ಹೆತ್ತವರ ಮೂರ್ತಿ ರಚಿಸಿ ಪೂಜಿಸುತ್ತಿರುವ ಮಗ...!

Ranebennur : ದಿಂವಗತರಾದ ತಂದೆ ತಾಯಿಯ ನೆನಪಿಗಾಗಿ ಅವರ ಮೂರ್ತಿಗಳನ್ನ ಕೈಯಿಂದ ಕೆತ್ತಿ ಆ ಮೂರ್ತಿಯನ್ನ ಪೊಜೆ ಮಾಡುತ್ತಿರುವ ಅಪರೂಪದ ಪುತ್ರ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿದ್ದಾರೆ.   

Written by - Savita M B | Last Updated : Jun 18, 2023, 12:02 PM IST
  • ಹೌದು ಪಶುವೈದ್ಯ ವೃತ್ತಿಯಿಂದ ನಿವೃತ್ತಿ ಹೊಂದಿದ ಶಿವಪ್ಪ ನಿಂಗಪ್ಪ ದೊಡ್ಡಮನಿ,
  • ಪಾಲಕರ ಮೂರ್ತಿಗಳನ್ನ ಪೂಜಿಸುತ್ತಾ ಗ್ರಾಮದಲ್ಲಿ ಮಾದರಿ ವ್ಯಕ್ತಿಯಾಗಿ ಬದುಕುತ್ತಿದ್ದಾರೆ.
  • ಇಂದು ವಿಶ್ವ ಅಪ್ಪನ ದಿನವಾದ ಹಿನ್ನಲೆ ತಮ್ಮ ಅಪ್ಪನ ನೆನಪಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ
ಹೆತ್ತವರ ಮೂರ್ತಿ ರಚಿಸಿ ಪೂಜಿಸುತ್ತಿರುವ ಮಗ...! title=

Fathers Day Special : ಹೌದು ಪಶುವೈದ್ಯ ವೃತ್ತಿಯಿಂದ ನಿವೃತ್ತಿ ಹೊಂದಿದ ಶಿವಪ್ಪ ನಿಂಗಪ್ಪ ದೊಡ್ಡಮನಿ, ತಮ್ಮ ತಂದೆ - ತಾಯಿಯ ಮೂರ್ತಿಗಳನ್ನ ತಮ್ಮ ಮನೆಯ ಪ್ರವೇಶ ದ್ವಾರ ಬಲಭಾಗದಲ್ಲಿ ಇಟ್ಟು ಪ್ರತಿ ದಿನ ಮಗ ಶಿವಪ್ಪ ನಿಂಗಪ್ಪ ದೊಡ್ಡಮನಿ ಪೊಜೆ ಮಾಡುತ್ತಿದ್ದಾರೆ. 

ಇದನ್ನೂ ಓದಿ-ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುಗೆ ಒತ್ತುವರಿ ತೆರವು ಕಾರ್ಯಾಚರಣೆ

ಇನ್ನು ತಮ್ಮ ಪೋಷಕರ ಮೂರ್ತಿಯ ಬಳಿ ಶರಣ ಅಂಬಿಗರ ಚೌಡಯ್ಯ, ಸಿದ್ಧಾರೂಢರ ಮೂರ್ತಿಗಳನ್ನ ಕೆತ್ತನೆ ಮಾಡಿ ಪೊಜಿಸಲಾಗುತ್ತದೆ. ದಿವಂಗತರಾದ ತಂದೆ ನಿಂಗಪ್ಪ ತಾಯಿ ಶಿವಶರಣೆ ದೇವಿರಮ್ಮ ಮೃತಪಟ್ಡು ಸುಮಾರು ವರ್ಷವಾಗಿದ್ದರು, ಮಗ ಶಿವಪ್ಪ ಪಾಲಕರ ನೆನಪಿನಲ್ಲಿ ಅವರ ಮೂರ್ತಿಗಳನ್ನ ಪೂಜಿಸುತ್ತಾ ಗ್ರಾಮದಲ್ಲಿ ಮಾದರಿ ವ್ಯಕ್ತಿಯಾಗಿ ಬದುಕುತ್ತಿದ್ದಾರೆ. 

ಇದನ್ನೂ ಓದಿ-ಇಲಾಖೆಗಳ ನಡುವಿನ ಸಮನ್ವಯ ಕೊರತೆ: ಒತ್ತುವರಿ ಕಾರ್ಯಾಚರಣೆ ಸ್ಥಗಿತ, ಪಾಲಿಕೆಗೆ ಹಿನ್ನೆಡೆ

ಇಂದು ವಿಶ್ವ ಅಪ್ಪನ ದಿನವಾದ ಹಿನ್ನಲೆ ತಮ್ಮ ಅಪ್ಪನ ನೆನಪಿಗಾಗಿ ವಿಶೇಷ ಪೂಜೆ ಸಲ್ಲಿಸಿ, ಮನೆಗೆ ಬಂದ ಅತಿಥಿಗಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News