ಬೆಳಗಾವಿ : ಅಗ್ನಿಪಥ್ ಯೋಜನೆ ವಿರೋಧಿಸಿ ಸೇನೆ ಸೇರಲು ಬಯಸುವ ಆಕಾಂಕ್ಷಿಗಳು ಜೂನ್ 20ರಂದು ಬೆಳಗಾವಿ ಬಂದ್‌ಗೆ ಕರೆ ನೀಡಿದ್ದಾರೆ.
ಜೂನ್ 20ರ ಬೆಳಗ್ಗೆ 10ಕ್ಕೆ ಬೆಳಗಾವಿ ಕೋಟೆ ಬಳಿ ಜಮಾವಣೆಗೊಳ್ಳುವಂತೆ ಕರೆಯ ವಾಟ್ಸಪ್ ಮೂಲಕ ನೂರಾರು ಯುವಕರಿಂದ ಅನಾಮಧೇಯ ಸಂದೇಶ ಒಂದು ಹರಿದಾಡುತ್ತಿದೆ. ಇದು ಸಧ್ಯ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ : 'ವಿದ್ಯಾಸಿರಿ ಯೋಜನೆಗೆ ಬಿಜೆಪಿ ಸರ್ಕಾರ ಕಲ್ಲು ಹಾಕುತ್ತಿದೆ'
ಅಂದು ಬೆಳಗಾವಿ, ಬಾಗಲಕೋಟ, ಧಾರವಾಡ ಜಿಲ್ಲೆಯ ಯುವಕರು ಜಮಾವಣೆ ಸಾಧ್ಯತೆ ಇದೆ. ಇದರ ಜೊತೆಗೆ 'ಬೆಳಗಾವಿ ಚಲೋ' ಮಹಾ ಆಂದೋಲನಕ್ಕೆ ಸೇನೆ ಸೇರಲು ಬಯಸುವ ಯುವಕರ ಕರೆ ನೀಡಿದ್ದಾರೆ. ಈ ವೇಳೆ ಸೇನಾ ನೇಮಕಾತಿ ವಿಳಂಬ, ಅಗ್ನಿಪಥ್ ಯೋಜನೆ ರದ್ದುಗೊಳಿಸುವಂತೆ ಒತ್ತಾಯಿಸಲಿದ್ದಾರೆ. ಹಾಗೆ, ಜೂನ್ 20ರಂದು ರಾಷ್ಟ್ರೀಯ ಹೆದ್ದಾರಿ 4 ಬಂದ್ ಮಾಡಿ ಪ್ರತಿಭಟನೆಗೆ ನಿರ್ಧಾರ ಕೂಡ ಕೈಗೊಂಡಿದ್ದಾರೆ. 'ಇಂಡಿಯನ್ ಆರ್ಮಿ' ಸೇರುವ ಎಲ್ಲಾ ಯುವಕರಿಗೂ ಮನವಿ ಎಂದು ಸಂದೇಶ ಎಂದು ವಾಟ್ಸಪ್ ಅನಾಮಧೇಯ ಸಂದೇಶದಲ್ಲಿ ತಿಳಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.