ಜ.1 ರಂದು ಜನಿಸಿದ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರೂ. ಚೆಕ್ ನೀಡಿದ ಬಿಬಿಎಂಪಿ ಮೇಯರ್

ಬಿಬಿಎಂಪಿ ಮೇಯರ್ ಸಂಪತ್ ರಾಜ್ ಇಂದು ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರೂ. ಚೆಕ್ ವಿತರಣೆ ಮಾಡಿದ್ದಾರೆ.   

Last Updated : Jan 1, 2018, 06:20 PM IST
ಜ.1 ರಂದು ಜನಿಸಿದ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರೂ. ಚೆಕ್ ನೀಡಿದ ಬಿಬಿಎಂಪಿ ಮೇಯರ್  title=

ಬೆಂಗಳೂರು: ಈ ಹಿಂದೆ ಘೋಷಣೆ ಮಾಡಿದಂತೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಇಂದು ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರೂ. ಚೆಕ್ ವಿತರಣೆ ಮಾಡಿದ್ದಾರೆ. 

ಜನವರಿ 1 ರಂದು ಸಹಜ ಹೆರಿಗೆಯಿಂದ ಜನಿಸುವ ಮೊದಲ ಹೆಣ್ಣು ಮಗುವಿಗೆ ಪಾಲಿಕೆಯ ಆಯುಕ್ತರ ಹೆಸರಿನಲ್ಲಿ ಜಂಟಿ ಖಾತೆ ತೆರೆದು 5 ಲಕ್ಷ ರೂ. ಠೇವಣಿ ಇಡಲಾಗುವುದು. ಇದರಲ್ಲಿ ಬರುವ ಬಡ್ಡಿ ಹಣವನ್ನು ಮಗುವಿನ ವಿದ್ಯಾಭ್ಯಾಸಕ್ಕೆ ನೀಡಲಾಗುವುದು ಎಂದು ಮೇಯರ್ ಸಂಪತ್ ರಾಜ್ ಘೋಷಣೆ ಮಾಡಿದ್ದರು. 

ಅದರಂತೆ ಅದರಂತೆ ನಿನ್ನೆ ರಾಜಾಜಿನಗರದ ಭಾಷ್ಯಂ ಸರ್ಕಲ್ ನಲ್ಲಿರುವ ಡಾ.ನಾಗರಾಜ್ ಸ್ಮಾರಕ ಆಸ್ಪತ್ರೆಯಲ್ಲಿ ರಾತ್ರಿ 2.5 ಕ್ಕೆ ಹೆಣ್ಮು ಮಗು ಜನಿಸಿದ್ದು, ಈ ಮಗುವಿನ ಪೋಷಕರಾದ ಪುಷ್ಪಾ-ಗೋಪಿ ದಂಪತಿಗೆ ಮೇಯರ್ ಸಂಪತ್ ರಾಜ್ ಅವರು ಇಂದು 5  ಲಕ್ಷ ರೂ.ಗಳ ಚೆಕ್ ವಿತರಿಸಿ ಶುಭ ಹಾರೈಸಿದ್ದಾರೆ.

Trending News