Car Loan ಕೊಳ್ಳುವಾಗ ಇವುಗಳ ಮೇಲಿನ ನಿರ್ಲಕ್ಷ್ಯದಿಂದ ಭಾರೀ ನಷ್ಟ

Car Loan: ಜೀವನದಲ್ಲಿ ಒಮ್ಮೆಯಾದರೂ ಕನಸಿನ ಕಾರ್ ಕೊಳ್ಳುವುದು ಪ್ರತಿಯೊಬ್ಬರ ಕನಸು. ಆದರೆ, ಇದಕ್ಕಾಗಿ ಲಕ್ಷಾಂತರ ರೂ.ಗಳನ್ನು ಹೊಂದಿಸುವುದು ಎಲ್ಲರಿಗೂ ಕೂಡ ಅಷ್ಟು ಸುಲಭವಲ್ಲ. ಇದಕ್ಕಾಗಿ, ಕೆಲವು ಸ್ವಲ್ಪ ಡೌನ್ ಪೇಮೆಂಟ್ ಹೊಂದಿಸಿ ಮಿಕ್ಕ ಹಣಕ್ಕಾಗಿ ಕಾರ್ ಲೋನ್ ತೆಗೆದುಕೊಳ್ಳುತ್ತಾರೆ. ಆದರೆ, ಎಚ್ಚರ! ನೀವು ಕಾರ್ ಲೋನ್ ಕೊಳ್ಳುವಾಗ ಕೊಂಚ ನಿರ್ಲಕ್ಷವಹಿಸಿದರೂ ಬಾರೀ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Aug 16, 2023, 10:10 AM IST
  • ಕಾರ್ ತೆಗೆದುಕೊಳ್ಳುವಾಗ ಲಕ್ಷಾಂತರ ರೂಪಾಯಿ ಹಣವನ್ನು ಬೇರೆಡೆ ಸಾಲ ತೆಗೆದುಕೊಳ್ಳುವುದಕ್ಕಿಂತ ಕಾರ್ ಲೋನ್ ತೆಗೆದುಕೊಳ್ಳುವುದು ಖಂಡಿತ ಒಳ್ಳೆಯ ಉಪಾಯವೆ.
  • ಆದರೆ, ಈ ಸಂದರ್ಭದಲ್ಲಿ ಕೆಲವು ವಿಷಯಗಳ ಬಗ್ಗೆ ಗಮನಹರಿಸುವುದು ಕೂಡ ಬಹಳ ಮುಖ್ಯ.
  • ಇಲ್ಲದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.
Car Loan ಕೊಳ್ಳುವಾಗ ಇವುಗಳ ಮೇಲಿನ ನಿರ್ಲಕ್ಷ್ಯದಿಂದ ಭಾರೀ ನಷ್ಟ  title=

Car Loan: ಕಾರ್ ಕೊಳ್ಳುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಇದರೊಂದಿಗೆ ಕಾರ್ ಕೊಳ್ಳಲು ಬೇಕಾದ ದುಬಾರಿ ಹಣವನ್ನು ಹೊಂದಿಸುವುದು ಹೇಗೆ ಎಂಬ ಯೋಚನೆಯೂ ಜನರನ್ನು ಕಾಡುತ್ತದೆ. ಇಂತಹ ಸಂದರ್ಭದಲ್ಲಿ ಮೊದಲು ಹೊಳೆಯುವ ಉಪಾಯ ಎಂದರೆ ಕಾರ್ ಲೋನ್ ಕೊಳ್ಳುವುದು. ಲಕ್ಷಾಂತರ ರೂಪಾಯಿ ಹಣವನ್ನು ಬೇರೆಡೆ ಸಾಲ ತೆಗೆದುಕೊಳ್ಳುವುದಕ್ಕಿಂತ ಕಾರ್ ಲೋನ್ ತೆಗೆದುಕೊಳ್ಳುವುದು ಖಂಡಿತ ಒಳ್ಳೆಯ ಉಪಾಯವೆ. ಆದರೆ, ಈ ಸಂದರ್ಭದಲ್ಲಿ  ಕೆಲವು ವಿಷಯಗಳ ಬಗ್ಗೆ ಗಮನಹರಿಸುವುದು ಕೂಡ ಬಹಳ ಮುಖ್ಯ. ಇಲ್ಲದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. 

ಹೌದು, ಕಾರ್ ಲೋನ್ ತೆಗೆದುಕೊಳ್ಳುವಾಗ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸರಿಯಾಗಿ ನಿಗಾವಹಿಸದಿದ್ದರೆ ಇಲ್ಲವೇ ಈ ವಿಷಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ಇದು ನಿಮಗೆ ಭಾರವಾಗಬಹುದು. ಹಾಗಾಗಿ, ಕಾರ್ ಲೋನ್ ತೆಗೆದುಕೊಳ್ಳುವಾಗ ಈ ಕೆಳಗಿನ ವಿಚಾರಗಳ ಬಗ್ಗೆ ತಪ್ಪದೇ ಗಮನಹರಿಸಿ. ಅವುಗಳೆಂದರೆ... 

ಬಜೆಟ್: 
ಕಾರ್ ತೆಗೆದುಕೊಳ್ಳುವಾಗ ಕಾರ್ ಲೋನ್ ಸಿಗುತ್ತದೆ ಎಂದು ಸುಖಾಸುಮ್ಮನೆ ಯೋಚಿಸದೆ ಲೋನ್ ತೆಗೆದುಕೊಳ್ಳಬೇಡಿ. ಬದಲಿಗೆ ನಿಮ್ಮ ಬಜೆಟ್ ಗೆ ಅನುಗುಣವಾಗಿ ನೀವು ಪ್ರತಿ ತಿಂಗಳು ಎಷ್ಟು ಇಎಂಐ ಪಾವತಿಸಲು ಶಕ್ತರಿರುವಿರೋ ಅಷ್ಟು ಮಾತ್ರವೇ ಲೋನ್ ಮಾಡಲು ಪ್ರಯತ್ನಿಸಿ. ಇಲ್ಲದಿದ್ದರೆ, ನಿಮ್ಮ ಬಜೆಟ್ ಹಾಳಾಗುವ ಸಾಧ್ಯತೆ ಇರುತ್ತದೆ. 

ಇದನ್ನೂ ಓದಿ- ಇನ್ನು ಎಲ್ಲಾ ಸರ್ಕಾರಿ ನೌಕರರಿಗೆ ಸಿಗುವುದು ಹಳೆಯ ಪಿಂಚಣಿ ಯೋಜನೆಯ ಲಾಭ !

ಸಾಲದ ಕೊಡುಗೆ: 
ನೀವು ಲೋನ್ ಕೊಳ್ಳುವಾಗ ಕೇವಲ ಒಂದು ಬ್ಯಾಂಕ್ ನಲ್ಲಿ ವಿಚಾರಿಸಿ ಅಲ್ಲಿಯೇ ಲೋನ್ ತೆಗೆದುಕೊಳ್ಳುವುದಕ್ಕಿಂತ ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಕಾರ್ ಲೋನ್‌ಗಳ ಕುರಿತು ಪರಿಶೀಲಿಸಿ. ಈ ಸಂದರ್ಭದಲ್ಲಿ ಕಾರ್ ಲೋನ್ ಕೊಡುಗೆಗಳು, ಬಡ್ಡಿದರ, ಇಎಂಐ ಎಲ್ಲವನ್ನೂ ಹೋಲಿಕೆ ಮಾಡಿ ಅದರಲ್ಲಿ ನಿಮಗೆ ಯಾವುದು ಸೂಕ್ತವೆನಿಸುತ್ತದೋ ಆ ಬ್ಯಾಂಕ್‌ನಿಂದ ಲೋನ್ ಪಡೆಯಿರಿ. 

ಕ್ರೆಡಿಟ್ ಸ್ಕೋರ್: 
ನೀವು ಯಾವುದೇ ರೀತಿಯ ಸಾಲ ತೆಗೆದುಕೊಳ್ಳುವಾಗ ಕ್ರೆಡಿಟ್ ಸ್ಕೋರ್ ತುಂಬಾ ಮುಖ್ಯ. ಇದು ನಿಮ್ಮ ಬಡ್ಡಿ ದರದ ಮೇಲೆ ಪರಿಣಾಮ ಬೀರುತ್ತದೆ. 

ಬಡ್ಡಿ: 
ಕಾರ್ ಲೋನ್ ಪಡೆಯುವಾಗ ಯಾವ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಕಾರ್ ಲೋನ್ ನೀಡುತ್ತದೋ ಅಂತಹ ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. 

ಡೌನ್ ಪೇಮೆಂಟ್ ಹಾಗೂ ಅವಧಿ: 
ಕಾರ್ ಲೋನ್ ತೆಗೆದುಕೊಳ್ಳುವಾಗ ಡೌನ್ ಪೇಮೆಂಟ್ ಬಗ್ಗೆ ಹೆಚ್ಚಿನ ನಿಗಾವಹಿಸಿ. ಸಾಧ್ಯವಾದಷ್ಟು ಹೆಚ್ಚಿನ ಡೌನ್ ಪೇಮೆಂಟ್ ಪಾವತಿಸಿ ಉಳಿದಿದ್ದನ್ನು ಸಾಲ ಮಾಡಿ. ಮಾತ್ರವಲ್ಲ, ಕಾರ್ ಲೋನ್‌ಗಳಿಗೆ ಅರ್ಜಿ ಸಲ್ಲಿಸುವಾಗ ಸಾಧ್ಯವಾದಷ್ಟು ಕಡಿಮೆ ಅವಧಿಕೆ ಲೋ0ನ ಮಾಡಿಸಿ. ಕಡಿಮೆ ಅವಧಿಯ ಕಾರ್ ಲೋನ್ ಎಂದರೆ ನೀವು ಸಾಲವನ್ನು ತ್ವರಿತವಾಗಿ ಮರುಪಾವತಿಸುತ್ತೀರಿ. ಇದರಿಂದಾಗಿ ಕಡಿಮೆ ಬಡ್ಡಿಯನ್ನು ಪಾವತಿ ಮಾಡುತ್ತೀರಿ ಎಂದು ಅರ್ಥ. 

ಇದನ್ನೂ ಓದಿ- ಇಶಾ ಅಂಬಾನಿ ನೇತೃತ್ವದ ಸಂಸ್ಥೆಯಲ್ಲಿ 5000 ಕೋಟಿ ರೂ ಹೂಡಲು ಮುಂದಾದ ಮುಖೇಶ್ ಅಂಬಾನಿ

ವಿಮೆ ಸೇರಿದಂತೆ ಇತರ ಪ್ರಯೋಜನಗಳು: 
ಕಾರ್ ಲೋನ್ ತೆಗೆದುಕೊಳ್ಳುವಾಗ ಲೋನ್‌ನೊಂದಿಗೆ ಸಿಗುವ ಇತರ ಪ್ರಯೋಜನಗಳ ಬಗ್ಗೆಯೂ ಗಮನಹರಿಸಿ. ಇದರಲ್ಲಿ ವಿಮೆ ಸೇರಿದಂತೆ ಇತರ ಪ್ರಯೋಜನಗಳು ಕೂಡ ಲಭ್ಯವಿವೆ. 

ನಿಯಮಗಳು ಮತ್ತು ಷರತ್ತುಗಳು: 
ಯಾವುದೇ ಲೋನ್ ಕೊಳ್ಳುವಾಗ ಅದರಲ್ಲೂ ಕಾರ್ ಲೋನ್ ತೆಗೆದುಕೊಳ್ಳುವಾಗ ಅದಕ್ಕೆ ಸಂಬಂಧಿಸಿದ ಬ್ಯಾಂಕ್ ನಿಯಮಗಳು ಮತ್ತು ಷರತ್ತುಗಳನ್ನು ತುಂಬಾ ಎಚ್ಚರಿಕೆಯಿಂದ ಓದಿ. ನೀವು ಈ ನಿಯಮ ಮತ್ತು ಷರತ್ತುಗಳನ್ನು ಪೂರೈಸಲು ಸಿದ್ದರಿದ್ದೀರಿ ಎಂದಾದರೆ ಮಾತ್ರವೇ ಲೋನ್ ತೆಗೆದುಕೊಳ್ಳಿ. ಜೊತೆಗೆ ಇವುಗಳ ಬಗ್ಗೆ ನಿಮಗೆ ಯಾವುದೇ ಸಣ್ಣ ಸಂದೇಹವಿದ್ದರೂ ಸಹ ಬ್ಯಾಂಕ್ ಸಿಬ್ಬಂದಿಯೊಂದಿಗೆ ಚರ್ಚಿಸಿ ನಿಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News