/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಸಾಹಿತಿ ಬರಗೂರು ರಾಮಚಂದ್ರಪ್ಪನವರಿಗೆ ಪತ್ನಿ ವಿಯೋಗ

    

Last Updated : Apr 8, 2018, 02:23 PM IST
ಸಾಹಿತಿ ಬರಗೂರು ರಾಮಚಂದ್ರಪ್ಪನವರಿಗೆ ಪತ್ನಿ ವಿಯೋಗ  title=
Photo Courtesy: Youtube

ಬೆಂಗಳೂರು: ಹೆಸರಾಂತ ಸಾಹಿತಿ ಮತ್ತು ಚಲನಚಿತ್ರ ನಿದೇರ್ಶಕರಾದ ಪ್ರೊ. ಬರಗೂರು ರಾಮಚಂದ್ರಪ್ಪನವರ ಪತ್ನಿ ಎಸ್.ರಾಜ ಲಕ್ಷ್ಮೀ ಅವರು ಇಂದು ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ. 

ಸುಮಾರು 50 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದರೂ ಸಹಿತ  ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು ಎಂದು ತಿಳಿದುಬಂದಿದೆ.ಅವರ ಅಪೇಕ್ಷೆಯಂತೆ ಕಣ್ಣುಗಳನ್ನು ದಾನ ಮಾಡಲಾಗಿದೆ.

ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದವರಾದ ರಾಜಲಕ್ಷ್ಮಿಯವರು ಬಿ.ಎ. ಮತ್ತು ಹಿಂದಿ ವಿದ್ವಾನ್ ಪದವಿಧರರಾಗಿದ್ದರು. ಅಲ್ಲದೆ ಸಾಹಿತ್ಯದ ಒಲವಿನಿಂದಾಗಿ  ಅವರು ನಾಲ್ಕು ದಶಕಗಳ ಹಿಂದೆಯೇ ಸಾಹಿತಿ ಬರಗೂರೊಂದಿಗೆ ಅಂತರ್ ಜಾತಿಯ ವಿವಾಹವಾಗಿದ್ದರು. ತಮ್ಮ ಜೀವನನುದ್ದಕ್ಕೂ ಬರಗೂರರ ಸಾಹಿತ್ಯ ಮತ್ತು ಅವರ  ಸಾಮಾಜಿಕ ಚಳವಳಿಗಳ ಸದಾ ಬೆಂಬಲವಾಗಿ ನಿಂತಿದ್ದರು. ರಾಜಲಕ್ಷ್ಮಿಯವರು ಪತಿ ಪ್ರೊ. ಬರಗೂರು, ಇಬ್ಬರು ಪುತ್ರರಾದ ಮೈತ್ರಿ, ಸ್ಫೂರ್ತಿ, ಸೊಸೆ ಪದ್ಮಶ್ರೀ ಮತ್ತು ಮೊಮ್ಮಗ ಆಕಾಂಕ್ಷ್ ಇವರನ್ನು ಬಿಟ್ಟು ಅಗಲಿದ್ದಾರೆ.