Aishwarya Rai Twin Sister: ನಟಿ ಐಶ್ವರ್ಯ ರೈ ಇತ್ತೀಚೆಗೆ ತಮ್ಮ ವಿಚ್ಚೇದನ ಕಾರಣದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ವಿಚ್ಛೇದನ ವದಂತಿಯ ನಡುವೆ ಐಶ್ವರ್ಯ ರೈ ಅವರ ಸಹೋದರಿಗೆ ಸಂಬಂಧ ಪಟ್ಟ ವಿಚಾರವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅರ್ರೇ ಅದೇನದು ಐಶ್ವರ್ಯ ರೈಗೆ ಸಹೋದರಿ ಇದ್ದಾರಾ ಎನ್ನುವ ಅನುಮಾನ ನಿಮಗೂ ಇದೆಯಾ? ತಿಳಿಯಲು ಮುಂದೆ ಓದಿ...

ನಟಿ ಐಶ್ವರ್ಯ ರೈ ಅವರು ತಮ್ಮ ಸೌಂದರ್ಯದ ಮೂಲಕ ಸಿನಿಮಾ ಇಂಡಸ್ಟ್ರಿಯನ್ನಷ್ಟೆ ಅಲ್ಲದೆ ಅಭಿಮಾನಿಗಳ ಹೃದಯವನ್ನು ಆಳುತ್ತಿರುವವರು.
ಐಶ್ವರ್ಯ ರೈ ಅವರ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಇವರ ಅಂದವನ್ನು ವರ್ಣಿಸಲು ಅಷ್ಟೆ ಅಲ್ಲ ಯಾರೂ ಕೂಡ ಇವರ ಸೌಂದರ್ಯವನ್ನು ಬೀಟ್ ಮಾಡೋಕೂ ಸಾಧ್ಯ ಇಲ್ಲ. ಹೀಗಿರುವಾಗ ಐಶ್ವರ್ಯ ರೈ ಅವರ ಸಹೋದರಿ ಕುರಿತಾದ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಟಿ ಐಶ್ವರ್ಯ ರೈ ಅವರಿಗೆ ಕಾಂಪಿಟೀಷನ್ ಅಷ್ಟೆ ಅಲ್ಲ, ಅವರ ಅಂದವನ್ನು ಹೋಲುವವರು ಯಾರು ಕೂಡ ಇನ್ನೂ ಹುಟ್ಟಿಲ್ಲ, ಆದರೆ ಇದೀಗ ಥೇಟ್ ಐಶ್ವರ್ಯ ರೈ ಅವರಂತೆ ಕಾಣುವ ನಟಿಯೊಬ್ಬರು ಬಾಲಿವುಡ್ನಲ್ಲಿ ಸೌಂಡ್ ಮಾಡುತ್ತಿದ್ದಾರೆ.
ಥೇಟ್ ಐಶ್ವರ್ಯ ರೈ ಕಣ್ಣು, ಅದೇ ಮೂಗು, ಅದೇ ನಗು. ಈ ಹೋಲಿಕೆಗಳನ್ನೆಲ್ಲಾ ನೋಡಿದ ನಂತರ ಅಭಿಮಾನಿಗಳು ಇವರು ಐಶ್ವರ್ಯ ರೈ ಅವರ ಸಹೋದರಿ ಎಂಬ ಅನುಮಾನ ವ್ಯಕ್ತಪಡಸುತ್ತಿದ್ದಾರೆ.
'ಬೇಬಿ ಜಾನ್' ನಟಿ ವಾಮಿಕಾ ಗಬ್ಬಿ ಅವರನ್ನು ನೋಡಿದ ದಿನದಿಂದಲೂ ಜನರು ಐಶ್ವರ್ಯಾ ರೈ ಜೊತೆ ನಟಿಯನ್ನು ಹೋಲಿಸಲು ಪ್ರಾರಂಭಿಸಿದ್ದಾರೆ. ವಾಮಿಕಾ ಐಶ್ವರ್ಯ ಅವರ ಅವಳಿ ಸಹೋದರಿ ಎಂದು ಹಲವರು ಚರ್ಚೆ ಮಾಡಲು ಶುರು ಮಾಡಿದ್ದಾರೆ.
ವಾಮಿಕಾ ಅವರ ಕಣ್ಣುಗಳು ಐಶ್ವರ್ಯಾ ರೈ ಅವರ ಕಣ್ಣುಗಳನ್ನು ಹೋಲುತ್ತವೆ ಎಂದು ಇಂಟರ್ನೆಟ್ನಲ್ಲಿ ಜನರು ಹೇಳುತ್ತಿದ್ದಾರೆ.
ವಾಮಿಕಾ ಸುಂದರಿ ಎಂದು ಒಪ್ಪಿಕೊಂಡರೂ ಅವರು ಮಾಜಿ ವಿಶ್ವ ಸುಂದರಿಯಂತೆ ಕಾಣುತ್ತಿಲ್ಲ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇವರು ಥೇಟ್ ಐಶ್ವರ್ಯ ರೈ ಅವರಂತೆ ಕಾಣುತ್ತಿದ್ದಾರೆ ಎನ್ನುತ್ತಿದ್ದಾರೆ.