ಮಸೀದಿಯ ಧ್ವನಿವರ್ಧಕ ಕೆಳಗಿಸಿಳಿ ಅನ್ನೋರನ್ನ ಒದ್ದು ಒಳಗಾಗಬೇಕು: ಎಚ್‌ಡಿಕೆ

ಮಾಂಸವನ್ನೇ ತಿನ್ನಲಾರದವರು ಸಹ ಜಟ್ಕಾ ಕಟ್ ಅನ್ನಲಿಕ್ಕೆ ಶುರು ಮಾಡಿದ್ದಾರೆ. ಇವರಿಗೆ ಮಾಡಲು ಬೇರೆ ಕಲಸವೇ ಇಲ್ಲವೇ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.  

Written by - Zee Kannada News Desk | Last Updated : Apr 24, 2022, 08:23 AM IST
  • ಮಸೀದಿ ಮೇಲಿನ ಧ್ವನಿವರ್ಧಕ ಕೆಳಗಿಳಿಸಿ ಅನ್ನೋ ಕೀಡಿಗೇಡಿಗಳನ್ನು 10 ನಿಮಿಷದಲ್ಲಿ ಒದ್ದು ಒಳಗಾಕಬೇಕು
  • ಹೀಜಾಬ್, ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ಅಂಗಡಿಗಳ ತೆರವು, ಹಲಾಲ್ ಕಟ್- ಜಟ್ಕಾ ಕಟ್ ಶುರು ಮಾಡಿದ್ದಾರೆ
  • ಪೆಟ್ರೋಲ್-ಡಿಸೇಲ್, ಬಸ್ ದರ ಎಲ್ಲಿಗೆ ಹೊಯ್ತು..? ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಮತ ನೀಡಬೇಕಾ...?
ಮಸೀದಿಯ ಧ್ವನಿವರ್ಧಕ ಕೆಳಗಿಸಿಳಿ ಅನ್ನೋರನ್ನ ಒದ್ದು ಒಳಗಾಗಬೇಕು: ಎಚ್‌ಡಿಕೆ  title=
ಕಾಂಗ್ರಸ್ ಮತ್ತು ಬಿಜೆಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಬೀದರ್: ಮಸೀದಿ ಮೇಲಿನ ಧ್ವನಿವರ್ಧಕ ಕೆಳಗಿಳಿಸಿ ಅನ್ನೋ ಕೀಡಿಗೇಡಿಗಳನ್ನು 10 ನಿಮಿಷದಲ್ಲಿ ಒದ್ದು ಒಳಗಾಕಬೇಕು ಎಂದು ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದರ್ ಜಿಲ್ಲೆಯ ಕಮಠಾಣ ಗ್ರಾಮದಲ್ಲಿ ಜೆಡಿಎಸ್ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಅವರು ಮಸೀದಿಗಳಲ್ಲಿನ ಧ್ವನಿವರ್ಧಕ ವಿವಾದ ವಿಚಾರವಾಗಿ ಕಿಡಿಕಾರಿದ್ದಾರೆ.   

ಇದನ್ನೂ ಓದಿ: ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ: ಪಶ್ಚಿಮ ರಾಷ್ಟ್ರದಿಂದ ಬಂದಿರೋ ಇ-ಮೇಲ್..!

ಹಿಂದೂಪರ ಸಂಘಟನೆಗಳು, ಬಿಜೆಪಿಯವರು ಸೇರಿಕೊಂಡು ಹೀಜಾಬ್, ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ಅಂಗಡಿಗಳ ತೆರವು, ಹಲಾಲ್ ಕಟ್- ಜಟ್ಕಾ ಕಟ್ ಅಂತಾ ಶುರು ಮಾಡಿದ್ದಾರೆ. ಮಾಂಸವನ್ನೇ ತಿನ್ನಲಾರದವರು ಸಹ ಜಟ್ಕಾ ಕಟ್ ಅನ್ನಲಿಕ್ಕೆ ಶುರು ಮಾಡಿದ್ದಾರೆ. ಇವರಿಗೆ ಮಾಡಲು ಬೇರೆ ಕಲಸವೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.  

ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ ಕುಮಾರಸ್ವಾಮಿ, ‘ಕೇಸರಿ ಶಾಲು ಹಾಕಿಕೊಂಡು 9ನೇ ತಾರೀಖು ಗಡುವು ನೀಡುವ ಸಮಾಜಘಾತುಕ ಕೀಡಿಗೇಡಿಗಳನ್ನು ರಾಜ್ಯ ಸರ್ಕಾರ ಬಂಧಿಸಿ ಒಳಗಾಕಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಡಿವೈಎಸ್‌ಪಿ ಸೇರಿ 179 ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ: ಕೋಟ್ಯಾಂತರ ರೂ. ವಹಿವಾಟು ಶಂಕೆ!

ಪೆಟ್ರೋಲ್ ಮತ್ತು ಡಿಸೇಲ್, ಬಸ್ ದರ ಎಲ್ಲಿಗೆ ಹೊಯ್ತು..? ಜನರ ಬದುಕು ಎಲ್ಲಿಗೆ ಬಂತು..? ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ನೀಡಬೇಕಾ...? ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಆದರೆ ಸರ್ಕಾರಗಳು ಮಾತ್ರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News