ಚಿರತೆ ಸೆರೆ ಕಾರ್ಯಾಚರಣೆ: ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ನಾಲ್ವರಿಗೆ ಗಾಯ

ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ  ಮಲ್ಲಿಗೆಹಳ್ಳಿ ರಸ್ತೆಯಲ್ಲಿ ರೈತರ ಜಮೀನಿನ ಪೊದೆಯಲ್ಲಿ ಅಡಗಿದ್ದ ಚಿರತೆ ಓಡಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 

Written by - Yashaswini V | Last Updated : Sep 20, 2024, 12:20 PM IST
  • ರೈತರ ಜಮೀನಿನ ಪೊದೆಯಲ್ಲಿ ಅಡಗಿದ್ದ ಚಿರತೆ
  • ಚಿರತೆ ಓಡಿಸಲು ಗುಂಡು ಹಾರಿಸಿದ ಅರಣ್ಯ ಸಿಬ್ಬಂದಿ
  • ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿ ರಸ್ತೆಯಲ್ಲಿ ಘಟನೆ
ಚಿರತೆ ಸೆರೆ ಕಾರ್ಯಾಚರಣೆ: ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ನಾಲ್ವರಿಗೆ ಗಾಯ title=

ಚಾಮರಾಜನಗರ: ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿಗೆ ಗುಂಡಿನ ಪದರಗಳು ನಾಟಿ ನಾಲ್ವರು ರೈತರು ಗಾಯಗೊಂಡ ಘಟನೆ ಯಳಂದೂರು ತಾಲೂಕಿನ ಮದ್ದೂರು- ಮಲ್ಲಿಗೆಹಳ್ಳಿ ನಡುವಿನ ಜಮೀನಿನಲ್ಲಿ ನಡೆದಿದೆ.

ಮದ್ದೂರು ಗ್ರಾಮದ ಮೂರ್ತಿ, ರವಿ, ಶಿವು ಹಾಗೂ ರಂಗಸ್ವಾಮಿ ಎಂಬವರು ಗಾಯಗೊಂಡು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ‌‌.  ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮುಳ್ಳಿನ ಪೊದೆಯಲ್ಲಿ ಚಿರತೆ ಕಾಣಿಸಿಕೊಂಡಿತ್ತು.

ಇದನ್ನೂ ಓದಿ- ಚಿರತೆ ಹಾವಳಿಯ ನಕಲಿ ವಿಡಿಯೋ ಹರಿಬಿಟ್ಟಿ ಕಿಡಿಗೇಡಿಗಳು: ಭಯದ ವಾತಾವರಣದಲ್ಲಿ ಜನತೆ

ಕೂಡಲೇ ಅರಣ್ಯ ಇಲಾಖೆಗೆ ರೈತರು ಮಾಹಿತಿ ನೀಡಿದ್ದಾರೆ. ಯಳಂದೂರು ವಲಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಗುಂಡು ಹಾರಿಸಿದ ವೇಳೆ ಗುಂಡಿನ ಪದರಗಳು ನಾಲ್ವರಿಗೆ ತಗುಲಿ ಗಾಯಗಳಾಗಿದೆ.

ಇದನ್ನೂ ಓದಿ- ಜಮೀನಿನಲ್ಲಿ ಅವಿತು ಕುಳಿತ ಚಿರತೆ ಹಿಡಿಯಲು ನುರಿತ 50 ಜನರನ್ನು ಕರೆತಂದ ಅರಣ್ಯ ಇಲಾಖೆ!

ಇನ್ನು, ಚಿರತೆ ಕೂಡ ಅಸುನೀಗಿದ್ದು, ಆತ್ಮರಕ್ಷಣೆಗೆ ಕೆಲವರು ದೊಣ್ಣೆಯಿಂದ  ಹೊಡೆದಾಗ ಸತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News