Newdelhi : ಅಗತ್ಯ ವಸ್ತುಗಳು ಬೆಲೆ ಹೆಚ್ಚಿಸುತ್ತ ರಾಜ್ಯ ಸರ್ಕಾರ ಕನ್ನಡಿಗರ ಕೊರಳಿಗೆ ಬೆಲೆ ಏರಿಕೆ ಪಾಶ ಹಾಕುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ಮಣಿಪುರ, ಹರ್ಯಾಣಗಳ ಹೊತ್ತಿ ಉರಿದರೂ ಅತ್ತ ಸುಳಿಯದ ಪ್ರಧಾನಿ ಮೋದಿಗೆ ನಮ್ಮ ಸರ್ಕಾರದ ಮೇಲೆ ಏಕಿಷ್ಟು ಆಸಕ್ತಿ? ಯಶಸ್ವಿಯಾದ ನಮ್ಮ ಗ್ಯಾರಂಟಿ ಯೋಜನೆಗಳು ಮೋದಿಯವರ ನಿದ್ದೆಗೆಡಿಸಿವೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿ ಟ್ವೀಟ್ ಮಾಡಿದೆ.
ಹೈಕಮಾಂಡ್ನಿಂದ ಫೈನಲ್ ಆಗದ ʻಸೂತ್ರಧಾರʼನ ಹೆಸರು ʻಸಾರಥಿʼಯೇ ಇಲ್ಲದೇ ಸದನಕ್ಕೆ ಇಂದು ಕಮಲ ಕಲಿಗಳ ಎಂಟ್ರಿ ಕಗ್ಗಂಟು ಇತ್ಯರ್ಥಕ್ಕೆ ರಾಜ್ಯಕ್ಕೆ ಬರಲಿದ್ದಾರೆ ಇಬ್ಬರು ವೀಕ್ಷಕರು ಜಾತಿ ಲೆಕ್ಕಾಚಾರ ಹಾಕಿ ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ ಶಾಸಕರ ಜೊತೆ ಚರ್ಚೆ ನಡೆಸಿ ವರದಿ ನೀಡಲಿರುವ ವೀಕ್ಷಕರು
BJP vs Congress: ಬಹುಮತ ದೊರೆತರೂ, ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸುವಲ್ಲಿ ಕಾಂಗ್ರೆಸ್ ನಡೆಸಿದ ಹಗ್ಗಜಗ್ಗಾಟವನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಇವರಿಂದ ಹೇಳಿಸಿಕೊಂಡು ಬುದ್ದಿ ಕಲಿಯುವ ಪರಿಸ್ಥಿತಿ ಯಾರಿಗೂ ಬಂದಿಲ್ಲವೆಂದು ಬಿಜೆಪಿ ಕುಟುಕಿದೆ.
ಸರ್ಕಾರ ಜುಲೈ 3 ರಿಂದ ಜಂಟಿ ಅಧಿವೇಶನ ಕರೆದಿದ್ದು, ಈವರೆಗೆ ವಿಪಕ್ಷ ನಾಯಕ ಸ್ಥಾನ ಯಾರಿಗೂ ಬಿಜೆಪಿ ನೀಡಿಲ್ಲ. ಖಾಲಿ ಇರುವ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜ್ಯದ ಎರಡು ಪ್ರಬಲ ಸಮುಧಾಯದ ಮೂರು ನಾಯಕರು ಪೈಪೋಟಿಗೆ ಇಳಿದಿದ್ದಾರೆ.
ಯಾರಾಗ್ತಾರೆ ರಾಜ್ಯ ವಿಪಕ್ಷ ನಾಯಕ? ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗುತ್ತಾ? ಅಥವಾ ಕಟ್ಟರ್ ಹಿಂದುತ್ವವಾದಿ ಬಸನಗೌಡ ಪಾಟೀಲ್ ಅವರಿಗೆ ನಾಯಕತ್ವ ನೀಡಲಾಗುತ್ತಾ?
ಎಐಸಿಸಿ ಸ್ಕ್ರೀನಿಂಗ್ ಕಮಿಟಿ ಸಭೆ ಮುಂದುವರಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ದಶಪಥ ಹೆದ್ದಾರಿ ವೀಕ್ಷಣೆ ರದ್ದು ಮಾಡಿದ್ದಾರೆ. ಸಿದ್ದರಾಮಯ್ಯ ಇಂದು ಬೆಂಗಳೂರು-ಮೈಸೂರು ಹೆದ್ದಾರಿ ವೀಕ್ಷಣೆ ನಿಗದಿಯಾಗಿತ್ತು.
ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್ನವರೇ ಸಾಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ನಾನು ಅವರ ಇವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಗೆಲುವು.. ಸೋಲು ಜನರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ವಿಚಾರ ನಿಳುವಳಿ ಸೂಚನೆ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಮನವಿ ಮಾಡಿತ್ತು. ತನಿಖೆ ಹಂತದಲ್ಲಿ ಈ ಪ್ರಕರಣ ಇದೆ. ಕೋರ್ಟ್ ನಲ್ಲಿ ಕೇಸ್ ಇರುವಾಗ ಚರ್ಚೆ ಮಾಡಲು ಬರಲ್ಲ. ಬೇರೆ ರೂಪದ ಅಡಿಯಲ್ಲಿ ಚರ್ಚೆ ಮಾಡೋಣ ಎಂದು ಸ್ಪೀಕರ್ ತಿರಸ್ಕರಿದ್ದರು.
ಬಿಜೆಪಿಯವ್ರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ ಎಂದು ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಹಿಂದೆ RSS ಕೆಲವ್ರು ರಾಷ್ಟ್ರಧ್ವಜ ಬೇಡ ಅಂದಿದ್ದರು. ನಮ್ಮ ರಾಷ್ಟ್ರಧ್ವಜ, ಸಂವಿಧಾನ ವಿರೋಧ ಮಾಡಿದ್ದರು. RSSನವ್ರು ನಾಗರಪುರದ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸ್ತಾರಾ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಮೂರನೇಯವರಾದ್ರೂ ಬರಲಿ, ನಾಲ್ಕನೇಯವರಾದ್ರೂ ಬರಲಿ ನಮಗೇನು ಸಂಬಂಧವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, BSY ಬದಲಾವಣೆ ಬಗ್ಗೆ ನಂಗೆ ಗೊತ್ತಿತ್ತು. ಅದಕ್ಕೆ ನಾನು ಈ ಹಿಂದೆ ಹೇಳಿದ್ದೆ. ಆದ್ರೆ ಬೊಮ್ಮಾಯಿವರ ಬಗ್ಗೆ ನಂಗೆ ಮಾಹಿತಿ ಇಲ್ಲ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.