ ಹಿಂದಿನ ಯೋಜನೆಗಳಿಂದ ಸಾಬೀತಾಗಿದೆ.   

Written by - Manjunath Hosahalli | Last Updated : Feb 3, 2023, 01:27 PM IST
  • ಬಿಬಿಎಂಪಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ರದ್ದು ಪಡಿಸುತ್ತೇವೆ.
  • ಜನರ ಅಗತ್ಯ ಹಾಗೂ ಬಯಕೆಗೆ ತಕ್ಕಂತೆ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಆಮ್‌ ಆದ್ಮಿ ಪಾರ್ಟಿಯು ನಮ್ಮ ಬೆಂಗಳೂರಿಗೆ ನೀಡಲಿದೆ.
  • ದೆಹಲಿ ಹಾಗೂ ಪಂಜಾಬ್‌ ಜನರು ಆಮ್‌ ಆದ್ಮಿ ಪಾರ್ಟಿಯ ಅಭಿವೃದ್ಧಿಯನ್ನು ನೋಡಿದ್ದು, ಕರ್ನಾಟಕದಲ್ಲೂ ಅಂತಹದೇ ಅಭಿವೃದ್ಧಿ ಕಾರ್ಯಗಳು ಜಾರಿಗೆ ಬರಲಿವೆ
ಸ್ಯಾಂಕಿ ಟ್ಯಾಂಕ್‌ ರಸ್ತೆ ಅಗಲೀಕರಣ, ಮೆಲ್ಸೇತುವೆ ನಿರ್ಮಾಣಕ್ಕೆ ಎಎಪಿ ಕಿಡಿ title=
Sanki Tank Road

ಬೆಂಗಳೂರು: ಸ್ಯಾಂಕಿ ಟ್ಯಾಂಕ್‌ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಹಾಗೂ ರಸ್ತೆ ಅಗಲೀಕರಣ ಮಾಡುವ ಬಿಬಿಎಂಪಿ ನಿರ್ಧಾರವನ್ನು ಆಮ್‌ ಆದ್ಮಿ ಪಾರ್ಟಿ ತೀವ್ರವಾಗಿ ವಿರೋಧಿಸಿದ್ದು, ಬಿಬಿಎಂಪಿಯಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ರದ್ದುಪಡಿಸಿ ಜನರ ಬಯಕೆ ಹಾಗೂ ಅಗತ್ಯಕ್ಕೆ ತಕ್ಕಂತೆ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ನೀಡುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪೃಥ್ವಿ ರೆಡ್ಡಿ, “ಪರಿಸರದ ಮೇಲಾಗುವ ದುಷ್ಪರಿಣಾಮ ಹಾಗೂ ಯೋಜನೆಯಲ್ಲಿನ ಲೋಪದೋಷಗಳನ್ನು ಪರಿಗಣಿಸಿ, ಸ್ಯಾಂಕಿ ಟ್ಯಾಂಕ್‌ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣವನ್ನು ವಿರೋಧಿಸುವ ಜನರ ಜೊತೆ ನಾವು ನಿಲ್ಲಲಿದ್ದೇವೆ. ಈಗಾಗಲೇ ಇಂತಹ ಅನೇಕ ಯೋಜನೆಗಳು ನಗರಕ್ಕೆ ಸಾಕಷ್ಟು ಹಾನಿ ಮಾಡಿದ್ದು, ಅವುಗಳ ಸಾಲಿಗೆ ಮತ್ತೊಂದನ್ನು ಸೇರ್ಪಡೆ ಮಾಡುವ ಅಗತ್ಯವಿಲ್ಲ” ಎಂದು ಹೇಳಿದರು.

ನಗರದ ಯೋಜನೆಯನ್ನು ಮಹಾನಗರ ಯೋಜನಾ ಸಮಿತಿಯು ರೂಪಿಸಬೇಕು ಹಾಗೂ ಮೊಬಿಲಿಟಿ ಯೋಜನೆಗಳನ್ನು ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಪ್ರಾಧಿಕಾರವು ಗುರುತಿಸಿ, ಯೋಜನೆ ರೂಪಿಸಬೇಕು. ಬಿಬಿಎಂಪಿ ಬಳಿ ಇಂತಹ ಮೂಲಸೌಕರ್ಯ ಯೋಜನೆಗಳನ್ನು ಸಿದ್ಧಪಡಿಸಲು ಬೇಕಾದ ಜ್ಞಾನವಾಗಲಿ ಅಥವಾ ಸಾಮರ್ಥ್ಯವಾಗಲಿ ಇಲ್ಲ ಎಂಬುದು ಈ ಹಿಂದಿನ ಯೋಜನೆಗಳಿಂದ ಸಾಬೀತಾಗಿದೆ. ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಮೇಲ್ಸೇತುವೆ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡರೆ ಅದು ಮತ್ತೊಂದು ದುರಂತವಾಗಲಿದೆ ಎಂದು ಪೃಥ್ವಿ ರೆಡ್ಡಿ ವಿರೋಧ ವ್ಯಕ್ತಪಿಡಿಸದರು.

ಇದನ್ನೂ ಓದಿ- ಟ್ರಾಫಿಕ್ ಫೈನ್ ಉಳಿಸಿಕೊಂಡವರಿಗೆ ಸಿಹಿ ಸುದ್ದಿ 

ಕರ್ನಾಟಕದ ಬಿಜೆಪಿ ಸರ್ಕಾರವು ಕಾನೂನನ್ನು ಗೌರವಿಸಬೇಕು. ಎಂಪಿಸಿ ಸದಸ್ಯರನ್ನು ನೇಮಕ ಮಾಡಿಕೊಂಡು, ನಗರ ಪ್ರದೇಶದ ಯೋಜನೆ ರೂಪಿಸುವ ಹೊಣೆಗಾರಿಕೆಯನ್ನು ನೀಡಬೇಕು. ರಸ್ತೆ, ಸಾರಿಗೆ, ನೀರು, ವಸತಿ ಮುಂತಾದ ಯೋಜನೆಗಳನ್ನು ಇಲಾಖೆಗಳು ಅಥವಾ ಏಜೆನ್ಸಿಗಳಿಂದ ಮಾಡಿಸುವ ಬದಲು ಎಂಪಿಸಿಯಿಂದ ಮಾಡಿಸಬೇಕು. ಸಾರಿಗೆ ವಲಯದ ಯೋಜನೆಗಳ ಪ್ರಸ್ತಾವನೆಗಳು ಏಜೆನ್ಸಿ ಅಭಿವೃದ್ಧಿ ಪಡಿಸಿದ ಸೂಕ್ತ ಮೊಬಿಲಿಟಿ ಯೋಜನೆಯ ಆಧಾರದಲ್ಲಿ ಬಿಎಂಎಲ್‌ಟಿಎಯಿಂದ ಸಿದ್ಧಗೊಳ್ಳಬೇಕು ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯಪಟ್ಟರು.

ಚುನಾಯಿತ ಸರ್ಕಾರಗಳು ಮೊದಲು ಜನರ ಭಾವನೆಗಳನ್ನು ಗೌರವಿಸಬೇಕು. ಈ ಯೋಜನೆಯು ಇದರಲ್ಲಿ ವಿಫಲವಾಗಿದ್ದು, ಸ್ಥಳೀಯ ಜನರಿಂದ ಹಲವು ಕಾರಣಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಯೋಜನೆಯ ಪ್ರಸ್ತಾವನೆಯನ್ನು ಸಿದ್ಧಪಡಿಸುವಾಗ ಈ ಜನರನ್ನು ಸಂಪರ್ಕಿಸಿ ಅಭಿಪ್ರಾಯ ಕೇಳಲಾಗಿಲ್ಲ. ಈ ರೀತಿ ಜನರ ಅಭಿಪ್ರಾಯವನ್ನೂ ನಿರ್ಲಕ್ಷಿಸಿ ಯೋಜನೆಯ ಪ್ರಸ್ತಾವನೆ ರೂಪಿಸುವುದನ್ನು ಆಮ್‌ ಆದ್ಮಿ ಪಾರ್ಟಿಯ ಕರ್ನಾಟಕ ಘಟಕ ವಿರೋಧಿಸುತ್ತದೆ ಎಂದರು.

ಇದನ್ನೂ ಓದಿ- ಚಿರತೆ ದಾಳಿಗೆ ಬೆಚ್ಚಿಬಿದ್ದ ಯಾದಗಿರಿ ಜನತೆ

ಬಿಬಿಎಂಪಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ರದ್ದು ಪಡಿಸುತ್ತೇವೆ. ಜನರ ಅಗತ್ಯ ಹಾಗೂ ಬಯಕೆಗೆ ತಕ್ಕಂತೆ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಆಮ್‌ ಆದ್ಮಿ ಪಾರ್ಟಿಯು ನಮ್ಮ ಬೆಂಗಳೂರಿಗೆ ನೀಡಲಿದೆ. ದೆಹಲಿ ಹಾಗೂ ಪಂಜಾಬ್‌ ಜನರು ಆಮ್‌ ಆದ್ಮಿ ಪಾರ್ಟಿಯ ಅಭಿವೃದ್ಧಿಯನ್ನು ನೋಡಿದ್ದು, ಕರ್ನಾಟಕದಲ್ಲೂ ಅಂತಹದೇ ಅಭಿವೃದ್ಧಿ ಕಾರ್ಯಗಳು ಜಾರಿಗೆ ಬರಲಿವೆ ಎಂದವರು ಇದೇ ವೇಳೆ ಭರವಸೆ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News