ಒಂದೆರಡು ದಿನಗಳಲ್ಲಿ ವಿಪಕ್ಷ ಸ್ಥಾನ ಘೋಷಣೆ: ಯಾವ ಬಣಕ್ಕೆ ಮಣೆ!

ಸರ್ಕಾರ ಜುಲೈ 3 ರಿಂದ ಜಂಟಿ ಅಧಿವೇಶನ ಕರೆದಿದ್ದು, ಈವರೆಗೆ ವಿಪಕ್ಷ ನಾಯಕ ಸ್ಥಾನ ಯಾರಿಗೂ ಬಿಜೆಪಿ ನೀಡಿಲ್ಲ. ಖಾಲಿ ಇರುವ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜ್ಯದ ಎರಡು ಪ್ರಬಲ ಸಮುಧಾಯದ ಮೂರು ನಾಯಕರು ಪೈಪೋಟಿಗೆ ಇಳಿದಿದ್ದಾರೆ.

Written by - Prashobh Devanahalli | Edited by - Bhavishya Shetty | Last Updated : Jun 29, 2023, 01:35 PM IST
    • ಸರ್ಕಾರ ಜುಲೈ 3 ರಿಂದ ಜಂಟಿ ಅಧಿವೇಶನ ಕರೆದಿದ್ದು, ಈವರೆಗೆ ವಿಪಕ್ಷ ನಾಯಕ ಸ್ಥಾನ ಯಾರಿಗೂ ಬಿಜೆಪಿ ನೀಡಿಲ್ಲ
    • ವಿಪಕ್ಷ ನಾಯಕರ ರೇಸ್ ನಿಂದ ಬಣ ಬಡಿದಾಟ ಹೆಚ್ಚಾಗಳಿದ್ಯಾ?
    • ಲೋಕಸಭೆಯಲ್ಲಿ ಇದರ ಪರಿಣಾಮ ಹೇಗಿರಬಹುದು ಎಂದು ಕಾದುನೋಡಬೇಕಿದೆ.
ಒಂದೆರಡು ದಿನಗಳಲ್ಲಿ ವಿಪಕ್ಷ ಸ್ಥಾನ ಘೋಷಣೆ: ಯಾವ ಬಣಕ್ಕೆ ಮಣೆ! title=
BJP Karnataka

ಬೆಂಗಳೂರು: ಎರಡು ದಿನಗಳ ಒಳಗಾಗಿ ವಿಪಕ್ಷ ನಾಯಕ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಕಮಲ ಪಕ್ಷದ ಮೂಲಗಳು ತಿಳಿಸಿವೆ. ಇದರ ಜೊತೆಗೆ ವಿಪಕ್ಷ ಸ್ಥಾನದ ಪೈಪೋಟಿಯಲ್ಲಿ ಯಾವ ಬಣ ಮುನ್ನಡೆ ಸಾಧಿಸಲಿದೆ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿದೆ.

ಇದನ್ನೂ ಓದಿ: ಅಕ್ರಮ ಆಸ್ತಿ ಸಂಪಾದನೆಯ ದೂರಿನ ಮೇಲೆ ಲೋಕಾಯುಕ್ತ ದಾಳಿ

ಒಂದು ವಿಪಕ್ಷ ಸ್ಥಾನಕ್ಕೆ ಮೂರು ನಾಯಕರ ರೇಸ್:

ಸರ್ಕಾರ ಜುಲೈ 3 ರಿಂದ ಜಂಟಿ ಅಧಿವೇಶನ ಕರೆದಿದ್ದು, ಈವರೆಗೆ ವಿಪಕ್ಷ ನಾಯಕ ಸ್ಥಾನ ಯಾರಿಗೂ ಬಿಜೆಪಿ ನೀಡಿಲ್ಲ. ಖಾಲಿ ಇರುವ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜ್ಯದ ಎರಡು ಪ್ರಬಲ ಸಮುಧಾಯದ ಮೂರು ನಾಯಕರು ಪೈಪೋಟಿಗೆ ಇಳಿದಿದ್ದಾರೆ. ಈ ಪೈಕಿ ಇಬ್ಬರು ಲಿಂಗಾಯತ , ಒಬ್ಬರು ಒಕ್ಕಲಿಗ ಸಮುದಾಯದ ನಾಯಕ ರೇಸ್ನಲ್ಲಿ ಇದ್ದು, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬಣದಿಂದ  ಓರ್ವ ನಾಯಕ ಹಾಗೂ ಬಿಎಸ್ವೈ ತಂಡದಿಂದಲ್ಲೂ ಓರ್ವ ಲಿಂಗಾಯತ ನಾಯಕ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಹೈ ಕಮಾಂಡ್ ಕಡೆಯಿಂದ ಒಕ್ಕಲಿಗ ನಾಯಕನ ಒಲವು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾರ ಬಣದಿಂದ ಯಾರು ನಾಯಕರು?:

ಯತ್ನಾಳ್ ಪರವಾಗಿ ಬಿಎಲ್ ಸಂತೋಷ್ ಬ್ಯಾಟಿಂಗ್ ನಡೆಸುತ್ತಿದ್ದು, ಮತ್ತೊಂದು ಕಡೆಯಿಂದ ಬೊಮ್ಮಾಯಿ ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲ ಇದೆ. ಇದಲ್ಲದೆ ಸಂಘ ಪರಿವಾರ ಕೂಡ ಒಂದು ಶಿಫಾರಸ್ಸು ಮಾಡಿದ್ದು ಮಾಜಿ ಸಚಿವ ಆರಗ ಜ್ಞಾನೇಂದ್ರ ಗೆ ಸ್ಥಾನ ಕಲ್ಪಿಸಿ ಎಂದು ಸಲಹೆ ನೀಡಿದೆ. ಇವೆಲ್ಲಾ ಒಂದು ಕಡೆ ಆದರೆ ಹೈ ಕಮಾಂಡ್ ನದ್ದು ಬೇರೆ ಚಿಂತೆ ನಡೆಸುತ್ತಿದೆ. ಈ ಪ್ರಕಾರ ಹೊಸ ಮುಖಕ್ಕೆ ಸ್ಥಾನ ನೀಡಿದರೆ ಎಂಬ ಮಂಥನ ಮಾಡುತ್ತಿದ್ದಾರೆ. ಇನ್ನು ಲೋಕಸಭೆ ಚುನಾವಣೆ ಸನಿಹ ಆಗುತ್ತಿದ್ದು, ಹೀಗಾಗಿ ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ದಾ ಬಣಗಳ ತಿಕ್ಕಾಟಕ್ಕೆ ಬ್ರೇಕ್ ಹಾಕಲು ಕಸರತ್ತು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಂಡೀಷನ್ ಹಾಕಿ ಟೆಂಡರ್ ಕರೆಯಲು ಮುಂದಾಗಿರುವ BBMP

ವಿಪಕ್ಷ ನಾಯಕನ ಆಯ್ಕೆಯಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವ ಕುತೂಹಲ ಕಾರ್ಯಕರ್ತರಲ್ಲಿ ಇದ್ದರೆ, ಪಕ್ಷದ ನಾಯಕರಿಗೆ ಬಣ ರಾಜಕೀಯದಿಂದ ಲೋಕಸಭೆಯಲ್ಲಿ ಕಳಪೆ ಪ್ರದರ್ಶನ ಆದರೆ ಏನು ಗತಿ ಎಂಬ ಚಿಂತೆ. ಒಟ್ಟಾರೆ ವಿಪಕ್ಷ ನಾಯಕರ ರೇಸ್ ನಿಂದ ಬಣ ಬಡಿದಾಟ ಹೆಚ್ಚಾಗಳಿದ್ಯಾ? ಲೋಕಸಭೆಯಲ್ಲಿ ಇದರ ಪರಿಣಾಮ ಹೇಗಿರಬಹುದು ಎಂದು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News