ವಿಧಾನಸೌಧದ ವಜ್ರಮಹೋತ್ಸವ ಮತ್ತೊಂದು ಸಂಕಷ್ಟ...!

ವಜ್ರಮಹೋತ್ಸವಕ್ಕೆ 10 ಕೋಟಿ ವೆಚ್ಚ ಮಾಡದಂತೆ ನಿರ್ದೇಶನ ಕೋರಿ ಪಿಐಎಲ್.

Last Updated : Oct 24, 2017, 10:24 AM IST
ವಿಧಾನಸೌಧದ ವಜ್ರಮಹೋತ್ಸವ ಮತ್ತೊಂದು ಸಂಕಷ್ಟ...! title=

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ವಜ್ರಮಹೋತ್ಸವಕ್ಕೆ 10 ಕೋಟಿ ವೆಚ್ಚ ಮಾಡದಂತೆ ನಿರ್ದೇಶನ ಕೋರಿ ವಕೀಲ ಎಸ್.ಎನ್. ಅರವಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ವಕೀಲ ಎಸ್.ಎನ್. ಅರವಿಂದ - ವಿಧಾನಸೌಧಕ್ಕೆ 60 ವರ್ಷ ಪೂರ್ಣ ಹಿನ್ನಲೆ ಸರ್ಕಾರ 10 ಕೋಟಿ ವ್ಯಯ ಮಾಡುತ್ತಿದೆ. ಅನುತ್ಪಾದಕ ಕಾರ್ಯಕ್ರಮಕ್ಕೆ ಸಾರ್ವಜನಿಕರ ಹಣವನ್ನು ಖರ್ಚು ಮಾಡುವುದು ಸರಿಯಲ್ಲ. ಜನರು ತೆರಿಗೆ ಪಾವತಿ ಮಾಡುತ್ತಾರೆ. ಆ ಹಣವನ್ನು ಜನರಿಗೆ ಖರ್ಚು ಮಾಡಬೇಕು. ತೆರಿಗೆ ಹಣವನ್ನು ಜನರ ಕ್ಷೇಮಾಭಿವೃದ್ಧಿಗೆ ಮಾತ್ರ ಬಳಸಬೇಕು. ಹಾಗಾಗಿ 10 ಕೋಟಿ ಹಣವನ್ನು ಕಾರ್ಯಕ್ರಮಕ್ಕೆ ಖರ್ಚು ಮಾಡದಂತೆ ನಿರ್ದೇಶಿಸುವಂತೆ ಕೋರಿ ವಕೀಲ ಎಸ್.ಎನ್. ಅರವಿಂದ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿಧಾನಸಭಾ ಅಧಕ್ಷ್ಯ ಕೋಳಿವಾಡ, ಆಡಳಿತ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. 

ವಿಧಾನಸೌಧಕ್ಕೆ 60 ವರ್ಷ ಪೂರ್ಣ ಹಿನ್ನಲೆಯಲ್ಲಿ 'ವಜ್ರಮಹೋತ್ಸವ' ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಕಾರ್ಯಕ್ರಮಕ್ಕೆ 10 ಕೋಟಿ ಹಣವನ್ನು ಖರ್ಚು ಮಾಡಲು ಸ್ಪೀಕರ್ ನಿರ್ಣಯ ತೆಗೆದುಕೊಂಡಿದ್ದರು.

Trending News