100ರ ಗಡಿ ದಾಟಿದ ಬಾಳೆ ಹಣ್ಣಿನ ಬೆಲೆ ! ಹಬ್ಬದ ವೇಳೆ ಇನ್ನೂ ದರ ಏರಿಕೆ ಸಾಧ್ಯತೆ

 ಅಧಿಕ ಮಾಸ ಮುಗಿದು ಶ್ರಾವಣ ಶುರುವಾಗ್ತಿದ್ದಂತೆ ಹಣ್ಣಿನ ದರ ಗಗನಕ್ಕೇರಿದೆ. ಹಬ್ಬದ ವೇಳೆ ಹಣ್ಣಿನ ಬೆಲೆ ಇಷ್ಟೊಂದು ದುಬಾರಿಯಾಗಿರುವುದು ಗೃಹಿಣಿಯರ ಆತಂಕ ಹೆಚ್ಚಿಸಿದೆ. 

Written by - Ranjitha R K | Last Updated : Aug 16, 2023, 12:48 PM IST
  • ಟೊಮೆಟೊ ಆಯ್ತು ಈಗ ಬಾಳೆಹಣ್ಣಿನ ಸರದಿ
  • ಬಾಳೆಹಣ್ಣಿನ ದರ ೧೦೦ರ ಗಡಿ ದಾಟಿದೆ.
  • ಗೃಹಿಣಿಯರ ಆತಂಕ ಹೆಚ್ಚಿಸಿದೆ.
100ರ ಗಡಿ ದಾಟಿದ ಬಾಳೆ ಹಣ್ಣಿನ ಬೆಲೆ ! ಹಬ್ಬದ ವೇಳೆ ಇನ್ನೂ ದರ ಏರಿಕೆ ಸಾಧ್ಯತೆ  title=

ಬೆಂಗಳೂರು : ಟೊಮೆಟೊ ಆಯ್ತು ಈಗ ಬಾಳೆಹಣ್ಣಿನ ಸರದಿ.  ಟೊಮ್ಯಾಟೊ ದರ ಕುಸಿಯುತ್ತಿದ್ದಂತೆ ಈಗ ಬಾಳೆ ಹಣ್ಣಿನ ಬೆಲೆ ಗಗನಕ್ಕೆ ಏರಿದೆ. ಬಾಳೆಹಣ್ಣಿನ ದರ ೧೦೦ರ ಗಡಿ ದಾಟಿದೆ.  ಹಬ್ಬದ ವೇಳೆ ಹಣ್ಣಿನ ಬೆಲೆ ಇಷ್ಟೊಂದು ದುಬಾರಿಯಾಗಿರುವುದು ಗೃಹಿಣಿಯರ ಆತಂಕ ಹೆಚ್ಚಿಸಿದೆ. 

ಗಗನಕ್ಕೇರಿದ ಬಾಳೆ  ಬೆಲೆ : 
ಇನ್ನೇನು ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿವೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಒಂದೇ ವಾರ ಬಾಕಿ ಇರುವುದು. ಅಧಿಕ ಮಾಸ ಮುಗಿದು ಶ್ರಾವಣ ಶುರುವಾಗ್ತಿದ್ದಂತೆ ಹಣ್ಣಿನ ದರ ಗಗನಕ್ಕೇರಿದೆ. ಏಕಾಏಕಿ ಏಲಕ್ಕಿ ಬಾಳೆಹಣ್ಣಿನ ದರ ಕೆಜಿಗೆ 100ರಿಂದ 120 ರೂಪಾಯಿಗೆ ಏರಿಕೆಯಾಗಿದೆ. 

ಇದನ್ನೂ ಓದಿ : ಕುಸಿಯುತ್ತಲೇ ಇದೆ ಚಿನ್ನದ ಬೆಲೆ ! ನಿರೀಕ್ಷೆಗೆ ಮೀರಿ ಅಗ್ಗವಾದ ಬಂಗಾರ

ಇಳುವರಿ ಕಡಿಮೆಯಾಗಿರುವುದೇ ಕಾರಣ : 
ಮಳೆ ಕೊರತೆಯಿಂದ ಬಾಳೆಹಣ್ಣಿನ ಇಳುವರಿ ಕಡಿಮೆಯಾಗಿದೆ. ತಮಿಳುನಾಡು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಕಡೆಯಿಂದ ಬಾಳೆಹಣ್ಣು ಪೂರೈಕೆಯಾಗುತ್ತದೆ. ಇಳುವರಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಬೇಡಿಕೆಗೆ ತಕ್ಕಷ್ಟು ಹಣ್ಣು ಸಿಗುತ್ತಿಲ್ಲ. 

ಹಬ್ಬದ ವೇಳೆ ಇನ್ನಷ್ಟು ಏರಿಕೆ ಸಾಧ್ಯತೆ :
ವಾರದ ಹಿಂದೆ ಕೆಜಿ ಏಲಕ್ಕಿ ಬಾಳೆಹಣ್ಣಿಗೆ ಕೆ.ಜಿ ಗೆ 60ರೂ ಇತ್ತು. ಈಗ ಏಕಾಏಕಿ ಈ ಹಣ್ಣಿನ ಬೆಲೆ ಶತಕದ ಗಡಿ ದಾಟಿದೆ.  ಸಾಲು ಸಾಲು ಹಬ್ಬಗಳು ಕೂಡಾ ಮುಂದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬಾಳೆ ಬೆಲೆ ಇನ್ನಷ್ಟು ದರ ಏರಿಕೆ ಸಾಧ್ಯತೆಯಿದೆ. 

ಇದನ್ನೂ ಓದಿ : Car Loan ಕೊಳ್ಳುವಾಗ ಇವುಗಳ ಮೇಲಿನ ನಿರ್ಲಕ್ಷ್ಯದಿಂದ ಭಾರೀ ನಷ್ಟ

ಕಳೆದ ಕೆಲವು ದಿನಗಳಿಂದ ಟೊಮೇಟೊ ದರ ವಿಪರೀತ  ಏರಿಕೆಯಾಗಿತ್ತು. ಇದೀಗ ಟೊಮೇಟೊ ಬೆಲೆ ಇಳಿಯುತ್ತಿದ್ದಂತೆಯೇ ಬಾಳೆಹಣ್ಣು  ದುಬಾರಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News