ಬಾಡಿಗೆ ಕೇಳುವ ನೆಪದಲ್ಲಿ ಮನೆಯನ್ನೇ ದೋಚುತ್ತಾರೆ ಹುಷಾರ್!

ಏ.18ರಂದು ಮೆನೆಗೆಲಸ ಮಾಡುತ್ತೇನೆಂದು ಹೇಳಿಕೊಂಡು ಬಂದಿದ್ದ ಲೇಡಿ ಮಾರನೇ ದಿನ ಕೆಲಸಕ್ಕೆ ಬಂದು ಮನೆಯಲ್ಲಿದ್ದ 3 ಲಕ್ಷ ಮೌಲ್ಯದ ಚಿನ್ನಾಭರಣಗಳ ದೋಚಿ ಪರಾರಿಯಾಗಿದ್ದಳು.

Written by - Zee Kannada News Desk | Last Updated : Apr 24, 2022, 01:05 PM IST
  • ಬಾಡಿಗೆ ಕೇಳುವ ನೆಪದಲ್ಲಿ ಬಂದು ಮನೆಯನ್ನೇ ದೋಚುತ್ತಾರೆ ಎಚ್ಚರಿಕೆ
  • ಖತರ್ನಾಕ್ ಕಳ್ಳಿಯನ್ನು ಬಂಧಿಸಿದ ರಾಜಾಜಿನಗರ ನಗರ ಠಾಣೆ ಪೊಲೀಸರು
  • ಮನೆಗೆಲಸಕ್ಕೆ ಬಂದು 3 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಗ್ರೇಸಿ
ಬಾಡಿಗೆ ಕೇಳುವ ನೆಪದಲ್ಲಿ ಮನೆಯನ್ನೇ ದೋಚುತ್ತಾರೆ ಹುಷಾರ್!  title=
ಖತರ್ನಾಕ್ ಕಳ್ಳಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಕಳ್ಳತನ ಮಾಡುವವರ ಬಗ್ಗೆ ಜನರು ಹೆಚ್ಚಿನ ಜಾಗೃತೆ ವಹಿಸಬೇಕಾಗಿದೆ. ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಿನ್ನಾಭರಣ ದೋಚಿದ್ದ ಖತರ್ನಾಕ್ ಲೇಡಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಮ್ಮೆ ಬಂದು ತನ್ನ ಚಿಕ್ಕಮ್ಮನಿಗೆ ಮನೆ ಬಾಡಿಗೆ ಬೇಕೆಂದು ಶ್ರೀರಾಂಪುರದ ಗ್ರೇಸಿ ಎಂಬಾಕೆ ವಿಚಾರಿಸಿಕೊಂಡು ಹೋಗಿದ್ದಳು. ಬಳಿಕ 8 ದಿನದ ನಂತರ ಬಂದು ಇಡೀ ಮನೆಯನ್ನೆಲ್ಲ ಅಬ್ಸರ್ವ್ ಮಾಡಿದ್ದಳು. ಮತ್ತೆ 15 ದಿನಗಳ ಬಳಿಕ ಬಾಡಿಗೆ ಸಂಬಂಧ ಮಾತುಕತೆಗೆ ಬಂದು ತನ್ನ ಕೈ ಚಳಕ ತೋರಿಸಿದ್ದಳು.

ಇದನ್ನೂ ಓದಿ: ರಾಜ್ಯದಲ್ಲಿ ತರಕಾರಿ ಬೆಲೆ ಕೊಂಚ ಏರಿಳಿತ: ಇಂದಿನ ದರ ಇಂತಿದೆ

ಗ್ರೇಸಿಯನ್ನು ನಂಬಿ ಮನೆಕೆಲಸಕ್ಕೆ ಜನ ಸಿಗುತ್ತಾರಾ ಎಂದು ಮನೆ ಮಾಲೀಕರು ವಿಚಾರಿಸಿದ್ದರು. ತಾನೇ ಮನೆಗೆಲಸ ಮಾಡುವುದಾಗಿ ನಂಬಿಸಿದ್ದ ಈ ಖತರ್ನಾಕ್ ಕಳ್ಳಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್ ಆಗಿದ್ದಳು. ರಾಜಾಜಿನಗರದ ಪ್ರಕಾಶ ನಗರದಲ್ಲಿ ಈ ಘಟನೆ ನಡೆದಿತ್ತು.

ಏ.18ರಂದು ಮೆನೆಗೆಲಸ ಮಾಡುತ್ತೇನೆಂದು ಹೇಳಿಕೊಂಡು ಬಂದಿದ್ದ ಲೇಡಿ ಮಾರನೇ ದಿನ ಕೆಲಸಕ್ಕೆ ಬಂದು ಮನೆಯಲ್ಲಿದ್ದ 3 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು. ಆಕೆ ಆಭರಣ ಕದ್ದು ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: ಮಸೀದಿಯ ಧ್ವನಿವರ್ಧಕ ಕೆಳಗಿಸಿಳಿ ಅನ್ನೋರನ್ನ ಒದ್ದು ಒಳಗಾಗಬೇಕು: ಎಚ್‌ಡಿಕೆ

ಗ್ರೇಸಿ ಕಳ್ಳತನ ಮಾಡಿರುವ ಬಗ್ಗೆ ಮನೆ ಮಾಲೀಕರು ರಾಜಾಜಿನಗರ ನಗರ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಖತರ್ನಾಕ್ ಕಳ್ಳಿಯನ್ನು ಬಂಧಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News