Santro Ravi: ವಿಮಾನದಲ್ಲಿ ಗುಜರಾತ್‍ಗೆ ಹಾರಿದ್ದ ಸ್ಯಾಂಟ್ರೋ ರವಿ ವೇಷ ಬದಲಿಸಿದ್ದ!

ರಾಜ್ಯದಿಂದ ಎಸ್ಕೇಪ್ ಆಗಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್‌ನ ಅಹಮದಾಬಾದ್‌ ಬಳಿ ಬಂಧಿಸಲಾಗಿದೆ. ರಾಮನಗರ ಮತ್ತು ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸ್ಯಾಂಟ್ರೋ ರವಿಯನ್ನು ಬಂಧಿಸಿದ್ದಾರೆಂದು ಅಲೋಕ್ ಕುಮಾರ್ ಹೇಳಿದ್ದಾರೆ.

Written by - Puttaraj K Alur | Last Updated : Jan 14, 2023, 11:46 AM IST
  • ವಿಮಾನದಲ್ಲಿ ಗುಜರಾತ್‍ಗೆ ಹಾರಿದ್ದ ವಂಚಕ ಸ್ಯಾಂಟ್ರೋ ರವಿ ವೇಷ ಬದಲಾಯಿಸಿ ತಿರುಗಾಡುತ್ತಿದ್ದ
  • ವಂಚಕನ ಬಂಧನದ ಕಾರ್ಯಾಚರಣೆ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಪಿನ್ ಟು ಪಿನ್ ಮಾಹಿತಿ
  • ಸ್ಯಾಂಟ್ರೋ ರವಿ ಜೊತೆಗೆ ಸತೀಶ್ ಮತ್ತು ರಾಮ್‌ಜೀ ಎಂಬುವವರನ್ನು ಬಂಧಿಸಿರುವ ಪೊಲೀಸರು
Santro Ravi: ವಿಮಾನದಲ್ಲಿ ಗುಜರಾತ್‍ಗೆ ಹಾರಿದ್ದ ಸ್ಯಾಂಟ್ರೋ ರವಿ ವೇಷ ಬದಲಿಸಿದ್ದ! title=
ವೇಷ ಬದಲಾಯಿಸಿ ತಿರುಗಾಡುತ್ತಿದ್ದ ಸ್ಯಾಂಟ್ರೋ ರವಿ!

ಮೈಸೂರು: ವಿಮಾನದಲ್ಲಿ ಗುಜರಾತ್‍ಗೆ ಹಾರಿದ್ದ ವಂಚಕ ಸ್ಯಾಂಟ್ರೋ ರವಿ ವೇಷ ಬದಲಾಯಿಸಿ ತಿರುಗಾಡುತ್ತಿದ್ದನೆಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಸ್ಯಾಂಟ್ರೋ ರವಿ ಬಂಧನದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ವಂಚಕನ ಬಂಧನದ ಕಾರ್ಯಾಚರಣೆ ಹೇಗಿತ್ತು ಎಂಬುದರ ಬಗ್ಗೆ ಪಿನ್ ಟು ಪಿನ್ ಮಾಹಿತಿ ನೀಡಿದ್ದಾರೆ.  

ರಾಜ್ಯದಿಂದ ಎಸ್ಕೇಪ್ ಆಗಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್‌ನ ಅಹಮದಾಬಾದ್‌ ಬಳಿ ಬಂಧಿಸಲಾಗಿದೆ. ಆತನ ಜೊತೆಗೆ ಸತೀಶ್ ಮತ್ತು ರಾಮ್‌ಜೀ ಎನ್ನುವವರನ್ನು ಸಹ ಬಂಧಿಸಲಾಗಿದೆ. ರಾಮನಗರ ಮತ್ತು ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸ್ಯಾಂಟ್ರೋ ರವಿಯನ್ನು ಬಂಧಿಸಿದ್ದಾರೆಂದು ಅಲೋಕ್ ಕುಮಾರ್ ಹೇಳಿದ್ದಾರೆ. ಮೈಸೂರಿನಿಂದ ಮಂಗಳೂರಿಗೆ ತೆರಳಿದ್ದ ಸ್ಯಾಂಟ್ರೋ ರವಿ ಬಳಿಕ ಮಂಗಳೂರಿನಿಂದ‌ ಪೂನಾ ತಲುಪಿದ್ದ. ಬಳಿಕ ವಿಮಾನದಲ್ಲಿ ಗುಜಾರಾತ್‍ಗೆ ತೆರಳಿದ್ದ. ಎಸಿಪಿ ಶಿವಶಂಕರ್ ಮತ್ತು ಅಶ್ವತ್ ನಾರಾಯಣ್ ನೇತೃತ್ವದ ತಂಡದಲ್ಲಿದ್ದ ಇನ್ಸ್‍ಪೆಕ್ಟರ್‍ಗಳಾದ ರಾಜು, ದಿವಾಕರ್, ಮಲ್ಲೇಶ್ ಮತ್ತು ಸಂತೋಷ್ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದರು.

ಇದನ್ನೂ ಓದಿ: Makar Sankranti 2023: ಕಲ್ಯಾಣ ಕರ್ನಾಟಕದ ಅತಿದೊಡ್ಡ ಮೈಲಾರ ಲಿಂಗ ಜಾತ್ರೆಗೆ ಸರ್ವ ಸಿದ್ಧತೆ

ತಲೆ ತುಂಬಾ ವಿಗ್ ಹಾಕಿಕೊಂಡು ಪೋಸ್ ಕೊಡುತ್ತಿದ್ದ ಸ್ಯಾಂಟ್ರೋ ರವಿ, ವಿಗ್ ತೆಗೆದು, ಶೇವಿಂಗ್ ಮಾಡಿಸಿಕೊಳ್ಳದೇ ವೇಷ ಮರೆಸಿಕೊಂಡಿದ್ದ. ಈ ಮೂಲಕ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದ. ಕೊನೆಗೂ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಗುಜರಾತಿನ ಅಹಮದಾಬಾದ್ ನಗರದಲ್ಲಿ ಸ್ಯಾಂಟ್ರೋ ರವಿ ಪೊಲೀಸರಿಗೆ ಸಿಕ್ಕಿಬಿದಿದ್ದಾನೆ. ಮೈಸೂರು ನಗರ ಪೊಲೀಸ್‌ರು ಗುಜರಾತ್ ಪೊಲೀಸರ ಸಹಕಾರದೊಂದಿಗೆ ಸ್ಯಾಂಟ್ರೋ ರವಿಯನ್ನು ಅರೆಸ್ಟ್ ಮಾಡಿದ್ದಾರೆ. ದೂರು ದಾಖಲಾದ ಮೇಲೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆತ ಸಂಚರಿಸಿದ್ದ. ನಾವು ಅವನನ್ನು ಪತ್ತೆ ಹಚ್ಚಲಿಕ್ಕೆ ಮುಂದಾದಾಗ ಬೇರೆ ರಾಜ್ಯಕ್ಕೆ ಹೋಗಿದ್ದಾನೆ. ಈಗ ಗುಜರಾತ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ಅವರ ಅನುಮತಿ ಪಡೆದು ಶೀಘ್ರವೇ ಮೈಸೂರಿಗೆ ಕರೆದುಕೊಂಡು ಬರ್ತಿವಿ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಮೈಸೂರು-ಬೆಂಗಳೂರು ಎರಡೂ ಕಡೆ ಸ್ಯಾಂಟ್ರೋ ರವಿ ವಾಸವಿದ್ದ ಮನೆಗಳನ್ನು ಪರಿಶೀಲನೆ ಮಾಡಿದ್ದೀವಿ. ಇದಕ್ಕೆ ಸಂಬಂಧಿಸಿದಂತೆ ಒಡನಾಡಿ ಸಂಸ್ಥೆ ಮತ್ತು ಸಂತ್ರಸ್ತೆಯಿಂದ ಮಾಹಿತಿ ಪಡೆದಿದ್ದೇವು. ಕ್ರಿಮಿನಲ್‌ ಆಗಿದ್ದ ಆತನನ್ನು ಚೇಸ್ ಮಾಡಿ ಹಿಡಿಯಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ಆತನನ್ನು ಶೀಘ್ರವೇ ಬಂಧಿಸುವಂತೆ‌ ಸೂಚನೆ ನೀಡಿದ್ದರು. ಪ್ರಧಾನಿ ಮೋದಿಯವರ ಬಂದೋಬಸ್ತ್‍ಗೆ ತೆರಳಿದ್ದ ವೇಳೆ ಕೂಡ ಸಿಎಂ ಈ ಬಗ್ಗೆ ನಮಗೆ ಕೇಳಿದ್ದರು. ರವಿಗೆ ಸೇರಿದ ಆರ್.ಆರ್.ನಗರ ಮತ್ತು ದಟ್ಟಗಳ್ಳಿಯ 2 ಮನೆಗಳಲ್ಲಿ ಸರ್ಚ್ ಮಾಡಿದಾಗ ನಮಗೆ ಹಲವು ವಸ್ತುಗಳು ಕೂಡ ಸಿಕ್ಕಿವೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 2024ಕ್ಕೆ ಮಂಡ್ಯ ಸಂಸದರು ಬೆಂಗಳೂರಿನಲ್ಲಿ ಸ್ಪರ್ಧೆ!: ಸುಮಲತಾ ವಿರುದ್ದ ನಿಖಿಲ್ ಅಚ್ಚರಿ ಹೇಳಿಕೆ

ಕಾರ್, ಡ್ರೆಸ್, ಚಹರೆ ಎಲ್ಲವನ್ನೂ ಕೂಡ ಬದಲಿಸುತ್ತಿದ್ದ ಸ್ಯಾಂಟ್ರೋ ರವಿ, ಬಿಳಿಬಟ್ಟೆ ಹಾಕಿಕೊಂಡು ಹಾರ್ಡ್ಕೋರ್ ಕ್ರಿಮಿನಲ್ ಆಗಿದ್ದ. ಆತನ ಬಂಧನದ ಕಾರ್ಯಾಚರಣೆಗೆ ಸಾಕಷ್ಟು ತೊಡಕಾಗಿತ್ತು. ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿರುವುದು ರಾಜ್ಯ ಪೊಲೀಸ್ ಇಲಾಖೆಗೆ ಗೌರವ ಬಂದಿದೆ. ಹೀಗಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಬಹುಮಾನ ಘೋಷಿಸಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News