ನೀವು ಬಿ.ಟಿ ಹತ್ತಿ ಬೆಳೆಯುತ್ತಿರಾ? ಹಾಗಾದರೆ ತಪ್ಪದೇ ಕೃಷಿ ಇಲಾಖೆಯ ಈ ಸಲಹೆಗಳನ್ನು ಪಾಲಿಸಿ..!

ಬಿ.ಟಿ. ಹತ್ತಿಯ ಬಿತ್ತನೆ ಕಾಲಾವಧಿಯು ಜೂನ್ ಮೊದಲ ವಾರದಿಂದ ಜುಲೈ ಮೂರನೇ ವಾರದವರೆಗೆ ಇದ್ದು, ಈ ಕಾಲಾವಧಿಯ ಶಿಫಾರಸ್ಸನ್ನು ಅನುಸರಿಸುವಂತೆ ರಾಯಚೂರು ವಿಶ್ವ ವಿದ್ಯಾನಿಲಯದ ಕೃಷಿ ವಿಜ್ಞಾನಿಗಳು ಸೂಚಿಸಿದ್ದಾರೆ.

Written by - Zee Kannada News Desk | Last Updated : Jan 24, 2024, 12:24 AM IST
  • ರೈತರು ತಮ್ಮ ಹೊಲದ ಸುತ್ತಲೂ 4 ಸಾಲಿನಲ್ಲಿ ಈ ಬೀಜಗಳನ್ನು ಖಡ್ಡಾಯವಾಗಿ ಬಿತ್ತನೆ ಮಾಡಬೇಕು.
  • ಇದರಿಂದ ಕಾಯಿಕೊರಕ ಹುಳುವಿನಲ್ಲಿ ಬಿ.ಟಿ. ನಿರೋಧಕ ಶಕ್ತಿಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಹಾಗೂ ಕಾಯಿಕೊರಕದ ಬಾಧೆಯನ್ನು ಗುರುತಿಸಲು ಅನುಕೂಲವಾಗುತ್ತದೆ.
  • ಕೆಲವೊಂದು ರೈತರು ಬಿ.ಟಿ. ಯೇತರ ಬೀಜವನ್ನು ಹುಸಿ ಗುಣಿಗಳಲ್ಲಿ ಬಳಸುತ್ತಿರುವುದು ಕಂಡು ಬರುತ್ತದೆ.
ನೀವು ಬಿ.ಟಿ ಹತ್ತಿ ಬೆಳೆಯುತ್ತಿರಾ? ಹಾಗಾದರೆ ತಪ್ಪದೇ ಕೃಷಿ ಇಲಾಖೆಯ ಈ ಸಲಹೆಗಳನ್ನು ಪಾಲಿಸಿ..! title=

ಕೊಪ್ಪಳ: ಬಿ.ಟಿ. ಹತ್ತಿಯ ಬಿತ್ತನೆ ಕಾಲಾವಧಿಯು ಜೂನ್ ಮೊದಲ ವಾರದಿಂದ ಜುಲೈ ಮೂರನೇ ವಾರದವರೆಗೆ ಇದ್ದು, ಈ ಕಾಲಾವಧಿಯ ಶಿಫಾರಸ್ಸನ್ನು ಅನುಸರಿಸುವಂತೆ ರಾಯಚೂರು ವಿಶ್ವ ವಿದ್ಯಾನಿಲಯದ ಕೃಷಿ ವಿಜ್ಞಾನಿಗಳು ಸೂಚಿಸಿದ್ದಾರೆ.

ಹತ್ತಿ ಬೆಳೆಯುವ ರೈತರಿಗಾಗಿ ವಿವಿಧ ಬೀಜದ ಕಂಪನಿಗಳು ಅನೇಕ ಬಿ.ಟಿ. ಹತ್ತಿ ತಳಿಗಳನ್ನು ಮಾರಾಟಕ್ಕೆ ದಾಸ್ತಾನು ಇಟ್ಟಿರುತ್ತಾರೆ.ಈ ಎಲ್ಲಾ ತಳಿಗಳು ಬಿ.ಟಿ. ತಳಿಗಳಾಗಿದ್ದು, ಅವುಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ರೈತರು ಯಾವುದೇ ಒಂದು ಕಂಪನಿಯ ಯಾವುದಾದರೊಂದು ತಳಿಯು ಬೇಕೆಂದಲ್ಲಿ ಮಾರುಕಟ್ಟೆಯಲ್ಲಿ ಅಂತಹ ತಳಿಯ ಕೊರತೆಯುಂಟಾಗಿ, ಅಧಿಕ ಬೆಲೆಗೆ ಮಾರಾಟವಾಗುವುದು ಹಾಗೂ ಕಳಪೆ ಬೀಜವನ್ನು ಸರಬರಾಜು ಮಾಡುವುದು ಇತ್ಯಾದಿ ಅವ್ಯವಹಾರ ಪ್ರಾರಂಭವಾಗಿ, ರೈತರಿಗೆ ಅನ್ಯಾಯವಾಗುವುದೆಂಬುದನ್ನು ಮನಗಾಣಬೇಕು.

ಇದನ್ನೂ ಓದಿ: ವಿವಿಧೆಡೆ ದಾಳಿ; 04 ಬಾಲಕಾರ್ಮಿಕರ ರಕ್ಷಣೆ

ಕಾರಣ ಹತ್ತಿ ಬೆಳೆಗಾರರು ಮಾರುಕಟ್ಟೆಯಲ್ಲಿರುವ ವಿವಿಧ ತಳಿಗಳಲ್ಲಿ ಲಭ್ಯತೆಯ ಮೇಲೆ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಕೊಳ್ಳುವ ಮುನ್ನ ಪ್ಯಾಕೇಟ್‌ನ್ನು ಪರಿಶೀಲಿಸಿ, ತಯಾರಕರ ಕಂಪನಿಯ ಪೂರ್ಣ ಹೆಸರು ಹಾಗೂ ವಿಳಾಸ ಸರಿಯಿರುವುದನ್ನು ಹಾಗೂ ಅದರೊಂದಿಗೆ ನಿಜ ಚೀಟಿ ಪತ್ರ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಬಿತ್ತನೆ ಬೀಜವನ್ನು ಅಧಿಕೃತ ಪರವಾನಿಗೆ ಹೊಂದಿರುವವರಿಂದ ಕೊಂಡುಕೊಳ್ಳಬೇಕು ಹಾಗೂ ಮಾರಾಟಗಾರರಿಂದ ಕಡ್ಡಾಯವಾಗಿ ತಪ್ಪದೇ ರಸೀದಿಯನ್ನು ಕೇಳಿ ಪಡೆಯಬೇಕು. ಆ ತಳಿಯ ಬೇಸಾಯ ಪದ್ಧತಿಯ ಬಗ್ಗೆ ಕರಪತ್ರವನ್ನು ಪಡೆಯಬೇಕು. ಬಿತ್ತನೆ ಮಾಡಿದ ನಂತರ ಬೆಳೆ ಕಟಾವು ಆಗುವವರೆಗೆ ಬೀಜದ ಚೀಲ, ಅಲ್ಪ ಪ್ರಮಾಣದ ಬೀಜ, ರಸೀದಿ ಹಾಗೂ ಕರಪತ್ರವನ್ನು ಕಾಯ್ದಿರಿಸಿಕೊಳ್ಳಬೇಕು. ಬೆಳೆಯಲ್ಲಿ ಸಮಸ್ಯೆಯುಂಟಾದಾಗ ಇವುಗಳು ಪ್ರಯೋಜನಕ್ಕೆ ಬರುತ್ತವೆ.

ಪ್ರತಿ ಬಿ.ಟಿ. ಹತ್ತಿಯ ಪ್ಯಾಕೇಟ್ ಜೊತೆ 125 ಗ್ರಾಂ. ಬಿ.ಟಿ. ಯೇತರ (ರೆಪ್ಯೂಜಿ) ಬೀಜಗಳನ್ನು ನೀಡುತ್ತಿದ್ದು, ರೈತರು ತಮ್ಮ ಹೊಲದ ಸುತ್ತಲೂ 4 ಸಾಲಿನಲ್ಲಿ ಈ ಬೀಜಗಳನ್ನು ಖಡ್ಡಾಯವಾಗಿ ಬಿತ್ತನೆ ಮಾಡಬೇಕು. ಇದರಿಂದ ಕಾಯಿಕೊರಕ ಹುಳುವಿನಲ್ಲಿ ಬಿ.ಟಿ. ನಿರೋಧಕ ಶಕ್ತಿಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಹಾಗೂ ಕಾಯಿಕೊರಕದ ಬಾಧೆಯನ್ನು ಗುರುತಿಸಲು ಅನುಕೂಲವಾಗುತ್ತದೆ. ಕೆಲವೊಂದು ರೈತರು ಬಿ.ಟಿ. ಯೇತರ ಬೀಜವನ್ನು ಹುಸಿ ಗುಣಿಗಳಲ್ಲಿ ಬಳಸುತ್ತಿರುವುದು ಕಂಡು ಬರುತ್ತದೆ. ಆದರೆ ಹುಸಿಗುಣಿಗಳಿಗಾಗಿ ಬಳಸದೇ ಮೇಲೆ ತಿಳಿಸಿದಂತೆ ಅನುಸರಿಸಲು ರೈತರಿಗೆ ಕೋರಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ

ಬಿತ್ತನೆ ಬೀಜಕ್ಕಾಗಿ ಹತ್ತಿ ಬೆಳೆಯುವ ರೈತರು ಕಡ್ಡಾಯವಾಗಿ ಕಂಪನಿಯೊಂದಿಗೆ ಅಥವಾ ಸೀಡ್ ಆರ್ಗನೈಸರ್ ಇವರೊಂದಿಗೆ ಒಡಂಬಡಿಕೆ ಮಾಡಿಕೊಂಡಿರಬೇಕು.ಹೆಚ್ಚಿನ ಮಾಹಿತಿಗಾಗಿ ಹಾಗೂ ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News